Bengaluru Weather: ಬೆಂಗಳೂರಿಗೆ ಇಂದಿನಿಂದ 5 ದಿನ ಭಾರೀ ಮಳೆ ಮುನ್ಸೂಚನೆ, ಯೆಲ್ಲೋ ಅಲರ್ಟ್

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಕಳೆದ ಏಪ್ರಿಲ್ 29ರಂದು ಬಿಟ್ಟರೆ ಈವರೆಗೆ (ಮೇ 18) ಹೇಳಿಕೊಳ್ಳುವಂತಹ ದೊಡ್ಡ ಮಳೆ ಆಗಿಲ್ಲ. ಮೇ ತಿಂಗಳ ಕಳೆದ 17 ದಿನಗಳು ಹೆಚ್ಚು ಬಿಸಿಲಿನಿಂದ ಕೂಡಿದ್ದವು. ಇದೀಗ ಬೆಂಗಳೂರಿಗೂ ಗುಡುಗು, ಮಿಂಚು ಸಹಿತ ಧಾರಾಕಾರ ಮಳೆ ಎಚ್ಚರಿಕೆ ಕೊಡಲಾಗಿದೆ. ಬಿಸಿಲಿನಿಂದ ಕಂಗೆಟ್ಟ ರಾಜಧಾನಿ ಮಂದಿಗೆ ಮುಂದಿನ 5 ದಿನ ವರುಣ ತಂಪೆರೆಯುವ ಸಾಧ್ಯತೆಗಳು ದಟ್ಟವಾಗಿವೆ.

ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಆರ್ಭಟಿಸುತ್ತಿರುವ ಪೂರ್ವ ಮುಂಗಾರು ಮಳೆ (Pre Monsoon Rain 2026) ರಾಜಧಾನಿಯಲ್ಲಿ ಸಕ್ರಿಯವಾಗಲಿದೆ. ಇಂದು (ಮೇ 18)ರಂದು ಸಂಜೆ ನಗರದ ಕೆಲವೆಡೆ ಹಗುರ ಮಳೆ ಆಗುವ ನಿರೀಕ್ಷೆ ಇದೆ. ನಾಳೆ ಮೇ 19ರಿಂದ ನಾಲ್ಕು ದಿನಗಳ ಕಾಲ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಾಧಾರಣದಿಂದ ಭಾರೀ ಮಳೆ ಆಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

Bengaluru Weather

ನಗರದ ತಾಪಮಾನ ಕೊಂಚ ಇಳಿಕೆ, ಮಳೆ ಲಕ್ಷಣ

ಐಎಂಡಿ ಪ್ರಕಾರ, ಮುಂದಿನ ಮೂರು ದಿನ ನಗರದಲ್ಲಿ 75ರಿಂದ 115 ಮಿಲಿ ಮಿಟರ್‌ವರೆಗೆ ಜೋರು ಮಳೆ ಸುರಿಯಬಹುದು. ಮೇ 19, 20ರಂದು ನಗರಕ್ಕೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಸದ್ಯ ನಗರಾದ್ಯಂತ ಗರಿಷ್ಠ ತಾಪಮಾನದಲ್ಲಿ ಕೊಂಚ (1-2 ಡಿ.ಸೆ) ಇಳಿಕೆ ಆಗಿದೆ. ಕಳೆದ ಕೆಲವು ದಿನಗಳಲ್ಲಿ 35 ಡಿಗ್ರಿ ಸೆಲ್ಸಿಯಸ್ ನಷ್ಟಿದ್ದ ಉಷ್ಣಾಂಶ ಇದೀಗ 33 ಡಿಗ್ರಿ ಸೆಲ್ಸಿಯಸ್‌ಗೆ ಇಳಿಕೆ ಆಗಿದೆ.

Karnataka Weather: ರಾಜ್ಯಾದ್ಯಂತ ಧಾರಾಕಾರ ಮಳೆ ಎಚ್ಚರಿಕೆ 24 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್, ನೆನ್ನೆ ಮಳೆಗೆ 3 ಸಾವು
Karnataka Weather: ರಾಜ್ಯಾದ್ಯಂತ ಧಾರಾಕಾರ ಮಳೆ ಎಚ್ಚರಿಕೆ 24 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್, ನೆನ್ನೆ ಮಳೆಗೆ 3 ಸಾವು

ಸೋಮವಾರ ಬೆಂಗಳೂರಿನ ವಾತಾವರಣ ಹೇಗಿದೆ?

