ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಪಾಕ್‌ ತಾಲಿಬಾನ್‌ ಗೆಲುವನ್ನು ಸಂಭ್ರಮಿಸುವುದನ್ನು ನೋಡುವುದು ಅಸಹ್ಯಕರ': ಯುಎಸ್‌ ಶಾಸಕ

|
Google Oneindia Kannada News

ವಾಷಿಂಗ್ಟನ್‌, ಆಗಸ್ಟ್‌ 23: ಪಾಕಿಸ್ತಾನ ಹಾಗೂ ಅದರ ಗುಪ್ತಚರ ಸೇವೆಯು ಅಫ್ಘಾನಿಸ್ತಾನವನ್ನು ತಾಲಿಬಾನ್‌ ವಶಕ್ಕೆ ಪಡೆಯುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದಾರೆ ಹಾಗೂ ಪಾಕಿಸ್ತಾನವನ್ನು ತಾಲಿಬಾನ್‌ ಅನ್ನು ಪೋಷಿಸಿದೆ ಎಂದು ಆರೋಪ ಮಾಡಿರುವ ಯುಎಸ್‌ನ ಉನ್ನತ ಶಾಸಕರೊಬ್ಬರು, "ಪಾಕಿಸ್ತಾನವು ಅಫ್ಘಾನಿಸ್ತಾನದಲ್ಲಿ ತಾಲಿಬಾನ್‌ ಗೆಲುವನ್ನು ಸಂಭ್ರಮಿಸುತ್ತಿರುವುದು ನೋಡುವುದು ಅಸಹ್ಯಕರ," ಎಂದು ಟೀಕೆ ಮಾಡಿದ್ದಾರೆ.

ಹಿಂದೂ ರಾಜಕೀಯ ಕ್ರಿಯಾ ಸಮಿತಿಯ ವರ್ಚುವಲ್‌ ಕಾರ್ಯಕ್ರಮದಲ್ಲಿ ಭಾರತ ಕೂಟದ ಸಹ ಅಧ್ಯಕ್ಷ, ಸಂಸತ್ತು ಸದಸ್ಯ ಸ್ಟೀವ್‌ ಚಾಬೋತ್‌ ಅಫ್ಘಾನಿಸ್ತಾನವನ್ನು ತಾಲಿಬಾನ್‌ ವಶಕ್ಕೆ ಪಡೆದ ವಿಚಾರದಲ್ಲಿ ಪಾಕಿಸ್ತಾನದ ವಿರುದ್ದ ವಾಗ್ದಾಳಿ ನಡೆಸಿದ್ದು, "ಅಫ್ಘಾನ್‌ ಜನರಿಗೆ ಹೇಳಲಾಗದ ಹಿಂಸೆಯನ್ನು ಮಾಡಿದ ತಾಲಿಬಾನಿಗರ ಗೆಲುವನ್ನು ಇಸ್ಲಮಾಬಾದ್‌ ಭಾರೀ ಸಂಭ್ರಮಿಸುತ್ತಿರುವುದು ಅತ್ಯಂತ ಖೇದಕರ," ಎಂದು ಅಭಿಪ್ರಾಯಿಸಿದ್ದಾರೆ.

 ತಾಲಿಬಾನ್‌ 'ಗುಲಾಮಗಿರಿಯ ಸಂಕೋಲೆಗಳನ್ನು ಮುರಿದಿದೆ' ಎಂದ ಪಾಕ್‌ ಪ್ರಧಾನಿ! ತಾಲಿಬಾನ್‌ 'ಗುಲಾಮಗಿರಿಯ ಸಂಕೋಲೆಗಳನ್ನು ಮುರಿದಿದೆ' ಎಂದ ಪಾಕ್‌ ಪ್ರಧಾನಿ!

ಹಾಗೆಯೇ ಅಫ್ಘಾನಿಸ್ತಾನದಲ್ಲಿ ತಾಲಿಬಾನ್‌ ಆಡಳಿತದ ಬಗ್ಗೆ ಆತಂಕಕ್ಕೆ ಒಳಗಾಗಿರುವ ಹಿಂದೂ ಸಮುದಾಯ ಹಾಗೂ ಸಿಖ್ಖ್‌ ಸಮುದಾಯವನ್ನು ತನ್ನ ದೇಶಕ್ಕೆ ಸ್ವಾಗತಿಸುವ ಭಾರತದ ಸರ್ಕಾರದ ನಿಲುವನ್ನು ಯುಎಸ್‌ ಶಾಸಕ ಸ್ಟೀವ್‌ ಚಾಬೋತ್‌ ಶ್ಲಾಘಿಸಿದ್ದಾರೆ.

