206ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ದೊಂಬಿಕೋರರ ವಶವಾದ ಅಮೆರಿಕ ಸಂಸತ್ ಭವನ

ವಾಷಿಂಗ್ಟನ್, ಜ 8: ಅಮೆರಿಕಾದ ಇತಿಹಾಸದಲ್ಲೇ ಕಪ್ಪುಚುಕ್ಕೆ ಎನ್ನಬಹುದಾದ ಘಟನೆಗೆ ಬುಧವಾರ (ಜ 6) ಸಂಸತ್ ಭವನ (ಕ್ಯಾಪಿಟಲ್ ಕಟ್ಟಡ) ಸಾಕ್ಷಿಯಾಯಿತು. ಅಮೆರಿಕಾದ ನಿರ್ಗಮಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬೆಂಬಲಿಗರು ಅಮೆರಿಕಾದ ಘನತೆಯನ್ನು ಮಣ್ಣುಪಾಲು ಮಾಡಿದರು.

ಅಧ್ಯಕ್ಷೀಯ ಚುನಾವಣೆಯ ಸೋಲನ್ನು ಇನ್ನೂ ಅರಗಿಸಿಕೊಳ್ಳದ ಟ್ರಂಪ್ ಮಾಡಿದ ಎಡವಟ್ಟಿನಿಂದ ನಾಲ್ವರು ಬಲಿಯಾಗಿದ್ದಾರೆ. ಟ್ರಂಪ್ ನೀಡಿದ ಕರೆಗೆ ಸಾವಿರ ಸಾವಿರ ಸಂಖ್ಯೆಯಲ್ಲಿ ದಾಂಗುಡಿ ಇಟ್ಟ ಅವರ ಬೆಂಬಲಿಗರು ಸಂಸತ್ ಕಟ್ಟಡಕ್ಕೆ ನುಗ್ಗಿ ದಾಂಧಲೆ ನಡೆಸಿದ್ದಾರೆ.

ನೂತನ ಅಧ್ಯಕ್ಷರನ್ನಾಗಿ ಜೋ ಬೈಡೆನ್ ಅವರ ಆಯ್ಕೆಯನ್ನು ಅಧಿಕೃತಗೊಳಿಸುವ ಪ್ರಕ್ರಿಯೆಗಾಗಿ ಸಂಸತ್ ಭವನದ ಮುಂದೆ ಎರಡೂ ಪಕ್ಷಗಳ (ರಿಪಬ್ಲಿಕನ್ ಮತ್ತು ಡೆಮೊಕ್ರಟಿಕ್) ಸಂಸದರ ಸಭೆಯನ್ನು ಕರೆಯಲಾಗಿತ್ತು.

ಈ ವೇಳೆ ಭಾರೀ ಸಂಖ್ಯೆಯಲ್ಲಿ ಆಗಮಿಸಿದ್ದ ಟ್ರಂಪ್ ಬೆಂಬಲಿಗರು ಭದ್ರತೆ ಮತ್ತು ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿ ಕ್ಯಾಪಿಟಲ್ ಕಟ್ಟಡಕ್ಕೆ ಹಾನಿ ಮಾಡಿದರು. ಕೆಲವು ಗಂಟೆಗಳ ಕಾಲ ಈ ಕಟ್ಟಡ ದೊಂಬಿಕೋರರ ವಶದಲ್ಲಿತ್ತು. ಈ ರೀತಿಯ ಅಹಿತಕರ ವಿದ್ಯಮಾನ 208ವರ್ಷಗಳಲ್ಲಿ ಇದೇ ಮೊದಲು.

ಟ್ರಂಪ್ ಬೆಂಬಲಿಗರು

ಟ್ರಂಪ್ ಬೆಂಬಲಿಗರು

ಟ್ರಂಪ್ ಬೆಂಬಲಿಗರು ಬುಧವಾರ ಮಧ್ಯಾಹ್ನದ ಹೊತ್ತಿಗೆ ಕ್ಯಾಪಿಟಲ್ ಕಟ್ಟಡದ ಬಳಿ ಜಮಾಯಿಸಿ ಹಿಂಸಾಚಾರಕ್ಕೆ ಇಳಿದರು. ಜೋ ಬೈಡೆನ್, ಕಮಲಾ ಹ್ಯಾರಿಸ್ ಆಯ್ಕೆ ಅಧಿಕೃತ ಎಂದು ಘೋಷಣೆ ಮಾಡುವುದನ್ನು ತಡೆಯುವುದು ಈ ಬೆಂಬಲಿಗರ ಉದ್ದೇಶವಾಗಿತ್ತು. ಆ ವೇಳೆ, ಪೊಲೀಸರು ಗುಂಡಿನ ದಾಳಿ, ಆಶ್ರುವಾಯು ಸಿಡಿಸಿದರು. ಇದರಿಂದ ಒಬ್ಬರು, ನೂಕುನುಗ್ಗಲಿನಲ್ಲಿ ಮೂವರು ಗಲಭೆಕೋರರು ಮೃತ ಪಟ್ಟರು. (ಚಿತ್ರ:ಪಿಟಿಐ)

