ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಡೊನಾಲ್ಡ್ ಟ್ರಂಪ್ ‘ವೈಟ್ ಹೌಸ್’ ಬಿಟ್ಟು ಮನೆಗೆ ಹೋಗೋದು ಗ್ಯಾರಂಟಿ..!

|
Google Oneindia Kannada News

ಅಮೆರಿಕದ ನಿರ್ಗಮಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಧಿಕಾರ ಉಳಿಸಿಕೊಳ್ಳಲು ಮಾಡಿದ ಕೊನೆಯ ಪ್ರಯತ್ನ ವಿಫಲವಾಗುವುದು ಪಕ್ಕಾ ಆಗಿದೆ. ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಜೋ ಬೈಡನ್ ಗೆದಿದ್ದಾರೆ ಎಂದು ಈಗಾಗ್ಲೇ ಎಲೆಕ್ಟೊರಾಲ್ ಕಾಲೇಜು ಸ್ಪಷ್ಟಪಡಿಸಿದೆ. ಆದರೆ ಅಮೆರಿಕನ್ ಕಾಂಗ್ರೆಸ್ ಅಥವಾ ಜನಪ್ರತಿನಿಧಿಗಳ ಸಭೆಯಲ್ಲಿ ಬೈಡನ್ ಗೆಲುವನ್ನು ಅಂಗೀಕರಿಸಬೇಕಿದೆ.

ಅಮೆರಿಕದ ಕಾಲಮಾನ ಜನವರಿ 6ರಂದು ಈ ಕುರಿತು ಸಭೆ ನಡೆಸಿ, ಬೈಡನ್ ಗೆಲುವನ್ನು ಅಂಗೀಕರಿಸಲು ಅಮೆರಿಕನ್ ಕಾಂಗ್ರೆಸ್ ಸಜ್ಜಾಗಿತ್ತು. ಈ ಸಂದರ್ಭದಲ್ಲಿಯೇ ಟ್ರಂಪ್ ರಾಜಕೀಯ ದಾಳ ಉರುಳಿಸಲು ಸಜ್ಜಾಗಿದ್ದರು. ಜೋ ಬೈಡನ್ ಗೆಲುವನ್ನು ಅಮೆರಿಕನ್ ಕಾಂಗ್ರೆಸ್‌ ಅಂಗೀಕಾರ ಮಾಡದಂತೆ ತಡೆಯುವ ಪ್ಲಾನ್ ಮಾಡಿದ್ದರು. ಆದರೆ ಟ್ರಂಪ್ ಪ್ಲಾನ್ ಈಗ ಟ್ರಂಪ್‌ಗೆ ಉಲ್ಟಾ ಹೊಡೆದಿದೆ.

ಟ್ರಂಪ್ ಟೀಂ ನಮಗೆ ಸಹಕಾರ ನೀಡುತ್ತಿಲ್ಲ: ಜೋ ಬೈಡನ್ ಆರೋಪಟ್ರಂಪ್ ಟೀಂ ನಮಗೆ ಸಹಕಾರ ನೀಡುತ್ತಿಲ್ಲ: ಜೋ ಬೈಡನ್ ಆರೋಪ

ಅದು ಹೇಗೆಂದರೆ ಸ್ವತಃ ಟ್ರಂಪ್ ಪಕ್ಷದವರಾದ ಇಬ್ಬರು ರಿಪಬ್ಲಿಕನ್ ಪಾರ್ಟಿಯ ಅಮೆರಿಕನ್ ಕಾಂಗ್ರೆಸ್ ಸದಸ್ಯರು ಟ್ರಂಪ್ ತಂತ್ರವನ್ನು ಬಿಡಿಸಿಟ್ಟಿದ್ದಾರೆ. ಜನವರಿ 6ರಂದು ಬೈಡನ್ ಗೆಲುವನ್ನು ಅಮೆರಿಕದ ಕಾಂಗ್ರೆಸ್ ಅಂಗೀಕಾರ ಮಾಡದಂತೆ ತಡೆಯಲು ಕನಿಷ್ಠ 140 ಪ್ರತಿನಿಧಿಗಳ ಬೆಂಬಲ ಬೇಕು. ಆದರೆ ಈ ಆಸೆ ಕನಸಾಗಿಯೇ ಉಳಿಯಲಿದೆ. ಟ್ರಂಪ್ ಅಧ್ಯಕ್ಷ ಸ್ಥಾನ ತೊರೆಯುವುದು ಪಕ್ಕಾ ಎನ್ನುತ್ತಿದ್ದಾರೆ. ಹೀಗೆ ಟ್ರಂಪ್‌ಗೆ ಸ್ವತಃ ಅವರದ್ದೇ ಪಕ್ಷದ ಸದಸ್ಯರು ತಿರುಗೇಟು ನೀಡಿದ್ದಾರೆ.

