ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶಿಶುವಿನ ಮೇಲೆ ಅತ್ಯಾಚಾರ ನಡೆಸಿ ಸಹಾಯಕ್ಕಾಗಿ ಗೂಗಲ್‌ ಸರ್ಚ್ ಮಾಡಿದ ಕ್ರೂರಿ

|
Google Oneindia Kannada News

ವಾಷಿಂಗ್ಟನ್, ಅಕ್ಟೋಬರ್ 9: ನವಜಾತ ಶಿಶುವೊಂದರ ಮೇಲೆ ಅತ್ಯಾಚಾರ ನಡೆಸಿದ ಕ್ರೂರಿ ತಂದೆಯೊಬ್ಬ ಮಗುವನ್ನು ಉಳಿಸಲು ಗೂಗಲ್ ಮತ್ತು ಸಾಮಾಜಿಕ ಜಾಲತಾಣದಲ್ಲಿ ಸಹಾಯ ಕೇಳಿದ ಘಟನೆ ಅಮೆರಿಕದ ಪೆನ್ಸಿಲ್ವೇನಿಯಾದಲ್ಲಿ ನಡೆದಿದೆ.

ತನ್ನ ಹತ್ತು ತಿಂಗಳ ಮಗುವಿನ ಆರೈಕೆ ನೋಡಿಕೊಳ್ಳುತ್ತಿದ್ದ 29 ವರ್ಷದ ವ್ಯಕ್ತಿ ಶನಿವಾರ ಶಿಶುವಿನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಗಾಯದಿಂದ ಮಗುವಿನಲ್ಲಿ ರಕ್ತಸ್ರಾವವಾಗಿದೆ. ಕೊನೆಗೆ ಮಗು ಉಸಿರಾಟ ನಿಲ್ಲಿಸಿದೆ. ಕೂಡಲೇ ಗಾಬರಿಯಾದ ಆತ ಗೂಗಲ್‌ನಲ್ಲಿ 'ಮಗು ಉಸಿರಾಟ ನಿಂತರೆ ಏನು ಮಾಡುವುದು?', ಮಗುವಿನ ಹೃದಯ ಬಡಿತ ಅಥವಾ ಮಿಡಿತ ಕೇಳಿಸದೆ ಇದ್ದಾಗ ಏನು ಮಾಡುವುದು?' ಎಂಬಂತಹ ಹುಡುಕಾಟಗಳನ್ನು ನಡೆಸಿದ್ದಾನೆ.

ಅತ್ಯಾಚಾರ ಸಂತ್ರಸ್ತೆ ಸಾವಿಗೆ ಸಿಗದ ನ್ಯಾಯ:ತಂದೆ ಆತ್ಮಹತ್ಯೆಗೆ ಯತ್ನಅತ್ಯಾಚಾರ ಸಂತ್ರಸ್ತೆ ಸಾವಿಗೆ ಸಿಗದ ನ್ಯಾಯ:ತಂದೆ ಆತ್ಮಹತ್ಯೆಗೆ ಯತ್ನ

ಆದರೆ ಆತ ಸಹಾಯಕ್ಕಾಗಿ ಆಸ್ಪತ್ರೆ ಅಥವಾ ತುರ್ತು ಸೇವೆಗೆ ಕರೆ ಮಾಡಿಲ್ಲ. ಆತನ ಫೋನ್‌ಅನ್ನು ವಶಪಡಿಸಿಕೊಂಡ ಪೊಲೀಸರು ಆ ಸಮಯದಲ್ಲಿ ಆತನ ಚಟುವಟಿಕೆಗಳನ್ನು ಪರಿಶೀಲಿಸಿದ್ದಾರೆ. ಗೂಗಲ್‌ನಲ್ಲಿ ಸರ್ಚ್ ಮಾಡಿದ್ದರ ಜತೆಗೆ ಆತ ತನ್ನ ಮಗಳ ಸ್ಥಿತಿಯ ಬಗ್ಗೆ ವಿವರ ನೀಡದೆ ಈ ಕುರಿತು ಮಾಹಿತಿ ನೀಡುವಂತೆ ಸಾಮಾಜಿಕ ಜಾಲತಾಣದಲ್ಲಿ ಇಬ್ಬರು ಮಹಿಳೆಯರ ಜತೆಗೂ ಮಾತನಾಡಿರುವುದು ಗೊತ್ತಾಗಿದೆ.

Man In US Rapes Infant, Searches On Google For Help To Save Her

ಜೈಲಿಗೆ ಹೋಗುವ ಭಯದಿಂದ ಆತ್ಮಹತ್ಯೆಗೆ ಶರಣಾದ ಯುವಕಜೈಲಿಗೆ ಹೋಗುವ ಭಯದಿಂದ ಆತ್ಮಹತ್ಯೆಗೆ ಶರಣಾದ ಯುವಕ

ಕೊನೆಯಲ್ಲಿ ಆತ ತುರ್ತು ಸೇವೆಗಳಿಗಾಗಿ ಕರೆ ಮಾಡಿದ್ದಾನೆ. ಆದರೆ ಮಗು ಆಗಲೇ ಮೃತಪಟ್ಟಿತ್ತು. ಅಪಾರ್ಟ್‌ಮೆಂಟ್‌ನಲ್ಲಿ ಹುಡುಕಾಡಿದ ಪೊಲೀಸರಿಗೆ ರಕ್ತಸಿಕ್ತ ಡೈಪರ್ ಸಿಕ್ಕಿದೆ. ಮಗುವಿನ ಮೇಲೆ ಅತ್ಯಾಚಾರ ನಡೆದಿದೆ ಎನ್ನುವುದು ಮರಣೋತ್ತರ ಪರೀಕ್ಷೆಯಿಂದ ಗೊತ್ತಾಗಿದೆ. ಮಗುವಿನ ತಾಯಿ ಹಾಗೂ ಆ ವ್ಯಕ್ತಿ ದೂರವಾಗಿದ್ದು, ಮಗುವಿನ ಜಂಟಿ ಜವಾಬ್ದಾರಿ ವಹಿಸಿಕೊಂಡಿದ್ದರು.

English summary
A US man raped his 10 months old baby girl and then searched on Google for help to save her life.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X