206ವರ್ಷಗಳ ನಂತರ ಈ ಕಟ್ಟಡದ ಮೇಲೆ ನಡೆದ ಮೊದಲ ದಾಳಿ

206ವರ್ಷಗಳ ನಂತರ ಈ ಕಟ್ಟಡದ ಮೇಲೆ ನಡೆದ ಮೊದಲ ದಾಳಿ

ಎರಡು ಶತಮಾನಗಳ ಕೆಳಗೆ ಅಂದರೆ 1812ರಲ್ಲಿ ಯುದ್ದ ಆರಂಭವಾಗಿತ್ತು. ಎರಡು ವರ್ಷಕ್ಕೂ ಹೆಚ್ಚು ಕಾಲ ಈ ನಡೆದ ಯುದ್ದದಲ್ಲಿ ಅಂದರೆ 1814ರಲ್ಲಿ ಬ್ರಿಟಿಷ್ ಪಡೆಗಳು, ವಾಷಿಂಗ್ಟನ್ ನಲ್ಲಿರುವ ಈ ಕಟ್ಟಡವನ್ನು ಬಹುತೇಕ ನಾಶ ಮಾಡಿ, ತನ್ನ ವಶಕ್ಕೆ ಪಡೆದುಕೊಂಡಿದ್ದವು. 206ವರ್ಷಗಳ ನಂತರ ಈ ಕಟ್ಟಡದ ಮೇಲೆ ನಡೆದ ಮೊದಲ ದಾಳಿ ಇದಾಗಿದೆ. (ಚಿತ್ರ:ಪಿಟಿಐ)

ಭಾರತದ ತ್ರಿವರ್ಣ ಧ್ವಜ

ಭಾರತದ ತ್ರಿವರ್ಣ ಧ್ವಜ

ಅತಿ ಭದ್ರತೆಯಲ್ಲಿರುವ ಈ ಕಟ್ಟಡವನ್ನು ನುಗ್ಗಿದ ಗಲಭೆಕೋರರು ಏಣಿ, ಸ್ಕ್ಯಾಫೋಲ್ಡಿಂಗ್ ಅನ್ನು ಏರಿ, ಕಿಟಕಿಗಳನ್ನು ಒಡೆದು ಕಟ್ಟಡಕ್ಕೆ ಹಾನಿ ಮಾಡಿದರು. ಭಾರೀ ಸಂಖ್ಯೆಯಲ್ಲಿದ್ದ ದಂಧೆಕೋರರ ಮಧ್ಯೆ ಭಾರತದ ತ್ರಿವರ್ಣ ಧ್ವಜ ಇದ್ದದ್ದು ತಲೆತಗ್ಗಿಸುವ ವಿಚಾರ.

ಕ್ಯಾಪಿಟಲ್ ಕಟ್ಟಡದ ಮೇಲಿನ ದಾಳಿ

ಕ್ಯಾಪಿಟಲ್ ಕಟ್ಟಡದ ಮೇಲಿನ ದಾಳಿ

ಕ್ಯಾಪಿಟಲ್ ಕಟ್ಟಡದ ಮೇಲಿನ ದಾಳಿಯ ವೇಳೆ ಸೆನೆಟ್ ಮತ್ತು ಹೌಸ್ ಆಫ್ ರೆಪ್ರೆಸೆಂಟಿಟೀವ್ಸ್ ನಲ್ಲಿ ಬೈಡೆನ್ ಗೆ ಅಧಿಕಾರದ ಚುಕ್ಕಾಣಿಯನ್ನು ನೀಡಲಾಗಿದೆ. 25ನೇ ಅಧ್ಯಕ್ಷರಾಗಿ ಬೈಡೆನ್ ಜನವರಿ ಇಪ್ಪತ್ತರಂದು ಅಧಿಕಾರ ಸ್ವೀಕರಿಸಲಿದ್ದಾರೆ. ಆದರೆ, ಅಲ್ಲಿಯವರೆಗೆ ಟ್ರಂಪ್ ಮತ್ತು ಅವರ ಬೆಂಬಲಿಗರು ಇನ್ನೇನು ಎಡವಟ್ಟನ್ನು ಮಾಡುತ್ತಾರೋ?

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+