ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟೆಸ್ಟಿಂಗ್ ಕಡಿಮೆ ಮಾಡಿದ್ರೆ ಕೇಸ್‌ ಇಳಿಕೆ, ಅಮೆರಿಕ ಅಧಿಕಾರಿಗಳ ವಿರುದ್ಧ ಆರೋಪ

|
Google Oneindia Kannada News

ಅಮೆರಿಕ ಅಧ್ಯಕ್ಷೀಯ ಚುನಾವಣೆ ಮತದಾನ ಅಂತ್ಯವಾಗುವ ಸಮಯದಲ್ಲೇ ವೈಟ್‌ಹೌಸ್ ಅಧಿಕಾರಿಗಳ ಬಗ್ಗೆ ಗಂಭೀರ ಆರೋಪ ಕೇಳಿಬಂದಿದೆ. ಅಮೆರಿಕದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಭಾರಿ ಪ್ರಮಾಣದಲ್ಲಿ ಏರಿಕೆ ಆಗುತ್ತಿರುವ ಹಿನ್ನೆಲೆಯಲ್ಲಿ ಅಮೆರಿಕದಲ್ಲಿ ಟೆಸ್ಟಿಂಗ್ ಸಂಖ್ಯೆ ಕಡಿತಗೊಳಿಸಿ ಎಂದು ಅಧಿಕಾರಿಗಳು ಸೂಚಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಈ ಬಗ್ಗೆ ಅಮೆರಿಕ ಮಾಧ್ಯಮಗಳು ವರದಿ ಪ್ರಕಟಿಸಿದ್ದು, ಇದು ಮತ್ತೊಂದು ವಿವಾದಕ್ಕೆ ನಾಂದಿ ಹಾಡಿದೆ. ಅಲ್ಲದೆ ಚುನಾವಣೆಯ ಮೇಲೂ ಭಾರಿ ಪ್ರಭಾವ ಬೀರುವ ಮುನ್ಸೂಚನೆ ಸಿಕ್ಕಿದೆ.

ಬಹುಶಃ 2020ರ ಅಧ್ಯಕ್ಷೀಯ ಚುನಾವಣೆ ಜಗತ್ತಿನ ಇತಿಹಾಸದಲ್ಲೇ ಅಚ್ಚಳಿಯದೆ ಉಳಿಯಲಿದೆ ಅನ್ನಿಸುತ್ತಿದೆ. ಏಕೆಂದರೆ ಅಮೆರಿಕದ ಇತಿಹಾಸದಲ್ಲಿ ಚುನಾವಣೆ ವಿಚಾರವಾಗಿ ಇಷ್ಟೊಂದು ವಿವಾದಗಳು ಹಾಗೂ ಕಿರಿಕ್‌ಗಳು ನಡೆದಿರಲೇ ಇಲ್ಲ. ಇದು ಟ್ರಂಪ್ ಕಾಲು ಗುಣವೋ, ಇಲ್ಲ ಬಿಡೆನ್ ಮಹಿಮೆಯೋ ಗೊತ್ತಿಲ್ಲ ಅಮೆರಿಕದಲ್ಲೀಗ ರಾಜಕೀಯ ಕಿಚ್ಚು ಹೊತ್ತಿದೆ. ಟ್ರಂಪ್ ಕೂಡ ತಮ್ಮ ಎಲೆಕ್ಷನ್ ಕ್ಯಾಂಪೇನ್‌ಗಳಲ್ಲಿ ಕೊರೊನಾ ವಿಚಾರವನ್ನೇ ಪ್ರಸ್ತಾಪ ಮಾಡುತ್ತಿದ್ದಾರೆ.

ಟ್ರಂಪ್ ಪ್ರಚಾರದಿಂದ 30000 ಜನರಿಗೆ ಕೊರೊನಾವೈರಸ್, 700 ಮಂದಿ ಸಾವುಟ್ರಂಪ್ ಪ್ರಚಾರದಿಂದ 30000 ಜನರಿಗೆ ಕೊರೊನಾವೈರಸ್, 700 ಮಂದಿ ಸಾವು

