• search
 • Live TV
ವಾಷಿಂಗ್ಟನ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ವಿಶ್ವದ ಪ್ರಜಾಪ್ರಭುತ್ವ ರಾಷ್ಟ್ರಗಳಿಗೆ ಶಕ್ತಿ ತುಂಬಲು ಬೈಡನ್ ಮಂತ್ರ!

|

ವಾಶಿಂಗ್ಟನ್, ನವೆಂಬರ್.08: ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾದ ಅಧ್ಯಕ್ಷ ಜೋ ಬಿಡೆನ್ ಚುನಾಯಿತರಾದ ಮೊದಲ ವರ್ಷದಲ್ಲಿಯೇ ವಿಶ್ವದ ಪ್ರಜಾಪ್ರಭುತ್ವ ರಾಷ್ಟ್ರಗಳನ್ನು ಒಟ್ಟುಗೂಡಿಸುವ ಕಾರ್ಯಕ್ಕೆ ನಾಂದಿ ಹಾಡಿದ್ದಾರೆ. ಪ್ರಜಾಪ್ರಭುತ್ವ ರಾಷ್ಟ್ರಗಳನ್ನು ಒಂದು ಕಡೆ ಸೇರಿಸುವ ಜಾಗತಿಕ ಶೃಂಗಸಭೆ ಆಯೋಜಿಸಲು ಬಿಡೆನ್ ಮುಂದಾಗಿದ್ದಾರೆ.

   Joe Biden ಅಧ್ಯಕ್ಷರಾಗುತ್ತಿದ್ದ ಹಾಗೆಯೇ ಭಾರತೀಯರಿಗೆ ಸಂತಸದ ಸುದ್ದಿ | Oneindia Kannada

   ಅಮೆರಿಕಾ ಅಧ್ಯಕ್ಷೀಯ ಚುನಾವಣಾ ಪ್ರಚಾರ ಸಂದರ್ಭದಲ್ಲಿ ಪ್ರಜಾಪ್ರಭುತ್ವ ರಾಷ್ಟ್ರಗಳನ್ನು ಒಂದುಗೂಡಿಸುವ ಕಾರ್ಯ ಮಾಡುವುದಾಗಿ ಆಶ್ವಾಸನೆ ನೀಡಿದ್ದರು. ಬಿಡೆನ್ ಜಾಗತಿಕ ಶೃಂಗಸಭೆಯಲ್ಲಿ ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ಎನಿಸಿರುವ ಭಾರತವು ಪ್ರಮುಖ ಪಾತ್ರ ವಹಿಸಲಿದೆ.

   ಸೋತರೂ ಸುಮ್ಮನಾಗದ ಟ್ರಂಪ್ ಟ್ವೀಟ್ ರಂಪಾಟ ಶುರು

   ಶನಿವಾರವಷ್ಟೇ ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾ ಚುನಾವಣೆಯಲ್ಲಿ 290 ಮತಗಳನ್ನು ಪಡೆದ ಡೆಮಾಕ್ರೆಟಿಕ್ ಪಕ್ಷದ ಜೋ ಬಿಡನ್ ದೇಶದ 46ನೇ ಅಧ್ಯಕ್ಷರಾಗಿ ಆಯ್ಕೆಯಾದರು. ಭಾರತೀಯ ಮೂಲದ ಡೆಮಾಕ್ರೆಟಿಕ್ ಪಕ್ಷದ ಕಮಲಾ ಹ್ಯಾರಿಸ್ ಅಮೆರಿಕಾದ ಉಪಾಧ್ಯಕ್ಷರಾಗಿ ಆಯ್ಕೆ ಆಗಿದ್ದಾರೆ. ಬಿಡೆನ್ ವಿರುದ್ಧ ಸ್ಪರ್ಧಿಸಿದ್ದ ರಿಪಬ್ಲಿಕನ್ ಪಕ್ಷದ ಡೊನಾಲ್ಡ್ ಟ್ರಂಪ್ ತೀವ್ರ ಮುಖಭಂಗ ಅನುಭವಿಸಿದ್ದರು.

