ವಾಷಿಂಗ್ಟನ್ ಡಿಸಿ ಯಲ್ಲಿ ಶೂಟೌಟ್, ಓರ್ವ ಸಾವು, ಐವರಿಗೆ ಗಾಯ
ವಾಷಿಂಗ್ಟನ್, ಸೆಪ್ಟೆಂಬರ್ 20: ಅಮೆರಿಕದ ವಾಷಿಂಗ್ಟನ್ ಡಿಸಿಯ ರಸ್ತೆಯೊಂದರಲ್ಲಿ ನಡೆದ ಶೂಟೌಟ್ ನಲ್ಲಿ ಓರ್ವ ವ್ಯಕ್ತಿ ಮೃತನಾಗಿದ್ದು ಐವರು ಗಾಯಗೊಂಡಿದ್ದಾರೆ.

ವೈಟ್ ಹೌಸ್ ನಿಂದ ಕೇವಲ ಮೂರು ಕಿಮೀ ಅಂತರದ ಕೊಲಂಬಿಯಾ ಹೈಟ್ಸ್ ನಲ್ಲಿ ಈ ಘಟನೆ ನಡೆದಿದ್ದು, ಗನ್ ಮ್ಯಾನ್ ನನ್ನು ಬಂಧಿಸಿದ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.
ಘಟನೆ ಅಲ್ಲಿನ ಸ್ಥಳೀಯ ಕಾಲಮಾನದ ಪ್ರಕಾರ ಗುರುವಾರ ರಾತ್ರಿ ನಡೆದಿದೆ. ಘಟನೆ ಅಲ್ಲಿನ ಸ್ಥಳೀಯ ಕಾಲಮಾನದ ಪ್ರಕಾರ ಗುರುವಾರ ರಾತ್ರಿ 10 ಗಂಟೆಗೆ ನಡೆದಿದೆ.
ಸೆಪ್ಟೆಂಬರ್ ಮೊದಲ ವಾರದಲ್ಲಿ ಪಶ್ಚಿಮ ಟೆಕ್ಸಾಸ್ ಪ್ರದೇಶದಲ್ಲಿ ನಡೆದಿದ್ದ ಗುಂಡಿನ ದಾಳಿಯಲ್ಲಿ ಐವರು ಮೃತಪಟ್ಟಿದ್ದರೆ, 21ಕ್ಕೂ ಹೆಚ್ಚು ಮಂದಿ
ಗಂಭೀರವಾಗಿ ಗಾಯಗೊಂಡಿದ್ದರು.











Click it and Unblock the Notifications