ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮೆರಿಕ ಅಧ್ಯಕ್ಷೀಯ ಚುನಾವಣೆ ನಡೆಯೋದೆ ಡೌಟ್..?

|
Google Oneindia Kannada News

ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ನೂರಾರು ವಿಘ್ನಗಳು ಎದುರಾಗುತ್ತಿವೆ. ಕೊರೊನಾ ಕಂಟಕದ ಹಿನ್ನೆಲೆ ಈ ಬಾರಿ ಅಂಚೆ ಮತದಾನಕ್ಕೆ ಸರ್ವ ತಯಾರಿ ನಡೆದಿದೆ. ಆದರೆ ಇದೇ ಅಂಚೆ ಮತದಾನ ಪದ್ಧತಿ ಹೋರಾಟಕ್ಕೂ ದಾರಿ ಮಾಡಿಕೊಟ್ಟಿದೆ. ಅಂಚೆ ಮತದಾನದ ವಿರುದ್ಧ ಅಮೆರಿಕದ ಹಲವು ರಾಜ್ಯಗಳ ಕೋರ್ಟ್‌ಗಳಲ್ಲಿ 100ಕ್ಕೂ ಹೆಚ್ಚು ಅರ್ಜಿಗಳು ದಾಖಲಾಗಿವೆ. ಇದು ಚುನಾವಣಾ ಅಖಾಡದಲ್ಲಿ ಸಂಚಲನ ಸೃಷ್ಟಿಸಿದೆ. ಕೆಲ ಅರ್ಜಿಗಳಲ್ಲಿ ಮತದಾನ ಪ್ರಕ್ರಿಯೆ ಬಗ್ಗೆಯೇ ಪ್ರಶ್ನೆ ಹಾಕಲಾಗಿದೆ.

ಇನ್ನೂ ಕೆಲವು ಅರ್ಜಿಗಳಲ್ಲಿ ಮತದಾರರ ಗೈರು ಹಾಜರು, ಮತಪತ್ರಗಳ ನ್ಯೂನ್ಯತೆ, ಮತಪೆಟ್ಟಿಗೆ ಇಟ್ಟಿರುವ ಜಾಗಗಳ ಬಗ್ಗೆ ಚರ್ಚೆಯಾಗಿದೆ. ಈ ಮೂಲಕ ಚುನಾವಣೆ ನಡೆಯುವ ಕುರಿತು ಅನುಮಾನ ಮೂಡುವಂತೆ ಮಾಡಿದೆ. ಏಕೆಂದರೆ ಅಮೆರಿಕದಲ್ಲಿ ಕೇಂದ್ರಕ್ಕೆ ಇರುವಷ್ಟೇ ಅಧಿಕಾರ ರಾಜ್ಯಗಳಲ್ಲೂ ಹಂಚಿರುತ್ತದೆ. ಹೀಗಾಗಿ ರಾಜ್ಯಗಳ ತೀರ್ಮಾನಕ್ಕೆ ಅಮೆರಿಕದಲ್ಲಿ ಪ್ರಾಮುಖ್ಯತೆ ಇದೆ.

ಅಮೆರಿಕ ಚುನಾವಣೆ Poll: ಯಾರಿಗೆ ಸೋಲು, ಯಾರಿಗೆ ಗೆಲುವು..?ಅಮೆರಿಕ ಚುನಾವಣೆ Poll: ಯಾರಿಗೆ ಸೋಲು, ಯಾರಿಗೆ ಗೆಲುವು..?

ಕೆಲ ದಿನಗಳ ಹಿಂದೆ ಖುದ್ದು ಅಮೆರಿಕ ಅಧ್ಯಕ್ಷರೇ ಅಂಚೆ ಮತದಾನದ ವಿರುದ್ಧ ವಾಗ್ದಾಳಿ ನಡೆಸಿದ್ದರು. ಪ್ರಸಕ್ತ ಚುನಾವಣೆಯಲ್ಲಿ ಇತರ ದೇಶಗಳ ಹಸ್ತಕ್ಷೇಪಕ್ಕಿಂತ ಅಂಚೆ ಮತದಾನ ದೊಡ್ಡ ಬೆದರಿಕೆ ಎಂದಿದ್ದರು ಟ್ರಂಪ್. ಟ್ರಂಪ್ ಹೇಳಿಕೆ ಬೆನ್ನಲ್ಲೇ ಅಂಚೆ ಮತದಾನದ ವಿರುದ್ಧ ಕೋರ್ಟ್‌ಗೆ ನೂರಾರು ಅರ್ಜಿಗಳು ಸಲ್ಲಿಕೆಯಾಗಿವೆ.

ಯಾವ ಯಾವ ರಾಜ್ಯಗಳಲ್ಲಿ ಅರ್ಜಿ..?

ಯಾವ ಯಾವ ರಾಜ್ಯಗಳಲ್ಲಿ ಅರ್ಜಿ..?

ಅಮೆರಿಕ ಅಧ್ಯಕ್ಷರ ಆಯ್ಕೆಯಲ್ಲಿ ನಿರ್ಣಾಯಕ ಪಾತ್ರ ವಹಿಸಬಲ್ಲ ರಾಜ್ಯಗಳಲ್ಲೇ ಅಂಚೆ ಮತದಾನದ ಬಗ್ಗೆ ಭಾರಿ ಪ್ರಮಾಣದ ಅರ್ಜಿಗಳು ಸಲ್ಲಿಕೆಯಾಗಿವೆ. ಅರಿಜೋನಾ, ಮಿಷಿಗನ್, ನೆವಾಡ, ಮಿನ್ನೇಸೋಟಾ ಹೀಗೆ ಪಟ್ಟಿ ದೊಡ್ಡದಾಗಿದೆ. ಇಡೀ ಅಮೆರಿಕದಲ್ಲಿ 100ಕ್ಕೂ ಹೆಚ್ಚು ಅರ್ಜಿಗಳು ಅಂಚೆ ಮತದಾನದ ವಿರುದ್ಧವಾಗಿ ಸಲ್ಲಿಕೆಯಾಗಿವೆ. ಅಂಚೆ ಮತದಾನದ ಪ್ರಕ್ರಿಯೆಯ ನ್ಯೂನ್ಯತೆ ವಿರುದ್ಧ ಮತದಾರರು ಹಾಗೂ ರಿಪಬ್ಲಿಕನ್ ಪಕ್ಷದ ನಾಯಕರು ಸಲ್ಲಿರುವ ಅರ್ಜಿಗಳೇ ಹೆಚ್ಚು. ಇದು ನವೆಂಬರ್ 3ರ ಅಮೆರಿಕ ಅಧ್ಯಕ್ಷೀಯ ಚುನಾವಣೆ ಮೇಲೆ ಕರಿನೆರಳು ಚಾಚಿದೆ. ಚುನಾವಣೆ ನಡೆಯುತ್ತಾ ಎಂಬ ಬಹುದೊಡ್ಡ ಪ್ರಶ್ನೆಯನ್ನ ಹುಟ್ಟುಹಾಕಿದೆ.

 ಟ್ರಂಪ್ ಏನು ಹೇಳಿದ್ದರು ಗೊತ್ತಾ..?

ಟ್ರಂಪ್ ಏನು ಹೇಳಿದ್ದರು ಗೊತ್ತಾ..?