ಸ್ವಪಕ್ಷೀಯರು ತಿರುಗಿಬೀಳಲು ಕಾರಣವೇನು..?

ಸ್ವಪಕ್ಷೀಯರು ತಿರುಗಿಬೀಳಲು ಕಾರಣವೇನು..?

ಅಮೆರಿಕ ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಟ್ಟಿರುವ ದೇಶ. ಪಕ್ಷಕ್ಕಿಂತ ದೇಶದ ಮೌಲ್ಯ, ಸಿದ್ಧಾಂತಗಳೇ ಮುಖ್ಯ. ಹೀಗಾಗಿ ಟ್ರಂಪ್ ನೀಡಿರುವ ಹೇಳಿಕೆ, ಹೂಡಿರುವ ದಾಳ ಪ್ರಜಾಪ್ರಭುತ್ವ ವಿರೋಧಿ ಎಂದು ಸ್ವತಃ ಟ್ರಂಪ್ ಪಕ್ಷದವರೇ ಟೀಕಿಸುತ್ತಿದ್ದಾರೆ. ಚುನಾವಣೆಯಲ್ಲಿ ಸೋಲು ಅಥವಾ ಗೆಲುವು ಸಾಮಾನ್ಯ. ಆದರೆ ನಮ್ಮ ದೇಶದ ಮಾನ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹರಾಜು ಆಗುವುದು ಬೇಡ ಅಂತಿದ್ದಾರೆ ಟ್ರಂಪ್ ಪಕ್ಷದ ಸದಸ್ಯರು. ಈ ಹಿನ್ನೆಲೆಯಲ್ಲಿ ಟ್ರಂಪ್ ಸ್ವತಃ ರಿಪಬ್ಲಿಕನ್ ಸದಸ್ಯರಿಂದ ವಿರೋಧ ಎದುರಿಸುವಂತಾಗಿದೆ. ಅಕಸ್ಮಾತ್ ಟ್ರಂಪ್ ಜನವರಿ 20ರ ನಂತರ ಅಧಿಕಾರ ತೊರೆದು, ವೈಟ್ ಹೌಸ್ ಬಿಟ್ಟು ಹೊರಡದಿದ್ದರೆ ಎಲ್ಲರೂ ಒಗ್ಗಟ್ಟಿನಿಂದ ಟ್ರಂಪ್ ವಿರುದ್ಧ ಹೋರಾಡುವುದರಲ್ಲಿ ಅನುಮಾನವಿಲ್ಲ.

ಅಮೆರಿಕ:ವಿದೇಶಿಯರ ಉದ್ಯೋಗ ವೀಸಾ ನಿರ್ಬಂಧ ವಿಸ್ತರಿಸಿದ ಟ್ರಂಪ್ಅಮೆರಿಕ:ವಿದೇಶಿಯರ ಉದ್ಯೋಗ ವೀಸಾ ನಿರ್ಬಂಧ ವಿಸ್ತರಿಸಿದ ಟ್ರಂಪ್

ಮತದಾನದ ಮೇಲೆ ಅನುಮಾನ..!

ಮತದಾನದ ಮೇಲೆ ಅನುಮಾನ..!

ನವೆಂಬರ್ 3ರಂದು ಅಮೆರಿಕದಲ್ಲಿ ಮತದಾನ ಮುಗಿದ ನಂತರ ಟ್ರಂಪ್ ಒಂದಲ್ಲ ಒಂದು ರೀತಿ ಆರೋಪ ಮಾಡುತ್ತಾ ಬರುತ್ತಿದ್ದಾರೆ. ಮೊದಲಿಗೆ ಚುನಾವಣೆಯಲ್ಲಿ ನಕಲಿ ಮತದಾನ ನಡೆದಿದೆ ಎಂದಿದ್ದರು. ಬಳಿಕ ಮತ ಎಣಿಕೆಯಲ್ಲಿ ಅಕ್ರಮ ನಡೆದಿದೆ ಎಂದಿದ್ದರು. ನಂತರ ಬೈಡನ್‌ದು ಮೋಸದ ಗೆಲುವು ಅಂತಾ ಹೇಳಿ ಜಗತ್ತಿನ ಎದುರು ನಗೆಪಾಟಲಿಗೆ ಈಡಾಗಿದ್ದರು. ಆದರೆ ಟ್ರಂಪ್ ಆರೋಪಗಳನ್ನೆಲ್ಲಾ ಒಪ್ಪದ ಚುನಾವಣಾ ಆಯೋಗ, ಬೈಡನ್ ಗೆಲುವನ್ನು ಕನ್ಫರ್ಮ್ ಮಾಡಿದೆ. 46ನೇ ಅಧ್ಯಕ್ಷರಾಗಿ ಬೈಡನ್ ಗೆಲುವನ್ನು ಅಮೆರಿಕ ಚುನಾವಣಾ ಆಯೋಗ ಖಚಿತಪಡಿಸಿದೆ. ಈಗ ಅಮೆರಿಕನ್ ಕಾಂಗ್ರೆಸ್ ಆ ಗೆಲುವನ್ನು ಅಂಗೀಕರಸಲು ಸಜ್ಜಾಗಿ ನಿಂತಿದೆ.