Disgusting To Watch Pakistan Officials Celebrate Taliban Victory says US Lawmaker

"ತಾಲಿಬಾನ್‌ ಉಗ್ರರನ್ನು ಪೋಷಿಸುವಲ್ಲಿ ಪಾಕಿಸ್ತಾನ ಪ್ರಮುಖವಾಗಿ ಅದರ ಗುಪ್ತಚರ ಸೇವೆಯು ಪ್ರಮುಖ ಸ್ಥಾನವನ್ನು ವಹಿಸಿದೆ ಎಂಬುವುದು ನಮಗೆಲ್ಲರಿಗೂ ತಿಳಿದಿರುವ ವಿಚಾರ. ಹಾಗೆಯೇ ತಾಲಿಬಾನ್‌ ಅಫ್ಘಾನಿಸ್ತಾನವನ್ನು ವಶಕ್ಕೆ ಪಡೆದುಕೊಳ್ಳುವಲ್ಲಿ ಪಾಕಿಸ್ತಾನ ಪ್ರಮುಖ ಪಾತ್ರವಹಿಸಿದೆ ಎಂದು ನಮಗೆಲ್ಲರಿಗೂ ತಿಳಿದಿದೆ. ಅಫ್ಘಾನ್‌ ಜನರಿಗೆ ಹೇಳ ತೀರದ ಕೌರ್ಯವನ್ನು ಉಂಟು ಮಾಡುವ ತಾಲಿಬಾನ್‌ ಉಗ್ರರು ಅಫ್ಘಾನಿಸ್ತಾನದಲ್ಲಿ ಜಯ ಸಾಧಿಸಿರುವುದನ್ನು ಪಾಕಿಸ್ತಾನದ ಅಧಿಕಾರಿಗಳು ಸಂಭ್ರಮಿಸುವುದನ್ನು ನಾವು ನೋಡುವಾಗ ಅಸಹ್ಯವಾಗುತ್ತದೆ," ಎಂದು ಸ್ಟೀವ್‌ ಚಾಬೋತ್‌ ಹೇಳಿದ್ದಾರೆ.

"ಸ್ವತಃ ಪಾಕಿಸ್ತಾನವೇ ಧಾರ್ಮಿಕ ಅಲ್ಪಸಂಖ್ಯಾತರ ಮೇಲೆ ಕಿರುಕುಳ ನಡೆಸುತ್ತದೆ. ಅಮೆರಿಕದಲ್ಲಿ ಹೆಚ್ಚಾಗಿ ಧಾರ್ಮಿಕ ಅಲ್ಪಸಂಖ್ಯಾತರ ಮೇಲೆ ಹಲ್ಲೆ, ಕಿರುಕುಳ ಪ್ರಕರಣಗಳು ನಡೆಯುವುದಿಲ್ಲ. ನಾವು ನಮ್ಮ ಜನರಿಗೆ ಈ ಧಾರ್ಮಿಕ ಕಿರುಕುಳ ಸರಿಯಲ್ಲ ಎಂಬ ವಿಚಾರದಲ್ಲಿ ಅಗತ್ಯ ಶಿಕ್ಷಣವನ್ನು ನೀಡುತ್ತೇವೆ. ಪಾಕಿಸ್ತಾನದಲ್ಲಿ ಈ ಧಾರ್ಮಿಕ ಅಲ್ಪಸಂಖ್ಯಾತರ ಮೇಲಿನ ಕಿರುಕುಳ ತೀವ್ರ ಹಂತವನ್ನು ತಲುಪಿದೆ. ಅಲ್ಲಿ ಅಪಹರಣ ಮಾಡಲಾಗುತ್ತಿದೆ. ಹಾಗೆಯೇ ಮುಸ್ಲಿಂ ಧರ್ಮಕ್ಕೆ ಮತಾಂತರವಾಗುವಂತೆ ಒತ್ತಡ ಹೇರಲಾಗುತ್ತಿದೆ. ಇನ್ನು ವಯಸ್ಸಾದ ಮುಸ್ಲಿಂ ವ್ಯಕ್ತಿಯ ಜೊತೆಗೆ ಸಣ್ಣ ವಯಸ್ಸಿನ ಹಿಂದೂ ಹುಡುಗಿಯನ್ನು ವಿವಾಹ ಮಾಡಲು ಒತ್ತಾಯ ಮಾಡುವ ಪ್ರಕರಣಗಳು ಕೂಡಾ ನಡೆಯುತ್ತದೆ," ಎಂದು ವಿವರಿಸಿದ ಸ್ಟೀವ್‌ ಚಾಬೋತ್‌, "ಈ ಎಲ್ಲಾ ಧಾರ್ಮಿಕ ಕಿರುಕುಳದ ಆರೋಪಗಳು ಬರೀ ಗಾಳಿ ಸುದ್ದಿ ಎಂದು ಹೇಳಲಾಗದು," ಎಂದಿದ್ದಾರೆ.

