• search
  • Live TV
ವಾಷಿಂಗ್ಟನ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಅಮೆರಿಕದಲ್ಲಿ ಶೀಘ್ರ ಉತ್ತುಂಗಕ್ಕೇರಲಿದೆ ಡೆಲ್ಟಾ ರೂಪಾಂತರಿ

|
Google Oneindia Kannada News

ವಾಷಿಂಗ್ಟನ್, ಸೆಪ್ಟೆಂಬರ್ 15: ಅಮೆರಿಕದಲ್ಲಿ ಡೆಲ್ಟಾ ರೂಪಾಂತರಿ ಶೀಘ್ರ ಉತ್ತುಂಗಕ್ಕೇರಲಿದೆ ಎಂದು ವಿಜ್ಞಾನಿಗಳು ಎಚ್ಚರಿಕೆ ನೀಡಿದ್ದಾರೆ.

ಡೆಲ್ಟಾ ರೂಪಾಂತರಿ ಅಮೆರಿಕದಲ್ಲಿ ಉತ್ತುಂಗಕ್ಕೇರಬಹುದು ಹಾಗೆಯೇ ಮುಂದಿನ ವರ್ಷಗಳಲ್ಲಿ ವೈರಸ್ ನಮ್ಮ ದೈನಂದಿನ ಜೀವನದ ಒಂದು ಭಾಗವಾಗಬಹುದು ಎಂದು ಹೇಳಿದ್ದಾರೆ.

ಡೆಲ್ಟಾ ಉಲ್ಬಣ: ಅಮೆರಿಕದಲ್ಲಿ ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆಯಲ್ಲಿ ಏರಿಕೆಡೆಲ್ಟಾ ಉಲ್ಬಣ: ಅಮೆರಿಕದಲ್ಲಿ ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆಯಲ್ಲಿ ಏರಿಕೆ

ಕೋವಿಡ್ ಆಕ್ಟ್‌ ನೌ ಟ್ರ್ಯಾಕರ್ ಸಂಗ್ರಹಿಸಿದ ಮಾಹಿತಿ ಪ್ರಕಾರ, ಸೋಮವಾರದವರೆಗೆ 7 ದಿನಗಳ ಸರಾಸರಿ ದೈನಂದಿನ ಪ್ರಕರಣಗಳು 172,000 ಆಗಿತ್ತು. ಹೆಚ್ಚಿನ ರಾಜ್ಯಗಳಲ್ಲಿ ಪ್ರಕರಣಗಳು ಕಡಿಮೆಯಾಗುತ್ತಿವೆ.

ದಿನಕ್ಕೆ 1800ಕ್ಕೂ ಅಧಿಕ ಮಂದಿ ಮೃತಪಡುತ್ತಿದ್ದಾರೆ. ಹಾಗೂ 1 ಲಕ್ಷಕ್ಕೂ ಅಧಿಕ ಮಂದಿ ಕೋವಿಡ್ ತೀವ್ರತೆಯಿಂದ ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ.

ಕೊರೊನಾ ವೈರಸ್ ಸೋಂಕಿನ ಡೆಲ್ಟಾ ಪ್ರಭೇದ ವೈರಸ್‌ ಕುರಿತು ಈವರೆಗೂ ತಿಳಿದಿರುವ ಲಕ್ಷಣಗಳಿಗಿಂತಲೂ ಹೆಚ್ಚು ಗಂಭೀರ ಕಾಯಿಲೆಗೆ ಕಾರಣವಾಗಬಹುದು ಮತ್ತು ಚಿಕನ್‌ಪಾಕ್ಸ್‌ನಂತೆ ಬಹಳ ಸುಲಭವಾಗಿ ಹರಡಬಹುದು ಎಂದು ಅಮೆರಿಕ ಆರೋಗ್ಯ ಪ್ರಾಧಿಕಾರದ ಆಂತರಿಕ ದಾಖಲೆಗಳನ್ನು ಉಲ್ಲೇಖಿಸಿ ಅಮೆರಿಕದ ಮಾಧ್ಯಮಗಳು ವರದಿ ಮಾಡಿವೆ.

ಕಾಯಿಲೆ ನಿಯಂತ್ರಣ ಮತ್ತು ತಡೆ ಕೇಂದ್ರ (ಸಿಡಿಸಿ) ನೀಡಿರುವ ದಾಖಲೆಗಳ ಪ್ರಕಾರ, ಸಂಪೂರ್ಣವಾಗಿ ಲಸಿಕೆ ಡೋಸ್ ಪಡೆದುಕೊಂಡಿರುವ ವ್ಯಕ್ತಿಗಳು, ಲಸಿಕೆ ಪಡೆದುಕೊಳ್ಳದ ಜನರಷ್ಟೇ ಪ್ರಮಾಣದಲ್ಲಿ ಡೆಲ್ಟಾ ಪ್ರಭೇದದ ವೈರಸ್ ಹರಡುತ್ತಾರೆ ಎಂದು ವರದಿ ತಿಳಿಸಿದೆ.

