ಬೆಂಗಳೂರು ಸೌಂದರ್ಯಕ್ಕೆ ಜಿಬಿಎ ಒತ್ತು; ಕಟ್ಟಡ ಅವಶೇಷ, ಬ್ಲಾಕ್ ಸ್ಪಾಟ್‌ಗಳ ತೆರವಿಗೆ ಪಾಲಿಕೆ ಸಜ್ಜು

ಬೆಂಗಳೂರು: ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ವ್ಯಾಪ್ತಿಯಲ್ಲಿ ಆಯಾ ನಗರ ಪಾಲಿಕೆಗಳು ತ್ಯಾಜ್ಯ ವಿಲೇವಾರಿ, ಕಸ ಸುರಿವ ವಿರುದ್ಧ ಅನೇಕ ಕ್ರಮಗಳನ್ನು ಜರುಗಿಸುತ್ತಿವೆ. ಈ ಮೂಲಕ ನಗರ ಅಂದ ಹಾಳಾಗದಂತೆ ಮತ್ತು ಸೂಕ್ತ ಕಸ ಸಂಗ್ರಹಣೆಗೆ ಕ್ರಮ ವಹಿಸಿವೆ. ಇದರೊಂದಿಗೆ ಈ ಕಟ್ಟಡ ಅವಶೇಷಗಳನ್ನು ಎಲ್ಲೆಂದರಲ್ಲಿ ಸುರಿಯುವುದಕ್ಕೆ ಬ್ರೇಕ್ ಹಾಕಲು ಬೆಂಗಳೂರು ಉತ್ತರ ನಗರ ಪಾಲಿಕೆ ಮುಂದಾಗಿದೆ. ಈ ಸಂಬಂಧ ಪಾಲಿಕೆ ಆಯುಕ್ತ ಪೊಮ್ಮಲ ಸುನೀಲ್ ಕುಮಾರ್ ಅವರು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದ್ದಾರೆ.

ಇಂದು ಗುರುವಾರ ಪಾಲಿಕೆ ವ್ಯಾಪ್ತಿಯ ಪುಲಿಕೇಶಿನಗರ ಹಾಗೂ ಸರ್ವಜ್ಞನಗರ ವಿಭಾಗಗಳ ವಿವಿಧ ಪ್ರದೇಶಗಳಲ್ಲಿ ಆಯುಕ್ತರು ಖದ್ದು ಸ್ಥಳ ಪರಿಶೀಲನೆ ನಡೆಸಿದರು. ಸಾರ್ವಜನಿಕ ಸ್ವಚ್ಛತೆ, ನಗರ ಸೌಂದರ್ಯೀಕರಣ ಹಾಗೂ ಮೂಲಸೌಕರ್ಯ ಸೂಕ್ತ ನಿರ್ವಹಣೆಗೆ ಅಧಿಕಾರಿಗಳಿಗೆ ಸೂಚಿಸಿದರು. ಪುಲಿಕೇಶಿನಗರ ವಿಭಾಗದಲ್ಲಿ, ರೈಲು ಹಳಿ ಸಮೀಪ ಸಂಗ್ರಹವಾಗಿದ್ದ ಕಟ್ಟಡ ಅವಶೇಷಗಳನ್ನು (Debris) ತಕ್ಷಣ ತೆರವುಗೊಳಿಸುವಂತೆ ಹೇಳಿದರು.

GBA

ಸಾರ್ವಜನಿಕರಿಗೆ ತೊಂದರೆ ಉಂಟಾಗದಂತೆ ಪ್ರದೇಶವನ್ನು ಸ್ವಚ್ಛ ಹಾಗೂ ಆರೋಗ್ಯಕರವಾಗಿಡಲು ಕ್ರಮ ಕೈಗೊಳ್ಳಬೇಕು. ಸರ್ವಜ್ಞನಗರ ವಿಭಾಗದಲ್ಲಿ ಬಿಎಸ್‌ಎನ್‌ಎಲ್ ಕಚೇರಿ ಸಮೀಪ ಬ್ಲಾಕ್ ಸ್ಪಾಟ್ ಕಂಡು ಅವರು ನಗರದ ಸುಂದರೀಕರಣ ಕುರಿತು ಅಸಮಾಧಾನ ವ್ಯಕ್ತಪಡಿಸಿದರು. ಕೂಡಲೇ ಬ್ಲ್ಯಾಕ್ ಸ್ಪಾಟ್ ಸ್ಥಳ ರವಾನಿಸುವಂತೆ ಕೋರಲಾಗಿದೆ.

