ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸುಮಾರು 500 ಡೋಸ್ ಕೊರೊನಾ ಲಸಿಕೆ ನಾಶಪಡಿಸಿದ ವ್ಯಕ್ತಿ

|
Google Oneindia Kannada News

ವಾಷಿಂಗ್ಟನ್, ಜನವರಿ 1: ಸುಮಾರು 500 ಡೋಸ್‌ಗಳಷ್ಟು ಕೊರೊನಾ ವೈರಸ್ ಲಸಿಕೆಯನ್ನು ಉದ್ದೇಶಪೂರ್ವಕವಾಗಿ ನಾಶಪಡಿಸಿದ ಆರೋಪದಲ್ಲಿ ಔಷಧ ತಜ್ಞರೊಬ್ಬರನ್ನು ಬಂಧಿಸಲಾಗಿದೆ. ಅಮೆರಿಕದ ಮಿಲ್ವೌಕೀದಲ್ಲಿನ ಆಸ್ಪತ್ರೆಯೊಂದರ ಹೊರಭಾಗದಲ್ಲಿ ಈ ಘಟನೆ ನಡೆದಿದೆ.

ಅಜಾಗರೂಕತೆಯಿಂದ ಸುರಕ್ಷತೆಗೆ ಅಪಾಯ ತಂದೊಡ್ಡಿದ್ದು, ಔಷಧವೊಂದನ್ನು ಕಲಬೆರಕೆ ಮಾಡಿದ್ದು ಮತ್ತು ಆಸ್ತಿಪಾಸ್ತಿಗೆ ಹಾನಿ ಮಾಡಿದ ಅಪರಾಧ ಪ್ರಕರಣಗಳನ್ನು ಅನಾಮಧೇಯ ವ್ಯಕ್ತಿ ವಿರುದ್ಧ ಗ್ರಾಫ್ಟನ್ ಪೊಲೀಸರು ದಾಖಲಿಸಿದ್ದಾರೆ. ಆತನನ್ನು ಕೌಂಟಿ ಜೈಲಿನಲ್ಲಿ ಇರಿಸಲಾಗಿದೆ ಎಂದು ಪೊಲೀಸ್ ಇಲಾಖೆ ಹೇಳಿಕೆ ತಿಳಿಸಿದೆ.

ಫೈಜರ್, ಬಯೋಎನ್‌ಟೆಕ್ ಕೊರೊನಾ ಲಸಿಕೆಗಳ ತುರ್ತು ಬಳಕೆಗೆ WHO ಅನುಮತಿಫೈಜರ್, ಬಯೋಎನ್‌ಟೆಕ್ ಕೊರೊನಾ ಲಸಿಕೆಗಳ ತುರ್ತು ಬಳಕೆಗೆ WHO ಅನುಮತಿ

ಅಮೆರಿಕದಲ್ಲಿ ಕೊರೊನಾ ವೈರಸ್ ಲಸಿಕೆಗಳನ್ನು ಅಧಿಕ ಅಪಾಯವಿರುವ ಜನರು ಮತ್ತು ಆರೋಗ್ಯ ಕಾರ್ಯಕರ್ತರಿಗೆ ನೀಡಲಾಗುತ್ತಿದೆ. ಸೀಮಿತ ಪ್ರಮಾಣದಲ್ಲಿ ಲಸಿಕೆಗಳ ಪೂರೈಕೆಯಾಗುತ್ತಿದ್ದು, ಲಸಿಕೆಗಳನ್ನು ಕಲಬೆರಕೆ ಮಾಡಿದ ಪ್ರಕರಣ ದೇಶದಾದ್ಯಂತ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.

Pharmacist Arrested For Intentionally Spoiled 500 Corona Vaccine Doses

ಅಮೆರಿಕದಲ್ಲಿ ಹೆಚ್ಚುತ್ತಿರುವ ವೈರಸ್ ಸೋಂಕಿನ ಸಂಖ್ಯೆಯನ್ನು ನಿಯಂತ್ರಿಸಲು ಮುಂಚೂಣಿ ಆರೋಗ್ಯ ಕಾರ್ಯಕರ್ತರಿಗೆ ನೀಡಲು ಇರಿಸಲಾಗಿದ್ದ ಈ ಲಸಿಕೆಗಳ ಮೌಲ್ಯ ಸುಮಾರು 11,000 ಡಾಲರ್‌ನಷ್ಟಿದೆ ಎಂದು ಹೇಳಲಾಗಿದೆ.

ಲಸಿಕೆಗಳ ಕಲಬೆರಕೆಯು ನೂರಾರು ಜನರಿಗೆ ಲಸಿಕೆ ನೀಡುವ ಕಾರ್ಯಕ್ಕೆ ಹಿನ್ನಡೆಯುಂಟುಮಾಡಿದೆ. ಔರೋರಾ ಹೆಲ್ತ್‌ ಕೇರ್ ಆಸ್ಪತ್ರೆಯಲ್ಲಿನ ಔಷಧಗಾರ ಲಸಿಕೆಗಳು ಸೂಕ್ತವಾಗಿ ಸಂಗ್ರಹಿಸಿಡದೆ ಇದ್ದರೆ ಪರಿಣಾಮಕಾರಿಯಾಗುವುದಿಲ್ಲ ಎಂಬುದು ತಿಳಿದಿದ್ದರೂ ಸುಮಾರು 57 ಲಸಿಕೆ ಬಾಟಲಿಗಳನ್ನು ತೆರೆದಿದ್ದನ್ನು ಒಪ್ಪಿಕೊಂಡಿದ್ದಾನೆ.

ಫೈಜರ್ ಲಸಿಕೆ ಪಡೆದುಕೊಂಡ ನರ್ಸ್‌ಗೆ ಕೊರೊನಾ ಪಾಸಿಟಿವ್ಫೈಜರ್ ಲಸಿಕೆ ಪಡೆದುಕೊಂಡ ನರ್ಸ್‌ಗೆ ಕೊರೊನಾ ಪಾಸಿಟಿವ್

ಕಳೆದ ಶನಿವಾರ 57 ಲಸಿಕೆ ಬಾಟಲಿಗಳು ರೆಫ್ರಿಜರೇಟರ್‌ನ ಹೊರಭಾಗದಲ್ಲಿ ಪತ್ತೆಯಾಗಿದ್ದವು. ಪ್ರತಿ ಬಾಟಲಿ 10 ಚುಚ್ಚುಮದ್ದುಗಳಿಗೆ ಸಾಕಾಗುವಷ್ಟು ಲಸಿಕೆಯನ್ನು ಹೊಂದಿರುತ್ತವೆ. ಅವುಗಳನ್ನು ಸಾಮಾನ್ಯ ಉಷ್ಣಾಂಶದಲ್ಲಿ ಗರಿಷ್ಠ 12 ಗಂಟೆ ಇರಿಸಬಹುದು. ಒಮ್ಮೆ ಕರಗಿ ಹೋದರೆ ಅವುಗಳನ್ನು ಮತ್ತೆ ಫ್ರಿಡ್ಜ್‌ನಲ್ಲಿರಿಸಿ ಘನೀಕರಿಸಲು ಸಾಧ್ಯವಾಗುವುದಿಲ್ಲ.

Recommended Video

ಸಿದ್ದು ಪದೇಪದೆ BSY ಬಗ್ಗೆ ಯಾಕೆ ಹೀಗೆ ಹೇಳುತ್ತಿದ್ದಾರೆ? | Oneindia Kannada

English summary
Police in Grafton, Wis. arrested a pharmacist accused of intentionally spoiling more than 500 doses of coronavirus vaccine at a hospital.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X