Daily Horoscope: ಈ ರಾಶಿಯವರಿಗೆ ಅದೃಷ್ಟದ ದಿನ, ಹಣದ ಲಾಭವಾಗುವುದು, ಸಮಸ್ಯೆಗಳಿಗೆ ಸಿಗುವುದು ಪರಿಹಾರ

Horoscope June 14: ಭಾನುವಾರ ದ್ವಾದಶ ರಾಶಿಗಳ ಗೋಚಾರ ಫಲ ಹೇಗಿದೆ ಎನ್ನುವ ಮಾಹಿತಿ ಇಲ್ಲಿದೆ. ಇದು ವೈದಿಕ ಜ್ಯೋತಿಷ್ಯ ಕ್ರಮದಲ್ಲಿ ಲೆಕ್ಕ ಹಾಕಿ ಬರೆದ ದಿನ ಭವಿಷ್ಯ ಇದಾಗಿದೆ. ಭಾನುವಾರ ರಾಹುಕಾಲವು ಸಂಜೆ 4:30 ರಿಂದ ಸಂಜೆ 6:00 ರವರೆಗೆ ಇರುತ್ತದೆ. 12 ರಾಶಿಗಳಿಗೆ ಇಂದಿನ ಸಂಪೂರ್ಣ ಭವಿಷ್ಯ, ಫಲಾಫಲ ಮಾಹಿತಿ ಹೇಗಿದೆ ಎಂಬ ಪೂರ್ಣ ವಿವರ ತಿಳಿಯಿರಿ.

ಮೇಷ ರಾಶಿ:

ಇಂದು ಆರ್ಥಿಕ ಲಾಭವಾಗುವ ದಿನ. ಆತ್ಮವಿಶ್ವಾಸ ಹೆಚ್ಚಾಗುತ್ತದೆ. ಕೈಗೊಂಡ ಕೆಲಸದಲ್ಲಿ ಪ್ರಗತಿ ಕಾಣುವಿರಿ. ಹಣದ ಬಗ್ಗೆ ಆತುರದ ನಿರ್ಧಾರಗಳನ್ನು ತೆಗೆದುಕೊಳ್ಳಬೇಡಿ. ಆರೋಗ್ಯದ ವಿಷಯದಲ್ಲಿ ಜಾಗ್ರತೆ ವಹಿಸುವುದು ಒಳ್ಳೆಯದು. ಮನಸ್ಸಿನ ಶಾಂತಿ ಕಾಪಾಡುವತ್ತ ಗಮನ ಹರಿಸಿ.

Horoscope June 14

ವೃಷಭ ರಾಶಿ:

ವೈಯಕ್ತಿಕ ಬೆಳವಣಿಗೆಗೆ ಇಂದು ಅನುಕೂಲಕರ ದಿನವಾಗಿದೆ. ಹೊಸ ಕೆಲಸ ಆರಂಭಕ್ಕೆ ಇದು ಶುಭ ದಿನ. ನಿಮ್ಮ ಕೆಲಸ ಕಾರ್ಯಗಳಿಗೆ ಹಿರಿಯರ ಬೆಂಬಲ ಇರುವುದು. ಯೋಗ ಮತ್ತು ಧ್ಯಾನವನ್ನು ಅಭ್ಯಾಸ ಮಾಡಿದರೆ ಆರೋಗ್ಯ ಸುಧಾರಿಸುತ್ತದೆ.

ಮಿಥುನ ರಾಶಿ:

ಹಳೆಯ ಸ್ನೇಹಿತರ ಭೇಟಿ ಸಂತೋಷಕ್ಕೆ ಕಾರಣವಾಗುವುದು. ನಿಮ್ಮ ಮನಸ್ಸಿನ ಮಾತುಗಳನ್ನು ಸ್ಪಷ್ಟವಾಗಿ ಹೇಳುವುದರಿಂದ ಲಾಭವಾಗುವುದು. ಬರವಣಿಗೆ, ಸಂಗೀತ ಮತ್ತು ಕಲೆಗಳಂತಹ ಕ್ಷೇತ್ರಗಳಲ್ಲಿ ಉತ್ತಮ ಅವಕಾಶಗಳು ಬರಬಹುದು. ಮಾನಸಿಕ ಆರೋಗ್ಯದತ್ತ ಗಮನ ಹರಿಸಿ.

