ಗುಂಡಿನ ದಾಳಿ ನಡೆಸಿ ಸಾವಿಗೆ ಶರಣಾದ ಬಂದೂಕುಧಾರಿ

ವಾಷಿಂಗ್ಟನ್, ಏಪ್ರಿಲ್ 16: ಅಮೆರಿಕದ ಇಂಡಿಯಾನಪೊಲಿಸ್‌ನ ಫೆಡ್ ಎಕ್ಸ್ ಕಂಪೆನಿ ಘಟಕದಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಅನೇಕರು ಗಾಯಗೊಂಡಿದ್ದಾರೆ. ಘಟನೆಯಲ್ಲಿ ಯಾರಾದರೂ ಮೃತಪಟ್ಟಿದ್ದಾರೆಯೇ ಎಂಬ ಬಗ್ಗೆ ಪೊಲೀಸರು ಮಾಹಿತಿ ನೀಡಿಲ್ಲ. ಆದರೆ ದಾಳಿಕೋರ ಬಳಿಕ ತನಗೆ ತಾನೇ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.

ಗುಡೇಟಿನಿಂದ ಅನೇಕರು ಗಾಯಗೊಂಡಿದ್ದಾರೆ. ಗಾಯಗೊಂಡವರನ್ನು ಸಮೀಪದಲ್ಲಿನ ವಿವಿಧ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಎಷ್ಟು ಮಂದಿಗೆ ಗಾಯಗಳಾಗಿವೆ ಮತ್ತು ಅವರ ಸ್ಥಿತಿ ಹೇಗಿದೆ ಎಂಬ ಬಗ್ಗೆ ವಿವರ ನೀಡಿಲ್ಲ.

 Several Injured In Shooting At Indianapolis FedEx Facility In US, Gunman Kills Self

ಇಂಡಿಯಾನಪೊಲಿಸ್‌ನ ಮಿರಾಬೆಲ್ ರಸ್ತೆಯಲ್ಲಿನ ಫೆಡ್‌ಫ್ಲೆಕ್ಸ್ ಘಟಕದಲ್ಲಿ ಗುರುವಾರ ತಡರಾತ್ರಿ ಈ ದಾಳಿ ನಡೆದಿದೆ. ಇಂಡಿಯಾನಪೊಲಿಸ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪದಲ್ಲಿಯೇ ಘಟನೆ ಸಂಭವಿಸಿದೆ. ವಿಮಾನ ನಿಲ್ದಾಣದ ಸಮೀಪದ ತನ್ನ ಘಟಕದಲ್ಲಿ ಗುಂಡಿನ ದಾಳಿ ನಡೆದಿರುವ ಘಟನೆ ಬಗ್ಗೆ ಕಂಪೆನಿಗೆ ಮಾಹಿತಿ ಇದೆ. ತನಿಖಾಧಿಕಾರಿಗಳ ಜತೆಗೆ ಸಹಕರಿಸುತ್ತಿದ್ದು, ಮತ್ತಷ್ಟು ಮಾಹಿತಿ ಸಂಗ್ರಹಿಸಲಾಗುತ್ತಿದೆ ಎಂದು ಫೆಡ್‌ಎಕ್ಸ್ ವಕ್ತಾರರು ತಿಳಿಸಿದ್ದಾರೆ.

ಘಟನೆಯಲ್ಲಿ ಎಂಟು ಮಂದಿಗೆ ಗುಂಡು ತಗುಲಿದೆ ಎನ್ನಲಾಗಿದೆ. ಗುಂಡಿನ ದಾಳಿ ನಡೆಸಿದಾತ ಸ್ವತಃ ಗುಂಡು ಹಾರಿಸಿಕೊಂಡು ಮೃತಪಟ್ಟಿದ್ದಾನೆ. ಅಲ್ಲಿ ಬೇರೆ ಯಾವುದೇ ದಾಳಿಕೋರರು ಇಲ್ಲ. ಹೀಗಾಗಿ ಪರಿಸ್ಥಿತಿ ನಿಯಂತ್ರಣದಲ್ಲಿದೆ. ಈ ದಾಳಿಯ ಹಿಂದಿನ ಉದ್ದೇಶ ಮತ್ತು ದಾಳಿಕೋರನ ಕುರಿತು ವಿವರ ಕಲೆಹಾಕಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+