ಕೆಂಟುಕಿ ಗೆದ್ದ ಟ್ರಂಪ್, ವರ್ಮೊಂಟ್ ಜಯಿಸಿದ ಬೈಡನ್

ವಾಷಿಂಗ್ಟನ್, ನ. 4: ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಮತದಾನ ಪ್ರಕ್ರಿಯೆ ಬಹುತೇಕ ಮುಕ್ತಾಯಗೊಂಡಿದ್ದು, ಮೊದಲ ಫಲಿತಾಂಶಗಳು ಬರುತ್ತಿವೆ. ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಕೆಂಟುಕಿಯನ್ನು ಗೆದಿದ್ದಾರೆ ಹಾಗೂ ವರ್ಮೊಂಟ್ ಬೈಡನ್ ಪಾಲಾಗಿದೆ.

ಈ ಸಮಯಕ್ಕೆ ಲಭ್ಯ ಮಾಹಿತಿಯಂತೆ ಟ್ರಂಪ್ ಅವರು ಇಂಡಿಯಾನಾ, ಸೌಥ್ ಕರೋಲಿನಾದಲ್ಲೂ ಜಯ ದಾಖಲಿಸಿದ್ದಾರೆ. ಜೋ ಬೈಡನ್ ಅವರು ಟೆಕ್ಸಾಸ್, ಜಾರ್ಜಿಯಾ, ಫ್ಲೋರಿಡಾ, ಹ್ಯಾಂಪ್ ಶೈರ್, ವರ್ಮೊಂಟ್ ವಶಪಡಿಸಿಕೊಂಡಿದ್ದಾರೆ.

ಜಯ ದಾಖಲಿಸಲು 270 ಎಲೆಕ್ಟೋರಲ್ ಮತಗಳು ಅಗತ್ಯ 6.40 AM IST
ಬೈಡನ್ : 16
ಟ್ರಂಪ್: 24
ಬಾಕಿ ಎಣಿಕೆ : 498

ಕೆಂಟುಕಿಯಿಂದ ಟ್ರಂಪ್ 8 ಎಲೆಕ್ಟೋರಲ್ ಮತಗಳನ್ನು ಗಳಿಸಿದ್ದರೆ, ಬೈಡನ್ ಅವರು ವರ್ಮೊಂಟ್ ಗೆದ್ದು 3 ಎಲೆಕ್ಟೋರಲ್ ಮತಗಳನ್ನು ಪಡೆದಿದ್ದಾರೆ. ಫ್ಲೋರಿಡಾ 26 ಎಲೆಕ್ಟೋರಲ್ ಮತ ಹೊಂದಿದ್ದು, ಬೈಡನ್ ಮುನ್ನಡೆ ಕಾಯ್ದುಕೊಂಡಿದ್ದಾರೆ.

Trump wins Kentucky, Biden carries Vermont

ವೆಸ್ಟ್ ವರ್ಜಿನಿಯಾದಲ್ಲಿ ಟ್ರಂಪ್ ಈ ಬಾರಿ ಜಯ ದಾಖಲಿಸಿ 5 ಎಲೆಕ್ಟೋರಲ್ ಮತ ಗಳಿಸಿದ್ದಾರೆ. 1996ರಲ್ಲಿ ಬಿಲ್ ಕ್ಲಿಂಟನ್ ನಂತರ ಇಲ್ಲಿ ಡೆಮೊಕ್ರಾಟಿಕ್ ಅಭ್ಯರ್ಥಿ ಗೆಲುವು ದಾಖಲಿಸಲು ಸಾಧ್ಯವಾಗಿಲ್ಲ.ಜೋ ಬೈಡನ್ ಅವರು ಡೆಲಾವೇರ್, ಮ್ಯಾಸ್ಸಾಚುಸೆಟ್ಸ್, ಮೇರಿಲ್ಯಾಂಡ್, ಕನೆಕ್ಟಿಕಟ್, ಇಲಿನಾಯ್, ರೋಹ್ ಐಲ್ಯಾಂಡ್, ನ್ಯೂ ಜೆರ್ಸಿ ಗೆದ್ದಿದ್ದಾರೆ.

ಟ್ರಂಪ್ ಅವರು ಅಲಬಾಮಾ, ಓಕ್ಲಾಹೊಮಾ, ಟೆನ್ನೆಸ್ಸಿ, ಮಿಸಿಸಿಪ್ಪಿಯಲ್ಲಿ ಜಯ ದಾಖಲಿಸಿದ್ದಾರೆ.

ಯುಎಸ್ -ಕೆನಡಾ ಗಡಿ ಭಾಗದ ನ್ಯೂ ಹ್ಯಾಂಪ್ ಶೈರ್ ಪ್ರಾಂತ್ಯಕ್ಕೆ ಸೇರಿದ ಪುಟ್ಟ ಊರು ಡಿಕ್ಸ್ ವಿಲ್ಲೆ ನಾಚ್ ನಲ್ಲಿ ಮೊದಲ ಫಲಿತಾಂಶ ಬಂದಿದ್ದು, ಎಲ್ಲಾ 5 ಮತಗಳನ್ನು ಡೆಮಾಕ್ರಾಟಿಕ್ ಅಭ್ಯರ್ಥಿ ಜೋ ಬೈಡನ್ ಗಳಿಸಿದ್ದಾರೆ. ಮಿಲ್ಸ್ ಫೀಲ್ಡ್ ನಲ್ಲಿ ಟ್ರಂಪ್ 16 ಮತಗಳಿಸಿ ಜಯಭೇರಿ ಬಾರಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+