ಅಮೆರಿಕದ ಓಹಿಯೋದಲ್ಲಿ ಶೂಟೌಟ್, ಕನಿಷ್ಠ 3 ಮಂದಿ ಸಾವು

ಮಾಸ್ಕೋ, ಮೇ 25: ಅಮೆರಿಕ ಓಹಿಯೋ ರಾಜ್ಯದ ವೆಸ್ಟ್ ಜಾಫರ್ ಸನ್ ಪಟ್ಟಣದಲ್ಲಿ ನಡೆದ ಶೂಟೌಟ್‌ನಲ್ಲಿ ಕನಿಷ್ಠ 3 ಮಂದಿ ಮೃತಪಟ್ಟಿದ್ದಾರೆ ಎಂದು ಸ್ಥಳೀಯ ಮಾಧ್ಯಮವೊಂದು ವರದಿ ಮಾಡಿದೆ.

ಘಟನಾ ಸ್ಥಳದಲ್ಲಿ ಗುಂಡಿನ ದಾಳಿಯಿಂದ ಅನೇಕರು ಗಾಯಗೊಂಡಿರುವುದು ಕಂಡುಬಂದಿದೆ. ಇವರಲ್ಲಿ ಮನೆಯಲ್ಲಿದ್ದ ಮೂವರು ಸೇರಿದ್ದಾರೆ ಎಂದು ಕೊಲಂಬಸ್ ಡಿಸ್ಪ್ಯಾಚ್ ದಿನಪತ್ರಿಕೆ ವರದಿ ಮಾಡಿದೆ.

ಘಟನೆ ಕುರಿತು ತನಿಖೆಗೆ ಓಹಿಯೋ ಅಪರಾಧ ಬ್ಯೂರೋ ಮತ್ತು ಕೌಂಟಿ ಷರೀಫ್‍ ಕಚೇರಿ ಪೊಲೀಸರಿಗೆ ನೆರವಾಗುತ್ತಿವೆ. ಕಾರಿನಿಂದ ಗುಂಡು ಹಾರಿಸಿರಬಹುದು ಎನ್ನಲಾಗಿದೆ.

Several Reported Killed In Shooting Near Columbus, Ohio

ಅಪಾರ್ಟ್‍ಮೆಂಟ್‍ ವೊಂದರ ಸಮೀಪದಿಂದ ಗುಂಡಿನ ಸದ್ದು ಕೇಳಿಬಂದಿದೆ ಎಂದು ಸ್ಥಳೀಯ ನಿವಾಸಿಗಳು ಸಂಜೆ 5.27ಕ್ಕೆ ಮಾಹಿತಿ ನೀಡಿದ್ದಾರೆ ಎಂದು ವೆಸ್ಟ್‍ ಜಫರ್‍ ಸನ್‍ ಪೊಲೀಸ್ ಮುಖ್ಯಸ್ಥ ಕ್ರಿಸ್ಟೋಫರ್ ಫ್ಲಾಯ್ಡ್‍ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಮನೆಯೊಳಗೆ ಮೂರು ಶವಗಳು ಸಿಕ್ಕಿವೆ, ಮನೆಯ ಹೊರಗೆ ಹಲವು ಮೃತದೇಹಗಳು ಪತ್ತೆಯಾಗಿದೆ ಎನ್ನಲಾಗಿದೆ. ಈ ದಾಳಿಯಲ್ಲಿ ಎಷ್ಟು ಮಂದಿ ಸಾವೀಗೀಡಾಗಿದ್ದಾರೆ ಎಂಬುದರ ಬಗ್ಗೆ ನಿಖರ ಮಾಹಿತಿ ಲಭ್ಯವಾಗಿಲ್ಲ.

ಇದು ದರೋಡೆಗಾಗಿ ನಡೆದ ಕೊಲೆಯೋ ಅಥವಾ ಪೂರ್ವ ನಿಯೋಜಿತ ದಾಳಿಯೋ ಎಂಬುದರ ಬಗ್ಗೆ ಪತ್ತೆ ಹಚ್ಚಲಾಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+