ಕೊರೊನಾ ವೈರಸ್ ಲಸಿಕೆಯ ಖಾತ್ರಿ ಇಲ್ಲ ಎಂದ ಅಮೆರಿಕದ ಖ್ಯಾತ ವಿಜ್ಞಾನಿಗಳು
ವಾಷಿಂಗ್ಟನ್, ಮೇ 22: ಕೊರೊನಾವೈರಸ್ ಲಸಿಕೆ ಖಾತ್ರಿ ಇಲ್ಲ ಎಂದು ಅಮೆರಿಕದ ಖ್ಯಾತ ವಿಜ್ಞಾನಿಗಳು ಹೇಳಿದ್ದಾರೆ. ಕೊರೊನಾ ವೈರಸ್ ವಿಶ್ವದಾದ್ಯಂತ 50 ಲಕ್ಷಕ್ಕೂ ಹೆಚ್ಚು ಮಂದಿಗೆ ಹರಡಿದೆ. ಸಂಶೋದಕರು ಲಸಿಕೆ ಕಂಡು ಹಿಡಿಯಲು ಹಗಲು ರಾತ್ರಿ ಕಷ್ಟಪಡುತ್ತಿದ್ದಾರೆ. ಆದರೆ ಲಸಿಕೆಯನ್ನು ಕಂಡುಹಿಡಿಯುತ್ತೇವೆ ಎನ್ನುವ ಖಾತ್ರಿ ಇಲ್ಲ ಎಂದಿದ್ದಾರೆ.
Recommended Video
ಕ್ಯಾನ್ಸರ್, ಎಚ್‌ಐವಿ/ಏಡ್ಸ್ ಸಂಶೋಧಕರಾಗಿರುವ ವಿಲಿಯಮ್ ಮಾತನಾಡಿ, ಲಾಕ್‌ಡೌನ್ ಸಡಿಲಗೊಳಿಸುವ ಮುನ್ನ ಸರ್ಕಾರ ಸಾಕಷ್ಟು ಬಾರಿ ಆಲೋಚನೆ ಮಾಡಬೇಕಿದೆ.
ಕೊರೊನಾ ಪ್ರಕರಣಗಳು ಹೀಗೆ ಮುಂದುವರೆದರೆ ಭವಿಷ್ಯದಲ್ಲಿ ನಾವು ಲಸಿಕೆ ಕಂಡುಹಿಡಿಯುವುದು ಕೂಡ ಕಷ್ಟವಾಗುತ್ತದೆ ಎಂದು ಹೇಳಿದ್ದಾರೆ.

ಲಸಿಕೆ ಪ್ರಯೋಗ ಯಶಸ್ವಿಯಾಗಿಲ್ಲ
ಕೊರೊನಾವೈರಸ್‌ಗೆ ಈ ಹಿಂದೆ ಅಭಿವೃದ್ಧಿಪಡಿಸಿದ ಅನೇಕ ಬಗೆಯ ಲಸಿಕೆಗಳು ಮೂಗಿನ ಲೋಳೆಯ ಪೊರೆಯನ್ನು ರಕ್ಷಿಸುವಲ್ಲಿ ವಿಫಲವಾಗಿವೆ. ಇದು ವೈರಸ್ ದೇಹಕ್ಕೆ ಪ್ರವೇಶಿಸುವ ಮಾರ್ಗವಾಗಿದೆ ವಿಲಿಯಮ್ ಹೇಳಿದ್ದಾರೆ.

ಲಸಿಕೆ ಇಲ್ಲದೆ ಹಾಗೆಯೇ ಗುಣಪಡಿಸಬಹುದು
ಚೀನಾ ಹಾಗೂ ಇತರೆ ಏಷ್ಯನ್ ರಾಷ್ಟ್ರಗಳನ್ನು ನೋಡುವುದಾದರೆ ಲಸಿಕೆ ಇಲ್ಲದೆಯೇ ಕೊರೊನಾವನ್ನು ಗುಣಪಡಿಸಬಹುದು ಎಂಬುದು ಸ್ಪಷ್ಟವಾಗಿದೆ. ಜನರು ಮಾಸ್ಕ್, ಕೈವಸುಗಳನ್ನು ಧರಿಸಿ, ನಿಮ್ಮ ಮನೆ ಹಾಗೂ ಸುತ್ತಮುತ್ತಲಿನ ವಾತಾವರಣವನ್ನು ಶುಚಿಯಾಗಿಟ್ಟುಕೊಳ್ಳಿ, ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಿ, ಕೊರೊನಾದಿಂದ ದೂರವಿರಿ ಎಂದಿದ್ದಾರೆ.

ರಾಜಕಾರಣಿಗಳ ಮಾತು ನಂಬಬೇಡಿ
ರಾಜಕಾರಣಿಗಳ ಮಾತನ್ನು ಎಂದೂ ನಂಬಬೇಡಿ, ಚುನಾವಣೆ ಬರುವ ಹೊತ್ತಿಗಾಗಲೇ ಲಸಿಕೆ ಬಂದುಬಿಡುತ್ತದೆ ಎಂದು ಹೇಳಲಾಗುತ್ತಿದೆ. ಅದು ಚುನಾವಣೆಯ ತಂತ್ರವಷ್ಟೇ , ಆದರೆ ವಿಜ್ಞಾನಿಗಳು ತಮ್ಮ ಪ್ರಯತ್ನ ಮಾಡುತ್ತಿದ್ದಾರೆ. ಆದರೆ ಇದೇ ವೇಳೆಯಲ್ಲಿ ಲಸಿಕೆ ಕಂಡುಹಿಡಿಯಲಾಗುತ್ತದೆ ಎನ್ನುವುದು ಸುಳ್ಳು ಎಂದು ವಿಲಿಯಮ್ ತಿಳಿಸಿದ್ದಾರೆ.

100 ಬಗೆಯ ಲಸಿಕೆಗಳನ್ನು ಕಂಡು ಹಿಡಿಯಲಾಗಿದೆ
ಈಗಾಗಲೇ 100 ಬಗೆಯ ಲಸಿಕೆಗಳನ್ನು ಕಂಡು ಹಿಡಿಯಲಾಗಿದೆ. ಆದರೆ ಸಂಪೂರ್ಣವಾಗಿ ಅದು ಜನರಿಗೆ ಲಭ್ಯವಾಗುವಂತೆ ಮಾಡಲು 12-18 ತಿಂಗಳು ಬೇಕಾಗುತ್ತದೆ. ಇದುವರೆಗೆ 3,32,000 ಮಂದಿ ಕೊರೊನಾ ವೈರಸ್‌ಗೆ ಬಲಿಯಾಗಿದ್ದಾರೆ.












Click it and Unblock the Notifications