• search
  • Live TV
ವಾಷಿಂಗ್ಟನ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಬುಧವಾರ ಜೋ ಬೈಡನ್, ಕಮಲಾ ಹ್ಯಾರಿಸ್ ಪ್ರಮಾಣವಚನ: ಸಮಯ, ವೀಕ್ಷಣೆ ವಿವರ

|

ವಾಷಿಂಗ್ಟನ್, ಜನವರಿ 19: ಅಮೆರಿಕದ 46ನೇ ಅಧ್ಯಕ್ಷರಾಗಿ ಡೆಮಾಕ್ರಟಿಕ್ ಪಕ್ಷದ ಜೋ ಬೈಡನ್ ಅವರು ಬುಧವಾರ ಅಧಿಕಾರ ಸ್ವೀಕರಿಸಲಿದ್ದಾರೆ. ಅವರ ಜತೆಗೆ ಭಾರತ ಮೂಲದ ಅಮೆರಿಕನ್ ಕಮಲಾ ಹ್ಯಾರಿಸ್ ಅವರು 49ನೇ ಉಪಾಧ್ಯಕ್ಷೆಯಾಗಿ ಪ್ರಮಾಣವಚನ ಸ್ವೀಕಾರ ಮಾಡಲಿದ್ದಾರೆ. ಅಮೆರಿಕದ ಉಪಾಧ್ಯಕ್ಷ ಸ್ಥಾನಕ್ಕೆ ಏರುತ್ತಿರುವ ಮೊದಲ ಮಹಿಳೆ ಎಂಬ ಹೆಗ್ಗಳಿಕೆ ಕಮಲಾ ಅವರದ್ದಾಗುತ್ತಿದೆ.

ಬೈಡನ್ ಮತ್ತು ಕಮಲಾ ಅವರು ಪ್ರಮಾಣವಚನ ಸ್ವೀಕರಿಸುವ ಉದ್ಘಾಟನಾ ದಿನದ ಸಂಭ್ರಮಕ್ಕೆ ಅಮೆರಿಕ ತಯಾರಿ ನಡೆಸಿದೆ. ಕೆಲವು ವಾರಗಳ ಹಿಂದೆ ಡೊನಾಲ್ಡ್ ಟ್ರಂಪ್ ಅವರ ಸೋಲನ್ನು ವಿರೋಧಿಸಿ ರಿಪಬ್ಲಿಕನ್ ಬೆಂಬಲಿಗರು ಸಂಸತ್ ಕಟ್ಟಡ ಕ್ಯಾಪಿಟಲ್ ಹಿಲ್‌ನಲ್ಲಿ ನಡೆಸಿದ ಗಲಭೆ ಹಿನ್ನೆಲೆಯಲ್ಲಿ ಉದ್ಘಾಟನಾ ದಿನಕ್ಕೆ ಭಾರಿ ಭದ್ರತೆ ನಿಯೋಜಿಸಲಾಗಿದೆ.

ಭಾರತ ಮೂಲದ ಕಮಲಾ ಜೊತೆ ಜೋ ಬೈಡನ್ ಅಧ್ಯಕ್ಷೀಯ ಪ್ರಮಾಣಭಾರತ ಮೂಲದ ಕಮಲಾ ಜೊತೆ ಜೋ ಬೈಡನ್ ಅಧ್ಯಕ್ಷೀಯ ಪ್ರಮಾಣ

ನಿರೂಪಕ ಕೆಕೆ ಪಾಲ್ಮೆರ್ ಈ ಕಾರ್ಯಕ್ರಮವನ್ನು ನಿರ್ವಹಿಸಲಿದ್ದಾರೆ. ಭಾರತೀಯರು ಜನವರಿ 20ರ ರಾತ್ರಿ 10 ಗಂಟೆಯಿಂದ (ಅಮೆರಿಕ ಕಾಲಮಾನ ಬೆಳಿಗ್ಗೆ 11.30) ಕಾರ್ಯಕ್ರಮ ವೀಕ್ಷಿಸಬಹುದು. ಅಮೆರಿಕ ರಾಷ್ಟ್ರಗೀತೆಯೊಂದಿಗೆ ಸಮಾರಂಭ ಶುರುವಾಗಲಿದೆ. ಉದ್ಘಾಟನಾ ಕಾರ್ಯಕ್ರಮದ ಮೊದಲ ನೇರ ಪ್ರಸಾರದ ಕಾರ್ಯಕ್ರಮದಲ್ಲಿ ಅಮೆರಿಕದ ಪ್ರಥಮ ಮಹಿಳೆ ಡಾ. ಜಿಲ್ ಬೈಡನ್ ಜನತೆಯನ್ನುಉದ್ದೇಶಿಸಿ ಮಾತನಾಡಲಿದ್ದಾರೆ.

