ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಡೊನಾಲ್ಡ್ ಟ್ರಂಪ್ v/s ಮೈಕ್ ಪೆನ್ಸ್, ಅಮೆರಿಕದಲ್ಲಿ ಅಧ್ಯಕ್ಷ-ಉಪಾಧ್ಯಕ್ಷರ ಫೈಟ್

|
Google Oneindia Kannada News

ಬಹುಶಃ ಟ್ರಂಪ್ ಗ್ರಹಚಾರ ನೆಟ್ಟಗಿಲ್ಲವೆಂದು ಕಾಣುತ್ತೆ. ಯಾಕಂದ್ರೆ ಎಲ್ಲಾ ಟ್ರಂಪ್‌ಗೆ ಉಲ್ಟಾ ಹೊಡೆಯುತ್ತಿದೆ. ಮೊದಲಿಗೆ ಅವರ ಪಕ್ಷದವರೇ ತಿರುಗಿಬಿದ್ದರು. ಈಗ ಅಮೆರಿಕದ ಉಪಾಧ್ಯಕ್ಷ ಮೈಕ್ ಪೆನ್ಸ್ ಕೂಡ ಟ್ರಂಪ್‌ಗೆ ಟಾಂಗ್ ಕೊಟ್ಟಿದ್ದಾರೆ. ಅಂದಹಾಗೆ ಈಗಾಗಲೇ ಬೈಡನ್ ಅಧಿಕಾರ ಸ್ವೀಕಾರ ಸಮಾರಂಭಕ್ಕೆ ನಾನು ಹೋಗಲ್ಲ ಅಂತಾ ಟ್ರಂಪ್ ಹೇಳಿದ್ದಾರೆ.

ಆದರೆ ಟ್ರಂಪ್‌ ಪಾಲಿನ ಗಿಣಿ, ಪಕ್ಕಾ ಶಿಷ್ಯ ಮೈಕ್ ಪೆನ್ಸ್ ಉಲ್ಟಾ ಹೊಡೆದಿದ್ದಾರೆ. ನಾನು ಜೋ ಬೈಡನ್ ಅಧಿಕಾರ ಸ್ವೀಕಾರ ಸಮಾರಂಭ ಹೋಗುವೆ ಅಂತಾ ಉಪಾಧ್ಯಕ್ಷ ಮೈಕ್ ಪೆನ್ಸ್ ತಮ್ಮ ಕುಟುಂಬ ಸದಸ್ಯರ ಬಳಿ ಹೇಳಿಕೊಂಡಿದ್ದಾರಂತೆ. ಆದರೆ ಅಧಿಕೃತವಾಗಿ ತಮಗೆ ಆಹ್ವಾನ ಬರುವವರೆಗೂ ಪೆನ್ಸ್ ತಟಸ್ಥವಾಗಿ ಇರಲಿದ್ದಾರೆ.

ಟ್ರಂಪ್ ತೊಲಗದಿದ್ದರೆ ಒದ್ದು ಓಡಿಸೋದು ಗ್ಯಾರಂಟಿ: ಅಮೆರಿಕ ಸಂಸದರು..!ಟ್ರಂಪ್ ತೊಲಗದಿದ್ದರೆ ಒದ್ದು ಓಡಿಸೋದು ಗ್ಯಾರಂಟಿ: ಅಮೆರಿಕ ಸಂಸದರು..!

ಈಗಾಗಲೇ ಜೋ ಬೈಡನ್ ಕೂಡ ಮೈಕ್ ಪೆನ್ಸ್ ಆಗಮನಕ್ಕೆ ಕಾಯುತ್ತಿರುವುದಾಗಿ ಹೇಳಿದ್ದಾರೆ. ಇದು ಮೈಕ್ ಪೆನ್ಸ್ ಹಾಗೂ ಡೊನಾಲ್ಡ್ ಟ್ರಂಪ್ ನಡುವಿನ ಕಿತ್ತಾಟಕ್ಕೆ ಸಾಕ್ಷಿಯಾಗಿದೆ. ಅಮೆರಿಕ ಪ್ರಜಾಪ್ರಭುತ್ವಕ್ಕೆ ಟ್ರಂಪ್ ಮಾಡಿರುವ ಘಾಸಿ ಕಂಡು ಸ್ವತಃ ಪೆನ್ಸ್ ಕೂಡ ಕುದ್ದು ಹೋಗಿದ್ದಾರೆ ಎನ್ನಲಾಗಿದೆ.

 ಟ್ರಂಪ್ ಸಾಕಿದ ಗಿಣಿ ಪೆನ್ಸ್..!

ಟ್ರಂಪ್ ಸಾಕಿದ ಗಿಣಿ ಪೆನ್ಸ್..!

