ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟ್ರಂಪ್ ಪ್ರಚಾರದಿಂದ 30000 ಜನರಿಗೆ ಕೊರೊನಾವೈರಸ್, 700 ಮಂದಿ ಸಾವು

|
Google Oneindia Kannada News

ವಾಶಿಂಗ್ಟನ್, ನವೆಂಬರ್.01: ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾ ಕೊರೊನಾವೈರಸ್ ಸೋಂಕಿಗೆ ನಲುಗಿದ ಜಗತ್ತಿನ ಅಗ್ರಸ್ಥಾನದಲ್ಲಿದೆ. ದೇಶದಲ್ಲಿ ಕೊವಿಡ್-19 ಪ್ರಕರಣ ಸಂಖ್ಯೆ 94 ಲಕ್ಷದ ಗಡಿ ದಾಟಿದೆ. ಅಮೆರಿಕಾ ಅಧ್ಯಕ್ಷೀಯ ಚುನಾವಣೆ ಕೂಡಾ ಸೋಂಕಿನ ಹರಡುವಿಕೆಗೊಂದು ಕಾರಣ ಎಂಬ ಅಂಶ ಇದೀಗ ಬೆಳಕಿಗೆ ಬಂದಿದೆ.

ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಡೆಸಿರುವ ಚುನಾವಣಾ ಪ್ರಚಾರದಿಂದಲೇ 30,000ಕ್ಕೂ ಅಧಿಕ ಮಂದಿಗೆ ಕೊವಿಡ್-19 ಸೋಂಕು ತಗುಲಿದೆ. 700ಕ್ಕೂ ಹೆಚ್ಚು ಜನರು ಸಾವನ್ನಪ್ಪಲು ಚುನಾವಣಾ ರ್ಯಾಲಿಗಳು ಕಾರಣವಾಗಿದೆ ಎಂದು ಅಧ್ಯಯನದ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಕೊರೊನಾ ಹೆಣದ ಮೇಲೆ ವೈದ್ಯರು ದುಡ್ಡು ಮಾಡ್ತಿದ್ದಾರೆ: ಟ್ರಂಪ್ ಆರೋಪಕೊರೊನಾ ಹೆಣದ ಮೇಲೆ ವೈದ್ಯರು ದುಡ್ಡು ಮಾಡ್ತಿದ್ದಾರೆ: ಟ್ರಂಪ್ ಆರೋಪ

ಅಧ್ಯಕ್ಷೀಯ ಚುನಾವಣಾ ರ್ಯಾಲಿಗಳಿಂದ ಕೊರೊನಾವೈರಸ್ ಸೋಂಕು ಸಮುದಾಯದಲ್ಲಿ ಹರಡಿರುವ ಸಾಧ್ಯತೆಯಿದೆ. ಸ್ಟಾನ್ ಫರ್ಡ್ ವಿಶ್ವವಿದ್ಯಾಲಯದ ಸಂಶೋಧಕರು "ಕೊವಿಡ್-19 ಸೋಂಕು ಹರಡುವಿಕೆ ಮೇಲೆ ಬೃಹತ್ ಸಭೆ ಸಮಾರಂಭಗಳ ಪ್ರಭಾವ" ಎಂಬ ಶೀರ್ಷಿಕೆಯಡಿ ಅಧ್ಯಯನ ನಡೆಸಿದ್ದಾರೆ. ಈ ವೇಳೆ ಜೂನ್.20ರಿಂದ ಸಪ್ಟೆಂಬರ್.22ರವರೆಗೂ ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಡೆಸಿದ 18 ಚುನಾವಣಾ ರ್ಯಾಲಿಗಳು ಸೇರಿದಂತೆ ಪ್ರಚಾರದಲ್ಲಿ ಭಾಗವಹಿಸಿದ 30 ಸಾವಿರಕ್ಕೂ ಹೆಚ್ಚು ಜನರಿಗೆ ಸೋಂಕು ಅಂಟಿಕೊಂಡಿದ್ದು, ಈ ಪೈಕಿ 700ಕ್ಕೂ ಹೆಚ್ಚು ಜನರು ಪ್ರಾಣ ಬಿಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ಕೊವಿಡ್-19 ಮಾರ್ಗಸೂಚಿ ಪಾಲನೆಯಲ್ಲಿ ನಿರ್ಲಕ್ಷ್ಯ

