US Election: ನೇವಾಡ ಚುನಾವಣಾಧಿಕಾರಿ ಸುದ್ದಿಗೋಷ್ಠಿಗೆ ವ್ಯಕ್ತಿಯ ಅಡ್ಡಿ

ವಾಶಿಂಗ್ಟನ್, ನವೆಂಬರ್.05: ಅಮೆರಿಕಾ ಅಧ್ಯಕ್ಷೀಯ ಚುನಾವಣಾ ಮತ ಎಣಿಕೆಯಲ್ಲಿ ಡೆಮಾಕ್ರೆಟಿಕ್ ಪಕ್ಷದ ಅಭ್ಯರ್ಥಿ ಜೋ ಬಿಡೆನ್ ಮುನ್ನಡೆ ಕಾಯ್ದುಕೊಂಡಿರುವುದು ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಬೆಂಬಲಿಗರನ್ನು ