• search
  • Live TV
ವಾಷಿಂಗ್ಟನ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕೊಟ್ಟ ಮಾತು ಉಳಿಸಿಕೊಂಡ ಬೈಡನ್, ಸಂಪುಟದಲ್ಲಿ ಭಾರತೀಯರೇ ಮಿಂಚಿಂಗ್

|

ಚುನಾವಣೆಗೆ ಮೊದಲು ಭಾರತ ಮೂಲದವರಿಗೆ ಆದ್ಯತೆ ನೀಡುತ್ತೇನೆಂದು ಮಾತುಕೊಟ್ಟಿದ್ದ ಅಮೆರಿಕದ 46ನೇ ಅಧ್ಯಕ್ಷ ಬೈಡನ್ ಮಾತು ಉಳಿಸಿಕೊಂಡಿದ್ದಾರೆ. ಸಂಪುಟದಲ್ಲಿ 20 ಭಾರತೀಯರಿಗೆ ಅವಕಾಶ ನೀಡಿದ್ದಾರೆ. ಈ ಪೈಕಿ 17 ಖಾತೆಗಳು ಪ್ರಬಲ ಎಂದು ಕರೆಯಬಹುದಾಗಿದ್ದು ಜನವರಿ 20ರಂದು ಪ್ರಮಾಣವಚನ ನಡೆಯಲಿದೆ. ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ಮೊದಲು ಭಾರತೀಯರನ್ನ ಸೆಳೆಯಲು ಟ್ರಂಪ್ ಹಾಗೂ ಬೈಡನ್ ಮಧ್ಯೆ ದೊಡ್ಡ ಸಮರ ನಡೆದಿತ್ತು.

ಏಕೆಂದರೆ ಭಾರತೀಯರ ಬಲ ಇಲ್ಲದೆ ಚುನಾವಣೆ ಗೆಲ್ಲುವುದು ಸುಲಭವಲ್ಲ ಎಂಬ ವಿಚಾರ ಇಬ್ಬರಿಗೂ ತಿಳಿದಿತ್ತು. ಹೀಗಾಗಿ ಭಾರತೀಯರ ಮನವೊಲಿಕೆಗೆ ಸರ್ಕಸ್ ಮಾಡಿದ್ದರು. ಲಕ್ಷಲಕ್ಷ ಮತ ಮಿಸ್ ಮಾಡಬಾರದು ಅಂತಾ ಸಾಕಷ್ಟು ಪ್ಲಾನ್‌ಗಳನ್ನ ಟ್ರಂಪ್ ಮತ್ತು ಬೈಡನ್ ಮಾಡಿದ್ದರು. ಆದರೆ ಭಾರತ ಮೂಲದ ಅಮೆರಿಕನ್ನರು ಇಷ್ಟಪಟ್ಟಿದ್ದು ಬೈಡನ್ ಅವರನ್ನು. ಹೌದು ಬೈಡನ್ ಭರ್ಜರಿ ಗೆಲುವಿನ ಹಿಂದೆ ನಮ್ಮ ದೇಶದಿಂದ ವಲಸೆ ಹೋಗಿ ಅಮೆರಿಕದಲ್ಲಿ ನೆಲೆಸಿರುವವರ ಪಾಲು ದೊಡ್ಡದಿದೆ.

ಬೈಡನ್ ಪದಗ್ರಹಣಕ್ಕೆ ಸಕಲ ಸಿದ್ಧತೆ, ಮದುಮಗಳಂತೆ ಸಿಂಗಾರಗೊಳ್ಳುತ್ತಿದೆ ಸಂಸತ್

ಅಂದಹಾಗೆ ಇದೇ ಕಾರಣಕ್ಕೆ ಚುನಾವಣೆ ಸಮದಲ್ಲಿ ಬೈಡನ್ ಕೊಟ್ಟ ಮಾತನ್ನು ಉಳಿಸಿಕೊಂಡಿದ್ದಾರೆ. ಟ್ರಂಪ್ ಹೇಳಿಕೆ ಕೇವಲ ಭಾಷಣಗಳಿಗೆ ಸೀಮಿತವಾಗಿದ್ದರೆ, ಬೈಡನ್ ತಮ್ಮ ಮಾತನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಬೈಡನ್ ಸಂಪುಟದಲ್ಲಿ ಬರೋಬ್ಬರಿ 20 ಭಾರತೀಯರಿಗೆ ಅವಕಾಶ ನೀಡಿದ್ದಾರೆ.

