• search
  • Live TV
ವಾಷಿಂಗ್ಟನ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಹೊಸವರ್ಷ ಮರೆತ ಅಮೆರಿಕನ್ನರು, ಥಂಡಾ ಥಂಡಾ ಟೈಮ್ಸ್ ಸ್ಕ್ವೇರ್‌..!

|

ಅಮೆರಿಕದಲ್ಲಿ ಕಿಲ್ಲರ್ ಕೊರೊನಾ ಅಟ್ಟಹಾಸ ಮುಂದುವರಿದಿದ್ದು, ಹೊಸ ವರ್ಷದ ಪಾರ್ಟಿಗೂ ಕಿಚ್ಚು ಹಚ್ಚಿದೆ. ಕರಗ ನೋಡಬೇಕು ಅಂದ್ರೆ ಬೆಂಗಳೂರಿಗೆ ಬರಲೇಬೇಕು, ಹುಲಿ ಕುಣಿತಕ್ಕೆ ಕರಾವಳಿಯೇ ಫೇಮಸ್, ಹಾಗೇ 'ಮಹಾಕುಂಭ ಮೇಳ' ವಿಜೃಂಭಿಸುವುದು ಉತ್ತರ ಭಾರತದಲ್ಲೇ. ಹೀಗೆ ಜಗತ್ತಿನಲ್ಲಿ ಒಂದೊಂದು ಸ್ಥಳ ಅಥವಾ ಪ್ರದೇಶಕ್ಕೆ ಒಂದೊಂದು ವಿಚಾರಕ್ಕೆ ಫುಲ್ ಫೇಮಸ್. ಇದೇ ರೀತಿ ಅಮೆರಿಕದ ಟೈಮ್ಸ್ ಸ್ಕ್ವೇರ್ ಹೊಸವರ್ಷ ಬರಮಾಡಿಕೊಳ್ಳಲು ಹಾಟ್ ಸ್ಪಾಟ್ ಇದ್ದಂತೆ. ಹಾಗೇ ಇದು ಇಂದು ನಿನ್ನೆಯಿಂದ ನಡೆದುಬಂದ ಪದ್ಧತಿಯಲ್ಲ ಹಲವು ದಶಕಗಳಿಂದ ಇದೇ ಜಾಗ ನ್ಯೂ ಇಯರ್ ಸೆಲೆಬ್ರೇಷನ್‌ಗೆ ಹಾಟ್ ಸ್ಪಾಟ್ ಆಗಿತ್ತು.

ಆದ್ರೆ ಈ ಬಾರಿ ಪರಿಸ್ಥಿತಿ ಹಿಂದಿನಂತಿರಲಿಲ್ಲ. ಟೈಮ್ಸ್ ಸ್ಕ್ವೇರ್‌ನಲ್ಲಿ ಸ್ಮಶಾನ ಮೌನ ಆವರಿಸಿತ್ತು, ಅದು ಹೊಸ ವರ್ಷಾಚರಣೆಯ ಸಂದರ್ಭದಲ್ಲೇ. ಲೇಟ್ ಆಗಿ ಬಂದ್ರೂ ಲೇಟೆಸ್ಟ್ ಎಂಟ್ರಿ ಅನ್ನೋ ಹಾಗೇ ಅಮೆರಿಕದ ಟೈಮ್ಸ್ ಸ್ಕ್ವೇರ್‌ ಹೊಸ ವರ್ಷಾಚರಣೆ ಮಾಡುವುದು ಬಹುತೇಕ ಕೊನೆಯಲ್ಲಿ. ಮೊದಲಿಗೆ ನ್ಯೂಜಿಲ್ಯಾಂಡ್‌ನಲ್ಲಿ ಹುಟ್ಟುವ ಪಾರ್ಟಿ ಕಿಡಿ ನಂತರ ಆಸ್ಟ್ರೇಲಿಯಾಗೆ ಹಬ್ಬಿ, ಜಗತ್ತು ಝಗಮಗಿಸಿದ ಬಳಿಕ ಕೊನೆಯದಾಗಿ ಅಮೆರಿಕದ ಟೈಮ್ಸ್ ಸ್ಕ್ವೇರ್‌ನಲ್ಲಿ ಹೊಸ ವರ್ಷದ ಪ್ರಕಾಶಮಾನತೆ ಬೆಳಗುತ್ತದೆ. ಆದ್ರೆ ಈ ಬಾರಿ ಹೊಸ ವರ್ಷದ ಪಾರ್ಟಿ ಬೆಲ್ ಬಾರಿಸಿದರೂ ಅಲ್ಲಿ ಬೆಳಕು ಹರಿಯಲಿಲ್ಲ, ಜನರ ಸದ್ದು ಮೇಳೈಸಲಿಲ್ಲ. ಕೊರೊನಾ ಕಾರಣಕ್ಕೆ ಎಲ್ಲಾ ಸೈಲೆಂಟ್ ಆಗೋಗಿತ್ತು.

ಇದು ಅಮೆರಿಕದ ಕಥೆ: ಮನೆ ಬಾಡಿಗೆ ಕಟ್ಟಲೂ ಹಣವಿಲ್ಲ

ಪಾರ್ಟಿ ಸದ್ದಿಗೆ ಆಕಾಶವೇ ಬ್ಲಾಸ್ಟ್..!

ಪಾರ್ಟಿ ಸದ್ದಿಗೆ ಆಕಾಶವೇ ಬ್ಲಾಸ್ಟ್..!

ಪ್ರತಿವರ್ಷ ಅಮೆರಿಕದ ಟೈಮ್ಸ್ ಸ್ಕ್ವೇರ್‌ ಪಾರ್ಟಿಗೆ ಲಕ್ಷಾಂತರ ಜನ ಸೇರುತ್ತಿದ್ದರು. ಗಲ್ಲಿ ಗಲ್ಲಿಯಲ್ಲೂ ಬೆಳಕು ಝಗಮಗಿಸುತ್ತಿತ್ತು. ಹೀಗೆ ಸೇರುವ ಜನರ ಕೂಗಾಟದ ಸದ್ದು ಸೀದಾ ಆಕಾಶಕ್ಕೇ ತಲುಪುವಂತಿರುತ್ತದೆ. ಆದರೆ ಈ ಬಾರಿ ಅದ್ಯಾವುದೂ ಕಾಣಲಿಲ್ಲ, ಕೇಳಲಿಲ್ಲ. ಸ್ಟೇಜ್ ಮೇಲೆ ಹತ್ತಿದ್ದ ಕಾರ್ಯಕ್ರಮದ ನಿರೂಪಕನೊಬ್ಬನೇ ಗಂಟಲು ಹರಿಯುವಂತೆ ಕಿರುಚುತ್ತಿದ್ದ. ಆದರೆ ಜನರ ಕಡೆಯಿಂದ ಕೇಳಿಬಂದ ಸದ್ದು ಮಾತ್ರ ಸ್ವತಃ ನಿರೂಪಕನ ಕಿವಿಗೂ ಬೀಳಲಿಲ್ಲ. ಈ ಬಾರಿ ಅಷ್ಟು ನಿಶ್ಯಬ್ಧವಾಗಿತ್ತು ಜಗತ್ತಿನ ಪಾರ್ಟಿ ಹಬ್ ಟೈಮ್ಸ್ ಸ್ಕ್ವೇರ್‌.

ಹೂತು ಹಾಕಲು ಜಾಗವಿಲ್ಲ, ಸಾಮೂಹಿಕ ಸಮಾಧಿಗೆ ಲೆಕ್ಕವಿಲ್ಲ

ಗೊಂಬೆ ನಿಲ್ಲಿಸಿದ್ದ ಆಯೋಜಕರು..!

ಗೊಂಬೆ ನಿಲ್ಲಿಸಿದ್ದ ಆಯೋಜಕರು..!

ಮೊದಲೇ ಹೇಳಿದಂತೆ ಟೈಮ್ಸ್ ಸ್ಕ್ವೇರ್‌ ನ್ಯೂ ಇಯರ್ ಪಾರ್ಟಿಗೆ ಜನರೇ ಭೂಷಣ. ಜನರ ಹೊರತು ಅಲ್ಲಿನ ಪಾರ್ಟಿಗೆ ಬೆಲೆಯೇ ಇಲ್ಲ. ಆದ್ರೆ ಈ ಬಾರಿ ಕೊರೊನಾ ಕಾರಣಕ್ಕೆ ಇಡೀ ಅಮೆರಿಕ ನರಳುತ್ತಿದೆ. ಹೀಗಿರುವಾಗ ಜನರು ಗುಂಪು ಗುಂಪಾಗಿ ಸೇರಲು ಸಾಧ್ಯ ಇರಲಿಲ್ಲ. ಇದೇ ಕಾರಣಕ್ಕೆ ಕೊರೊನಾ ರೂಲ್ಸ್ ಫಾಲೋ ಮಾಡಿ, ಕಡಿಮೆ ಸಂಖ್ಯೆಯಲ್ಲಿ ಜನರನ್ನು ಸೇರಿಸಲಾಗಿತ್ತು. ಮತ್ತೊಂದು ಕಡೆ ಜನರ ಕೊರತೆ ನೀಗಿಸಲು ಗೊಂಬೆಗಳನ್ನು ಟೈಮ್ಸ್ ಸ್ಕ್ವೇರ್‌ನ ರಸ್ತೆ ಬದಿಯಲ್ಲಿ ಸ್ಥಾಪಿಸಲಾಗಿತ್ತು.