ವೈಟ್‌ಹೌಸ್ ಬಿಟ್ಟು ಹೋಗಲ್ವಂತೆ..!

ವೈಟ್‌ಹೌಸ್ ಬಿಟ್ಟು ಹೋಗಲ್ವಂತೆ..!

ಅಮೆರಿಕದ ಪ್ರಜಾಪ್ರಭುತ್ವಕ್ಕೆ ಎರಡೂವರೆ ಶತಮಾನಗಳ ಇತಿಹಾಸ ಇದೆ. ಅಧ್ಯಕ್ಷರ ಆಯ್ಕೆಗೆ ಅಲ್ಲೊಂದು ಸಂಪ್ರದಾಯವಿದೆ, ಅದಕ್ಕೆ ಮಹತ್ವದ ಬೆಲೆಯೂ ಇದೆ. ಆದರೆ ಡೊನಾಲ್ಡ್ ಟ್ರಂಪ್ ಇದನ್ನೆಲ್ಲಾ ಹಾಳು ಮಾಡುತ್ತಿದ್ದಾರೆ ಎಂಬುದು ವಿರೋಧಿಗಳ ಆರೋಪ. ಇದಕ್ಕೆ ಸರಿಹೊಂದುವಂತೆ ಡೊನಾಲ್ಡ್ ಟ್ರಂಪ್ ಕೂಡ ನಡೆದುಕೊಳ್ಳುತ್ತಿದ್ದಾರೆ. ಬೈಡನ್ ಗೆಲುವು ಖಚಿತವಾದ ನಂತರವೂ ನಾನು ವೈಟ್ ಹೌಸ್ ಬಿಟ್ಟು ಹೊರಗೆ ಹೋಗಲ್ಲ. ಅಧಿಕಾರ ಬಿಟ್ಟುಕೊಡುವುದಿಲ್ಲ ಎಂದು ಟ್ರಂಪ್ ಹೇಳಿದ್ದು ಭಾರಿ ವಿವಾದ ಹುಟ್ಟುಹಾಕಿದೆ.

ಅತ್ತ ಕೊರೊನಾ, ಇತ್ತ ಕಿತ್ತಾಟ..!

ಅತ್ತ ಕೊರೊನಾ, ಇತ್ತ ಕಿತ್ತಾಟ..!

ಅಮೆರಿಕದಲ್ಲಿ ಪರಿಸ್ಥಿತಿ ಕೈಮೀರಿ ಹೋಗಿದೆ. ಲಕ್ಷ ಲಕ್ಷ ಜನರು ಆಸ್ಪತ್ರೆಗಳಲ್ಲಿ ಹೆಣವಾಗುತ್ತಿದ್ದಾರೆ. ಕೊರೊನಾಗೆ ಬಲಿಯಾದ ಜನರ ಶವ ಸಂಸ್ಕಾರಕ್ಕೂ ಜಾಗಸಿಗದ ಪರಿಸ್ಥಿತಿ ಎದುರಾಗಿದೆ. ಆದರೆ ಇಂತಹ ಸಂದಿಗ್ಧ ಸಂದರ್ಭ ಟ್ರಂಪ್‌ಗೆ ಅರ್ಥವಾಗುತ್ತಿಲ್ಲ ಅಂತಾ ಎದುರಾಳಿಗಳು ಆರೋಪಿಸುತ್ತಿದ್ದಾರೆ. ಹೀಗೆ ಸಂಕಷ್ಟ ಕಾಲದಲ್ಲಿ ಅಮೆರಿಕ ರಾಜಕೀಯ ತುರ್ತು ಪರಿಸ್ಥಿತಿಗೂ ಸಿದ್ಧವಾಗುತ್ತಿದ್ದು, ಕ್ಷಣಕ್ಷಣಕ್ಕೂ ಅಮೆರಿಕದ ಶತ್ರು ಪಡೆ ಸಜ್ಜಾಗುತ್ತಿದೆ. ಕೆಲ ದಿನಗಳಿಂದ ಅಮೆರಿಕದ ಮೇಲೆ ನಿರಂತರವಾಗಿ ಸೈಬರ್ ದಾಳಿ ನಡೆಯುತ್ತಿದ್ದು, ಮುಂದಿನ ದಿನಗಳಲ್ಲಿ ಇಂತಹ ಸೈಬರ್ ಅಟ್ಯಾಕ್ ಮತ್ತಷ್ಟು ಹೆಚ್ಚಾಗುವ ಆತಂಕ ಮನೆಮಾಡಿದೆ.

English summary
Once again Trump decision opposed by his own party leaders. Leaders of Republican party suggesting that, Trump should accept Joe Biden victory.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X