ನಿಮ್ಮ ಜೊತೆ ನಾವಿದ್ದೇವೆ ಎಂದು ಭಾರತಕ್ಕೆ ಬೆಂಬಲ ನೀಡಿದ ಅಮೆರಿಕ
ವಾಷಿಂಗ್ಟನ್, ಫೆಬ್ರವರಿ 16: ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ನಡೆದ ಉಗ್ರರ ದಾಳಿಯ ವಿಚಾರದಲ್ಲಿ ಭಾರತಕ್ಕೆ ಎಲ್ಲ ರೀತಿಯ ಬೆಂಬಲ ನೀಡುವುದಾಗಿ ಅಮೆರಿಕ ತಿಳಿಸಿದೆ.
ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರಿಗೆ ಕರೆ ಮಾಡಿದ ಅಮೆರಿಕದ ಭದ್ರತಾ ಸಲಹೆಗಾರ ಜಾನ್ ಬೊಲ್ಟೊನ್, ಭಾರತದ ಸ್ವಯಂ ರಕ್ಷಣಾ ಹಕ್ಕಿಗೆ ಅಮೆರಿಕದ ಬೆಂಬಲವಿದೆ ಎಂದಿದ್ದಾರೆ.
'ಅಜಿತ್ ದೋವಲ್ ಅವರೊಂದಿಗೆ ಎರಡು ಬಾರಿ ಮಾತನಾಡಿದ್ದೇನೆ. ಭಾರತದ ಸ್ವಯಂ ರಕ್ಷಣೆಯ ಹಕ್ಕಿಗೆ ಎಲ್ಲ ಬೆಂಬಲ ನೀಡುವುದಾಗಿ ತಿಳಿಸಿದ್ದೇನೆ. ಭಯೋತ್ಪಾದನಾ ದಾಳಿಯ ಬಗ್ಗೆ ಅಮೆರಿಕದ ಸಂತಾಪವನ್ನು ವ್ಯಕ್ತಪಡಿಸಿದ್ದೇನೆ' ಎಂದು ಬೊಲ್ಟೊನ್ ತಿಳಿಸಿದ್ದಾರೆ.
ಉಗ್ರರ ಸ್ವರ್ಗವಾಗಿ ಭಯೋತ್ಪಾದನಾ ಚಟುವಟಿಕೆಗಳಿಗೆ ಬೆಂಬಲ ನೀಡುವುದನ್ನು ಸ್ಥಗಿತಗೊಳಿಸುವಂತೆ ಪಾಕಿಸ್ತಾನಕ್ಕೆ ಅಮೆರಿಕ ಸ್ಪಷ್ಟವಾಗಿ ಹೇಳಿದೆ ಎಂದು ಬೊಲ್ಟೊನ್ ಹೇಳಿದ್ದಾರೆ.
US National Security Advisor John Bolton supported India's right to self-defence against cross-border terrorism. He offered all assistance to India to bring the perpetrators and backers of the attack promptly to justice. NSA Doval appreciated US support. #PulwamaAttack https://t.co/jYG6KgeDXn
— ANI (@ANI) 16 February 2019
'ಈ ವಿಚಾರದಲ್ಲಿ ನಾವು ಬಹಳ ಸ್ಪಷ್ಟವಾಗಿದ್ದೇವೆ. ಪಾಕಿಸ್ತಾನದೊಂದಿಗೆ ಈ ಸಂಬಂಧ ನಡೆಸಿರುವ ಮಾತುಕತೆಯನ್ನು ಮುಂದುವರಿಸಲಿದ್ದೇವೆ' ಎಂದು ಅವರು ತಿಳಿಸಿದ್ದಾರೆ.

'ಭಯೋತ್ಪಾದನೆ ಎದುರಿಸುವಲ್ಲಿ ನಾವು ಭಾರತದ ಜತೆಗಿದ್ದೇವೆ. ಅಂತಾರಾಷ್ಟ್ರೀಯ ಭದ್ರತೆಗೆ ಬೆದರಿಕೆಯಾಗಿರುವ ಭಯೋತ್ಪಾದಕರಿಗೆ ಪಾಕಿಸ್ತಾನ ಸುರಕ್ಷಿತ ನೆಲೆ ಒದಗಿಸಬಾರದು' ಎಂದು ಅಮೆರಿಕ ಸೂಚಿಸಿದೆ.












Click it and Unblock the Notifications