ಕಟಕ ರಾಶಿ:

ಇಂದು ನಿಮ್ಮ ಪಾಲಿಗೆ ಭಾವನಾತ್ಮಕ ದಿನವಾಗಿರುತ್ತದೆ. ಕುಟುಂಬ ಸದಸ್ಯರೊಂದಿಗಿನ ನಿಮ್ಮ ಬಾಂಧವ್ಯ ಹೆಚ್ಚಾಗುತ್ತದೆ. ಕೆಲಸದಲ್ಲಿ ನಿಮ್ಮ ಕಠಿಣ ಪರಿಶ್ರಮಕ್ಕೆ ಸರಿಯಾದ ಮನ್ನಣೆ ಸಿಗುತ್ತದೆ. ಆರೋಗ್ಯದ ಬಗ್ಗೆ ವಿಶೇಷ ಗಮನ ಇರಲಿ. ಸಾಕಷ್ಟು ವಿಶ್ರಾಂತಿ ಪಡೆಯುವುದು ಒಳ್ಳೆಯದು. ಸರಿಯಾಗಿ ಯೋಚಿಸಿ ನಿರ್ಧಾರ ತೆಗೆದುಕೊಂಡರೆ, ಯಶಸ್ವಿಯಾಗುವಿರಿ.

ಸಿಂಹ ರಾಶಿ:

ಇಂದು ನಿಮ್ಮ ಪಾಲಿನ ಅದೃಷ್ಟದ ದಿನ. ಮಾಡುವ ಕೆಲಸಗಳಲ್ಲಿ ಯಶಸ್ಸು ಸಿಗುವುದು. ಕುಟುಂಬ ಸದಸ್ಯರೊಂದಿಗೆ ಸಮಯ ಕಳೆಯುವುದರಿಂದ ಸಂತೋಷ ಹೆಚ್ಚಾಗುವುದು. ಎಲ್ಲಾ ಕೆಲಸ ಕಾರ್ಯಗಳು ಸರಾಗವಾಗಿ ನಡೆಯುವುದು. ಖರ್ಚು ವೆಚ್ಚಗಳ ಮೇಲೆ ನಿಯಂತ್ರಣ ಇರಲಿ.

ಕನ್ಯಾರಾಶಿ:

ನಿಮ್ಮ ಆದ್ಯತೆಗೆ ಅನುಸಾರವಾಗಿ ಮುಂದುವರೆಯಿರಿ. ಹಣಕಾಸಿನ ವಿಷಯಗಳಲ್ಲಿ ನೀವು ಜಾಗರೂಕರಾಗಿರಬೇಕು. ಹಣ ಹೂಡಿಕೆ ಬಗ್ಗೆ ಎಚ್ಚರಿಕೆಯಿಂದ ಯೋಚಿಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ. ಯಾರಿಗೂ ಸಾಲ ನೀಡಬೇಡಿ. ಇಂದು ನೀಡುವ ಸಾಲದ ಹಣ ನಿಮ್ಮ ಕೈ ಸೇರುವುದಿಲ್ಲ.

ತುಲಾ ರಾಶಿ:

ಇಂದು ಜೀವನದಲ್ಲಿ ಸಮತೋಲನ ಕಾಯ್ದುಕೊಳ್ಳುವ ದಿನ. ನಿಮ್ಮ ಮಾತಿನ ಮೂಲಕವೇ ಇತರರನ್ನು ಆಕರ್ಷಿಸುವಿರಿ. ಆದರೆ ಬೇರೆಯವರ ಮಾತಿಗೂ ಬೆಲೆ ಕೊಡುವುದನ್ನು ಮರೆಯಬೇಡಿ. ಮಕ್ಕಳ ಮೂಲಕ ಶುಭ ಸುದ್ದಿ ಕೇಳುವಿರಿ.