ಡೆಲ್ಟಾ ತಳಿ ಹೆಚ್ಚು ಪ್ರಸಾರ ಸಾಮರ್ಥ್ಯ ಹೊಂದಿದೆ. ಇದು ಮೆರ್ಸ್, ಸಾರ್ಸ್, ಎಬೋಲಾ, ಸಾಮಾನ್ಯ ಶೀತ, ವಿಷಮ ಶೀತ ಮತ್ತು ಸ್ಮಾಲ್‌ಪಾಕ್ಸ್‌ನಂತಹ ಕಾಯಿಲೆಗಳಿಗೆ ಕಾರಣವಾಗುವ ವೈರಸ್‌ಗಿಂತಲೂ ಹೆಚ್ಚು ಪ್ರಸರಣವಾಗುತ್ತದೆ. ಚಿಕನ್‌ಪಾಕ್ಸ್‌ಗಿಂತಲೂ ಹೆಚ್ಚು ಸಾಂಕ್ರಾಮಿಕವಾಗಿದೆ ಎಂದು ವರದಿ ಹೇಳಿದೆ.

ಆಸ್ಪತ್ರೆಗೆ ದಾಖಲಾಗುವವರ ಪ್ರಮಾಣವೂ ಶೇ.40ರಷ್ಟು ಹೆಚ್ಚಾಗಿದೆ. ಕಳೆದ ವಾರಕ್ಕೆ ಹೋಲಿಸಿದರೆ ಇದು ಶೇ.18ರಷ್ಟು ಹೆಚ್ಚಾಗಿದೆ. ಕೊರೊನಾ ವೈರಸ್ ಸೋಂಕಿನ ಡೆಲ್ಟಾ ಪ್ರಭೇದ ವೈರಸ್‌ ಕುರಿತು ಈವರೆಗೂ ತಿಳಿದಿರುವ ಲಕ್ಷಣಗಳಿಗಿಂತಲೂ ಹೆಚ್ಚು ಗಂಭೀರ ಕಾಯಿಲೆಗೆ ಕಾರಣವಾಗಬಹುದು ಮತ್ತು ಚಿಕನ್‌ಪಾಕ್ಸ್‌ನಂತೆ ಬಹಳ ಸುಲಭವಾಗಿ ಹರಡಬಹುದು ಎಂದು ಅಮೆರಿಕ ಆರೋಗ್ಯ ಪ್ರಾಧಿಕಾರದ ಆಂತರಿಕ ದಾಖಲೆಗಳನ್ನು ಉಲ್ಲೇಖಿಸಿ ಅಮೆರಿಕದ ಮಾಧ್ಯಮಗಳು ವರದಿ ಮಾಡಿವೆ.

ಡೆಲ್ಟಾ ತಳಿ ತಗುಲಿದ ವ್ಯಕ್ತಿಗಳು ಎರಡೂ ಡೋಸ್ ಲಸಿಕೆ ಪಡೆದುಕೊಂಡಿದ್ದರೂ ಅವರು ಲಸಿಕೆ ಪಡೆಯದ ಜನರಷ್ಟೇ ಪ್ರಮಾಣದಲ್ಲಿ ಮೂಗು ಹಾಗೂ ಗಂಟಲಿನಲ್ಲಿ ಸಾಗಿಸುತ್ತಾರೆ. ಹೀಗಾಗಿ ಅದರ ಹರಡುವಿಕೆ ಅಪಾಯಕಾರಿಯಾಗಿದೆ ಎಂದು ಸಿಡಿಸಿ ನಿರ್ದೇಶಕಿ ಡಾ. ರೋಚೆಲ್ಲೆ ಪಿ ವಾಲೆನ್ಸ್ಕಿ ತಿಳಿಸಿದ್ದಾರೆ.

ಡೆಲ್ಟಾ ತಳಿ ಭಾರತದಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡಿದೆ, ರಕ್ತ ಹೆಪ್ಪುಗಟ್ಟುವುದು, ಶ್ರವಣದೋಷ, ಗ್ಯಾಸ್ಟ್ರಿಕ್‌, ಇನ್ನೂ ಕೆಲಸವರಿಗೆ ಗ್ಯಾಂಗ್ರಿನ್‌ಕೂಡ ಉಂಟಾಗಬಹುದು ಎಂದು ಹೇಳಲಾಗಿದೆ.

