ಚಂದ್ರ ಮಂಗಳನ ಭಾಗವಂತೆ! ಟ್ರಂಪ್ ಅನರ್ಥ ಮಾತಿಗೆ ಛೀಮಾರಿ
ವಾಷಿಂಗ್ಟನ್, ಜೂನ್ 08: ಒಂದಿಲ್ಲೊಂದು ವಿವಾದಾತ್ಮಕ ಟ್ವೀಟ್ ಮೂಲಕ ವಿರೋಧಿಗಳಿಂದ ಛೀಮಾರಿ ಹಾಕಿಸಿಕೊಳ್ಳುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಚಂದ್ರನ ಕುರಿತ ತಮ್ಮ ಟ್ವೀಟ್ ನಿಂದ ಮತ್ತೆ ಸುದ್ದಿಯಾಗಿದ್ದಾರೆ.
ಚಂದ್ರಯಾನಕ್ಕೆ ಹೆಚ್ಚು ಒತ್ತು ನೀಡಬೇಡಿ ಎಂದು ಅಮೆರಿಕ ಬಾಹ್ಯಾಕಾಶ ಸಂಸ್ಥೆ ನಾಸಾಕ್ಕೆ ಸೂಚನೆ ನೀಡುವ ಟ್ವೀಟ್ ನಲ್ಲಿ, ಡೊನಾಲ್ಡ್ ಟ್ರಂಪ್, "ಕೇವಲ ಚಂದ್ರಯಾನಕ್ಕಾಗಿಯೇ ನಮ್ಮ ಹಣವನ್ನೆಲ್ಲ ಖರ್ಚು ಮಾಡಬೇಡಿ. ನಾವು ಐವತ್ತು ವರ್ಷದ ಹಿಂದೆಯೇ ಚಂದ್ರನ ಮೇಲೆ ಹೋಗಿದ್ದೇವೆ. ಅದಕ್ಕಿಂತ ದೊಡ್ಡದನ್ನು ಯೋಚಿಸಿ. ಮಂಗಳ ಗ್ರಹ(ಚಂದ್ರನೂ ಅದರ ಒಂದು ಭಾಗ), ರಕ್ಷಣೆ ಮತ್ತು ವಿಜ್ಞಾನದ ಬಗ್ಗೆ ಹೊಸತನ್ನು ಯೋಚಿಸಿ" ಎಂದು ಡೊನಾಲ್ಡ್ ಟ್ರಂಪ್ ಟ್ವೀಟ್ ಮಾಡಿದ್ದರು.
ಅವರ ಟ್ವೀಟ್ ನಲ್ಲಿದ್ದ "ಚಂದ್ರನೂ ಮಂಗಳನ ಭಾಗ" ಎಂಬ ಸಾಲು ಇದೀಗ ಟ್ರೋಲ್ ಹೈಕ್ಳಿಗೆ ಮೃಷ್ಟಾನ್ನ ಭೋಜನ ಒದಗಿಸಿದೆ.
|
ಬಾಹ್ಯಾಕಾಶ ಅಧ್ಯಯನಕ್ಕೆ ಸೇನೆ ನಿರ್ಮಿಸಿ!
"ಚಂದ್ರ ಮಂಗಳನ ಭಾಗ! ಇಲ್ಲ, ಖಂಡಿತ ಅಲ್ಲ. ನೀವು ದಯವಿಟ್ಟು ಬಾಹ್ಯಾಕಾಶ ಅಧ್ಯಯನಕ್ಕೆ ಹೊಸ ಸೇನೆಯೊಂದನ್ನು ನಿರ್ಮಿಸಿ. ಅಥವಾ ನೀವೇ ಖುದ್ದಾಗಿ ಹೋಗಿ ಅಧ್ಯಯನ ಮಾಡಿ" -ಮಾರ್ಕ್ ಹಮಿಲ್
|
ಯಾರಿಗೆ ಗೊತ್ತಿತ್ತು?
ಬ್ರೇಕಿಂಗ್ ನ್ಯೂಸ್: ಅತ್ಯಂತ ಜೀನಿಯಸ್ ವ್ಯಕ್ತಿಯೊಬ್ಬರು ಚಂದ್ರ ಮಂಗಳನ ಭಾಗ ಎಂದಿದ್ದಾರೆ! ನಿಜ ಹೇಳಿ, ಇದು ಯಾರಿಗೆ ಗೊತ್ತಿತ್ತು?- ಲಾರೆನ್ಸ್ ಟ್ರೈಬ್
|
ಈ ಹುದ್ದೆಗೆ ಸಮರ್ಥರಲ್ಲ!
ನೀವು ಖಂಡಿತ ಈ ದೇಶವನ್ನು ಮುನ್ನಡೆಸಲು ಯೋಗ್ಯರಲ್ಲ. ಅಥವಾ ಸೋಲಾರ್ ಪದ್ಧತಿಯನ್ನು ವಿವರಿಸಲೂ ನೀವು ಸಮರ್ಥರಲ್ಲ ಎಂದು ಟ್ರಂಪ್ ಟೈಸ್ ಎಂಬ ಟ್ವಿಟ್ಟರ್ ಖಾತೆಯಿಂದ ಟ್ವೀಟ್ ಮಾಡಲಾಗಿದೆ.
|
ಈ ಚಿತ್ರ ನೋಡಿ ತಿಳಿಯುತ್ತದೆ!
ನನಗೆ ಗೊತ್ತು ಓದುವುದು ನಿಮಗೆ ತಕ್ಕುದಲ್ಲ ಎಂದು! ಆದ್ದರಿಂದ ಒಂದು ಚಿತ್ರ ಕಳಿಸಿದ್ದೇನೆ ನೋಡಿ.
ಈ ಚಿತ್ರದಲ್ಲಿ ಕಾಣುವ ಕೆಂಪು ವೃತ್ತವಿದೆಯಲ್ಲ, ಅದು ಮಂಗಳ ಅಲ್ಲೆ ಹಿಂದೆ ಕಾಣುವ ಸಣ್ಣ, ಬಿಳಿ ವೃತ್ತವಿದೆಯಲ್ಲ? ಅದು ಚಂದ್ರ ಎಂದು ರಾಯನ್ ಹಿಲ್ ಟ್ವೀಟ್ ಮಾಡಿದ್ದಾರೆ.
|
ನಾಸಾ ತಲೆಕೆಡಿಸಿಕೊಳ್ಳಬೇಕಿಲ್ಲ!
ಈಇ ಭೂಮಿ ಮೇಲೆ ಅಧ್ಯಕ್ಷರ ಟ್ರ್ಯಾಕ್ ರೆಕಾರ್ಡ್ ಗಳನ್ನು ಬಲ್ಲ ನಾಸಾ ಬಾಹ್ಯಾಕಾಶವನ್ನು ನಿರ್ವಹಿಸಲು ಅವರ ಸಲಹೆ, ಸೂಚನೆ ತೆಗೆದುಕೊಳ್ಳುವ ಅಗತ್ಯವಿಲ್ಲ ಎನ್ನಿಸುತ್ತದೆ- ಸ್ವಾಮ್ ವಿನೋಗ್ರಾಡ್












Click it and Unblock the Notifications