• search
  • Live TV
ವಾಷಿಂಗ್ಟನ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

HCQ ಔಷಧ ಸೇವನೆ ನಿಲ್ಲಿಸಿದ ಟ್ರಂಪ್, ಕಾರಣ ಬಹಿರಂಗ!

|

ವಾಷಿಂಗ್ಟನ್, ಮೇ 25: ಕೊರೊನಾ ವೈರಸ್ ಆತಂಕದಿಂದಾಗಿ ವಾರಗಳ ಕಾಲ ಡೊನಾಲ್ಡ್ ಟ್ರಂಪ್ ಈ ಮಾತ್ರೆಗಳನ್ನು ಸೇವಿಸಿದ್ದೆ ಎಂದು ಕೆಲ ವಾರಗಳ ಹಿಂದೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದು ಭಾರಿ ಸುದ್ದಿಯಾಗಿತ್ತು. ಯಾರು ಏನೇ ಹೇಳಲಿ, ತಮ್ಮ ನಂಬಿಕೆಗೆ ಬದ್ಧವಾಗಿ ಔಷಧಿ ಸೇವಿಸುತ್ತಿದ್ದ ಟ್ರಂಪ್, ಇದೀಗ ಎಚ್ ಸಿ ಕ್ಯೂ ಮಾತ್ರೆ ಸೇವಿಸುವುದನ್ನು ನಿಲ್ಲಿಸಿದ್ದೇನೆ ಎಂದಿದ್ದಾರೆ.

''ಕೊವಿಡ್-19 ವಿರುದ್ಧ ಮಲೆರಿಯಾ ನಿರೋಧಕ ಔಷಧ ಹೈಡ್ರಾಕ್ಸಿಕ್ಲೋರೊಕ್ವಿನ್ ಯಾವುದೇ ಕೆಲಸ ಮಾಡುವುದಿಲ್ಲ'' ಎಂದು ಅಮೆರಿಕ ಸರ್ಕಾರದ ಸಂಶೋಧಕರೇ ಹೇಳಿದ್ದರು ಕೂಡ ಮಾತ್ರೆಗಳನ್ನು ತೆಗೆದುಕೊಳ್ಳುತ್ತಿದ್ದೆ ಎಂದು ಟ್ರಂಪ್ ಹೇಳಿದ್ದರು.

ಕೊರೊನಾ ಕದನದ ನಡುವೆ 2ನೇ ವಿಶ್ವಯುದ್ಧದ ಲಸಿಕೆ ಟ್ರೆಂಡ್

ಹೈಡ್ರಾಕ್ಸಿಕ್ಲೋರೊಕ್ವಿನ್ ಮಾತ್ರೆಯ ಬಳಕೆಗೆ ಉತ್ತೇಜನ ನೀಡಲು ಟ್ರಂಪ್ ಆಸಕ್ತಿ ಹೊಂದಿದ್ದು ಗುಟ್ಟಾದ ವಿಷಯವೇನಲ್ಲ. ಮಲೇರಿಯಾ ರೋಗಿಗಳಿಗೆ ಪ್ಲೇಕ್ವೆನಿಲ್ ಹೆಸರಿನಲ್ಲಿ ನೀಡಲಾಗುವ ಹೈಡ್ರೋಕ್ಸಿಕ್ಲೋರೊಕ್ವೆನ್(HCQ) ಎಂಬ Anti-Malaria ಔಷಧದ ಬಗ್ಗೆ ಟ್ರಂಪ್ ಅವರು ಮಾರ್ಚ್ ತಿಂಗಳಲ್ಲೇ ತಮ್ಮ ಟ್ವೀಟ್ ನಲ್ಲಿ ಉಲ್ಲೇಖಿಸಿದ್ದರು. HCQ ಹಾಗೂ ಅಜಿಥ್ರೋಮೈಸಿನ್ ಬಳಕೆಯಿಂದ ವೈದ್ಯಕೀಯ ಲೋಕದಲ್ಲಿ ಭಾರಿ ಬದಲಾವಣೆ ಸಾಧ್ಯ ಎಂದಿದ್ದರು.

