ಸ್ಟಾರ್ಮಿ ಡೆನಿಯಲ್ಸ್ ಪ್ರಕರಣ: ಮೌನ ಮುರಿದ ಟ್ರಂಪ್
ವಾಷಿಂಗ್ಟನ್, ಏಪ್ರಿಲ್ 06: ಅಮೆರಿಕದ ವಯಸ್ಕರ ಚಿತ್ರದ ನಟಿ ಸ್ಟಾರ್ಮಿ ಡೇನಿಯಲ್ಸ್ ಮತ್ತು ಡೊನಾಲ್ಡ್ ಟ್ರಂಪ್ ನಡುವೆ ಇದ್ದ ಸಂಬಂಧದ ಕುರಿತು ಇತ್ತೀಚಿನ ಹಲವು ದಿನಗಳಿಂದ ಅಮೆರಿಕ ಮಾಧ್ಯಮಗಳು ವರದಿ ಮಾಡಿದ್ದವು. ಈ ಕುರಿತು ಸ್ಟಾರ್ಮಿ ಡೇನಿಯಲ್ಸ್ ಸ್ವತಃ ಮಾತನಾಡಿದ್ದರು. ಟ್ರಂಪ್ ಮತ್ತು ತಮಗಿದ್ದ ಲೈಂಗಿಕ ಸಂಬಂಧದ ಕುರಿತು ಮಾಧ್ಯಮಗಳ ಮುಂದೆ ಹೇಳಿಕೆ ನೀಡಿದ್ದರು.
ಆದರೆ ಈ ಎಲ್ಲ ಬೆಳವಣಿಗೆಯ ನಡುವೆಯೂ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಯಾವ ಪ್ರತಿಕ್ರಿಯೆಯನ್ನೂ ನೀಡದೆ ಮೌನವಾಗಿದ್ದರು. ಈ ಎಲ್ಲ ಆಪಾದನೆಯ ನಂತರ 2016 ರ ಚುನಾವಣೆಯ ಸಮಯದಲ್ಲಿ ಟ್ರಂಪ್ ಮತ್ತು ತಮಗೆ ಸಂಬಂಧವಿರುವ ವಿಚಾರವನ್ನು ಎಲ್ಲಿಯೂ ಬಾಯಿಬಿಡದಂತೆ ತಮಗೆ 130000 ಅಮೆರಿಕನ್ ಡಾಲರ್ ಗಳನ್ನು ನೀಡಲಾಗಿತ್ತು ಎಂದು ಡೇನಿಯಲ್ಸ್ ಮತ್ತೊಮ್ಮೆ ಸದ್ದು ಮಾಡಿದ್ದರು.

ಆದರೆ ಇನ್ನು ಸುಮ್ಮನಿದ್ದರಾಗದು ಎಂಬುದನ್ನರಿತ ಡೊನಾಲ್ಡ್ ಟ್ರಂಪ್, ಸ್ಟಾರ್ಮಿ ಅವರಿಗೆ ಹಣ ನೀಡಿದ ಕುರಿತು ನನಗೆ ಯಾವುದೇ ಮಾಹಿತಿ ಇಲ್ಲ. ಅವರಿಗೆ ಹಣ ನೀಡುವಂತೆ ನಾನು ನನ್ನ ಆಪ್ತ ಕಾರ್ಯದರ್ಶಿ ಮೈಕೆಲ್ ಕೊಹೆನ್ ಅವರಿಗೆ ಹೇಳಿದ್ದೇನೆ ಎಂ ಆರೋಪವೂ ಸುಳ್ಳು. ನಾನು ಈ ಕುರಿತು ಯಾರಿಗೂ ಸೂಚನೆ ನೀಡಿಲ್ಲ ಎಂದು ಟ್ರಂಪ್ ಹೇಳಿಕೆ ನೀಡಿದ್ದಾರೆ.












Click it and Unblock the Notifications