ಕೊವಿಡ್-19 ಮಾರ್ಗಸೂಚಿ ಪಾಲನೆಯಲ್ಲಿ ನಿರ್ಲಕ್ಷ್ಯ

ಸಾರ್ವಜನಿಕ ಸಭೆಯಗಳಲ್ಲಿ ಕೊರೊನಾವೈರಸ್ ಸೋಂಕು ಹರಡುವಿಕೆಯ ಅಪಾಯ ಹೆಚ್ಚಾಗಿರುತ್ತದೆ ಎಂದು ಸಂಶೋಧಕರು ಒಪ್ಪುತ್ತಾರೆ. ಕೊವಿಡ್-19 ನಿಯಂತ್ರಿಸುವ ನಿಟ್ಟಿನಲ್ಲಿ ಅನುಸರಿಸಬೇಕಾದ ಮಾರ್ಗಸೂಚಿ ಮತ್ತು ಸಾರ್ವಜನಿಕ ಆರೋಗ್ಯ ಅಧಿಕಾರಿಗಳು ನೀಡಿದ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ನಿರ್ಲಕ್ಷ್ಯ ತೋರಲಾಗಿದೆ. ಮಾಸ್ಕ್ ಧರಿಸುವುದು ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳದ ಹಿನ್ನೆಲೆ ಹೆಚ್ಚಿನ ಸಂಖ್ಯೆಯಲ್ಲಿ ಕೊವಿಡ್-19 ಪ್ರಕರಣಗಳು ದಾಖಲಾಗಿವೆ ಎಂದು ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ.

ಅಧ್ಯಯನದ ವರದಿ ಉಲ್ಲೇಖಿಸಿ ಟ್ರಂಪ್ ವಿರುದ್ಧ ಕಿಡಿ

ಅಧ್ಯಯನದ ವರದಿ ಉಲ್ಲೇಖಿಸಿ ಟ್ರಂಪ್ ವಿರುದ್ಧ ಕಿಡಿ

ಸ್ಟಾನ್ ಫರ್ಡ್ ವಿಶ್ವವಿದ್ಯಾಲಯದ ಸಂಶೋಧಕರು ನಡೆಸಿದ ಸಂಶೋಧನಾ ಅಧ್ಯಯನವನ್ನು ಉಲ್ಲೇಖಿಸಿ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುದ್ಧ ಅಮೆರಿಕಾ ಅಧ್ಯಕ್ಷೀಯ ಚುನಾವಣೆಯ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಜೋ ಬಿಡೆನ್ ವಾಗ್ದಾಳಿ ನಡೆಸಿದ್ದಾರೆ. ಡೊನೊಲ್ಡ್ ಟ್ರಂಪ್ ಅವರೇ ನಿಮಗೆ ನಿಮ್ಮ ಆರೋಗ್ಯದ ಬಗ್ಗೆಯಂತೂ ಕಾಳಜಿಯಿಲ್ಲ. ಟ್ರಂಪ್ ಅವರಿಗೆ ತಮ್ಮ ಬೆಂಬಲಿಗರು ಮತ್ತು ಪಕ್ಷದ ಕಾರ್ಯಕರ್ತರ ಆರೋಗ್ಯದ ಬಗ್ಗೆಯೂ ಕಾಳಜಿಯಿಲ್ಲವೇ ಎಂದು ಪ್ರಶ್ನೆ ಮಾಡಿದ್ದಾರೆ. ಕಳೆದ ಶುಕ್ರವಾರ ಸಂಶೋಧನಾ ಅಧ್ಯಯನದ ವರದಿ ಬಿಡುಗಡೆಯಾಗಿದ್ದು, ಅಂದಿನ ಅಂಕಿ-ಅಂಶಗಳ ಪ್ರಕಾರ, ಯುಎಸ್ಎನಲ್ಲಿ 87 ಲಕ್ಷ ಸೋಂಕಿತ ಪ್ರಕರಣಗಳ ಮತ್ತು 225000 ಸಾವಿನ ಪ್ರಕರಣಗಳು ವರದಿಯಾಗಿದ್ದನ್ನು ಜೋ ಬಿಡೆನ್ ಉಲ್ಲೇಖಿಸಿದ್ದರು.