ಇಂದು ಸೋಮವಾರ (ಮೇ 18) ಬೆಳಗ್ಗೆ ನಗರ ವ್ಯಾಪ್ತಿಯಲ್ಲಿ ಗರಿಷ್ಠ 33 ಡಿಗ್ರಿ ಸೆಲ್ಸಿಯಸ್, ಕನಿಷ್ಠ 22 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಬೆಂಗಳೂರು ಇಂಟರ್‌ನ್ಯಾಷನಲ್ ಏರ್‌ಪೊರ್ಟ್ ವ್ಯಾಪ್ತಿಯಲ್ಲಿ ಶೇ.35ಡಿಗ್ರಿ ಸೆಲ್ಸಿಯಸ್, ಕನಿಷ್ಠ 23 ಡಿಗ್ರಿ ಸೆಲ್ಸಿಯಸ್ ಹಾಗೂ ಬೆಂಗಳೂರು ಎಚ್‌ಎಎಲ್ ಏರ್‍‌ಪೋರ್ಟ್ 34 ಡಿಗ್ರಿ ಸೆಲ್ಸಿಯಸ್ ಮತ್ತು 20.9 ಡಿಗ್ರಿ ಸೆಲ್ಸಿಯಸ್ ಕಂಡು ಬಂದಿದೆ. ಇಂದು ಹಗಲು ಅಧಿಕ ಬಿಸಿಲು, ಒಣಹವೆ ದಾಖಲಾಗಿದ್ದು, ಸಂಜೆ ತಂಪು ವಾತಾವರಣ ನಿರ್ಮಾಣವಾಗಲಿದೆ. ನಾಳೆಯಿಂದ ಬಿಸಿಲು ಕಡಿಮೆ ಆಗಿ, ಮಳೆ ಹೆಚ್ಚಾಗುವ ನಿರೀಕ್ಷೆ ಇದೆ.

ಹವಾಮಾನ ವೈಪರೀತ್ಯ, ಮುಂಗಾರು ಆರಂಭದ ಮುನ್ಸೂಚನೆ

ತಮಿಳುನಾಡಿನ ಕರಾವಳಿ, ಅರಬ್ಬಿ ಸಮುದ್ರದ ಭಾಗದಲ್ಲಿ ವಾಯು ಚಂಡಮಾರುತ ಪರಿಚಲನೆ ಉಂಟಾಗಿದೆ. ಈ ವೈಪರೀತ್ಯಗಳು ಕೇವಲ ಕರಾವಳಿಗೆ ಸೀಮಿತವಾಗದೇ ಅಂಡಮಾನ್, ನಿಕೋಬಾರ್ ದ್ವೀಪಗಳವರೆಗೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿಸ್ತರಿಸಿವೆ. ಕಿಲೋ ಮಿಟರ್ ಗಟ್ಟಲೇ ಸಮುದ್ರಮಟ್ಟದಿಂದ ಎತ್ತರದಲ್ಲಿವೆ. ಇದು ಮುಂಗಾರು ಮಳೆ ಆರಂಭದ ಮುನ್ಸೂಚನೆ ಎಂದಿರುವ ಹವಾಮಾನ ಇಲಾಖೆ ಮೇ 26ರಂದು ಕೇರಳಕ್ಕೆ ಮುಂಗಾರು ಮಳೆ (Monsoon Rain 2026) ಆಗಮಿಸುವುದಾಗಿ ತಿಳಿಸಿದೆ.

ಈ ವೈಪರಿತ್ಯಗಳ ಪ್ರಭಾವದಿಂದಾಗಿ ಬೆಂಗಳೂರು ನಗರ ಸೇರಿದಂತೆ ವಿವಿಧ ಒಳನಾಡು ಹಾಗೂ ಕರಾವಳಿ ಜಿಲ್ಲೆಗಳಲ್ಲಿ 5 ದಿನ ಸಾಧಾರಣದಿಂದ ಭಾರೀ ಮಳೆ ಆಗಲಿದೆ ಎಂದು ವಿಜ್ಞಾನಿಗಳು ಮುನ್ಸೂಚನೆ ನೀಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+