India
  • search
  • Live TV
ವಾಷಿಂಗ್ಟನ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಲಸಿಕೆ ಹಾಕಿಸಿಕೊಂಡವರಿಗೆ 1300 ರೂಪಾಯಿ ಟಿಕೆಟ್, ಹಾಕಿಸಿಕೊಳ್ಳದಿದ್ದರೆ 73,000 ರೂಪಾಯಿ ಟಿಕೆಟ್!

|
Google Oneindia Kannada News

ವಾಷಿಂಗ್ಟನ್, ಜೂನ್ 2: ಅಮೆರಿಕಾದಲ್ಲಿ ಕೊರೊನಾ ವೈರಸ್‌ನ ಅಟ್ಟಹಾಸ ನಿಯಂತ್ರಣಕ್ಕೆ ಬರುತ್ತಿದೆ. ಹೀಗಾಗಿ ಸಾರ್ವಜನಿಕ ಸ್ಥಳಗಳಲ್ಲಿ ಜನರ ಓಡಾಟ ಮತ್ತೆ ಹೆಚ್ಚಾಗುತ್ತಿದೆ. ಇಂತಾ ಸಂದರ್ಭದಲ್ಲಿ ಹೆಚ್ಚಿನ ಜನರು ಲಸಿಕೆಯನ್ನು ಕೂಡ ಹಾಕಿಸಿಕೊಳ್ಳುತ್ತಿರುವ ಕಾರಣದಿಂದಾಗಿ ಪಾರ್ಟಿಗಳಲ್ಲಿ ಸಂಗೀತ ಕಾರ್ಯಕ್ರಮಗಳಿಗೂ ಅವಕಾಶಗಳನ್ನು ನೀಡಲಾಗುತ್ತಿದೆ.

ಈ ಮಧ್ಯೆ ಕೊರೊನಾ ವೈರಸ್‌ನ ಪ್ರಮಾಣ ಕಡಿಮೆ ಮತ್ತು ಲಸಿಕೆ ಹಾಕಿಸಿಕೊಳ್ಳುತ್ತಿರುವವರ ಪ್ರಮಾಣ ಹೆಚ್ಚಳವಾಗುತ್ತಿದ್ದರೂ ಕೆಲ ಕಾರ್ಯಕ್ರಮಗಳ ಆಯೋಜಕರು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ. ಲಸಿಕೆ ಹಾಕಿಸಿಕೊಂಡವರಿಗೆ ಮತ್ತು ಲಸಿಕೆ ಹಾಕಿಸಿಕೊಳ್ಳದವರಿಗೆ ದೊಡ್ಡ ಅಂತರದ ಟಿಕೆಟ್ ದರಗಳನ್ನು ನಿಗದಿ ಪಡಿಸುವ ಮೂಲಕ ಲಸಿಕೆ ಹಾಕಿಸಿಕೊಳ್ಳಲು ಉತ್ತೇಜಿಸಲಾಗುತ್ತಿದೆ.

ಕೊರೊನಾ ಸೋಂಕನ್ನು ಪರಿಣಾಮಕಾರಿಯಾಗಿ ತಡೆಗಟ್ಟಬಲ್ಲ ಔಷಧ ಸಂಶೋಧನೆಕೊರೊನಾ ಸೋಂಕನ್ನು ಪರಿಣಾಮಕಾರಿಯಾಗಿ ತಡೆಗಟ್ಟಬಲ್ಲ ಔಷಧ ಸಂಶೋಧನೆ