ಕೊರೊನಾವೈರಸ್ ಹರಡಿವಕೆ ಬಗ್ಗೆ ಮುನ್ನೆಚ್ಚರಿಕೆ

ಕೊರೊನಾವೈರಸ್ ಹರಡಿವಕೆ ಬಗ್ಗೆ ಮುನ್ನೆಚ್ಚರಿಕೆ

ಸಾರ್ವಜನಿಕ ಸಭೆ ಮತ್ತು ಸಮಾರಂಭಗಳಲ್ಲಿ ಹೆಚ್ಚಿನ ಜನರು ಸೇರಿಸುವುದು. ಮಾಸ್ಕ್ ಧರಿಸದೇ ಇರುವುದು ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಇದ್ದಲ್ಲಿ ಕೊವಿಡ್-19 ಸೋಂಕಿನ ಹರಡುವಿಕೆ ಅಪಾಯ ಹೆಚ್ಚಾಗಿರುತ್ತದೆ ಎಂದು ವಿಪತ್ತು ನಿಯಂತ್ರಣಾ ಮತ್ತು ನಿರ್ವಹಣಾ ಕೇಂದ್ರವು ಈ ಮೊದಲೇ ಮುನ್ನೆಚ್ಚರಿಕೆ ಕ್ರಮವನ್ನು ನೀಡಿತ್ತು. ಈ ಎಚ್ಚರಿಕೆ ಜೊತೆಗೆ ಮಾರ್ಗಸೂಚಿ ಪಾಲಿಸುವಂತೆ ಸಲಹೆ ಮತ್ತು ಕೆಲವು ಶಿಫಾರಸ್ಸುಗಳನ್ನು ಮಾಡಲಾಗಿತ್ತು. ಈ ಶಿಫಾರಸ್ಸುಗಳ ಬಗ್ಗೆ ಗಮನ ಹರಿಸದ ಹಿನ್ನೆಲೆಯಲ್ಲಿ ಕೊವಿಡ್-19 ಸೋಂಕಿತ ಪ್ರಕರಣಗಳ ಸಂಖ್ಯೆ ಹೆಚ್ಚಾಗಿದೆ ಎನ್ನುವುದು ಸಂಶೋಧನಾ ಅಧ್ಯಯನದ ಸಂದರ್ಭದಲ್ಲಿ ತಿಳಿದು ಬಂದಿದೆ.

ರ್ಯಾಲಿಯಲ್ಲಿ ಒಮ್ಮೆ ಸಾವಿರಾರರು, ಒಮ್ಮೆ ಹತ್ತಾರು ಜನ

ರ್ಯಾಲಿಯಲ್ಲಿ ಒಮ್ಮೆ ಸಾವಿರಾರರು, ಒಮ್ಮೆ ಹತ್ತಾರು ಜನ

ಕಳೆದ ಜೂನ್ 20 ರಿಂದ ಸೆಪ್ಟೆಂಬರ್ 30ರವರೆಗೂ ನಡೆದ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಡೆಸಿದ ಚುನಾವಣಾ ರ್ಯಾಲಿಗಳ ಪ್ರಭಾವದ ಬಗ್ಗೆ ಅಧ್ಯಯನ ನಡೆಸಲಾಗಿತ್ತು. ಏಕೆಂದರೆ ಟ್ರಂಪ್ ರ್ಯಾಲಿಗಳಲ್ಲಿ ಹಲವಾರು ವಿಶೇಷಗಳು ಇರುತ್ತಿದ್ದವು. ಕೆಲವೊಮ್ಮೆ ಅವರ ರ್ಯಾಲಿಗಳಲ್ಲಿ ಸಾವಿರಾರು ಜನರು ಸೇರಿದರೆ ಇನ್ನು ಕೆಲವೊಮ್ಮೆ ಹತ್ತಾರು ಜನರು ಸೇರುತ್ತಿದ್ದರು ಎಂದು ಸಂಶೋಧಕರು ಹೇಳಿದ್ದಾರೆ.