ಅಲ್ಫಾ, ಬೀಟಾ, ಗಾಮಾ ರೂಪಾಂತರಿ ದಕ್ಷಿಣ ಆಫ್ರಿಕಾ, ಬ್ರೆಜಿಲ್‌ನಲ್ಲಿ ಕಾಣಸಿಕೊಂಡಿರುವ ತಳಿಯಾಗಿದೆ. ಕೆಲವು ರೋಗಿಗಳಲ್ಲಿ ರಕ್ತ ಹೆಪ್ಪುಗಟ್ಟುವಿಕೆ ಉಂಟಾಗುತ್ತಿದ್ದು, ಇದರಿಂದ ಹಾನಿಗೊಳಗಾದ ಕೋಶ ಸತ್ತು ಗ್ಯಾಂಗ್ರಿನ್‌ಗೆ ಕಾರಣವಾಗುತ್ತಿದೆ.ಅಮೆರಿಕಾ, ಚೀನಾ, ಬ್ರಿಟನ್, ರಷ್ಯಾ, ಜಪಾನ್ ಸೇರಿದಂತೆ ಹಲವು ದೇಶಗಳು ಈಗ ಕೊರೋನಾದ ಹೊಸ ತಳಿಯ ಕಬಂಧಬಾಹುವಿನಲ್ಲಿದೆ. ಇದರ ಜೊತೆಗೆ ಈಗ ಭಾರತವೂ ಸೇರಿಕೊಂಡಿದೆ.

ಕೊರೊನಾ ಸೋಂಕಿನ ಮೊದಲ ಅಲೆಯಲ್ಲಿ ಕಂಡುಬರದ ಅನೇಕ ಹೊಸ ಲಕ್ಷಣಗಳನ್ನು ರೂಪಾಂತರವು ತೋರಿಸುತ್ತಿದೆ. ಈಗ ಕಂಡುಬರುತ್ತಿರುವ ಲಕ್ಷಣಗಳು ಮಾತ್ರವಲ್ಲದೆ, ಮುಂದಿನ ದಿನಗಳಲ್ಲಿ ಇದು ಮತ್ತಷ್ಟು ಗಂಭೀರವಾಗುವ ಸಾಧ್ಯತೆ ಇದೆಯೇ ಎಂಬ ಬಗ್ಗೆ ಅಧ್ಯಯನಗಳು ನಡೆಯುತ್ತಿವೆ.

ಅತೀವ ಗ್ಯಾಸ್ಟ್ರಿಕ್ ಶ್ರವಣ ಸಮಸ್ಯೆ, ಮತ್ತು ರಕ್ತ ಹೆಪ್ಪುಗಟ್ಟುವಿಕೆಯು ಗ್ಯಾಂಗ್ರಿನ್‌ಗೆ ಕಾರಣವಾಗುತ್ತಿವೆ. ಇದು ಕೋವಿಡ್ 19 ರೋಗಿಗಳಲ್ಲಿ ಸಾಮಾನ್ಯವಾಗಿ ಕಾಣಿಸದ ಲಕ್ಷಣ. ಇದು ಭಾರತದಲ್ಲಿ ಮಾರಕವಾಗಿರುವ ಡೆಲ್ಟಾ ವೈರಸ್‌ನಿಂದ ಉಂಟಾಗುತ್ತಿದೆ ಎಂದು ವೈದ್ಯರು ಹೇಳಿದ್ದಾರೆ. ಈ ಹೊಸ ಅಪಾಯಕಾರಿ ತಳಿಯು ಆಸ್ಪತ್ರೆ ದಾಖಲೀಕರಣದ ಅಧಿಕ ಅಪಾಯವನ್ನು ಉಂಟುಮಾಡುತ್ತಿದೆ ಎಂದು ಇಂಗ್ಲೆಂಡ್ ಮತ್ತು ಸ್ಕಾಟ್ಲೆಂಡ್‌ಗಳು ವರದಿ ಮಾಡಿವೆ.

ಹೊಟ್ಟೆನೋವು, ವಾಕರಿಕೆ, ಹಸಿವಿಲ್ಲದೆ ಇರುವಿಕೆ, ಶ್ರವಣ ದೋಷ ಮತ್ತು ಸಂದಿನೋವುಗಳು ಭಾರತದಲ್ಲಿನ ಕೋವಿಡ್ 19 ರೋಗಿಗಳಲ್ಲಿ ಕಂಡುಬರುತ್ತಿವೆ. ದಕ್ಷಿಣ ಆಫ್ರಿಕಾ ಮತ್ತು ಬ್ರೆಜಿಲ್‌ಗಳಲ್ಲಿ ಕಾಣಿಸಿಕೊಂಡ ಬೀಟಾ ಹಾಗೂ ಗಾಮಾ ತಳಿಗಳು ವಿಭಿನ್ನ ರೋಗ ಲಕ್ಷಣಗಳನ್ನು ಉಂಟುಮಾಡಿರುವುದಕ್ಕೆ ಪುರಾವೆಗಳಿಲ್ಲ.

English summary
The latest coronavirus wave in the United States driven by the Delta variant could soon peak, but experts warn against complacency and expect the virus will be part of everyday life for years to come.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X