ವೃಶ್ಚಿಕ ರಾಶಿ:

ಹೊಸ ಅವಕಾಶಗಳು ಸಿಗುವುದು. ಅರ್ಧಕ್ಕೆ ನಿಂತಿರುವ ಕೆಲಸ ಮತ್ತೆ ಚುರುಕು ಪಡೆಯುವುದು. ಕುಟುಂಬ ಸದಸ್ಯರೊಂದಿಗಿನ ಮನಸ್ತಾಪ ದೂರವಾಗುವುದು. ಹಣದ ವಿಷಯದಲ್ಲಿ ಭಾವನಾತ್ಮಕವಾಗಿ ಯಾವುದೇ ನಿರ್ಧಾರ ತೆಗೆದುಕೊಳ್ಳದಿರುವುದೇ ಸೂಕ್ತ. ನಿಮ್ಮ ಪರಿಶ್ರಮದಿಂದ ಸವಾಲುಗಳನ್ನು ಜಯಿಸಲು ಸಾಧ್ಯವಾಗುತ್ತದೆ.

ಧನು ರಾಶಿ:

ಉದ್ಯೋಗ ಮತ್ತು ಆರ್ಥಿಕ ವಿಷಯಗಳಲ್ಲಿ ಉತ್ತಮ ಬೆಳವಣಿಗೆಗಳಾಗುವುದು. ಮಕ್ಕಳೊಂದಿಗೆ ಹೆಚ್ಚಿನ ಸಮಯ ಕಳೆಯುವಿರಿ. ಖರ್ಚುಗಳನ್ನು ನಿಯಂತ್ರಿಸುವುದರಿಂದ ಆರ್ಥಿಕ ಪರಿಸ್ಥಿತಿ ಮತ್ತಷ್ಟು ಸುಧಾರಿಸುತ್ತದೆ.

ಮಕರ ರಾಶಿ:

ಸಂಬಂಧಗಳಲ್ಲಿ ಮೂಡಿರುವ ಮನಸ್ತಾಪ ನಿವಾರಣೆಯಾಗುವುದು. ಹಣದ ವಿಚಾರದಲ್ಲಿ ಜಾಗರೂಕರಾಗಿರಬೇಕು. ಆದಾಯ ಮತ್ತು ವೆಚ್ಚಗಳ ನಡುವೆ ಸಮತೋಲನ ಕಾಯ್ದುಕೊಳ್ಳಬೇಕು. ಹೊಸ ಸ್ನೇಹಿತರ ಪರಿಚಯವಾಗಬಹುದು.

ಕುಂಭ ರಾಶಿ:

ನೀವು ಇಂದು ತೆಗೆದುಕೊಳ್ಳುವ ನಿರ್ಧಾರ ಗುರಿ ಸಾಧಿಸಲು ಸಹಾಯ ಮಾಡುವುದು. ಹಣ ಗಳಿಸುವ ಅವಕಾಶ ಒದಗಿ ಬರುವುದು. ಆದರೆ ಆತುರದ ನಿರ್ಧಾರಗಳನ್ನು ತೆಗೆದುಕೊಳ್ಳಬೇಡಿ. ಆರೋಗ್ಯದ ಬಗ್ಗೆ ಕಾಳಜಿ ವಹಿಸಿ.

ಮೀನ ರಾಶಿ:

ಇಂದು ಭಾವನಾತ್ಮಕವಾಗಿ ತೃಪ್ತಿಕರ ದಿನವಾಗಿರುತ್ತದೆ. ಕೆಲಸದಲ್ಲಿ ನಿಮ್ಮ ಪ್ರತಿಭೆಯನ್ನು ಗುರುತಿಸಲಾಗುತ್ತದೆ. ಕುಟುಂಬ ಸದಸ್ಯರೊಂದಿಗಿನ ನಿಮ್ಮ ಬಾಂಧವ್ಯ ಬಲಗೊಳ್ಳುತ್ತದೆ. ಯೋಗ ಮತ್ತು ಧ್ಯಾನದ ಮೂಲಕ ಮಾನಸಿಕ ಶಾಂತಿ ಪಡೆದುಕೊಳ್ಳಬಹುದು.

(ಬರಹ: ರಂಜಿತಾ ಆರ್.ಕೆ.)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+