ಕೊವಿಡ್ 19 ಪರೀಕ್ಷೆಯಲ್ಲಿ ನೆಗಟಿವ್

ಕೊವಿಡ್ 19 ಪರೀಕ್ಷೆಯಲ್ಲಿ ನೆಗಟಿವ್

ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಉಪಾಧ್ಯಕ್ಷ ಮೈಕ್ ಪೆನ್ಸ್ ಅವರನ್ನೂ ಕೋವಿಡ್-19 ಪರೀಕ್ಷೆಗೆ ಒಳಪಡಿಸಲಾಗಿತ್ತು. ಪರೀಕ್ಷೆಯಲ್ಲಿ ಇಬ್ಬರಿಗೂ 'ನೆಗೆಟಿವ್' ಕಂಡುಬಂದಿತ್ತು. ಆದರೂ ಎಚ್ ಸಿಕ್ಯೂ ಮೇಲಿನ ತಮ್ಮ ನಂಬಿಕೆ ತೆಗೆದು ಹಾಕದ ಟ್ರಂಪ್ ಎರಡು ವಾರಗಳ ಕಾಲ ಮಾತ್ರೆ ಸೇವಿಸಿದ್ದಾಗಿ ಹೇಳಿದ್ದಾರೆ. ''ಮುಗಿಯುತು, ಸದ್ಯ ಮುಗಿಯಿತು'', btw ನಾನು ಇನ್ನೂ ಜೀವಂತ ಇದ್ದೀನಿ ಎನ್ನುವ ಮೂಲಕ ತಮ್ಮ ನಂಬಿಕೆ ಪ್ರಶ್ನಿಸಿದವರೆ ತಿರುಗೇಟು ನೀಡಿದ್ದಾರೆ. ಇನ್ನೂ ಸಾಬೀತಾಗದ ಚಿಕಿತ್ಸಾ ವಿಧಾನಕ್ಕೆ ಒಳಪಟ್ಟಿದ್ದೇನೆ. ವಿಶ್ವದೆಲ್ಲೆಡೆ ಈ ಮಾತ್ರೆಯನ್ನು ವೈದ್ಯಕೀಯ ಸಿಬ್ಬಂದಿ ಸೇವಿಸುತ್ತಿದ್ದಾರೆ ಎಂದು ಟ್ರಂಪ್ ಸಮರ್ಥನೆ ನೀಡಿದ್ದರು.

ಸಂಶೋಧಕ ಡಾ. ವಿಲಿಯಮ್ ಅಭಿಪ್ರಾಯ

ಸಂಶೋಧಕ ಡಾ. ವಿಲಿಯಮ್ ಅಭಿಪ್ರಾಯ

ಚೀನಾ ಹಾಗೂ ಇತರೆ ಏಷ್ಯನ್ ರಾಷ್ಟ್ರಗಳನ್ನು ನೋಡುವುದಾದರೆ ಲಸಿಕೆ ಇಲ್ಲದೆಯೇ ಕೊರೊನಾವನ್ನು ಗುಣಪಡಿಸಬಹುದು ಎಂಬುದು ಸ್ಪಷ್ಟವಾಗಿದೆ. ಜನರು ಮಾಸ್ಕ್, ಕೈವಸುಗಳನ್ನು ಧರಿಸಿ, ನಿಮ್ಮ ಮನೆ ಹಾಗೂ ಸುತ್ತಮುತ್ತಲಿನ ವಾತಾವರಣವನ್ನು ಶುಚಿಯಾಗಿಟ್ಟುಕೊಳ್ಳಿ, ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಿ, ಕೊರೊನಾದಿಂದ ದೂರವಿರಿ ಅಮೆರಿಕದ ಸಂಶೋಧಕ ಡಾ. ವಿಲಿಯಮ್ ಎಂದಿದ್ದಾರೆ.

ಬೆನ್ ಬಿಡದ ಕೊರೊನಾ ಭೂತ-1: ಖಿನ್ನತೆಯಲ್ಲಿ ಮುಳುಗಿತಾ ಅಮೆರಿಕಾ?

ಏಡ್ಸ್ ಸಂಶೋಧಕರಾಗಿರುವ ವಿಲಿಯಮ್

ಏಡ್ಸ್ ಸಂಶೋಧಕರಾಗಿರುವ ವಿಲಿಯಮ್

ಕ್ಯಾನ್ಸರ್, ಎಚ್‌ಐವಿ/ಏಡ್ಸ್ ಸಂಶೋಧಕರಾಗಿರುವ ವಿಲಿಯಮ್ ಮಾತನಾಡಿ, ಲಾಕ್‌ಡೌನ್ ಸಡಿಲಗೊಳಿಸುವ ಮುನ್ನ ಸರ್ಕಾರ ಸಾಕಷ್ಟು ಬಾರಿ ಆಲೋಚನೆ ಮಾಡಬೇಕಿದೆ. ಈಗಾಗಲೇ 100 ಬಗೆಯ ಲಸಿಕೆಗಳನ್ನು ಕಂಡು ಹಿಡಿಯಲಾಗಿದೆ. ಆದರೆ ಸಂಪೂರ್ಣವಾಗಿ ಅದು ಜನರಿಗೆ ಲಭ್ಯವಾಗುವಂತೆ ಮಾಡಲು 12-18 ತಿಂಗಳು ಬೇಕಾಗುತ್ತದೆ ಎಂದಿದ್ದಾರೆ. ಬ್ರೆಜಿಲ್, ಫ್ರಾನ್ಸ್, ಅಮೆರಿಕ, ಯುಕೆ ಹಾಗೂ ಭಾರತದ ವಿಜ್ಞಾನಗ್ಳು ಕೂಡಾ anti dote ಅಥವಾ ಲಸಿಕೆ ಸಿಗಲು ಕನಿಷ್ಠ ಒಂದು ವರ್ಷವಾದರೂ ಬೇಕು ಎಂದಿದ್ದಾರೆ.