   ವಿಶ್ವದ ರಾಷ್ಟ್ರಗಳನ್ನು ಬಲಪಡಿಸುವ ಉದ್ದೇಶ

   ವಿಶ್ವದ ರಾಷ್ಟ್ರಗಳನ್ನು ಬಲಪಡಿಸುವ ಉದ್ದೇಶ

   ಯುಎಸ್ಎ ಅಧ್ಯಕ್ಷ ಜೋ ಬಿಡೆನ್ ತಾವು ಆಯ್ಕೆಯಾದ ಮೊದಲ ವರ್ಷದಲ್ಲಿ ಜಗತ್ತಿನ ಪ್ರಜಾಪ್ರಭುತ್ವ ರಾಷ್ಟ್ರಗಳನ್ನು ಬಲಪಡಿಸುವ ಪ್ರಾಮಾಣಿಕ ಪ್ರಯತ್ನವನ್ನು ಮಾಡುತ್ತೇವೆ ಎಂದು ಪ್ರಚಾರದ ಸಂದರ್ಭದಲ್ಲಿ ಆಶ್ವಾಸನೆ ನೀಡಿದ್ದರು. ವಿಶ್ವದ ಸ್ವತಂತ್ರ್ಯ ಹಾಗೂ ಪ್ರಜಾಪ್ರಭುತ್ವ ರಾಷ್ಟ್ರಗಳಲ್ಲಿ ಹೊಸ ಉತ್ಸಾಹ, ಚೈತನ್ಯ ತುಂಬುವ ಉದ್ದೇಶದಿಂದ ಪ್ರಜಾಪ್ರಭುತ್ವ ರಾಷ್ಟ್ರಗಳ ಜಾಗತಿಕ ಶೃಂಗಸಭೆಯನ್ನು ಆಯೋಜಿಸಲು ಜೋ ಬಿಡೆನ್ ತೀರ್ಮಾನಿಸಿದ್ದಾರೆ.

   ದೇಶದ ಮೂರು ಕ್ಷೇತ್ರಗಳ ಮೇಲೆ ಹೆಚ್ಚಿನ ನಿಗಾ

   ದೇಶದ ಮೂರು ಕ್ಷೇತ್ರಗಳ ಮೇಲೆ ಹೆಚ್ಚಿನ ನಿಗಾ

   ಅಮೆರಿಕಾ ಅಧ್ಯಕ್ಷ ಜೋ ಬಿಡೆನ್ ಆಯೋಜಿಸುತ್ತಿರುವ ಜಾಗತಿಕ ಶೃಂಗಸಭೆಯಲ್ಲಿ ಪ್ರಮುಖವಾಗಿ ಮೂರು ಕ್ಷೇತ್ರಗಳ ಮೇಲೆ ಹೆಚ್ಚಿನ ಆದ್ಯತೆ ಮತ್ತು ಲಕ್ಷ್ಯವನ್ನು ನೀಡಲಾಗುತ್ತದೆ. ಈ ಮೂರು ಕ್ಷೇತ್ರಗಳ ಉನ್ನತೀಕರಣದ ಬಗ್ಗೆ ಶೃಂಗಸಭೆಯಲ್ಲಿ ಎಲ್ಲ ರಾಷ್ಟ್ರಗಳ ಜೊತೆಗೆ ಚರ್ಚಿಸಲಾಗುತ್ತದೆ. ಆ ಮೂರು ಕ್ಷೇತ್ರಗಳು ಯಾವುವು ಎನ್ನುವುದರ ಪಟ್ಟಿ ಇಲ್ಲಿದೆ.