ಬೆಂಗಳೂರಿಗೆ ಬಂತು ಕಸ ವಿಲೇವಾರಿಯ ವಿಶೇಷ 'ಗಾಬ್ಲರ್ ಯಂತ್ರ', ಏನಿದರ ವೈಶಿಷ್ಟ್ಯ
ಬೆಂಗಳೂರಿಗೆ ಬಂತು ಕಸ ವಿಲೇವಾರಿಯ ವಿಶೇಷ 'ಗಾಬ್ಲರ್ ಯಂತ್ರ', ಏನಿದರ ವೈಶಿಷ್ಟ್ಯ

ಸ್ವಚ್ಛತೆ ಕಾಪಾಡಲು ಪರಿಣಾಮಕಾರಿ ಕೆಲಸವಾಗಲಿ

ವಾರ್ಡ್ 24ರ ಬಿಎಸ್‌ಎನ್‌ಎಲ್ ಪಾಯಿಂಟ್, ವಾರ್ಡ್ 27ರ ಅಗ್ನಿಶಾಮಕ ದಳದ ಹಿಂಭಾಗದ ರಸ್ತೆ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಪರಿಶೀಲನೆ ನಡೆಸಿ, ಕಟ್ಟಡ ಅವಶೇಷಗಳನ್ನು ತೆರವುಗೊಳಿಸಬೇಕು. ಸ್ವಚ್ಛತೆ ಕಾಪಾಡುವುದು ಹಾಗೂ ನಗರ ಸೌಂದರ್ಯೀಕರಣ ಕಾರ್ಯಗಳನ್ನು ಇನ್ನಷ್ಟು ಪರಿಣಾಮಕಾರಿಯಾಗಿ ನಿರ್ವಹಿಸುವಂತೆ ಹೇಳಿದರು.

ಬಕ್ರೀದ್ ಹಬ್ಬದ ಅಂಗವಾಗಿ ಕಾರ್ಯ ನಿರ್ವಹಿಸುತ್ತಿರುವ ಮಾಂಸ ಮಳಿಗೆಗಳನ್ನು ಪರಿಶೀಲಿಸಿ, ಸಾರ್ವಜನಿಕ ಆರೋಗ್ಯ ಮತ್ತು ಸ್ವಚ್ಛತೆ ಕಾಪಾಡಲು ಅಗತ್ಯ ಮುನ್ನೆಚ್ಚರಿಕಾ ಕ್ರಮ ಜರುಗಿಸಲು ತಿಳಿಸಿದರು.

ಪಾಲಿಕೆ ಅಧಿಕಾರಿಗಳಿಗೆ ಕ್ರಿಯಾ ಯೋಜನಾ ಕಾರ್ಯಗಾರ

ಸಾಂಪ್ರದಾಯಿಕ ಶೈಲಿಯ ಬಜೆಟ್ ಅನುಷ್ಠಾನಕ್ಕೆ ಬ್ರೇಕ್ ಹಾಕಿ, ಲಭ್ಯವಿರುವ ಅನುದಾನವನ್ನು ಅತ್ಯಂತ ಪರಿಣಾಮಕಾರಿಯಾಗಿ ಮತ್ತು ಸಾರ್ವಜನಿಕರ ಸಹಭಾಗಿತ್ವದೊಂದಿಗೆ ಬಳಸಿಕೊಳ್ಳುವ ನಿಟ್ಟಿನಲ್ಲಿ ಬೆಂಗಳೂರು ದಕ್ಷಿಣ ನಗರ ಪಾಲಿಕೆ ವತಿಯಿಂದ ಹಿರಿಯ ಅಧಿಕಾರಿಗಳು ಹಾಗೂ ವಿವಿಧ ತಜ್ಞರ ಸಮ್ಮುಖದಲ್ಲಿ ಪಾಲಿಕೆಯ ಅಭಿಯಂತರರಿಗೆ ಪ್ರಸಕ್ತ ಸಾಲಿನ ಕ್ರಿಯಾ ಯೋಜನೆ" ಸಿದ್ಧಪಡಿಸುವ ಸಂಬಂಧ ಕಾರ್ಯಾಗಾರ ನಡೆಯಿತು.

ಈ ಕಾರ್ಯಾಗಾರದಲ್ಲಿ ವಾಕಲೂರು ಸಂಸ್ಥೆ, ಡಬ್ಲ್ಯೂ.ಆರ್.ಐ ಸಂಸ್ಥೆ, ಬಿ-ಪ್ಯಾಕ್, ಸೆನ್ಸಿಂಗ್ ಲೋಕಲ್ ಸೇರಿ ಅನೇಕ ನಾಗರಿಕ ಸಂಘ, ಸಂಸ್ಥೆಗಳು ಪಾಲ್ಗೊಂಡು ಬಜೆಟ್ ಅನುದಾನವನ್ನು ಸೂಕ್ತವಾಗಿ ಬಳಸಿಕೊಳ್ಳುವ ಕುರಿತು ತಾಂತ್ರಿಕ ಮಾರ್ಗದರ್ಶನ ನೀಡಿದರು. ಸಾರ್ವಜನಿಕ ಸ್ಥಳಗಳ ಹಸರೀಕರಣ, ಸುರಕ್ಷಿತ ರಸ್ತೆ ಜಂಕ್ಷನ್ ಒದಗಿಸಬೇಕು. ಕಸದ ಬ್ಲ್ಯಾಕ್‌ಸ್ಪಾಟ್‌ಗಳ ನಿರ್ಮೂಲನೆ, ಸ್ಥಳೀಯ ಮಟ್ಟದಲ್ಲಿ ಸ್ಥಿತಿಸ್ಥಾಪಕತ್ವ, ಹವಾಮಾನ ವೈಪರೀತ್ಯ ಮತ್ತು ಜಲಕ್ಷಾಮ ಎದುರಿಸಲು ಸಜ್ಜಾಗುವಂತೆ ಅಧಿಕಾರಿಗಳಿಗೆ ಸಂಸ್ಥೆ ಸದಸ್ಯರು ಕೋರಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+