ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಅಧ್ಯಕ್ಷತೆ ವಹಿಸಲಿದ್ದಾರೆ ಮೋದಿ: ರಷ್ಯಾದ ಅಧ್ಯಕ್ಷರೂ ಭಾಗಿ

|
Google Oneindia Kannada News

ನವದೆಹಲಿ, ಆ.09: ಭಾರತದ ಪ್ರಧಾನಿ ನರೇಂದ್ರ ಮೋದಿ ಸೋಮವಾರ ಕಡಲ ಭದ್ರತೆ ಕುರಿತು ನಡೆಯಲಿರುವ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಅಧ್ಯಕ್ಷತೆಯನ್ನು ಇಂದು ವಹಿಸಲಿದ್ದಾರೆ. ಈ ಸಭೆಯಲ್ಲಿ ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುಟಿನ್, ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋ ಅಧ್ಯಕ್ಷ ಫೆಲಿಕ್ಸ್-ಆಂಟೊಯಿನ್ ಶಿಶೆಕೆಡಿ ಶಿಲ್ಲೊಂಬೊ, ಆಫ್ರಿಕನ್ ಯೂನಿಯನ್ ಅಧ್ಯಕ್ಷರು, ಮತ್ತು ಯುಎಸ್ ರಾಜ್ಯ ಕಾರ್ಯದರ್ಶಿ ಆಂಟನಿ ಬ್ಲಿಂಕನ್ ಪ್ರಮುಖ ಗಣ್ಯರಾಗಿ ಹಾಜರಾಗಲಿದ್ದಾರೆ.

ಸಭೆಯ ಸಂಘಟನೆಯೊಂದಿಗೆ ಪರಿಚಿತವಾಗಿರುವ ಯುಎನ್ ರಾಜತಾಂತ್ರಿಕರ ಪ್ರಕಾರ ಈ ಬಗ್ಗೆ ದೃಢೀಕರಣಗಳು ಇನ್ನೂ ಬಂದಿಲ್ಲ ಮತ್ತು ಚರ್ಚೆಯಲ್ಲಿ ಭಾಗವಹಿಸುವ ಸಾಧ್ಯತೆಗಳ ಪಟ್ಟಿ ಇನ್ನಷ್ಟು ಹೆಚ್ಚಾಗಬಹುದು ಎಂದು ಹೇಳಿದರು. ಸೋಮವಾರದ ಸಭೆಯು ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆಯುವ ಮೊದಲ ಯುಎನ್‍ಎಸ್‌ಸಿ ಚರ್ಚೆಯಾಗಲಿದೆ. ಭಾರತವು ಶಾಶ್ವತವಲ್ಲದ ಸದಸ್ಯರಾಗಿ ವಿಶ್ವದ ಅಗ್ರಗಣ್ಯ ಸಂಸ್ಥೆಯ ಅಧ್ಯಕ್ಷತೆಯನ್ನು ಹೊಂದಿರುವುದು ಇದು ಎಂಟನೇ ಬಾರಿಯಾಗಿದೆ. ಮುಂದುವರಿದ ಕೋವಿಡ್ ಸಾಂಕ್ರಾಮಿಕದ ದೃಷ್ಟಿಯಿಂದ ಮೋದಿ ಚರ್ಚೆಯ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ.

ಆಗಸ್ಟ್‌ನಲ್ಲಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಅಧ್ಯಕ್ಷತೆ ವಹಿಸಲಿರುವ ಭಾರತಆಗಸ್ಟ್‌ನಲ್ಲಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಅಧ್ಯಕ್ಷತೆ ವಹಿಸಲಿರುವ ಭಾರತ

