• search
 • Live TV
ವಾಷಿಂಗ್ಟನ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೊರೊನಾ ಸೋಂಕನ್ನು ಪರಿಣಾಮಕಾರಿಯಾಗಿ ತಡೆಗಟ್ಟಬಲ್ಲ ಔಷಧ ಸಂಶೋಧನೆ

|
Google Oneindia Kannada News

ನವದೆಹಲಿ, ಮೇ 31: ಕೊರೊನಾ ಸೋಂಕನ್ನು ಪರಿಣಾಮಕಾರಿಯಾಗಿ ತಡೆಗಟ್ಟಬಲ್ಲ ಔಷಧವನ್ನು ಕಂಡುಹಿಡಿಯಲಾಗಿದೆ.

ಕೋವಿಡ್ ಇರುವ ಇಲಿಗಳಲ್ಲಿ ಸಾರ್ಸ್ ಕೋವ್ 2 ಮಾದರಿಯ ವೈರಸ್‌ನ್ನು ಪರಿಣಾಮಕಾರಿಯಾಗಿ ತಡೆಗಟ್ಟಬಲ್ಲ ಔಷಧವೊಂದನ್ನು ವಿಜ್ಞಾನಿಗಳು ಆವಿಷ್ಕರಿಸಿದ್ದಾರೆ.

ಚೀನಾದ ಪ್ರಯೋಗಾಲಯದಿಂದಲೇ ಕೊರೊನಾ ವೈರಸ್ ಸೋರಿಕೆ: ಬ್ರಿಟನ್ಚೀನಾದ ಪ್ರಯೋಗಾಲಯದಿಂದಲೇ ಕೊರೊನಾ ವೈರಸ್ ಸೋರಿಕೆ: ಬ್ರಿಟನ್

ಇಷ್ಟೇ ಅಲ್ಲದೆ, ಉಸಿರಾಟ ವ್ಯವಸ್ಥೆ ಮೇಲೆ ದಾಳಿ ಮಾಡುವ ಇತರೆ ಕೊರೊನಾ ವೈರಸ್‌ಗಳ ಮೇಲೂ ಇದು ಪರಿಣಾಮಕಾರಿಯಾಗಿ ಕೆಲಸ ಮಾಡಲಿದೆ.ಒಂದೇ ಡೋಸ್ ಔಷಧಿಯು ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿರುವುದು ಅಧ್ಯಯನದಿಂದ ತಿಳಿದುಬಂದಿದೆ. ದಕ್ಷಿಣ ಆಫ್ರಿಕಾದ ಮಾದರಿಯ ಕೊರೊನಾ ವೈರಸ್ ತಳಿಯನ್ನೂ ಈ ಔಷಧ ನಿಯಂತ್ರಿಸುವಲ್ಲಿ ಯಶಸ್ವಿಯಾಗಿದೆ ಎಂದು ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯದ ಪ್ರಾಧ್ಯಾಪಕಿ ಸಾರಾ ಚೆರಿ ಹೇಳಿದ್ದಾರೆ.

ಅಮೆರಿಕದ ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯದ ಪೆರೆಲ್ಮನ್ ಸ್ಕೂಲ್ ಆಫ್ ಮೆಡಿಸಿನ್ ವಿಜ್ಞಾನಿಗಳ ಸಂಶೋಧನೆ ಸೈನ್ಸ್ ಇಮ್ಯುನೊಲಜಿ ಜರ್ನಲ್‌ನಲ್ಲಿ ಪ್ರಕಟವಾಗಿದೆ. ಸದ್ಯ ಪತ್ತೆಯಾಗಿರುವ ಔಷಧ diABZI ದೇಹದಲ್ಲಿನ ರೋಗ ನಿರೋಧಕ ಶಕ್ತಿಯನ್ನು ಪ್ರಚೋದಿಸುತ್ತದೆ. ವೈರಸ್ ವಿರುದ್ಧದ ಮುಂಚೂಣಿ ಶಕ್ತಿಯನ್ನು ಉದ್ದೀಪಿಸುತ್ತದೆ ಎಂದು ಬರೆಯಲಾಗಿದೆ.

Recommended Video

   ಅಂದು ಇಮ್ರಾನ್ ಖಾನ್ ಮಾಡಿದ್ದನ್ನ ಇಂದು ವಿರಾಟ್ ಕೊಹ್ಲಿ ಮಾಡ್ತಿದ್ದಾರೆ | Oneindia Kannada

   ಹಲವು ದೇಶಗಳಲ್ಲಿ ವಿವಿಧ ಕಂಪನಿಗಳಲ್ಲಿ ತಯಾರಿಸಿದ ಕೊರೊನಾ ಲಸಿಕೆಗಳನ್ನು ಬಳಸಲಾಗುತ್ತಿದೆ. ಭಾರತ ಕೋವ್ಯಾಕ್ಸಿನ್, ಕೋವಿಶೀಲ್ಡ್ ಲಸಿಕೆಯನ್ನು ಬಳಕೆ ಮಾಡಲಾಗುತ್ತಿದೆ. ಸ್ಪುಟ್ನಿಕ್ v ಲಸಿಕೆಗೆ ಅನುಮತಿ ನೀಡಲಾಗಿದ್ದು, ಶೀಘ್ರವೇ ಅವುಗಳ ಬಳಕೆಯೂ ಶುರುವಾಗಲಿದೆ.

   English summary
   Scientists have identified a new drug that is highly effective in preventing severe COVID-19 in mice infected with SARS-CoV-2, and could also treat other respiratory coronaviruses.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X