ಕಳೆದ ತಿಂಗಳು ಅಂಚೆ ಮತದಾನದ ವಿರುದ್ಧ ಗುಡುಗಿದ್ದ ಡೊನಾಲ್ಡ್ ಟ್ರಂಪ್, ಈ ಬಾರಿಯ ಚುನಾವಣೆಯಲ್ಲಿ ವಿದೇಶಿ ಹಸ್ತಕ್ಷೇಪಕ್ಕಿಂತಲೂ ಅಂಚೆ ಮತದಾನ ಬಹುದೊಡ್ಡ ಬೆದರಿಕೆಯಾಗಿದೆ ಎಂದಿದ್ದರು. ಅಲ್ಲದೆ ದೊಡ್ಡ ಪ್ರಮಾಣದಲ್ಲಿ ಅಂಚೆ ಮತದಾನಕ್ಕೆ ಅವಕಾಶ ನೀಡುವುದರಿಂದ ನಕಲಿ ಮತದಾನಕ್ಕೆ ಅವಕಾಶ ಕಲ್ಪಿಸಿದಂತೆ ಆಗುತ್ತೆ ಎಂದು ಟ್ರಂಪ್ ಆರೋಪಿಸಿದ್ದರು. ಯಾರದ್ದೋ ಮತ ಮತ್ತೊಬ್ಬರು ಚಲಾಯಿಸುತ್ತಾರೆ. ಸಾವಿರಾರು ಮತಪತ್ರ ನಾಪತ್ತೆಯಾಗಬಹುದು ಅನ್ನೋದು ಟ್ರಂಪ್‌ಗೆ ಕಾಡುತ್ತಿರುವ ಅನುಮಾನವಾಗಿದೆ. ಟ್ರಂಪ್‌ ಹೇಳಿಕೆಗೆ ಬೆಂಬಲವಾಗಿ ಅಮೆರಿಕದ ವಿವಿಧ ಕೋರ್ಟ್‌ಗಳಲ್ಲಿ ನೂರಾರು ಅರ್ಜಿಗಳು ಸಲ್ಲಿಕೆಯಾಗಿವೆ.

ಅಮೆರಿಕ ಅಧ್ಯಕ್ಷರ ಆಯ್ಕೆಗೆ ದಿನಗಣನೆ, 244 ವರ್ಷಗಳ ಮಹಾನ್ ಇತಿಹಾಸಅಮೆರಿಕ ಅಧ್ಯಕ್ಷರ ಆಯ್ಕೆಗೆ ದಿನಗಣನೆ, 244 ವರ್ಷಗಳ ಮಹಾನ್ ಇತಿಹಾಸ

ಕುರ್ಚಿ ಬಿಡಲ್ಲ ಎಂದಿದ್ದರು ಟ್ರಂಪ್..!

ಕುರ್ಚಿ ಬಿಡಲ್ಲ ಎಂದಿದ್ದರು ಟ್ರಂಪ್..!

ಟ್ರಂಪ್ ಬರೀ ಮತದಾನ ಪ್ರಕ್ರಿಯೆ ಬಗ್ಗೆ ಅನುಮಾನ ವ್ಯಕ್ತಪಡಿಸಿರಲಿಲ್ಲ, ಬದಲಾಗಿ ಈ ಬಾರಿ ನಾನು ಸೋತರೆ ಸುಮ್ಮನೆ ಕುರ್ಚಿ ಬಿಟ್ಟು ಹೋಗಲ್ಲ ಎಂದು ಸವಾಲು ಹಾಕಿದ್ದರು. ಈ ಮೂಲಕ ಅಂಚೆ ಮತದಾನದ ವಿರುದ್ಧ ಗುಡುಗಿದ್ದರು. ಆದರೆ ಟ್ರಂಪ್ ಹೇಳಿಕೆಗೆ ಅವರದ್ದೇ ಪಕ್ಷದಲ್ಲಿ ಅಪಸ್ವರ ಎದ್ದಿದ್ದನ್ನು ಇಲ್ಲಿ ಸ್ಮರಿಸಬಹುದು. ಎಲ್ಲಾ ಘಟನೆಗಳ ಬೆನ್ನಲ್ಲೇ ಅಮೆರಿಕದ ಮತದಾರರು ಕೂಡ ಅಂಚೆ ಮತದಾನದ ವಿರುದ್ಧವೇ ದಾವೆ ಹೂಡುತ್ತಿದ್ದಾರೆ. ಈಗಾಗಲೇ ಅವಧಿ ಪೂರ್ವ ಮತದಾನ ಕೂಡ ಆರಂಭವಾಗಿದೆ. ಸುಮಾರು 40 ಲಕ್ಷಕ್ಕೂ ಹೆಚ್ಚು ಅಮೆರಿಕನ್ ವೋಟರ್ಸ್ ತಮ್ಮ ಹಕ್ಕು ಚಲಾಯಿಸಿದ್ದಾರೆ. ಇಂತಹ ಸಂದಿಗ್ಧ ಸಂದರ್ಭದಲ್ಲಿ ಮತದಾನ ಪ್ರಕ್ರಿಯೆ ಬಗ್ಗೆಯೇ ಅನುಮಾನ ಮೂಡಿರುವುದು, ಅಮೆರಿಕದ ಮತದಾರ ಪ್ರಭುಗಳಲ್ಲಿ ಗೊಂದಲದ ವಾತಾವರಣ ಮೂಡಿಸಿದೆ.