ಕಡಲ ಭದ್ರತಾ ಚರ್ಚೆಯು ಭಾರತವು ಆಗಸ್ಟ್‌ನಲ್ಲಿ ಯುಎನ್‌ಎಸ್‌ಸಿ ಅಧ್ಯಕ್ಷರಾಗಿ ನಡೆಸುತ್ತಿರುವ ಮೂರು ಸಹಿ ಕಾರ್ಯಕ್ರಮಗಳಲ್ಲಿ ಮೊದಲನೆಯದು. ಶಾಂತಿ ಪಾಲನೆ ಮತ್ತು ಭಯೋತ್ಪಾದನಾ ನಿಗ್ರಹ ಉಳಿದೆರಡು ಸಹಿ ಕಾರ್ಯಕ್ರಮಗಳಾಗಿದೆ. ಇತರ ಎರಡು ವಿಶ್ವಸಂಸ್ಥೆಯ ಶಾಂತಿಪಾಲನೆ ಕುರಿತ ಚರ್ಚೆಗಳಾಗಿದ್ದು, ಭಾರತವು ಈ ನಿಟ್ಟಿನಲ್ಲಿ ಉದಾರ ಮತ್ತು ಸ್ಥಿರ ಕೊಡುಗೆ ನೀಡಿದೆ.

Russian president Vladimir Putin to attend PM Modi’s UNSC debate

ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಭಾರತವು ವಿಶ್ವ ಸಂಸ್ಥೆಯಲ್ಲಿ ದಶಕಗಳಿಂದ ಪ್ರಮುಖ ಬಲಿಪಶುವಾಗಿ ಈ ವಿಷಯದ ಬಗ್ಗೆ ಹಲವು ಬಾರಿ ಪ್ರಸ್ತಾಪ ಮಾಡಿದೆ. ವಿಶೇಷವಾಗಿ ರಾಜ್ಯ ಪ್ರಾಯೋಜಿತ ಗುಂಪುಗಳಿಂದ ಮತ್ತು ಅದರ ಪಶ್ಚಿಮ ಗಡಿಯುದ್ದಕ್ಕೂ ವ್ಯಕ್ತಿಗಳಿಂದ ಭಾರತ ಈ ಭಯೋತ್ಪಾದನೆಯ ಬೆದರಿಕೆ ಎದುರಿಸುತ್ತಿದೆ. ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಇತರ ಎರಡು ಕಾರ್ಯಕ್ರಮಗಳ ಅಧ್ಯಕ್ಷತೆಯನ್ನು ವಹಿಸುತ್ತಾರೆ. ನ್ಯೂಯಾರ್ಕ್ ನಗರದ ವಿಶ್ವಸಂಸ್ಥೆಯ ಪ್ರಧಾನ ಕಚೇರಿಯಲ್ಲಿಯೇ ಜೈಶಂಕರ್ ಹಾಜರಾಗಲಿದ್ದಾರೆ.

ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುಟಿನ್, ಭಾಗವಹಿಸುವಿಕೆಯನ್ನು ಗಮನಾರ್ಹವಾದ ಸೂಚಕವಾಗಿ ಗುರುತಿಸಲಾಗಿದೆ. ಏಕೆಂದರೆ ವ್ಲಾಡಿಮಿರ್ ಪುಟಿನ್ ಅಂತಹ ಚರ್ಚೆಗಳಲ್ಲಿ ವಿರಳವಾಗಿ ಭಾಗವಹಿಸುತ್ತಾರೆ. ಈ ಬಗ್ಗೆ ತಿಳಿದುರುವವರ ಪ್ರಕಾರ ಬಹುಶಃ 15 ವರ್ಷಗಳ ಹಿಂದೆ ಪುಟಿನ್‌ ಈ ರೀತಿಯ ಚರ್ಚೆಗೆ ಭಾಗಿಯಾಗಿದ್ದಾರೆ ಎಂದು ಹೇಳಿದ್ದಾರೆ.