   1. ಭ್ರಷ್ಟಾಚಾರದ ವಿರುದ್ಧ ಹೋರಾಟ

   2. ಚುನಾವಣಾ ಭದ್ರತೆ ಸೇರಿದಂತೆ ಸರ್ವಾಧಿಕಾರದಿಂದ ದೇಶವನ್ನು ರಕ್ಷಿಸುವುದು

   3. ರಾಷ್ಟ್ರ ಮತ್ತು ವಿದೇಶಗಳಲ್ಲಿ ಮಾನವ ಹಕ್ಕುಗಳನ್ನು ಅತ್ಯಾಧುನಿಕರಣಗೊಳಿಸುವುದು

   ಖಾಸಗಿ ವಲಯಗಳಲ್ಲಿ ಬದ್ಧತೆ ತೋರುವ ಬಗ್ಗೆ ಲಕ್ಷ್ಯ

   ಖಾಸಗಿ ವಲಯಗಳಲ್ಲಿ ಬದ್ಧತೆ ತೋರುವ ಬಗ್ಗೆ ಲಕ್ಷ್ಯ

   ತಂತ್ರಜ್ಞಾನ ಹಾಗೂ ದೈತ್ಯ ಮಾಧ್ಯಮಗಳು ಸೇರಿದಂತೆ ಖಾಸಗಿ ವಲಯಗಳಲ್ಲಿ ಸಂಸ್ಥೆಗಳು ತಮ್ಮ ಜವಾಬ್ದಾರಿ ಮತ್ತು ಹೊಣೆಯನ್ನು ಅರಿತು ನಡೆಯಬೇಕು. ಪ್ರಜಾಪ್ರಭುತ್ವ ರಾಷ್ಟ್ರಗಳಲ್ಲಿ ಲಾಭ ಪಡೆಯುವ ತಂತ್ರಜ್ಞಾನ ಕಂಪನಿಗಳು ತಮ್ಮ ಜವಾಬ್ದಾರಿ ಮತ್ತು ಬದ್ಧತೆಗಳನ್ನು ಪ್ರದರ್ಶಿಸಬೇಕು. ಪ್ರಜಾಪ್ರಭುತ್ವ ರಾಷ್ಟ್ರಗಳಲ್ಲಿ ದಬ್ಬಾಳಿಕೆ ನೀತಿ ಹಾಗೂ ದ್ವೇಷವನ್ನು ಹರಡುವ ಮತ್ತು ಜನರ ಮೇಲೆ ಹಿಂಸಾಚಾರಕ್ಕೆ ಪ್ರಚೋದನೆ ನೀಡುವಂತಾ ಘಟನೆಗಳು ತೀರಾ ವಿರಳವಾಗಿರುತ್ತವೆ.

   ಯುರೋಪಿಯನ್ ರಾಷ್ಟ್ರಗಳಲ್ಲಿ ನಕಲಿ ವಸ್ತುಗಳು!

   ಯುರೋಪಿಯನ್ ರಾಷ್ಟ್ರಗಳಲ್ಲಿ ನಕಲಿ ವಸ್ತುಗಳು!

   ಯುರೋಪಿನಾದ್ಯಂತ ನಕಲಿ ವಸ್ತುಗಳು ಮತ್ತು ಕದ್ದ ವಸ್ತುಗಳ ಮಾರಾಟಕ್ಕೆ ಕಡಿವಾಣ ಹಾಕಬೇಕಿದೆ. ಈ ನಿಟ್ಟಿನಲ್ಲಿ ಒಪ್ಪಂದಕ್ಕೆ ಅಂಕಿತ ಹಾಕುವಂತೆ ಜಾಗತಿಕ ಆಯೋಗವು ಯುರೋಪಿಯನ್ ರಾಷ್ಟ್ರಗಳ ನಾಯಕರಿಗೆ ಪ್ರಶ್ನೆ ಮಾಡಿತ್ತು. ಇಂದು ಅಮೆರಿಕಾ ಅಧ್ಯಕ್ಷರಾದ ಬಿಡೆನ್ ಈ ಒಪ್ಪಂದಕ್ಕೆ ಅಂಕಿತ ಹಾಕುವುದಾಗಿ ಹೇಳಿದ್ದಾರೆ. ಅಲ್ಲದೇ ಎಲ್ಲ ರಾಷ್ಟ್ರಗಳ ಅಧ್ಯಕ್ಷರು ಈ ಒಪ್ಪಂದಕ್ಕೆ ಸಹಿ ಮಾಡುವಂತೆ ಕರೆ ನೀಡಿದ್ದಾರೆ. ಶೃಂಗಸಭೆ ಆರಂಭಕ್ಕೂ ಮೊದಲೇ ಪ್ರಜಾಪ್ರಭುತ್ವ ರಾಷ್ಟ್ರಗಳಿಗೆ ಶಕ್ತಿ ತುಂಬುವ ನಿಟ್ಟಿನಲ್ಲಿ ಬಿಡೆನ್ ಹೆಜ್ಜೆ ಇಟ್ಟಿದ್ದಾರೆ.

   English summary
   India Also Play A Crucial Part In Global Summit for Democracy Organized By US President Biden.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X