 ತಾಲಿಬಾನ್‌ 'ಗುಲಾಮಗಿರಿಯ ಸಂಕೋಲೆಗಳನ್ನು ಮುರಿದಿದೆ' ಎಂದ ಪಾಕ್‌ ಪ್ರಧಾನಿ! ತಾಲಿಬಾನ್‌ 'ಗುಲಾಮಗಿರಿಯ ಸಂಕೋಲೆಗಳನ್ನು ಮುರಿದಿದೆ' ಎಂದ ಪಾಕ್‌ ಪ್ರಧಾನಿ!

"ಹದಿ ಹರೆಯದ ಹುಡುಗಿಯರನ್ನು ಅಪಹರಣ ಮಾಡಿರುವುದು, ಮಕ್ಕಳ ಕಳ್ಳಸಾಗಣೆ ಮಾಡಿರುವುದು, ಹಿಂದೂ ಯುವತಿಯರನ್ನು ಅಪಹರಿಸಿ ಮದುವೆ ಮಾಡಿಸುವಂತಹ ಹಲವಾರು ಹೃದಯ ವಿದ್ರಾವಕ ಪ್ರಕರಣಗಳನ್ನು ಪ್ರಮುಖ ಸುದ್ದಿ ಸಂಸ್ಥೆಗಳು ಹಾಗೂ ಮಾನವ ಹಕ್ಕು ಪರ ಹೋರಾಟಗಾರರ ಗುಂಪುಗಳು ವರದಿ ಮಾಡಿದೆ. ಈ ಎಲ್ಲಾ ದೌರ್ಜನ್ಯಗಳನ್ನು ಕಡೆಗಣಿಸಲಾಗುತ್ತಿದೆ," ಎಂದು ದೂರಿದ್ದಾರೆ.

"ಹಾಗೆಯೇ ಅಮೆರಿಕದಲ್ಲಿ ಸುಮಾರು ಆರು ಮಿಲಿಯನ್‌ ಹಿಂದೂಗಳಿದ್ದು ಅವರೆಲ್ಲರೂ ಯಾವುದೇ ಅಡೆತಡೆ ಇಲ್ಲದೇ ತಮ್ಮ ಧರ್ಮವನ್ನು ಪಾಲಿಸುತ್ತಿದ್ದಾರೆ. ಸಮಾಜದಲ್ಲಿ ಘನತೆಯಿಂದ ಬದುಕುತ್ತಿದ್ದಾರೆ," ಎಂದು ಶಾಸಕರು ಹೇಳಿದ್ದಾರೆ. "ಹಿಂದೂಗಳು ಉನ್ನತ ಶಿಕ್ಷಣಕ್ಕಾಗಿ, ಉತ್ತಮ ಉದ್ಯೋಗವಕಾಶಕ್ಕಾಗಿ ಅಮೆರಿಕದಲ್ಲಿ ನೆಲೆಸಿದ್ದಾರೆ. ಈ ಎಲ್ಲಾ ಮಾರ್ಗಗಳಲ್ಲಿ ಹಿಂದೂಗಳು ಪ್ರಮುಖ ಪಾತ್ರ ವಹಿಸಲು ಅಮೆರಿಕ ಎಲ್ಲಾ ಅವಕಾಶವನ್ನು ನೀಡುತ್ತಿದೆ. ಆದ್ದರಿಂದ ಅಮೆರಿಕದಲ್ಲಿ ಹಿಂದೂಗಳ ಮೇಲೆ ದೌರ್ಜನ್ಯ ನಡೆದ ಯಾವುದೇ ಒಂದು ಪ್ರಕರಣವೂ ಕೂಡಾ ಭಾರೀ ಸದ್ದು ಆಗುತ್ತದೆ. ಅಮೆರಿಕದಲ್ಲಿ ಇಂತಹ ಅಸಮಾನತೆಗೆ ಯಾವುದೇ ಸ್ಥಾನವಿಲ್ಲ," ಎಂದರು.

(ಒನ್‌ ಇಂಡಿಯಾ ಸುದ್ದಿ)

English summary
Disgusting To Watch Pakistan Officials Celebrate Taliban Victory in Afghanistan says US Lawmaker.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X