Breaking; ಟೆಕ್ಸಾಸ್‌ನಲ್ಲಿ ದಾಳಿ, ಮೃತಪಟ್ಟವರ ಸಂಖ್ಯೆ 23ಕ್ಕೆ ಏರಿಕೆ
ವಾಷಿಂಗ್ಟನ್, ಮೇ 24; ಟೆಕ್ಸಾಸ್‌ನ ಉವಾಲ್ಡೆ ಪ್ರಾಥಮಿಕ ಶಾಲೆಯಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಮೃತಪಟ್ಟವರ ಸಂಖ್ಯೆ 23ಕ್ಕೆ ಏರಿಕೆಯಾಗಿದೆ. ಒಟ್ಟು 19 ವಿದ್ಯಾರ್ಥಿಗಳು ಸೇರಿದಂತೆ 23 ಜನರು ಮೃತಪಟ್ಟಿದ್ದಾರೆ.
ಮಂಗಳವಾರ ವಾಹನದಲ್ಲಿ ಆಗಮಿಸಿದ ದಾಳಿಕೋರ ಪ್ರಾಥಮಿಕ ಶಾಲೆಗೆ ನುಗ್ಗಿದ್ದಾರೆ. ಗುಂಡಿನ ದಾಳಿ ನಡೆಸಿದ 18 ವರ್ಷದ ವಿದ್ಯಾರ್ಥಿಯನ್ನು ಪೊಲೀಸರು ಹತ್ಯೆ ಮಾಡಿದ್ದಾರೆ ಎಂದು ಟೆಕ್ಸಾಸ್ ಗವರ್ನರ್ ಗ್ರೆಗ್ ಅಬಾಟ್ ತಿಳಿಸಿದ್ದಾರೆ.
ಗುಂಡಿನ ದಾಳಿನಲ್ಲಿ ಮೃತಪಟ್ಟವರನ್ನು ಉವಾಲ್ಡೆ ಸ್ಮಾರಕ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಗಾಯಗೊಂಡವರಲ್ಲಿ ವೃದ್ಧೆ ಮತ್ತು ವಿದ್ಯಾರ್ಥಿಯೊಬ್ಬರ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ಹೇಳಿದ್ದಾರೆ.

ಅಮೆರಿಕ ಅಧ್ಯಕ್ಷ ಜೋ ಬೈಡನ್ ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಘಟನೆಗೆ ಗನ್ ಮಾಫಿಯಾ ಕಾರಣ ಎಂದು ಆರೋಪ ಮಾಡಿದ್ದಾರೆ. "ಇದು ನಾವು ಕಾರ್ಯಪ್ರವೃತ್ತವಾಗಲು ಸರಿಯಾದ ಸಮಯ. ಬಂದೂಕು ಕಾನೂನನ್ನು ಕಠಿಣಗೊಳಿಸಬೇಕು" ಎಂದು ಹೇಳಿದ್ದಾರೆ.
ಘಟನೆಯಲ್ಲಿ ಮೃತಪಟ್ಟವರ ಕುಟುಂಬಕ್ಕೆ ಸಾಂತ್ವನವನ್ನು ಅಧ್ಯಕ್ಷರು ಹೇಳಿದ್ದಾರೆ ಮತ್ತು ಅಗತ್ಯ ನೆರವು ನೀಡುತ್ತೇವೆ ಎಂದು ಟೆಕ್ಸಾಸ್ ಗೌವರ್ನರ್‌ಗೆ ಭರವಸೆ ನೀಡಿದ್ದಾರೆ.
ಟೆಕ್ಸಾಸ್‌ನಲ್ಲಿ ಪ್ರಾಥಮಿಕ ಶಾಲೆಯಲ್ಲಿ ಗುಂಡಿನ ದಾಳಿ ನಡೆಸಿದ 18 ವರ್ಷದ ವಿದ್ಯಾರ್ಥಿ ಈ ಶಾಲೆ ಸಮೀಪದಲ್ಲಿರುವ ಪ್ರೌಢ ಶಾಲೆಯ ವಿದ್ಯಾರ್ಥಿ. ಶಾಲೆಗೆ ಆಗಮಿಸುವ ಮುನ್ನ ವಿದ್ಯಾರ್ಥಿ ಮನೆಯಲ್ಲಿ ಅಜ್ಜಿಯ ಜೊತೆ ಜಗಳವಾಡಿದ್ದ ಎಂದು ಪೊಲೀಸರು ಹೇಳಿದ್ದಾರೆ.












Click it and Unblock the Notifications