ಮಧ್ಯಾಹ್ನಕ್ಕೂ ಮುನ್ನ ಕಮಲಾ ಹ್ಯಾರಿಸ್ ಅವರಿಗೆ ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಸೋನಿಯಾ ಸೊಟೊಮೇಯರ್ ಪ್ರಮಾಣವಚನ ಬೋಧಿಸುವ ನಿರೀಕ್ಷೆಯಿದೆ. ಅವರ ನಂತರ ಜೋ ಬೈಡನ್ ಅವರಿಗೆ ಮುಖ್ಯ ನ್ಯಾಯಮೂರ್ತಿ ಜಾನ್ ರಾಬರ್ಟ್ಸ್ ಪ್ರತಿಜ್ಞಾವಿಧಿ ಬೋಧಿಸಲಿದ್ದಾರೆ.

ಪ್ರಮಾಣವಚನದ ಬಳಿಕ ಬೈಡನ್ ಮತ್ತು ಕಮಲಾ ಅವರು ಶಾಂತಯುತವಾಗಿ ಅಧಿಕಾರ ಹಸ್ತಾಂತರಕ್ಕೆ ಆದ್ಯತೆ ನೀಡುವ ಸೇನಾ ಪಡೆಗಳ ಪರಾಮರ್ಶೆ ನಡೆಯಲಿದೆ.

ಜೋ ಬೈಡನ್ ಪ್ರಮಾಣವಚನಕ್ಕೂ ಮುನ್ನ ಕ್ಯಾಪಿಟಲ್ ತಾತ್ಕಾಲಿಕ ಲಾಕ್‌ಡೌನ್ಜೋ ಬೈಡನ್ ಪ್ರಮಾಣವಚನಕ್ಕೂ ಮುನ್ನ ಕ್ಯಾಪಿಟಲ್ ತಾತ್ಕಾಲಿಕ ಲಾಕ್‌ಡೌನ್

ಅಮೆರಿಕದ ಎಲ್ಲ ಪ್ರಮುಖ ಟಿವಿ ನೆಟ್ವರ್ಕ್‌ಗಳಲ್ಲಿ ಅಧ್ಯಕ್ಷೀಯ ಉದ್ಘಾಟನೆಯನ್ನು ವೀಕ್ಷಿಸಬಹುದು. ಸಿಎನ್ಎನ್, ಎಂಎಸ್‌ಎನ್‌ಬಿಸಿ, ಎಬಿಸಿ, ಸಿಬಿಎಸ್, ಪಿಬಿಎಸ್ ಮತ್ತು ಎನ್‌ಬಿಸಿಯಲ್ಲಿ ಮುಖ್ಯವಾಗಿ ನೇರಪ್ರಸಾರ ನಡೆಯಲಿದೆ.

ಹಾಗೆಯೇ ಅಮೆಜಾನ್ ಪ್ರೈಂ ವಿಡಿಯೋಸ್, ಮೈಕ್ರೋಸಾಫ್ಟ್ ಬಿಂಗ್, ನ್ಯೂಸ್ ನೌ, ಎಟಿ&ಟಿಯು ವರ್ಸ್, ಎಟಿ&ಟಿ ಡೈರೆಕ್‌ಟಿವಿಯಂತಹ ಪ್ಲಾಟ್‌ಫಾರ್ಮ್‌ಗಳಲ್ಲಿಯೂ ನೇರ ಪ್ರಸಾರವಿದೆ. ಹಾಗೆಯೇ ಬೈಡನ್ ಉದ್ಘಾಟನಾ ಸಮಿತಿಯ ಸಾಮಾಜಿಕ ಜಾಲತಾಣ ವಾಹಿನಿಗಳಲ್ಲಿ ಸಹ ವೀಕ್ಷಣೆಗೆ ಅವಕಾಶವಿದೆ.

English summary
Joe Biden and Kamala Harris Inauguration Day on Wednesday. Here is the schedule and details of streaming.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X