ಕಡ್ಡಾಯ ಕೋವಿಡ್ ಲಸಿಕೆಗೆಯನ್ನು ವಿರೋಧಿಸುತ್ತೇನೆ ಎಂದ ರಷ್ಯಾ ಅಧ್ಯಕ್ಷ ಪುಟಿನ್ಕಡ್ಡಾಯ ಕೋವಿಡ್ ಲಸಿಕೆಗೆಯನ್ನು ವಿರೋಧಿಸುತ್ತೇನೆ ಎಂದ ರಷ್ಯಾ ಅಧ್ಯಕ್ಷ ಪುಟಿನ್

ಡಿಆರ್‌ಸಿಯ ಅಧ್ಯಕ್ಷ ತ್ಸಿಸೆಕೆಡಿ ಆಫ್ರಿಕನ್ ಯೂನಿಯನ್ ಪರವಾಗಿ ಸಂಕ್ಷಿಪ್ತವಾಗಿ ಚರ್ಚೆಯಲ್ಲಿ ಭಾಗವಹಿಸುತ್ತಿದ್ದಾರೆ. 54 ಸದಸ್ಯರು 55 ಸದಸ್ಯರ ಆಫ್ರಿಕಾ ಗುಂಪಿನ ಭಾಗವಾಗಿದ್ದು, ಇದು ವಿಶ್ವಸಂಸ್ಥೆಯ ಸದಸ್ಯರಾಗಿ ವಿಂಗಡಿಸಲಾದ ಭೌಗೋಳಿಕವಾಗಿ ವರ್ಗೀಕರಿಸಿದ ಗುಂಪುಗಳ ದೊಡ್ಡ ಗುಂಪಾಗಿದೆ. ಸೇಂಟ್ ವಿನ್ಸೆಂಟ್ ಮತ್ತು ಗ್ರೆನಡೈನ್ಸ್ ಪ್ರಧಾನ ಮಂತ್ರಿ ರಾಲ್ಫ್ ಗೊನ್ಸಾಲ್ವೆಸ್ ಸಹ ಭಾಗವಹಿಸುವ ಬಗ್ಗೆ ದೃಢಪಡಿಸಿದ್ದಾರೆ. ಆದರೆ ಆರೋಗ್ಯದ ಕಾರಣಗಳಿಂದ ಹಿಂದೆ ಸರಿದಿದ್ದಾರೆ. ಆದರೆ ಸಂಪುಟ ಸದಸ್ಯರಾದ ರಾಲ್ಫ್ ಗೊನ್ಸಾಲ್ವೆಸ್‌ನ ಪುತ್ರ ಭಾಗಿಯಾಗಿದ್ದಾರೆ. ಈ ನಡುವೆ ಯುಎಸ್ ನೇತೃತ್ವದ ಅಂತರಾಷ್ಟ್ರೀಯ ಪಡೆಗಳು ತಮ್ಮ 20 ವರ್ಷಗಳ ಅಸ್ತಿತ್ವವನ್ನು ಕೊನೆಗೊಳಿಸುವುದರಿಂದ ದೇಶದ ವಿಕಸಿಸುತ್ತಿರುವ ಭದ್ರತಾ ಪರಿಸ್ಥಿತಿಯ ಕುರಿತು ಯುಎನ್ ಸಹಾಯ ಮಿಷನ್ (ಯುಎನ್ಎಂಎ) ಶುಕ್ರವಾರ ಬ್ರೀಫಿಂಗ್‌ಗೆ ಹಾಜರಾಗಲು ಯುಎನ್ಎನ್‌ಸಿ ತನ್ನ ಔಪಚಾರಿಕ ಮನವಿಯನ್ನು ತಿರಸ್ಕರಿಸಿದ್ದಕ್ಕೆ ಪಾಕಿಸ್ತಾನ ತೀವ್ರವಾಗಿ ಪ್ರತಿಕ್ರಿಯಿಸಿದೆ.