ಹೌದು, ಮೈಕ್ ಪೆನ್ಸ್ ಹಾಗೂ ಡೊನಾಲ್ಡ್ ಟ್ರಂಪ್ ತುಂಬಾನೆ ಆತ್ಮಿಯರು. ಅದಕ್ಕಿಂತ ಹೆಚ್ಚಾಗಿ ಅವರಿಬ್ಬರ ಮಧ್ಯೆ ಗುರು-ಶಿಷ್ಯ ಸಂಬಂಧ ಇತ್ತು ಎನ್ನಬಹುದು. ಪೆನ್ಸ್ ಕೂಡ ಟ್ರಂಪ್ ಏನೇ ಮಾಡಿದ್ರೂ ಸಮರ್ಥಿಸುತ್ತಾ ಬಂದಿದ್ದರು. ಆದರೆ ಈಗ ಏನಾಯ್ತೋ ಗೊತ್ತಿಲ್ಲ, ಕ್ಯಾಪಿಟಲ್ ಹಿಲ್ ಮೇಲಿನ ದಾಳಿ ನಂತರ ಪೆನ್ಸ್ ನಿಲುವು ಬದಲಿಸಿಕೊಂಡಿದ್ದಾರೆ. ಬಹುಶಃ ಇದು ಡೊನಾಲ್ಡ್ ಟ್ರಂಪ್‌ಗೆ ತುಂಬಾ ದೊಡ್ಡ ಆಘಾತ ಇರಬಹುದು ಎಂದು ಅಮೆರಿಕದ ರಾಜಕೀಯ ವಿಶ್ಲೇಷಕರು ಹೇಳುತ್ತಿದ್ದಾರೆ.

‘ಟ್ರಂಪ್’ ಓಡಿಸಲು ‘ಪೆನ್ಸ್’ ಬೇಕು..!

‘ಟ್ರಂಪ್’ ಓಡಿಸಲು ‘ಪೆನ್ಸ್’ ಬೇಕು..!

ಟ್ರಂಪ್ ವಿರುದ್ಧ ಕೇವಲ ವಾಗ್ದಂಡನೆ ಅಸ್ತ್ರ ಮಾತ್ರವಲ್ಲ, ಮತ್ತೊಂದು ಪ್ರಬಲ ವೆಪನ್ ಕೂಡ ಸಿದ್ಧವಿದೆ. ಅದೇ ಅಮೆರಿಕ ಸಂವಿಧಾನದ 25ನೇ ತಿದ್ದುಪಡಿ. ಆದರೆ ಇದನ್ನ ಜಾರಿಗೆ ತರಲು ಉಪಾಧ್ಯಕ್ಷರ ಬೆಂಬಲ ಬೇಕಾಗಿದೆ. ಈ ಸಂದರ್ಭದಲ್ಲಿ ಮೈಕ್ ಪೆನ್ಸ್ ಡಬಲ್ ಗೇಮ್ ಆಡ್ತಿದ್ದಾರೆ ಎಂದು ಖುದ್ದು ಅಮೆರಿಕ ಸಂಸದರು ಗಂಭೀರ ಆರೋಪ ಮಾಡುತ್ತಿದ್ದಾರೆ. ಹೀಗಾಗಿ 25ನೇ ತಿದ್ದುಪಡಿ ಅನ್ವಯ ಆಗದಿದ್ದರೂ, ಟ್ರಂಪ್ ಓಡಿಸಲು ವಾಗ್ದಂಡನೆ ಸಹಕಾರಿಯಾಗಲಿದೆ. ಅಕಸ್ಮಾತ್ ಮೈಕ್ ಪೆನ್ಸ್ ಮನಸ್ಸು ಬದಲಾಯಿಸಿದರೆ ಸಂವಿಧಾನದ 25ನೇ ತಿದ್ದುಪಡಿ ಹೇರಿ, ಟ್ರಂಪ್‌ಗೆ ಮನೆಯ ದಾರಿ ತೋರಿಸಬಹುದು.

ನ್ಯೂಕ್ಲಿಯರ್ ದಾಳಿಗೆ ಟ್ರಂಪ್ ಸ್ಕೆಚ್..? ಅಧಿಕಾರ ಹೋಗಿದ್ದಕ್ಕೆ ರಿವೇಂಜ್..?ನ್ಯೂಕ್ಲಿಯರ್ ದಾಳಿಗೆ ಟ್ರಂಪ್ ಸ್ಕೆಚ್..? ಅಧಿಕಾರ ಹೋಗಿದ್ದಕ್ಕೆ ರಿವೇಂಜ್..?

 ಸ್ಪೀಕರ್ ಪೆಲೋಸಿ ಹೇಳಿದ್ದೇನು..?

ಸ್ಪೀಕರ್ ಪೆಲೋಸಿ ಹೇಳಿದ್ದೇನು..?