ಅಮೆರಿಕದಲ್ಲಿ ಸೋಂಕಿತರ ಸಂಖ್ಯೆ ಇಷ್ಟೊಂದು ಪ್ರಮಾಣದಲ್ಲಿ ಏರಿಕೆಯಾಗಲು ಕಾರಣ, ನಾವು ಅತಿ ಹೆಚ್ಚು ಟೆಸ್ಟಿಂಗ್ ಮಾಡುತ್ತಿದ್ದೇವೆ ಎಂಬುದೇ ಆಗಿದೆ ಎನ್ನುತ್ತಿದ್ದಾರೆ. ಜಗತ್ತಿನ ಯಾವುದೇ ದೇಶ ಅಮೆರಿಕದಲ್ಲಿ ನಡೆದಷ್ಟು ಪರೀಕ್ಷೆಗಳನ್ನ ನಡೆಸಿಲ್ಲ, ಹೀಗಾಗಿಯೇ ಸಹಜವಾಗಿ ಅಮೆರಿಕದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಏರಿದೆ ಎಂಬುದು ಟ್ರಂಪ್ ಸಮಜಾಯಿಷಿಯಾಗಿದೆ.

ಡಾ. ಫೌಸಿ ಜೊತೆಗೂ ಜಗಳ..!

ಡಾ. ಫೌಸಿ ಜೊತೆಗೂ ಜಗಳ..!

ವೈಟ್‌ಹೌಸ್ ಅಧಿಕಾರಿಗಳೇ ಸೋಂಕಿತರ ಪರೀಕ್ಷೆ ಕಡಿತಗೊಳಿಸುವಂತೆ ಹೇಳಿದ್ದಾರೆಂಬ ಆರೋಪ ಕೇಳಿಬಂದ ಬೆನ್ನಲ್ಲೇ, ಡಾ. ಆಂಥೋನಿ ಫೌಸಿ ಮತ್ತು ಟ್ರಂಪ್ ನಡುವಿನ ಜಗಳ ತಾರಕಕ್ಕೇರಿದೆ. ಸಾಂಕ್ರಾಮಿಕ ರೋಗಗಳ ತಜ್ಞರಾಗಿರುವ ಡಾ. ಫೌಸಿ ಆರಂಭದಲ್ಲಿ ಟ್ರಂಪ್ ಜೊತೆ ಉತ್ತಮ ಒಡನಾಟ ಹೊಂದಿದ್ದರು. ಮೊದ ಮೊದಲು ಡಾ. ಆಂಥೋನಿ ಫೌಸಿ ಹಾಗೂ ಟ್ರಂಪ್ ಜನುಮದ ಗೆಳೆಯರಂತೆ ಇದ್ದರು.

ಆದರೆ ಯಾವಾಗ ಡಾ. ಫೌಸಿ ಕೊರೊನಾ ಕುರಿತು ಸತ್ಯ ಮಾತನಾಡಲು ಶುರುಮಾಡಿದರೋ, ಆಗ ಇಬ್ಬರ ನಡುವೆ ಜಗಳ ಆರಂಭವಾಗಿತ್ತು. ಅದರಲ್ಲೂ ಟ್ರಂಪ್ ಮಾಸ್ಕ್ ಬೇಡ ಅಂತಾ, ಡಾ. ಫೌಸಿ ಮಾಸ್ಕ್ ಬೇಕೆ ಬೇಕು ಅಂತಾ. ಹೀಗೆ ‘ಕೊರೊನಾ' ಕಂಟ್ರೋಲ್ ಮಾಡುವ ವಿಚಾರದಲ್ಲಿ ಇಬ್ಬರೂ ಜಗಳ ಆಡಿಕೊಂಡಿದ್ದರು. ಇದೀಗ ಈ ಜಗಳ ಇನ್ನೊಂದು ಹಂತಕ್ಕೆ ಹೋಗಿದ್ದು, ಟ್ರಂಪ್ ತಮ್ಮ ಚುನಾವಣಾ ಪ್ರಚಾರಗಳಲ್ಲೂ ಡಾ. ಫೌಸಿ ವಿರುದ್ಧ ಗರಂ ಆಗುತ್ತಿದ್ದಾರೆ.

 ನಿನ್ನೆ ವೈದ್ಯರನ್ನೂ ಬೈದಿದ್ದ ಟ್ರಂಪ್..!

ನಿನ್ನೆ ವೈದ್ಯರನ್ನೂ ಬೈದಿದ್ದ ಟ್ರಂಪ್..!

ಶನಿವಾರ ಚುನಾವಣಾ ಪ್ರಚಾರ ನಡೆಸುತ್ತಿದ್ದ ಟ್ರಂಪ್, ದಿಢೀರ್ ಅಮೆರಿಕದ ವೈದ್ಯರ ಮೇಲೆ ಕೋಪಗೊಂಡು, ಅವರ ವಿರುದ್ಧ ಗಂಭೀರ ಆರೋಪ ಮಾಡಿದ್ದರು. ಕೊರೊನಾ ಸೋಂಕಿನಿಂದ ಅಮೆರಿಕನ್ನರು ಪ್ರಾಣಬಿಡುತ್ತಿದ್ದರೆ ವೈದ್ಯರು ದುಡ್ಡು ಮಾಡುತ್ತಿದ್ದಾರೆ ಅಂತಾ ಆರೋಪಿಸಿದ್ದರು ಟ್ರಂಪ್. 2020ರ ಅಧ್ಯಕ್ಷೀಯ ಚುನಾವಣೆ 3ನೇ ಡಿಬೆಟ್‌ನಲ್ಲೂ ಟ್ರಂಪ್ ಇದೇ ರೀತಿ ಹೇಳಿಕೆ ನೀಡಿದ್ದರು. ನಾನು ಹೇಳುತ್ತಿದ್ದೇನೆ ಕೊರೊನಾ ತೊಲಗುತ್ತಿದೆ, ಕೊರೊನಾ ತೊಲಗುತ್ತಿದೆ ಅಂತಾ. ಕೊರೊನಾ ಇನ್ನುಮುಂದೆ ಇರಲು ಸಾಧ್ಯವಿಲ್ಲ ಎಂದು ಉದ್ಘರಿಸಿದ್ದರು.

ಕೊರೊನಾ ಹೆಣದ ಮೇಲೆ ವೈದ್ಯರು ದುಡ್ಡು ಮಾಡ್ತಿದ್ದಾರೆ: ಟ್ರಂಪ್ ಆರೋಪಕೊರೊನಾ ಹೆಣದ ಮೇಲೆ ವೈದ್ಯರು ದುಡ್ಡು ಮಾಡ್ತಿದ್ದಾರೆ: ಟ್ರಂಪ್ ಆರೋಪ

ಇದಾದ ಬಳಿಕ, ಅಂದರೆ ಮರುದಿನವೇ ಅಮೆರಿಕ ಕೊರೊನಾ ಸೋಂಕಿತರ ವಿಚಾರದಲ್ಲಿ ಮತ್ತೊಂದು ದಾಖಲೆ ಬರೆದಿತ್ತು. ಒಂದೇ ದಿನದಲ್ಲಿ 83 ಸಾವಿರ ಜನರಿಗೆ ಸೋಂಕು ತಗುಲಿತ್ತು. ಹೀಗೆ ಟ್ರಂಪ್ ಕೊರೊನಾ ಸೋಂಕು ನಿಭಾಯಿಸುವ ವಿಚಾರದಲ್ಲಿ ಎಡವಟ್ಟು ಮಾಡಿಕೊಂಡಿದ್ದಲ್ಲದೆ ಕೊರೊನಾ ಬಗ್ಗೆ ಮಾತನಾಡುವಾಗಲೂ ಹೀಗೆ ನಾನಾ ರೀತಿಯಲ್ಲಿ ಇಕ್ಕಟ್ಟಿಗೆ ಸಿಲುಕುತ್ತಿದ್ದಾರೆ. ಇದು ಸಾಲದು ಎಂಬಂತೆ ಟ್ರಂಪ್ ಸರ್ಕಾರದ ಅಧಿಕಾರಿಗಳು ಕೂಡ ದೊಡ್ಡ ಎಡವಟ್ಟು ಮಾಡಿಕೊಂಡಿರುವ ಆರೋಪ ಕೇಳಿಬಂದಿದೆ.

ಮಾಸ್ಕ್ ವಿಚಾರಕ್ಕೆ ಮಹಾಯುದ್ಧ..!

ಮಾಸ್ಕ್ ವಿಚಾರಕ್ಕೆ ಮಹಾಯುದ್ಧ..!

ಅಮೆರಿಕದಲ್ಲಿ 2020ರ ಚುನಾವಣೆ ಮಾಸ್ಕ್ ಹಾಕುವವರು ಹಾಗೂ ಮಾಸ್ಕ್ ಹಾಕದೇ ಇರುವವರ ನಡುವಿನ ಮಹಾಯುದ್ಧವಾಗಿ ಮಾರ್ಪಟ್ಟಿದೆ. ಟ್ರಂಪ್ ಮತ್ತು ಬೆಂಬಲಿಗರು ಮಾಸ್ಕ್ ತೊಡುವ ವಿಚಾರಕ್ಕೆ ವಿರೋಧವನ್ನ ತೋರುತ್ತಾ ಬಂದಿದ್ದರೆ, ಬಿಡೆನ್ ಮತ್ತು ಡೆಮಾಕ್ರಟಿಕ್ ನಾಯಕರು ಮಾಸ್ಕ್ ಕಡ್ಡಾಯ ಮಾಡಿ ಎನ್ನುತ್ತಿದ್ದಾರೆ. ಆದರೆ ಟ್ರಂಪ್ ಮಾತ್ರ ಮಾಸ್ಕ್ ವಿಚಾರವಾಗಿ ಬಾಯಿಗೆ ಬಂದಂತೆ ಹೇಳಿಕೆ ನೀಡಿದ್ದರು.