Russian president Vladimir Putin to attend PM Modi’s UNSC debate

ಪಾಕಿಸ್ತಾನದ ಮನವಿ ತಿರಸ್ಕರಿಸಿದ ಯುಎನ್ಎಂಎ

"ಅಫ್ಘಾನಿಸ್ತಾನದ ಹತ್ತಿರದ ನೆರೆಯ ರಾಷ್ಟ್ರವಾಗಿ, ಶಾಂತಿ ಪ್ರಕ್ರಿಯೆಯಲ್ಲಿ ಕೊಡುಗೆಯನ್ನು ಅಂತರಾಷ್ಟ್ರೀಯ ಸಮುದಾಯವು ಗುರುತಿಸಿರುವುದು ತೀವ್ರ ವಿಷಾದದ ವಿಷಯವಾಗಿದೆ. ಭದ್ರತಾ ಮಂಡಳಿಯ ಅಧ್ಯಕ್ಷರಿಗೆ ಪಾಕಿಸ್ತಾನದ ವಿನಂತಿ ಏನೆಂದರೆ ಕೌನ್ಸಿಲ್‌ನ ಅಧಿವೇಶನವನ್ನು ಉದ್ದೇಶಿಸಿ ಮತ್ತು ಅಫ್ಘಾನ್‌ ಶಾಂತಿ ಪ್ರಕ್ರಿಯೆ ಮತ್ತು ಮುಂದಿನ ಹಾದಿಯ ಬಗ್ಗೆ ತನ್ನ ದೃಷ್ಟಿಕೋನವನ್ನು ಪ್ರಸ್ತುತಪಡಿಸುವಂತೆ ನಮ್ಮ ಮನವಿ ಎಂದು ಪಾಕಿಸ್ತಾನದ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಶನಿವಾರ ಹೇಳಿದೆ.

ಪಾಕಿಸ್ತಾನವು ಔಪಚಾರಿಕ ವಿನಂತಿಯನ್ನು ಮಾಡಿತ್ತು, ಆದರೆ ಈ ಬಗ್ಗೆ ಮಾಹಿತಿ ತಿಳಿದ ಜನರು ಈ ಬಗ್ಗೆ ಮಾತನಾಡಿ, ನೆರೆಹೊರೆಯವರು ಸ್ವಯಂಚಾಲಿತವಾಗಿ ಹಾಜರಾಗಲು ಅಥವಾ ನಿಯಮಗಳ ಅಡಿಯಲ್ಲಿ ಪರಿಹರಿಸಲು ಅರ್ಹತೆ ಹೊಂದಿಲ್ಲ ಅದಕ್ಕಾಗಿ ಮನವಿ ತಿಸ್ಕರಿಸಲಾಗಿದೆ. ಇನ್ನು ಅಫ್ಘಾನಿಸ್ತಾನದ ಇತರ ಕೆಲವು ನೆರೆಯ ರಾಷ್ಟ್ರಗಳು ಸಭೆಯಲ್ಲಿ ಭಾಗವಹಿಸಲು ಮತ್ತು ಭಾಷಣ ಮಾಡುವ ಬಯಕೆಯನ್ನು ವ್ಯಕ್ತಪಡಿಸಿದ್ದವು, ಆದರೆ ಅದೇ ಕಾರಣವನ್ನು ನೀಡಿ ಅವುಗಳನ್ನು ನಯವಾಗಿ ತಿರಸ್ಕರಿಸಲಾಯಿತು. ಪಾಕಿಸ್ತಾನವು ಆಗಸ್ಟ್‌ನಲ್ಲಿ ಭಾರತವಾಗಿರುವ ಕೌನ್ಸಿಲ್‌ನ ಅಧ್ಯಕ್ಷರ ಟೀಕೆಯಲ್ಲಿ ಗುರಿಯಾಗಿತ್ತು. ಆದರೆ ಇದಕ್ಕೆ ಮೊದಲೇ ಕೆಲವು ಉಲ್ಲೇಖಿತ ರಾಷ್ಟ್ರಗಳನ್ನು ಹೊರಗಿಡುವ ನಿರ್ಧಾರವನ್ನು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯು ಒಂದು ಸಂಸ್ಥೆಯಾಗಿ ತೆಗೆದುಕೊಂಡಿದೆ.

Recommended Video

ನಾಗರಹೊಳೆಯ ಈ ದೃಶ್ಯ ಮೈ ಜುಮ್ಮ್ ಅನ್ನಿಸುತ್ತೆ! | Oneindia Kannada

(ಒನ್‌ಇಂಡಿಯಾ ಸುದ್ದಿ)

English summary
Russian President Vladimir Putin, expected to attend the UN Security Council (UNSC) debate on maritime security that Indian Prime Minister Narendra Modi will chair on Monday August 9th.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X