ಡೊನಾಲ್ಡ್ ಟ್ರಂಪ್ ಅವರನ್ನು ಅಧಿಕಾರದಿಂದ ಕಿತ್ತುಹಾಕಲು 25ನೇ ತಿದ್ದುಪಡಿಯನ್ನು ಜಾರಿಗೆ ತರುವಂತೆ ಉಪಾಧ್ಯಕ್ಷ ಮೈಕ್ ಪೆನ್ಸ್ ಮತ್ತು ಸಂಪುಟಕ್ಕೆ ಅಮೆರಿಕ ಸಂಸತ್ ಸ್ಪೀಕರ್ ನ್ಯಾನ್ಸಿ ಪೆಲೋಸಿ ಕರೆ ನೀಡಿದ್ದಾರೆ. ಒಂದು ವೇಳೆ ಟ್ರಂಪ್ ಪದಚ್ಯುತಗೊಳಿಸಲು 25ನೇ ತಿದ್ದುಪಡಿ ಹೇರದಿದ್ದರೆ ಅಧ್ಯಕ್ಷರ ವಿರುದ್ಧ ವಾಗ್ದಂಡನೆಗೆ ಕಾಂಗ್ರೆಸ್ ಮುಂದಾಗಲಿದೆ ಎಂದು ಪೆಲೋಸಿ ಕ್ಯಾಪಿಟಲ್ ಹಿಲ್ ಮೇಲಿನ ದಾಳಿಯ ನಂತರ ವಾರ್ನಿಂಗ್ ಕೊಟ್ಟಿದ್ದರು. ಇದೀಗ ಪೆನ್ಸ್ ಕೂಡ ಟ್ರಂಪ್ ವಿರುದ್ಧ ತಿರುಗಿಬೀಳುವ ಲಕ್ಷಣ ಗೋಚರಿಸುತ್ತಿದೆ.

'ಅಧಿಕಾರದಿಂದ ಟ್ರಂಪ್‌ನ ಒದ್ದೋಡಿಸಿ': ಡೊನಾಲ್ಡ್ ಟ್ರಂಪ್ ಬಂಟನ ಆಗ್ರಹ..!'ಅಧಿಕಾರದಿಂದ ಟ್ರಂಪ್‌ನ ಒದ್ದೋಡಿಸಿ': ಡೊನಾಲ್ಡ್ ಟ್ರಂಪ್ ಬಂಟನ ಆಗ್ರಹ..!

 ಪೆನ್ಸ್ ಬಂದರೆ ಸ್ವಾಗತ..!

ಪೆನ್ಸ್ ಬಂದರೆ ಸ್ವಾಗತ..!

ಡೊನಾಲ್ಡ್ ಟ್ರಂಪ್ ವಿರುದ್ಧ ಮೈಕ್ ಪೆನ್ಸ್ ಎತ್ತಿಕಟ್ಟಲು ಇದೇ ಸರಿಯಾದ ಸಮಯ ಎಂಬುದು ವಿರೋಧಿ ಪಡೆಗೆ ಗೊತ್ತಿದೆ. ಈ ಮಧ್ಯೆ ಅಮೆರಿಕದ ನಿಯೋಜಿತ ಅಧ್ಯಕ್ಷ ಜೋ ಬೈಡನ್, ಮೈಕ್ ಪೆನ್ಸ್ ಪರ ಮೃದು- ಧೋರಣೆ ತಾಳಿದ್ದಾರೆ. ಮೈಕ್ ಪೆನ್ಸ್ ನನ್ನ ಪದಗ್ರಹಣ ಸಮಾರಂಭಕ್ಕೆ ಬಂದರೆ ಆತ್ಮೀಯ ಸ್ವಾಗತ ಎನ್ನುವ ಮೂಲಕ ಟ್ರಂಪ್ ಬರದೇ ಇದ್ದರೆ, ಕತ್ತೆ ಬಾಲ-ಕುದುರೆ ಜುಟ್ಟು ಎನ್ನುವಂತೆ ತಿರುಗೇಟು ಕೊಟ್ಟಿದ್ದಾರೆ. ಇದು ಟ್ರಂಪ್‌ ಎದೆಗೆ ಆಗಿರುವ ಗಾಯಕ್ಕೆ ಉಪ್ಪು ಸುರಿದಂತಾಗಿದೆ.

ಸೋಲೊಪ್ಪಿಕೊಂಡ ಟ್ರಂಪ್, ಜ.20ಕ್ಕೆ ಹೊಸ ಆಡಳಿತ ಸ್ವಾಗತಿಸಿಸೋಲೊಪ್ಪಿಕೊಂಡ ಟ್ರಂಪ್, ಜ.20ಕ್ಕೆ ಹೊಸ ಆಡಳಿತ ಸ್ವಾಗತಿಸಿ

English summary
Mike Pence May Attend Biden’s Inauguration. Pence family members tells that, Pence waiting for invitation to make final decision.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X