ಫ್ಲೋರಿಡಾದ ಸಂಗೀತ ಕಾರ್ಯಕ್ರಮ(ಕನ್ಸರ್ಟ್) ಆಯೋಜಕರೊಬ್ಬರು ಈಗಾಗಲೇ ಇದನ್ನು ಜಾರಿಗೆ ತಂದಿದ್ದಾರೆ. ಅಮೆರಿಕಾದಲ್ಲಿ ಖ್ಯಾತವಾಗಿರುವ "ಟೀನೇಜ್ ಬಾಟಲ್‌ರಾಕೆಟ್" ಬ್ಯಾಂಡ್‌ನ ಸಂಗೀತ ಕಾರ್ಯಕ್ರಮ ಇದಾಗಿದ್ದು ಕಾರ್ಯಕ್ರಮಕ್ಕೆ ಆಗಮಿಸುವ ಲಸಿಕೆ ಹಾಕಿಸಿಕೊಂಡ ವ್ಯಕ್ತಿಗಳಿಗೆ 18 ಡಾಲರ್‌ಗೆ ಕಾರ್ಯಕ್ರಮದ ಟಿಕೆಟ್ ನೀಡಲಾಗುತ್ತಿದೆ. ರೂಪಾಯಿ ಲೆಕ್ಕದಲ್ಲಿ ಒಂದು ಟಿಕೆಟ್ ಬೆಲೆ 1300ರಷ್ಟಾಗುತ್ತದೆ. ಆದರೆ ಲಸಿಕೆ ಹಾಕಿಸಿಕೊಳ್ಳದವರಿಗೆ ಬರೊಬ್ಬರಿ 999.99 ಡಾಲರ್ ನಿಗದಿ ಪಡಿಸಿದ್ದಾರೆ. ಅಂದರೆ ಸುಮಾರು 73,000 ರೂಪಾಯಿ.

ಯುವ ಜನರನ್ನು ಆಕರ್ಷಿಸಲು ಈ ರೀತಿಯ ಸಂಗೀತ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ಇಂತಾ ಕಾರ್ಯಕ್ರಮದಲ್ಲಿ ಲಸಿಕೆ ಹಾಕಿಸಿಕೊಳ್ಳದವರು ಆಗಮಿಸಿದರೆ ಉಳಿದವರಿಗೆ ಅದರ ಭಯವಿರುತ್ತದೆ. ಹೀಗಾಗಿ ಲಸಿಕೆ ಹಾಕದ ಜನರಿಗಾಗಿ ದೊಡ್ಡ ಪ್ರಮಾಣದ ಟಿಕೆಟ್ ದರಗಳನ್ನು ನಿಗದಿಪಡಿಸಲಾಗಿದೆ ಎಂದು ಹೇಳಿದ್ದಾರೆ.

ಈ ಕಾರ್ಯಕ್ರಮದ ಟಿಕೆಟ್ ನೀಡುವ ವೆಬ್‌ಸೈಟ್‌ನಲ್ಲಿ ಫೈಜರ್ ಹಾಗೂ ಮಾಡೆರ್ನಾ ಲಸಿಕೆಯ ಎರಡು ಡೋಸ್‌ಗಳನ್ನು ಹಾಗೂ ಜಾನ್ಸನ್ & ಜಾನ್ಸನ್ ಲಸಿಕೆಯ ಒಂದು ಡೋಸ್ ಹಾಕಿಸಿಕೊಂಡವರು 18 ಡಾಲರ್‌ನ ಟಿಕೆಟ್ ಪಡೆಯಲು ಅರ್ಹರಾಗಿರುತ್ತಾರೆ ಎಂದು ತಿಳಿಸಿದೆ. ಇನ್ನು ಇದೇ ಸಂದರ್ಭದಲ್ಲಿ ಕಾರ್ಯಕ್ರಮದ ಆಯೋಜಕರು ಕಾರ್ಯಕ್ರಮ ನಡೆಯುವುದಕ್ಕೆ ಮುನ್ನ ಸಂಸ್ಥೆಯ ಎಲ್ಲಾ ಸಿಬ್ಬಂದಿಗಳು, ಸ್ವಯಂ ಸೇವಕರು ಹಾಗೂ ಬ್ಯಾಂಡ್‌ನ ಸದಸ್ಯರು ಲಸಿಕೆಯನ್ನು ಪಡೆದುಕೊಂಡಿರುತ್ತಾರೆ ಎಂದು ತಿಳಿಸಿದ್ದಾರೆ.

English summary
Concert ticket price for vaccinated people Rs 1,300, those without the vaccinated Rs 73,000. know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X