13 ಭಾರತೀಯ ನಾರಿಯರಿಗೆ ಸ್ಥಾನ

13 ಭಾರತೀಯ ನಾರಿಯರಿಗೆ ಸ್ಥಾನ

ಬೈಡನ್ ಸಂಪುಟದ ಬಗ್ಗೆ ಅತಿಮುಖ್ಯವಾಗಿ ಹೇಳಬೇಕಾದ ಮಾತೆಂದರೆ, ಇದೀಗ 20 ಭಾರತೀಯರನ್ನು ತಮ್ಮ ಸಂಪುಟಕ್ಕೆ ಆಯ್ಕೆ ಮಾಡಿರುವ ಬೈಡನ್ ಅದರಲ್ಲಿ 13 ಭಾರತ ಮೂಲದ ಮಹಿಳೆಯರಿಗೆ ಸ್ಥಾನ ನೀಡಿದ್ದಾರೆ. ಇದು ಅಮೆರಿಕ ಇತಿಹಾಸದಲ್ಲೇ ದೊಡ್ಡ ನಿರ್ಣಯ. ಈವರೆಗೆ ಇಷ್ಟೊಂದು ಪ್ರಮಾಣದಲ್ಲಿ ಭಾರತೀಯರನ್ನು ಯಾವುದೇ ಅಮೆರಿಕನ್ ಅಧ್ಯಕ್ಷ ತನ್ನ ಸಂಪುಟಕ್ಕೆ ಸೇರಿಸಿಕೊಂಡಿರಲಿಲ್ಲ. ಆದರೆ ಭಾರತೀಯರ ಪ್ರತಿಭೆಗೆ ಈ ಬಾರಿ ಬೈಡನ್ ತಲೆಬಾಗಿದ್ದಾರೆ. ಅತ್ಯುತ್ತಮ ಸ್ಥಾನಗಳಿಗೆ ಭಾರತ ಮೂಲದವರನ್ನೇ ಆಯ್ಕೆ ಮಾಡಿದ್ದಾರೆ. ಅದರಲ್ಲೂ ಮಹಿಳೆಯರಿಗೆ ಸಾಕಷ್ಟು ಆದ್ಯತೆ ನೀಡಿರುವುದು ಜಗತ್ತಿನಾದ್ಯಂತ ಮೆಚ್ಚುಗೆಗೆ ಪಾತ್ರವಾಗುತ್ತಿದೆ.

ಕಮಲಾ ಸಾಧನೆ ಅವಿಸ್ಮರಣೀಯ

ಕಮಲಾ ಸಾಧನೆ ಅವಿಸ್ಮರಣೀಯ

ಅಮೆರಿಕ ಎಂದರೆ ಕೈಗೆಟುಕದ ಕುಸುಮ ಎಂಬ ಕಾಲವೊಂದಿತ್ತು. ಆದರೆ ಈಗ ಮಾತು ಬದಲಾಗಿದೆ. ಅದನ್ನು ಸಾಧಿಸಿದ್ದು ಕಮಲಾ ಹ್ಯಾರಿಸ್. ಭಾರತದ ತಮಿಳುನಾಡು ಮೂಲದ ನಂಟು ಹೊಂದಿರುವ ಕಮಲಾ ಹ್ಯಾರಿಸ್ ಇದೀಗ ಅಮೆರಿಕದ ಉಪಾಧ್ಯಕ್ಷೆ. ಈ ಮೂಲಕ ಅಮೆರಿಕ ಇತಿಹಾಸದಲ್ಲೇ ಮೊದಲ ಬಾರಿಗೆ ಭಾರತೀಯರಿಗೆ ಇಂತಹದ್ದೊಂದು ದೊಡ್ಡ ಅವಕಾಶ ಸಿಕ್ಕಂತಾಗಿದೆ. ಬೈಡನ್ ಗೆಲುವಲ್ಲಿ ಕಮಲಾ ಹ್ಯಾರಿಸ್ ಆಯ್ಕೆ ಪರಿಣಾಮ ದೊಡ್ಡದಿದೆ. ಹೇಗೆಂದರೆ ಕಮಲಾ ಹ್ಯಾರಿಸ್ ತಾಯಿ ಭಾರತ ಮೂಲದವರು ಹಾಗೂ ಅವರ ತಂದೆ ಜಮೈಕನ್ ಆಗಿದ್ದು, ಇದೇ ಕಾರಣಕ್ಕೆ ಒಂದು ಕಡೆ ಭಾರತೀಯರ ಮತ ಹಾಗೂ ಮತ್ತೊಂದ್ಕಡೆ ಆಫ್ರಿಕನ್-ಅಮೆರಿಕನ್ಸ್ ಮತಗಳನ್ನು ಬೈಡನ್ ಕೊಳ್ಳೆ ಹೊಡೆದರು ಎಂದು ರಾಜಕೀಯ ತಜ್ಞರು ವಿಶ್ಲೇಷಿಸಲಾಗುತ್ತಿದೆ.

