• search
  • Live TV
ವಾಷಿಂಗ್ಟನ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

370 ನೇ ವಿಧಿ ರದ್ದು: ವಿಶ್ವಸಂಸ್ಥೆಗೆ ಚಾಡಿ ಹೇಳಲು ಹೊರಟಿತೇ ಚೀನಾ?

|

ಬೀಜಿಂಗ್, ಆಗಸ್ಟ್ 15: ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀದಲಾಗಿದ್ದ ಸಂವಿಧಾನದ 370 ನೇ ವಿಧಿಯನ್ನು ರದ್ದುಗೊಳಿಸಿದ ಭಾರತದ ನಡೆಯ ವಿರುದ್ಧ ಚೀನಾ ವಿಶ್ವಸಂಸ್ಥೆಯ ಮೊರೆ ಹೋಗಿದೆ. ಈ ಕುರಿತು ಸಭೆ ನಡೆಸಲು ವಿಶ್ವಸಂಸ್ಥೆಗೆ ಚೀನಾ ಮನವಿ ಮಾಡಿದೆ ಎನ್ನಲಾಗಿದೆ.

"ಜಮ್ಮು ಮತ್ತು ಕಾಶೀರವನ್ನು ಕೇಂದ್ರಾಡಳಿತ ಪ್ರದೇಶವೆಂದು ಭಾರತ ಏಕಪಕ್ಷೀಯವಾಗಿ ಘೋಷಿಸಿದೆ. ಕಾಶ್ಮೀರದ ವಿಷಯದಲ್ಲಿ ಭಾರತ ಏಕಪಕ್ಷೀಯವಾಗಿ ತೀರ್ಮಾನ ತೆಗೆದುಕೊಳ್ಳುವುದು ತಪ್ಪು" ಎಂದು ದೂರಿರುವ ಚೀನಾ, ಈ ಬಗ್ಗೆ ವಿಶ್ವಸಂಸ್ಥೆ ಮಧ್ಯಸ್ಥಿಕೆ ವಹಿಸಿ ಸಭೆ ನಡೆಸಬೇಕು ಎಂದು ಕೇಳಿದೆ.

ಭಾರತ-ಚೀನಾಕ್ಕೆ ಎಚ್ಚರಿಕೆ ನೀಡಿದ ಟ್ರಂಪ್ ಎದೆಯಲ್ಲಿ ವಿಲವಿಲ!

ಪಾಕಿಸ್ತಾನ ಸಹ ಈ ಕುರಿತು ತುರ್ತು ಸಭೆ ನಡೆಸುವಂತೆ ಈಗಾಗಲೇ ವಿಶ್ವಸಂಸ್ಥೆಗೆ ಪತ್ರಬರೆದಿದೆ. ಶುಕ್ರವಾರ(ಆ.16) ಬೆಳಿಗ್ಗೆ ಈ ಕುರಿತು ಸಭೆ ನಡೆಯುವ ಸಾಧ್ಯತೆ ಇದೆ ಎಂದು ಪಾಕಿಸ್ತಾನ ತಿಳಿಸಿದೆ.

ಅನುಚ್ಛೇದ 370 ಕಾಶ್ಮೀರದ ದಿಕ್ಕನ್ನೇ ಬದಲಿಸುವುದಾಗಿದ್ದರೆ ಅದು ತಾತ್ಕಾಲಿಕ ಏಕೆ?

"ಕಾಶ್ಮೀರದ ವಿಷಯದಲ್ಲಿ ಭಾರತದ ನಡೆ ಅಕ್ರಮ ಮತ್ತು ವಿಶ್ವಸಂಸ್ಥೆಯ ನಿರ್ಣಯಗಳಿಗೆ ವಿರುದ್ಧ" ಎಂದು ಪಾಕಿಸ್ತಾನ ದೂರಿತ್ತು. ಸದಾ ಪಾಕಿಸ್ತಾನದ ಪರವಾಗಿಯೇ ಇರುವ ಚೀನಾ ಇದೀಗ ತಾನೂ ಈ ವಿಷಯದಲ್ಲಿ ತಲೆತೂರಿಸಿದ್ದು, ವಿಶ್ವಸಂಸ್ಥೆಯ ಮಧ್ಯಸ್ಥಿಕೆಯನ್ನು ಕೇಳಿದೆ. ಸಭೆ ನಡೆಸುವಂತೆ ಕೋರಿ ವಿಶ್ವಸಂಸ್ಥೆಗೆ ಚೀನಾ ಕಳಿಸಿದ ಮನವಿಯ ಬಗ್ಗೆ ವಿಶ್ವಸಂಸ್ಥೆಯ ಉನ್ನತ ಅಧಿಕಾರಿಯೊಬ್ಬರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

English summary
China talked with UN Security council regarding Kashmir issue, demanded closed consultation.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X