ಒಂದೇ ದಿನ 3,880 ಜನ ಬಲಿ

ಒಂದೇ ದಿನ 3,880 ಜನ ಬಲಿ

ಅಮೆರಿಕ ಪರಿಸ್ಥಿತಿ ಭೀಕರವಾಗಿದ್ದು, ಸೋಂಕಿತರ ಸಾವಿನ ಸಂಖ್ಯೆಯ ವಿಚಾರದಲ್ಲಿ ಮತ್ತೊಂದು ದಾಖಲೆಯನ್ನ ಬರೆದಿದೆ. ಬುಧವಾರ ಒಂದೇ ದಿನ ಅಮೆರಿಕದಲ್ಲಿ 3,880 ಜನರು ಮೃತಪಟ್ಟಿದ್ದರು. ಅಲ್ಲದೆ ಇದರ ಜೊತೆಗೆ 2 ಲಕ್ಷ 34 ಸಾವಿರದಷ್ಟು ಹೊಸ ಕೊರೊನಾ ಕೇಸ್‌ಗಳು ಕನ್ಫರ್ಮ್ ಆಗಿರುವುದು ಆತಂಕವನ್ನ ಮತ್ತಷ್ಟು ಹೆಚ್ಚು ಮಾಡಿತ್ತು. ಕೊರೊನಾ ಕಾರಣಕ್ಕೆ ಅಮೆರಿಕದಲ್ಲಿ ಎಲ್ಲಾ ಅಯೋಮಯವಾಗಿದೆ. ‘ಕೊರೊನಾ' ಬಂದಪ್ಪಳಿಸಿದ ಬಳಿಕ ವಿಶ್ವದ ದೊಡ್ಡಣ್ಣನ ಬುಡ ಅಲುಗಾಡುತ್ತಿದೆ. ವಿಶ್ವದ ನಂ. 1 ರಾಷ್ಟ್ರ ಎಂಬ ಪಟ್ಟಕ್ಕೂ ಕುತ್ತು ಬಂದಿದೆ.

2 ಕೋಟಿ ಸೋಂಕಿತರು ಪತ್ತೆ..!

2 ಕೋಟಿ ಸೋಂಕಿತರು ಪತ್ತೆ..!

ಅಮೆರಿಕದಲ್ಲಿ ಈವರೆಗೂ ಸುಮಾರು 2 ಕೋಟಿ ಕೊರೊನಾ ಸೋಂಕಿತರು ಪತ್ತೆಯಾಗಿದ್ದಾರೆ. ಅಲ್ಲದೆ 3 ಲಕ್ಷ 50 ಸಾವಿರ ಅಮೆರಿಕನ್ನರು ಡೆಡ್ಲಿ ಸೋಂಕಿನಿಂದ ನರಳಿ ಪ್ರಾಣಬಿಟ್ಟಿದ್ದಾರೆ. ಅಮೆರಿಕನ್ನರಿಗೆ ಸಾಮೂಹಿಕವಾಗಿ ವ್ಯಾಕ್ಸಿನ್ ನೀಡುವ ಕಾರ್ಯ ಆರಂಭವಾಗಿದ್ದರೂ, ಜನರನ್ನು ಬದುಕಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಇದರಿಂದ ಭವಿಷ್ಯವೇ ಮಂಕಾಗಿ ಹೋಗುತ್ತಿದೆ. ಜೀವ ಉಳಿಸಿಕೊಂಡವನೇ ಮಹಾಶೂರ ಎಂಬಂತಾಗಿದೆ. ಹೊರ ಬರಲು ಜನರು ಭಯಪಡುತ್ತಿದ್ದಾರೆ. ಜೀವ ಉಳಿದರೆ ಸಾಕಪ್ಪಾ ಅಂತಾ ಗೊಣಗುತ್ತಿದ್ದಾರೆ ಅಮೆರಿಕನ್ನರು. ಹೀಗಿರುವಾಗ ಪಾರ್ಟಿ ಸಹವಾಸ ಯಾರಿಗೆ ಬೇಕಪ್ಪಾ ಅಂತಾ ಕೋಟ್ಯಂತರ ಅಮೆರಿಕನ್ನರು ಬಾಗಿಲು ದಾಟಿ ಹೊರಬಂದಿಲ್ಲ. ಇದು ಅಮೆರಿಕದ ಟೈಮ್ಸ್ ಸ್ಕ್ವೇರ್‌ ನ್ಯೂ ಇಯರ್ ಪಾರ್ಟಿ ಮೇಲೂ ಪ್ರಭಾವ ಬೀರಿದೆ.

English summary
Worlds New Year party hub Times Square streets are empty during the New Year celebration because of the corona pandemic.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X