ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾದಿಂದ 10 ಮಂದಿ ಕುಟುಂಬ ಸದಸ್ಯರನ್ನು ಕಳೆದುಕೊಂಡೆ: ಡಾ. ವಿವೇಕ್ ಮೂರ್ತಿ

|
Google Oneindia Kannada News

ವಾಷಿಂಗ್ಟನ್, ಜುಲೈ 16: ಕೊರೊನಾ ಸೋಂಕಿನಿಂದಾಗಿ ನಾನು 10 ಮಂದಿ ಕುಟುಂಬ ಸದಸ್ಯರನ್ನು ಕಳೆದುಕೊಂಡಿದ್ದೇನೆ ಎಂದು ಯುಎಸ್ ಸರ್ಜನ್ ಜನರಲ್ ಡಾ. ವಿವೇಕ್ ಮೂರ್ತಿ ಹೇಳಿದ್ದಾರೆ.

ಮಾರಕ ವೈರಾಣುವಿನಿಂದ ತಮ್ಮನ್ನು ರಕ್ಷಿಸಿಕೊಳ್ಳಲು ಅಮೆರಿಕ ಪ್ರಜೆಗಳು ಲಸಿಕೆ ಹಾಕಿಸಿಕೊಳ್ಳಬೇಕೆಂದು ಮನವಿ ಮಾಡಿದ್ದಾರೆ.

ನಾವು ಕೊರೊನಾ 3ನೇ ಅಲೆಯ ಆರಂಭಿಕ ಹಂತದಲ್ಲಿದ್ದೇವೆ: WHOನಾವು ಕೊರೊನಾ 3ನೇ ಅಲೆಯ ಆರಂಭಿಕ ಹಂತದಲ್ಲಿದ್ದೇವೆ: WHO

ಶ್ವೇತಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇನ್ನೂ ಲಕ್ಷಾಂತರ ಜನರು ಕೋವಿಡ್ ಲಸಿಕೆ ಹಾಕಿಸಿಕೊಂಡಿಲ್ಲ, ಇಂತಹ ಜನರಲ್ಲಿ ಹೆಚ್ಚಿನ ಸೋಂಕನ್ನು ನಾವು ನೋಡುತ್ತಿದ್ದೇವೆ. ಕೋವಿಡ್ ನಿಂದ ಸಂಭವಿಸಿದ ಪ್ರತಿಯೊಂದು ಸಾವುಗಳು ನೋವನ್ನುಂಟು ಮಾಡಿವೆ. ಯಾರೇ ಆಗಲೀ ಲಸಿಕೆ ಪಡೆದುಕೊಳ್ಳಲು ಅವಕಾಶ ಇರುವುದಾಗಿ ಅವರು ಹೇಳಿದರು.

U.S. Surgeon General Says He Lost 10 Family Members To COVID-19

ಲಸಿಕೆಗೆ ಇನ್ನೂ ಅರ್ಹತೆ ಪಡೆಯದ ಇಬ್ಬರು ಚಿಕ್ಕ ಮಕ್ಕಳ ತಂದೆಯಾಗಿ ನಾನು ನೋಡುತ್ತೇನೆ. ಆದರೆ, ಈ ವೈರಸ್‌ನಿಂದ ರಕ್ಷಿಸಿಕೊಳ್ಳಲು ಲಸಿಕೆ ಪಡೆಯಲು ನಮ್ಮ ಮಕ್ಕಳು ನಮ್ಮೆಲ್ಲರನ್ನೂ ಅವಲಂಬಿಸಿದ್ದಾರೆ ಎಂಬುದು ನನಗೆ ತಿಳಿದಿದೆ ಎಂದು ಡಾ. ವಿವೇಕ್ ಮೂರ್ತಿ ತಿಳಿಸಿದರು.

ತಪ್ಪು ಮಾಹಿತಿಯ ವಿರುದ್ಧ ಅಭಿಯಾನವನ್ನು ಪ್ರಾರಂಭಿಸಿದ ಭಾರತೀಯ-ಅಮೆರಿಕದ ತಜ್ಞ ವೈದ್ಯ ಡಾ. ವಿವೇಕ್ ಮೂರ್ತಿ, ಆರೋಗ್ಯ ಮಾಹಿತಿಯನ್ನು ಇತರರೊಂದಿಗೆ ಹಂಚಿಕೊಳ್ಳುವ ಮೊದಲು ಅವುಗಳು ನಂಬಲಾರ್ಹ ವೈಜ್ಞಾನಿಕ ಮೂಲಗಳಿಂದ ಬೆಂಬಲಿತವಾಗಿವೆಯೇ ಎಂಬುದನ್ನು ಖಾತ್ರಿ ಪಡಿಸಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದ್ದಾರೆ. ಈವರೆಗೂ 160 ಮಿಲಿಯನ್ ಅಮೆರಿಕನ್ನರು ಲಸಿಕೆ ಹಾಕಿಸಿಕೊಂಡಿರುವುದು ಒಳ್ಳೆಯ ಸುದ್ದಿ ಎಂದಿದ್ದಾರೆ.

English summary
U.S. Surgeon General Dr. Vivek Murthy, an Indian American, on Thursday, July 15, 2021, said he lost as many as 10 family members both here and in India to the covid pandemic.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X