ಅಮೆರಿಕದಲ್ಲಿ ಹುಲಿ ಆಯ್ತು, ಈಗ ಸಾಕು ಬೆಕ್ಕಿಗೂ ಕೊರೊನಾ ಸೋಂಕು
ವಾಷಿಂಗ್ಟನ್, ಏಪ್ರಿಲ್ 23: ಅಮೆರಿಕದಲ್ಲಿ ಮಾರಣಹೋಮ ನಡೆಸುತ್ತಿರುವ ಕೊರೊನಾ ವೈರಸ್ ಸಾವಿರಾರು ಜನರ ಪ್ರಾಣ ಬಲಿ ಪಡೆದುಕೊಂಡಿದೆ. ಇದೀಗ, ಮನುಷ್ಯನಿಂದ ಪ್ರಾಣಿಗೂ ಕೊರೊನಾ ಸೋಂಕು ಹರಡಿದ್ದು, ಪ್ರಾಣಿಗಳಿಗೂ ಆತಂಕ ಹೆಚ್ಚಾಗಿದೆ.
ಅಮೆರಿಕದ ನ್ಯೂಯಾರ್ಕ್ ನಗರದಲ್ಲಿ ಎರಡು ಸಾಕು ಬೆಕ್ಕಿಗೆ ಕೊವಿಡ್ ಸೋಂಕು ತಗುಲಿದೆ ಎಂದು ಫೆಡರಲ್ ಅಧಿಕಾರಿಗಳು ಬುಧವಾರ ಘೋಷಿಸಿದ್ದಾರೆ. 'ಯುನೈಟೆಡ್ ಸ್ಟೇಟ್ಸ್ನಲ್ಲಿ ಸಾಕುಪ್ರಾಣಿಯಲ್ಲಿ ಕೊರೊನಾ ಕಾಣಿಸಿಕೊಂಡಿದ್ದು ಇದೇ ಮೊದಲು" ಎಂದು ಯುಎಸ್ ಕೃಷಿ ಇಲಾಖೆ ಹಾಗೂ ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರ ತಿಳಿಸಿದೆ.
ಅಂದ್ಹಾಗೆ, ಈ ಬೆಕ್ಕುಗಳು ನ್ಯೂಯಾರ್ಕ್‌ನ ಹುಲಿ ಮತ್ತು ಸಿಂಹದ ಪಂಗಡಕ್ಕೆ ಸೇರಿದ್ದಾಗಿದೆ. ಮೊದಲನೇಯ ಬೆಕ್ಕಿಗೆ ಪರೀಕ್ಷೆ ಮಾಡಿದ ನಂತರ ಕೊರೊನಾ ಎಂದು ತಿಳಿದಿದೆ. ಬಳಿಕ ಎರಡನೇ ಬೆಕ್ಕಿಗೂ ಪರೀಕ್ಷೆ ಮಾಡಲಾಯಿತು. ಎರಡು ಬೆಕ್ಕಿಗು ಸೋಂಕು ದೃಢವಾದ ಮೇಲೆ ಮನೆಯಲ್ಲಿದ್ದವರಿಗೆ ಪರೀಕ್ಷೆ ಮಾಡಲಾಯಿತು. ಆದರೆ, ಅವರಲ್ಲಿ ಸೋಂಕು ಪತ್ತೆಯಾಗಿಲ್ಲ. ಪ್ರಾಣಿಗಳಿಂದ ಕೊರೊನಾ ಸೋಂಕು ಹರಡುತ್ತೆ ಎನ್ನುವುದಕ್ಕೆ ಯಾವುದೇ ಪುರಾವೆ ಇಲ್ಲ.

ಪ್ರಸ್ತುತ ಎರಡೂ ಬೆಕ್ಕಿನ ಆರೋಗ್ಯದಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ. ಆದಷ್ಟೂ ಬೇಗ ಚೇತರಿಸಿಕೊಳ್ಳಲಿದೆ ಎಂಬ ನಿರೀಕ್ಷೆ ವ್ಯಕ್ತವಾಗಿದೆ.
ಇದಕ್ಕೂ ಮುಂಚೆ ನ್ಯೂಯಾರ್ಕ್ ನಗರದ ಬ್ಯಾಂಜ್ ಮೃಗಾಲಯದಲ್ಲಿ ನಾಲ್ಕು ವರ್ಷದ ಹುಲಿಗೆ ಕೊರೊನಾ ಸೋಂಕು ವರದಿಯಾಗಿತ್ತು. ನಂತರ ಮೃಗಾಲಯದಲ್ಲಿ ಹೈ ಅಲರ್ಟ್ ಘೋಷಣೆ ಆಗಿತ್ತು.
ಇನ್ನು ಯುಎಸ್‌ನಲ್ಲಿ ಕೊರೊನಾ ಅಂಕಿ ಅಂಶ ನೋಡುವುದಾದರೆ ಇದುವರೆಗೂ 8 ಲಕ್ಷ (848,717) ಕೇಸ್ ದಾಖಲಾಗಿದೆ. 47,659 ಸಾವಿ ಜನರು ಸಾವನ್ನಪ್ಪಿದ್ದಾರೆ. 84,050 ಜನರು ಚೇತರಿಸಿಕೊಂಡಿದ್ದರೆ, ಇನ್ನು 14,016 ಜನರ ಆರೋಗ್ಯ ಸ್ಥಿತಿ ಗಂಭೀರವಾಗಿದೆ.












Click it and Unblock the Notifications