51 ರಾಜ್ಯಗಳ ಪ್ರಜೆಗಳು ಅಮೆರಿಕ ಅಧ್ಯಕ್ಷರ ಆಯ್ಕೆಗೆ ಮತದಾನ

51 ರಾಜ್ಯಗಳ ಪ್ರಜೆಗಳು ಅಮೆರಿಕ ಅಧ್ಯಕ್ಷರ ಆಯ್ಕೆಗೆ ಮತದಾನ

ವಿಶ್ವದ ದೊಡ್ಡಣ್ಣ ಅಮೆರಿಕಾದಲ್ಲಿ 50 ರಾಜ್ಯಗಳಿದ್ದು, ವಾಶಿಂಗ್‌ಟನ್ ಡಿಸಿ ಅಮೆರಿಕದ ರಾಜಧಾನಿಯಾಗಿದೆ. ಹೀಗೆ ವಾಶಿಂಗ್‌ಟನ್ ಡಿಸಿ ಸೇರಿದಂತೆ 51 ರಾಜ್ಯಗಳ ಪ್ರಜೆಗಳು ಅಮೆರಿಕ ಅಧ್ಯಕ್ಷರ ಆಯ್ಕೆಗೆ ಮತದಾನ ಮಾಡುತ್ತಾರೆ. ಒಟ್ಟು 538 ಚುನಾಯಿತ ಪ್ರತಿನಿಧಿಗಳಿರುತ್ತಾರೆ. 538 ಪ್ರತಿನಿಧಿಗಳ ಪೈಕಿ ಪ್ರತಿ ರಾಜ್ಯವನ್ನೂ ಪ್ರತಿನಿಧಿಸಲು ಇಬ್ಬರು ಸೆನೆಟರ್‌ಗಳು ಆಯ್ಕೆಯಾಗುತ್ತಾರೆ. ಒಟ್ಟು 100 ಸೆನೆಟರ್‌ಗಳು ಆಯ್ಕೆಯಾಗುತ್ತಾರೆ. ವಾಷಿಂಗ್ಟನ್ ಡಿಸಿ ಸೇರಿದಂತೆ ಒಟ್ಟು 51 ಎಲೆಕ್ಟೊರಾಲ್ ಕಾಲೇಜುಗಳಿವೆ. ಪ್ರತಿ ರಾಜ್ಯದಲ್ಲಿ ಯಾವ ಪಕ್ಷದ ಅಭ್ಯರ್ಥಿಗೆ ಬಹುಮತ ದೊರೆಯುತ್ತದೆಯೋ ಆ ಅಭ್ಯರ್ಥಿಗೆ ರಾಜ್ಯದ ಇತರ ಎಲ್ಲ ಮತಗಳು ಒಗ್ಗೂಡುತ್ತವೆ.

ಜೋ ಬೈಡೆನ್ ಗೆದ್ರೂ ''ಕಮ್ಯೂನಿಸ್ಟ್'' ಕಮಲಾ ಅಧ್ಯಕ್ಷೆಯಾಗ್ತಾರೆ: ಟ್ರಂಪ್ಜೋ ಬೈಡೆನ್ ಗೆದ್ರೂ ''ಕಮ್ಯೂನಿಸ್ಟ್'' ಕಮಲಾ ಅಧ್ಯಕ್ಷೆಯಾಗ್ತಾರೆ: ಟ್ರಂಪ್

English summary
Many have filed lawsuits against the use of mail ballots systems in the US presidential election. Trump had previously warned of mail ballots.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X