ಮಕ್ಕಳ ಮೇಲೆ ಕೊರೊನಾ ಲಸಿಕೆ ಪ್ರಯೋಗ ಆರಂಭಿಸಿದ ಮಾಡೆರ್ನಾ
ವಾಷಿಂಗ್ಟನ್, ಮಾರ್ಚ್ 16: ಅಮೆರಿಕ ಮೂಲದ ಮಾಡೆರ್ನಾವು ಮಕ್ಕಳ ಮೇಲೆ ಕೊರೊನಾ ಲಸಿಕೆ ಪ್ರಯೋಗವನ್ನು ಆರಂಭಿಸಿದೆ.
6 ತಿಂಗಳಿಂದ 12 ವರ್ಷದ ಮಕ್ಕಳ ಮೇಲೆ ಕೊರೊನಾ ಲಸಿಕೆ ಪ್ರಯೋಗ ನಡೆಯುತ್ತಿದೆ ಎಂದು ಸಿಇಒ ಸ್ಟೀಫನ್ ತಿಳಿಸಿದ್ದಾರೆ. 6750 ಮಕ್ಕಳ ಮೇಲೆ ಪ್ರಯೋಗ ನಡೆಸಲಾಗುತ್ತದೆ. ಅಮೆರಿಕ, ಕೆನಡಾದಲ್ಲಿ ಆರೋಗ್ಯವಂತ ಮಕ್ಕಳ ಮೇಲೆ mRNA-1273 2 ಹಾಗೂ 3ನೇ ಹಂತದ ಪ್ರಯೋಗ ನಡೆಯಲಿದೆ.
ಈ ಲಸಿಕೆಯು ಅತ್ಯಂತ ಕಡಿಮೆ ವಯಸ್ಸಿನವರ ಮೇಲೂ ಉತ್ತಮ ಪರಿಣಾಮ ಬೀರಲಿದೆ ಎಂದು ಸಾಬೀತುಪಡಿಸಬೇಕಿದೆ. ಕೊರೊನಾ ಸೋಂಕಿಗೆ ಒಳಗಾಗಿರುವ ಮಕ್ಕಳಲ್ಲಿ ಸಣ್ಣ ಪ್ರಮಾಣದ ಲಕ್ಷಣಗಳು ಕಂಡು ಬಂದಿವೆ.

ಅಮೆರಿಕದಲ್ಲಿ ಫೈಜರ್, ಮಾಡೆರ್ನಾ, ಜಾನ್ಸನ್ ಆಂಡ್ ಜಾನ್ಸನ್ ಕೊರೊನಾ ಲಸಿಕೆಗೆ ತುರ್ತು ಬಳಕೆಗೆ ಅನುಮತಿ ನೀಡಲಾಗಿದೆ.
ಅಮೆರಿಕದಲ್ಲಿ 17.8 ಮಿಲಿಯನ್ ಮಂದಿ ಮಾಡೆರ್ನಾ ಲಸಿಕೆ ಪಡೆದಿದ್ದಾರೆ, ಕೊರೊನಾವೈರಸ್ ಇದುವರೆಗೆ ಅಮೆರಿಕದಲ್ಲಿ 535,000 ಮಂದಿಯನ್ನು ಬಲಿಪಡೆದುಕೊಂಡಿದೆ. ಅಮೆರಿಕದಲ್ಲಿ ಪ್ರತಿನಿತ್ಯ 2.2 ಮಿಲಿಯನ್ ಮಂದಿ ಮೇಲೆ ಲಸಿಕೆ ಪ್ರಯೋಗ ನಡೆಸಲಾಗುತ್ತದೆ. 65 ವರ್ಷ ಮೇಲ್ಪಟ್ಟ ಶೇ.65ರಷ್ಟು ಮಂದಿಗೆ ಲಸಿಕೆ ಹಾಕಲಾಗಿದೆ.












Click it and Unblock the Notifications