ಕೊರೊನಾ ವಿರುದ್ಧ ಮಾಸ್ಕ್ ಉಪಯೋಗಕ್ಕೆ ಬರುವುದಿಲ್ಲ ಎಂಬ ಅರ್ಥದಲ್ಲಿ ಹೇಳಿಕೆಗಳನ್ನ ನೀಡಿದ್ದರು. ಕಡೆಗೆ ಟ್ರಂಪ್‌ಗೂ ಡೆಡ್ಲಿ ಕೊರೊನಾ ವಕ್ಕರಿಸುವುದಕ್ಕೂ ಕೆಲವುದಿನಗಳ ಹಿಂದೆ ಆಘಾತಕಾರಿ ಘಟನೆ ನಡೆದಿತ್ತು. ಅಧಿಕೃತ ನಿವಾಸವಾದ ವೈಟ್‌ಹೌಸ್‌ನಲ್ಲಿ ಟ್ರಂಪ್ ಆಯೋಜಿಸಿದ್ದ ಸಭೆಯಲ್ಲಿ ಮಾಸ್ಕ್ ತೊಡದೆ ಅಧಿಕಾರಿಗಳು ಹಾಗೂ ರಾಜಕೀಯ ನಾಯಕರು ಹಗ್ ಕೊಟ್ಟಿದ್ದರು. ಈ ವೀಡಿಯೋ ಇವತ್ತಿಗೂ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗುತ್ತಿದೆ.

ಕೆಲವು ಹೇಳಿಕೆಗಳಿಂದ ಹಲವು ವಿವಾದ..!

ಕೆಲವು ಹೇಳಿಕೆಗಳಿಂದ ಹಲವು ವಿವಾದ..!

ಟ್ರಂಪ್‌ಗೂ ಹಾಗೂ ಕೊರೊನಾ ವಿವಾದಗಳಿಗೂ ಅವಿನಾಭಾವ ಸಂಬಂಧ ಇರುವಂತೆ ಕಾಣುತ್ತಿದೆ. ಏಕೆಂದರೆ ಟ್ರಂಪ್ ಹೀಗೆ ಕೊರೊನಾ ವಿಚಾರವಾಗಿ ವಿವಾದ ಮೈಮೇಲೆ ಎಳೆದುಕೊಳ್ಳುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆ ಕೂಡ ಹಲವು ಸಂದರ್ಭಗಳಲ್ಲಿ ಕೊರೊನಾ ಕುರಿತು ಟ್ರಂಪ್ ಕೊಟ್ಟ ಹೇಳಿಕೆಗಳು ಭಾರಿ ವಿವಾದ ಸೃಷ್ಟಿ ಮಾಡಿದ್ದವು.

ಅಮೆರಿಕದಲ್ಲಿ ಎಲ್ಲಾ ಸರಿದಾರಿಗೆ ಬರಲು 2 ವರ್ಷ ಬೇಕು: ಆಂಥೋನಿ ಫೌಸಿಅಮೆರಿಕದಲ್ಲಿ ಎಲ್ಲಾ ಸರಿದಾರಿಗೆ ಬರಲು 2 ವರ್ಷ ಬೇಕು: ಆಂಥೋನಿ ಫೌಸಿ

ಅದರಲ್ಲೂ ಕ್ರಿಮಿ ನಾಶಕ ವಿಷವನ್ನು ಕೊರೊನಾ ಸೋಂಕಿತರ ದೇಹಕ್ಕೆ ಚುಚ್ಚಬಹುದು ಅಥವಾ ನೇರಳಾತೀತ ಕಿರಣಗಳನ್ನು ಸೋಂಕಿತರ ದೇಹದ ಮೇಲೆ ಬಿಟ್ಟರೆ ಕೊರೊನಾ ಸಾಯುತ್ತೆ ಎಂದಿದ್ದ ಮಿ. ಟ್ರಂಪ್ ಊಹೆಗಳು ಸಂಚಲನ ಸೃಷ್ಟಿಸಿತ್ತು. ಎಲೆಕ್ಷನ್ ಡಿಬೆಟ್ ವೇಳೆ ಅಮೆರಿಕದಲ್ಲಿ ಕೊರೊನಾ ಪ್ರಭಾವದ ಬಗ್ಗೆ ಪ್ರಶ್ನೆ ಎದ್ದಾಗ, ಕೊರೊನಾ ತೊಲಗುತ್ತಿದೆ ಎನ್ನುವ ಮೂಲಕ ಟ್ರಂಪ್ ಆಕ್ರೋಶಕ್ಕೆ ತುತ್ತಾಗಿದ್ದರು.