Hydroxychloroquine (HCQ)

Hydroxychloroquine (HCQ)

Hydroxychloroquine (HCQ) ಔಷಧವನ್ನು ರಫ್ತು ಮಾಡುವಂತೆ ಭಾರತಕ್ಕೆ ಟ್ರಂಪ್ ಆಗ್ರಹಪೂರ್ವಕ ಮನವಿ ಮಾಡಿದ್ದರು. ಭಾರತ ಕೂಡಾ ಅಮೆರಿಕ ಸೇರಿದಂತೆ 60ಕ್ಕೂ ಅಧಿಕ ದೇಶಗಳಿಗೆ ಈ ಮಾತ್ರೆ ರಫ್ತು ಮಾಡಿದೆ. Sars- CoV2 ವೈರಸ್ ಸೋಂಕಿನ ಪ್ರಭಾವವನ್ನು ತಗ್ಗಿಸುವಲ್ಲಿ ಮಲೇರಿಯಾ ಡ್ರಗ್ ಯಶಸ್ವಿಯಾಗಿದೆ. ಆದರೆ, ಯುರೋಪಿಯನ್ ಮೆಡಿಸನ್ ಏಜೆನ್ಸಿ, ಕೊರೊನಾರೋಗಿಗಳಿಗೆ ಎಚ್ ಸಿಕ್ಯೂ ನೀಡುವುದನ್ನು ವಿರೋಧಿಸಿದ್ದು, ಕ್ಲಿನಿಕಲ್ ಟ್ರಯಲ್ ಅಥವಾ ತುರ್ತು ಪರಿಸ್ಥಿತಿಯಲ್ಲಿ ಮಾತ್ರ ಬಳಸುವಂತೆ ಸೂಚಿಸಿದೆ. ಇದರ ಸೈಡ್ ಎಫೆಕ್ಟ್ ಗಳಲ್ಲಿ ಹೃದಯಕ್ಕೆ ಹಾನಿ, ಹೃದಯ ಬಡಿತದಲ್ಲಿ ಏರುಪೇರು, ವಾಂತಿ, ಭೇದಿ, ತಲೆ ಸುತ್ತುವಿಕೆ ಮುಂತಾದ ಪರಿಣಾಮಗಳಿವೆ.

ಕೊರೊನಾ ವೈರಸ್ ಲಸಿಕೆಯ ಖಾತ್ರಿ ಇಲ್ಲ ಎಂದ ಅಮೆರಿಕದ ಖ್ಯಾತ ವಿಜ್ಞಾನಿಗಳು

ಪ್ಲೇಕ್ವೆನಿಲ್ ಬ್ರ್ಯಾಂಡ್ ಹೆಸರಿನ ಔಷಧ

ಪ್ಲೇಕ್ವೆನಿಲ್ ಬ್ರ್ಯಾಂಡ್ ಹೆಸರಿನ ಔಷಧ

ಪ್ಲೇಕ್ವೆನಿಲ್ ಬ್ರ್ಯಾಂಡ್ ಹೆಸರಿನಲ್ಲಿ ನೀಡಲಾಗುವ ಹೈಡ್ರೋಕ್ಸಿಕ್ಲೋರೊಕ್ವೆನ್(HCQ) ಮಲೇರಿಯಾ ಅಲ್ಲದೆ ರುಮಾಟಾಯಿಡ್ ಆರ್ಥೈಟಿಸ್ ಗೂ ಬಳಸಲಾಗುತ್ತದೆ. ಹೃದಯ, ಶ್ವಾಸಕೋಶ, ಜ್ವರ, ಮೈಕೈ ನೋವು, ಸ್ನಾಯು ಸೆಳೆತ ಎಲ್ಲಕ್ಕೂ ಈ ಔಷಧಿ ಬಳಸಬಹುದು ಎಂದು ಜಾನ್ಸ್ ಹಾಪ್ಕಿನ್ ವಿಶ್ವ ವಿದ್ಯಾಲಯ ವರದಿ ನೀಡಿದೆ.

ಹೈಡ್ರೋಕ್ಸಿಕ್ಲೋರೊಕ್ವೆನ್ ಜೊತೆಗೆ Anti biotic ಅಜಿಥ್ರೋಮೈಸಿನ್ ಸೇರಿಸಿ ಸರಿ ಪ್ರಮಾಣದಲ್ಲಿ ನೀಡುತ್ತಾ ಬಂದರೆ ಆರಂಭಿಕ ಹಂತದ ಕೊವಿಡ್ 19 ಸಾರ್ಸ್ CoV 2 ಇತ್ಯಾದಿ ಹೊಗಲಾಡಿಸಬಹುದು

English summary
President Donald Trump said he had "just finished" taking a two-week course of the antimalarial drug hydroxychloroquine.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more