46ನೇ ಅಧ್ಯಕ್ಷ ಜೋ ಬೈಡನ್

46ನೇ ಅಧ್ಯಕ್ಷ ಜೋ ಬೈಡನ್

ಟ್ರಂಪ್ ಕಟ್ಟಿದ ಮಹಾಗೋಡೆ ಛಿದ್ರ ಮಾಡಿ ನೂರಾರು ಅಡೆತಡೆಗಳ ಮಧ್ಯೆ ಜೋ ಬೈಡನ್ ಗೆದ್ದು ಬೀಗಿದ್ದಾರೆ. ಟ್ರಂಪ್ ವಿರುದ್ಧ ಭರ್ಜರಿ ಗೆಲುವು ದಾಖಲಿಸಿರುವ ಬೈಡನ್ ಪದಗ್ರಹಣಕ್ಕೆ ಸಕಲಸಿದ್ಧತೆ ನಡೆದಿದೆ. ಒಟ್ಟು 306 ಎಲೆಕ್ಟೋರಲ್ ಮತಗಳನ್ನು ಪಡೆದು ಬೈಡನ್ ಅಮೆರಿಕದ ಅಧ್ಯಕ್ಷೀಯ ಖುರ್ಚಿ ಮೇಲೆ ಕೂರುತ್ತಿದ್ದಾರೆ. ಆದ್ರೆ 232 ಎಲೆಕ್ಟೋರಲ್ ಮತ ಪಡೆದಿರುವ ಟ್ರಂಪ್ ಅಧಿಕಾರ ಬಿಟ್ಟುಕೊಡುವುದಿಲ್ಲ ಎಂದು ಹಠ ಮಾಡುತ್ತಿದ್ದಾರೆ. ಇಷ್ಟೆಲ್ಲದರ ನಡುವೆ ಅಮೆರಿಕದ 46ನೇ ಅಧ್ಯಕ್ಷರಾಗಿ ಜೋ ಬೈಡನ್ ಅಧಿಕಾರ ಸ್ವೀಕರಿಸುವುದು ಪಕ್ಕಾ ಆಗಿದೆ. ಅದಕ್ಕಾಗಿ ಭರದ ಸಿದ್ಧತೆಗಳು ಸಾಗಿವೆ.

2ನೇ ಬಾರಿಗೆ ವಾಗ್ದಂಡನೆ, ಡೊನಾಲ್ಡ್ ಟ್ರಂಪ್ ಭವಿಷ್ಯವೇನು?

ಕೊರೊನಾ ಕೂಪದಲ್ಲಿ ಅಮೆರಿಕ

ಕೊರೊನಾ ಕೂಪದಲ್ಲಿ ಅಮೆರಿಕ

ಜೋ ಬೈಡನ್ ಅಧಿಕಾರ ಸ್ವೀಕರಿಸಿದ ತಕ್ಷಣ ಅಮೆರಿಕನ್ನರ ಸಮಸ್ಯೆಗಳು ಸರಿಯಾಗುವುದಿಲ್ಲ. ಏಕೆಂದರೆ ಸದ್ಯ ಅಮೆರಿಕ ಶತಮಾನದಲ್ಲೇ ಎದುರಿಸದಷ್ಟು ಸಂಕಷ್ಟಕ್ಕೆ ಸಿಲುಕಿದೆ. ಇದನ್ನೆಲ್ಲಾ ಬಗೆಹರಿಸಲು ಹಲವು ವರ್ಷಗಳೇ ಬೇಕು. ಅದರಲ್ಲೂ ಟ್ರಂಪ್ ಅಮೆರಿಕದ ಘನತೆಗೆ ಹಾಗೂ ಅಮೆರಿಕದ ಅರ್ಥ ವ್ಯವಸ್ಥೆಗೆ ಮಾಡಿರುವ ಘಾಸಿಗೆ ಮುಲಾಮು ಹಚ್ಚಬೇಕು. ಹೀಗಾಗಿ ಬೈಡನ್‌ಗೆ ಅಮೆರಿಕ ಅಧ್ಯಕ್ಷರ ಖುರ್ಚಿ ಹೂವಿನ ಹಾಸಿಗೆ ಆಗಿರಲಾರದು, ಬದಲಾಗಿ ಮುಳ್ಳಿನ ಹಾದಿಯಾಗಲಿದೆ. ಇದನ್ನೆಲ್ಲಾ ಎದುರಿಸಿ, ಅಮೆರಿಕ ಹಾಗೂ ಅಮೆರಿಕನ್ನರನ್ನು ರಕ್ಷಿಸುವ ಹೊಣೆ ಜೋ ಬೈಡನ್ ಹೆಗಲ ಮೇಲಿದೆ.

ಶ್ವೇತಭವನದ ಸಹಾಯಕ ಪತ್ರಿಕಾ ಕಾರ್ಯದರ್ಶಿಯಾಗಿ ಭಾರತ ಮೂಲದ ವೇದಾಂತ್ ಪಟೇಲ್

English summary
Joe Biden appointed 20 Indian-Americans in administration. In that 20 positions 17 are at key post at White House.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X