ಟ್ರಂಪ್ ಕೂಡ ‘ಸೂಪರ್ ಸ್ಪ್ರೆಡ್ಡರ್’..?

ಟ್ರಂಪ್ ಕೂಡ ‘ಸೂಪರ್ ಸ್ಪ್ರೆಡ್ಡರ್’..?

ಕೊರೊನಾ ಸೋಂಕಿತ ವ್ಯಕ್ತಿಯೊಬ್ಬ ಮತ್ತೊಬ್ಬ ವ್ಯಕ್ತಿಗೆ ಸೋಂಕು ಹರಡುವುದನ್ನು ಅಳೆದು, ತೂಗಿ ‘ಸೂಪರ್ ಸ್ಪ್ರೆಡ್ಡರ್' ಪಟ್ಟ ನೀಡಲಾಗುತ್ತದೆ. ಸೋಂಕಿತ ವ್ಯಕ್ತಿಯೊಬ್ಬ ತನ್ನಿಂದ ಹಲವರಿಗೆ ಸೋಂಕು ಮೆತ್ತಿಸಿದ್ದರೆ ಆತನನ್ನು ‘ಸೂಪರ್ ಸ್ಪ್ರೆಡ್ಡರ್' ಎನ್ನಲಾಗುತ್ತದೆ. ಟ್ರಂಪ್‌ಗೂ ಈ ಪಟ್ಟ ಸಿಕ್ಕಿದ್ದು, ವಿಪಕ್ಷವಾದ ಡೆಮಾಕ್ರಟಿಕ್ ನಾಯಕರು ಟ್ರಂಪ್ ‘ಸೂಪರ್ ಸ್ಪ್ರೆಡ್ಡರ್' ಎಂದು ಆರೋಪಿಸುತ್ತಿದ್ದಾರೆ.

ಡೊನಾಲ್ಡ್ ಟ್ರಂಪ್ ಸೋಲುವುದು ಗ್ಯಾರಂಟಿ: ಅಮೆರಿಕದ ‘ನಾಸ್ಟ್ರಡಾಮಸ್'ಡೊನಾಲ್ಡ್ ಟ್ರಂಪ್ ಸೋಲುವುದು ಗ್ಯಾರಂಟಿ: ಅಮೆರಿಕದ ‘ನಾಸ್ಟ್ರಡಾಮಸ್'

ಸ್ವತಃ ಒಬಾಮಾ ಕೂಡ ಟ್ರಂಪ್ ಒಬ್ಬ ‘ಸೂಪರ್ ಸ್ಪ್ರೆಡ್ಡರ್' ಎನ್ನುವ ಧಾಟಿಯಲ್ಲೇ ಮಾತನಾಡಿದ್ದನ್ನು ಸ್ಮರಿಸಬಹುದು. ಅಮೆರಿಕ ಅಧ್ಯಕ್ಷರ ಅಧಿಕೃತ ನಿವಾಸವಾದ ವೈಟ್‌ಹೌಸ್‌ನಲ್ಲಿ ಟ್ರಂಪ್‌ಗೆ ಸೋಂಕು ವಕ್ಕರಿಸಿದ ಬಳಿಕ, ವೈಟ್‌ಹೌಸ್‌ನ ಅನೇಕರಿಗೆ ಕೊರೊನಾ ತಗುಲಿತ್ತು. ಟ್ರಂಪ್ ಅವರಿಂದಲೇ ವೈಟ್‌ಹೌಸ್‌ನಲ್ಲಿ ಹಲವರಿಗೆ ಕೊರೊನಾ ತಗುಲಿದೆ ಎಂಬುದು ಬಿಡೆನ್, ಒಬಾಮಾ ಸೇರಿದಂತೆ ಹಲವು ನಾಯಕರು ಗಂಭೀರ ಆರೋಪ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು.

Recommended Video

Modi ಯಿಂದ ಭಾರತೀಯರಿಗೆ ಮತ್ತೊಂದು Gift | Oneindia Kannada

English summary
Allegations that authorities have instructed to cut the Corona Test in the United States. This has sparked controversy about the pandemic.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X