ರ್ಯಾಲಿ ಪೂರ್ವ ಮತ್ತು ರ್ಯಾಲಿ ನಂತರದ ಅಂಕಿ-ಸಂಖ್ಯೆ

ರ್ಯಾಲಿ ಪೂರ್ವ ಮತ್ತು ರ್ಯಾಲಿ ನಂತರದ ಅಂಕಿ-ಸಂಖ್ಯೆ

ಒಂದು ಸಮುದಾಯದಲ್ಲಿ ಕೊರೊನಾವೈರಸ್ ಸೋಂಕು ಹರಡಿರುವ ಬಗ್ಗೆ ಸ್ಪಷ್ಟವಾಗುವುದಕ್ಕೆ ಕನಿಷ್ಠ 10 ದಿನಗಳ ಕಾಲಾವಕಾಶ ಬೇಕಾಗುತ್ತದೆ ಎಂದು ಸಂಶೋಧಕರು ತಿಳಿಸಿದ್ದಾರೆ. ಅಮೆರಿಕಾದ ಒಂದು ಪ್ರದೇಶದಲ್ಲಿ ಅಧ್ಯಕ್ಷ ಡೊನೊಲ್ಡ್ ಟ್ರಂಪ್ ಪ್ರಚಾರದ ನಡೆಸಿದರು. ಆ ಪ್ರದೇಶದಲ್ಲಿ ಟ್ರಂಪ್ ಪ್ರಚಾರಕ್ಕೂ ಮೊದಲಿದ್ದ ಕೊವಿಡ್-19 ಅಂಕಿ-ಸಂಖ್ಯೆ ಮತ್ತು ಪ್ರಚಾರದ ಬಳಿಕ ಕೊವಿಡ್-19 ಅಂಕಿ-ಸಂಖ್ಯೆಗಳನ್ನು ಪರಾಮರ್ಶೆ ಮಾಡಲಾಗಿದೆ ಎಂದು ಸಂಶೋಧಕರು ತಿಳಿಸಿದ್ದಾರೆ.

ಯುಎಸ್ಎನಲ್ಲಿ ಕೊವಿಡ್-19 ಅಟ್ಟಹಾಸ

ಯುಎಸ್ಎನಲ್ಲಿ ಕೊವಿಡ್-19 ಅಟ್ಟಹಾಸ

ಅಮೆರಿಕಾದಲ್ಲಿ ಕೊರೊನಾವೈರಸ್ ಸೋಂಕಿನ ಅಟ್ಟಹಾಸ ಮಿತಿ ಮೀರಿದೆ. ದೇಶದಲ್ಲಿ ಒಟ್ಟು ಕೊವಿಡ್-19 ಸೋಂಕಿತ ಪ್ರಕರಣಗಳ ಸಂಖ್ಯೆಯು 94,02,717ಕ್ಕೆ ಏರಿಕೆಯಾಗಿದೆ. ಮಹಾಮಾರಿಗೆ ಈವರೆಗೂ 2,36,077 ಜನರು ಪ್ರಾಣ ಬಿಟ್ಟಿದ್ದು, 60,62,445 ಸೋಂಕಿತರು ಗುಣಮುಖರಾಗಿದ್ದಾರೆ. ಉಳಿದಂತೆ 31,04,195 ಕೊರೊನಾವೈರಸ್ ಸಕ್ರಿಯ ಪ್ರಕರಣಗಳಿರುವುದು ಗೊತ್ತಾಗಿದೆ.

English summary
Trump's 18 Election Rallies Will Reason For 30,000 New Covid-19 Cases and 700 Death: Stanford Study.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X