ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಾಕಿಸ್ತಾನಕ್ಕೆ ಮತ್ತೊಮ್ಮೆ ಎಚ್ಚರಿಕೆ ನೀಡಿದ ಅಮೆರಿಕ

|
Google Oneindia Kannada News

ವಾಷಿಂಗ್ಟನ್, ಫೆಬ್ರವರಿ 27: "ಉಗ್ರ ದಮನಕ್ಕೆ ಕಠಿಣ ಮತ್ತು ಅರ್ಥಪೂರ್ಣ ಕ್ರಮ ಕೈಗೊಳ್ಳಿ" ಎಂದು ಪಾಕಿಸ್ತಾನಕ್ಕೆ ಅಮೆರಿಕ ಮತ್ತೊಮ್ಮೆ ಎಚ್ಚರಿಕೆ ನೀಡಿದೆ.

ಪಾಕಿಸ್ತಾನದ ಉಗ್ರನೆಲೆಯ ಮೇಲೆ ಭಾರತ ನಡೆಸಿದ ವೈಮಾನಿಕ ದಾಳಿಯ ಕುರಿತು ಪ್ರತಿಕ್ರಿಯೆ ನೀಡಿದ ಅಮೆರಿಕ, 'ಉಭಯ ದೇಶಗಳೂ ಸೈನಿಕ ಕಾರ್ಯಾಚರಣೆಯನ್ನು ಬದಿಗಿಟ್ಟು, ಶಾಂತಿಯುತ ಹಾದಿ ಹಿಡಿಯಬೇಕು. ಹಾಗೆಯೇ ಪಾಕಿಸ್ತಾನ ಉಗ್ರ ನಿಗ್ರಹಕ್ಕೆ ಕಠಿಣ ಕ್ರಮ ಕೈಗೊಳ್ಳಬೇಕು' ಎಂದು ಅಮೆರಿಕ ಹೇಳಿದೆ.

Pakistan must act against terror: America warns again

ಚೀನಾ ಮುಂದೆ ಪಾಕಿಸ್ತಾನಕ್ಕೆ ತಪರಾಕಿ ಬಾರಿಸಿದ ಸುಷ್ಮಾ ಸ್ವರಾಜ್! ಚೀನಾ ಮುಂದೆ ಪಾಕಿಸ್ತಾನಕ್ಕೆ ತಪರಾಕಿ ಬಾರಿಸಿದ ಸುಷ್ಮಾ ಸ್ವರಾಜ್!

ಅಮೆರಿಕದ ಸೆಕ್ರೆಟರಿ ಆಫ್ ಸ್ಟೇಟ್, ಮೈಕ್ ಪೊಂಪಿಯೊ ಅವರು ಭಾರತದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಮತ್ತು ಪಾಕ್ ವಿದೇಶಾಂಗ ಸವಿಚ ಶಾ ಮಹ್ಮೂದ್ ಖುರೇಷಿ ಇಬ್ಬರೊಂದಿಗೂ ಪ್ರತ್ಯೇಕವಾಗಿ ಮಾತುಕತೆ ನಡೆಸಿದ್ದು, ಇಬ್ಬರಿಗೂ ಕೆಲವು ಸಲಹೆ ನೀಡಿದ್ದಾರೆ ಎನ್ನಲಾಗಿದೆ.

"ಉಭಯ ಸಚಿವರೂ ನೇರ ಮಾತುಕತೆಗೆ ಒತ್ತು ನೀಡಬೇಕು, ಸೈನಿಕ ಕಾರ್ಯಾಚರಣೆಯನ್ನು ಬದಿಗಿಡಬೇಕು" ಎಂದು ಅವರು ಮನವಿ ಮಾಡಿದ್ದಾರೆ.

ದಿನದ ಮುಖ್ಯ ಸುದ್ದಿ: ಭಾರತದ ಪ್ರತೀಕಾರ ಹೇಗಿತ್ತು? ಪಾಕ್ ಪ್ರತಿಕ್ರಿಯೆ ಹೇಗಿತ್ತು?ದಿನದ ಮುಖ್ಯ ಸುದ್ದಿ: ಭಾರತದ ಪ್ರತೀಕಾರ ಹೇಗಿತ್ತು? ಪಾಕ್ ಪ್ರತಿಕ್ರಿಯೆ ಹೇಗಿತ್ತು?

ಪುಲ್ವಾಮಾದಲ್ಲಿ ಭಾರತೀಯ ಸೇನೆಯ ನಲವತ್ತಕ್ಕೂ ಹೆಚ್ಚು ಯೋಧರನ್ನು ಪಾಕ್ ಮೂಲದ ಜೈಷ್ ಇ ಮೊಹಮ್ಮದ್ ಉಗ್ರ ಸಂಘಟನೆಯ ಉಗ್ರ ಹತ್ಯೆಗೈದ ನಂತರ ಭಾರತ ಜೈಷ್ ಇ ಮೊಹಮ್ಮದ್ ಉಗ್ರನೆಲೆ ಮೇಲೆ ಬಾಂಬ್ ದಾಳಿ ನಡೆಸಿದೆ. ಸುಮಾರು 300 ಕ್ಕೂ ಹೆಚ್ಚು ಉಗ್ರರನ್ನು ಕೊಲ್ಲಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆಯಾದರೂ ಈ ಕುರಿತು ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ.

English summary
America again warns Pakistan to take meaningful and strict action against terrorist group. The warning comes after India's air strike against Pakistani terror camps.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X