ಶ್ವೇತಭವನವನ್ನು ಬಿಟ್ಟುಕೊಡುವುದಿಲ್ಲ ಎಂದು ಬೆದರಿಕೆಯೊಡ್ಡಿದ ಡೊನಾಲ್ಡ್ ಟ್ರಂಪ್?
ವಾಷಿಂಗ್ಟನ್ , ಡಿಸೆಂಬರ್ 18: ಅಮೆರಿಕಾ ಅಧ್ಯಕ್ಷೀಯ ಚುನಾವಣೆಯಲ್ಲಿ ತನ್ನ ಸೋಲನ್ನು ಒಪ್ಪಿಕೊಳ್ಳಲು ಸಿದ್ದರಿಲ್ಲದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಅಂತಿಮವಾಗಿ ಬೆದರಿಯೊಡ್ಡುವ ತಂತ್ರಕ್ಕೆ ಮುಂದಾಗಿದ್ದಾರೆ ಎನ್ನಲಾಗಿದೆ.
ಸಿಎನ್‌ಎನ್ ವರದಿ ಪ್ರಕಾರ ಚುನಾಯಿತ ಅಧ್ಯಕ್ಷ ಜೋ ಬೈಡೆನ್ ಅವರು ಪ್ರಮಾಣವಚನ ಸ್ವೀಕರಿಸುವ ದಿನದಂದು ತಾವು ಶ್ವೇತಭವನ ಖಾಲಿ ಮಾಡುವುದಿಲ್ಲ ಎಂದು ಟ್ರಂಪ್ ಹಠ ಹಿಡಿದಿದ್ದಾರೆ ಎಂದು ವರದಿಯಾಗಿದೆ. ಜನವರಿ 20ರಂದು ಅಮೆರಿಕದ 46ನೇ ಅಧ್ಯಕ್ಷರಾಗಿ ಜೋ ಬೈಡನ್ ಅವರು ಪ್ರಮಾಣ ವಚನ ಸ್ವೀಕರಿಸಬೇಕಿದೆ.
ಜನವರಿ 20 ರಂದು ಶ್ವೇತಭವನದಿಂದ ಹೊರಹೋಗುವುದಿಲ್ಲ ಎಂದು ಟ್ರಂಪ್ ತಮ್ಮ ಸಹೋದ್ಯೋಗಿಗಳಿಗೆ ತಿಳಿಸಿದ್ದಾರೆ. ಟ್ರಂಪ್ ಅವರ ಒತ್ತಾಯಕ್ಕೆ ಅಚಲವಾಗಿದ್ದರೆ, ಅಮೆರಿಕಾದ ಮುಂದೆ ಸಾಂವಿಧಾನಿಕ ಬಿಕ್ಕಟ್ಟು ಉದ್ಭವಿಸುತ್ತದೆ. ಏಕೆಂದರೆ ಜನವರಿ 20 ರಂದು ಹೊಸದಾಗಿ ಆಯ್ಕೆಯಾದ ಅಧ್ಯಕ್ಷ ಜೋ ಬಿಡೆನ್ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಡೊನಾಲ್ಡ್ ಟ್ರಂಪ್ ಅವರು ಮೊದಲಿನಿಂದಲೂ ಪಿತೂರಿಯಡಿ ಚುನಾವಣೆಯಲ್ಲಿ ಸೋತರು ಎಂದು ಆರೋಪಿಸುತ್ತಲೇ ಬಂದಿದ್ದಾರೆ.

ಬೈಡನ್ ಅವರ ಗೆಲುವನ್ನು ಪ್ರಶ್ನಿಸಿ ನ್ಯಾಯಾಲಗಳಿಗೆ ಮೊರೆ ಹೋಗಿದ್ದರೂ ಟ್ರಂಪ್‌ಗೆ ಯಾವುದೇ ಪ್ರಯೋಜನವಾಗಲಿಲ್ಲ. ಅಂತಿಮವಾಗಿ ಎಲೆಕ್ಟರಲ್ ಕಾಲೇಜು ಬೈಡೆನ್ ಗೆದ್ದಿದ್ದಾರೆ ಎಂದು ಅಧಿಕೃತವಾಗಿ ಘೋಷಿಸಿದೆ. ಬೈಡೆನ್ ಅವರಿಗೆ 306, ಟ್ರಂಪ್ ಅವರಿಗೆ 232 ಎಲಕ್ಟೋರಲ್ ಕಾಲೇಜ್ ಮತ ಪಡೆದುಕೊಂಡಿದ್ದಾರೆ ಎಂದು ತಿಳಿಸಿದೆ.












Click it and Unblock the Notifications