ಪತಿಯೇ ಕೊಲೆಗಾರ! ಅಮೆರಿಕದಲ್ಲಿ ನಾಲ್ವರು ಭಾರತೀಯರ ಕೊಲೆಗೆ ರೋಚಕ ತಿರುವು

ಅಯೋವಾ(ಅಮೆರಿಕ), ಜೂನ್ 18: ಅಮೆರಿಕದ ವೆಸ್ಟ್ ಡೆಸ್ ಮೊಯ್ನಿಸ್ ನಲ್ಲಿರುವ ಮನೆಯೊಂದರಲ್ಲಿ ನಾಲ್ವರು ಭಾರತೀಯರನ್ನು ಗುಂಡಿಕ್ಕಿ ಕೊಂದ ಘಟನೆಗೆ ರೋಚಕ ತಿರುವು ಲಭಿಸಿದೆ.

ಪತ್ನಿ ಮತ್ತು ಮಕ್ಕಳನ್ನು ಸ್ವತಃ ಪತಿಯೇ ಗುಂಡಿಕ್ಕಿ ಕೊಂದು, ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆಂಬ ಆಘಾತಕಾರಿ ಮಾಹಿತಿ ತನಿಖೆಯ ಸಂದರ್ಭದಲ್ಲಿ ಪೊಲೀಸರಿಗೆ ಲಭ್ಯವಾಗಿದೆ.

ಈ ಘಟನೆ ಜೂನ್ 15 ರಂದು ಶನಿವಾರವೇ ನಡೆದಿದ್ದು, ಸತ್ತವರನ್ನು ಆಂಧ್ರ ಪ್ರದೇಶ ಮೂಲದ ಚಂದ್ರಶೇಖರ ಸುಂಕರ(44), ಲಾವಣ್ಯ(41) ಮತ್ತು ಈ ದಂಪತಿಯ ಇಬ್ಬರು ಮಕ್ಕಳು ಎಂದು ಗುರುತಿಸಲಾಗಿತ್ತು.

Indian American man commits suicide after killing his wife and children

ಚಂದ್ರಶೇಖರ್ ಸುಂಕರ ಅವರು ಅಯೋವಾದಲ್ಲಿ ಸಾರ್ವಜನಿಕ ಸುರಕ್ಷತೆ ಇಲಾಖೆಯ ಟೆಕ್ನಾಲಜಿ ಸರ್ವೀಸ್ ಬ್ಯೂರೋದಲ್ಲಿ ಕೆಲಸ ಮಾಡುತ್ತಿದ್ದರು. ಅವರ ಪತ್ನಿ ಲಾವಣ್ಯ ಸುಂಕರ ಅವರು ಸಾಫ್ಟ್ ವೇರ್ ಇಂಜಿನಿಯರ್ ಆಗಿದ್ದರು. ಹಲವು ವರ್ಷಗಳಿಂದ ಅಮೆರಿಕದಲ್ಲೇ ವಾಸವಿದ್ದ ಚಂದ್ರಶೇಖರ್ ಅವರು ಯಾವ ಕಾರಣಕ್ಕಾಗಿ ಕೊಲೆ ಮಾಡಿದ್ದಾರೆ ಎಂಬ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.

ನಾಲ್ವರ ಸಾವಿಗೂ ಗುಂಡಿನ ದಾಳಿಯೇ ಕಾರಣ ಎಂದು ಮರಣೋತ್ತರ ಪರೀಕ್ಷೆಯಲ್ಲಿ ತಿಳಿಸಲಾಗಿದೆ. ಆದರೆ ಪೊಲೀಸರು ಹೇಳುವ ಪ್ರಕಾರ ಮೇಲ್ನೋಟದ ತನಿಖೆಯಲ್ಲಿ, ಲಾವಣ್ಯ ಮತ್ತು ಮಕ್ಕಳ ದೇಹದ ಗುಂಡಿನ ಕಲೆಗಳನ್ನು ನೋಡಿದರೆ ಅದು ಬೇರೊಬ್ಬ ವ್ಯಕ್ತಿಯೇ ಕೊಲೆ ಮಾಡಿದ್ದು ಎಂಬುದು ಸ್ಪಷ್ಟವಾಗುತ್ತದೆ. ಆದರೆ ಚಂದ್ರಶೇಖರ್ ಅವರ ದೇಹದಲ್ಲಿರುವ ಗುಂಡಿನ ಕಲೆಗಳು ಅದು ಆತ್ಮಹತ್ಯೆ ಎನ್ನುವಂತೆ ತೋರುತ್ತಿದೆ ಎಂದಿದ್ದಾರೆ.

ಅಮೆರಿಕದಲ್ಲಿ ವಾಸಿಸುತ್ತಿರುವ ಭಾರತೀಯ ಸಮುದಾಯದಲ್ಲಿ ಇಂಥ ಘಟನೆ ಹಿಂದೆಂದೂ ನಡೆದಿರಲಿಲ್ಲ, ಕುಟುಂಬಸ್ಥರೇ ಮಿಕ್ಕವರನ್ನೆಲ್ಲ ಕೊಂದು, ತಾವು ಆತ್ಮಹತ್ಯೆ ಮಾಡಿಕೊಳ್ಳುವ ಹೀನಾತಿಹೀನ ಘಟನೆ ಇದೇ ಮೊದಲು ಎಂದು ಸುಂಕರ ಅವರ ಆಪ್ತರೊಬ್ಬರು ಹೇಳಿದ್ದಾರೆ. ನಮಗೆ ಸುಂಕರ ಅವರ ಪರಿಚಯವಿತ್ತು. ಆದರೆ ಇಂಥ ಹೆಜ್ಜೆ ಇಡುವಂಥ ಯಾವುದೇ ಮಾತುಗಳನ್ನೂ, ಸೂಚನೆಯನ್ನೂ ಅವರು ನೀಡಲಿರಲಿಲ್ಲ. ನಮಗೆ ಈ ಘಟನೆಯಲ್ಲಿ ಉತ್ತರಕ್ಕಿಂತ ಪ್ರಶ್ನೆಗಳೇ ಹೆಚ್ಚು ಕಾಣಿಸುತ್ತಿವೆ ಎಂದು ಅವರು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+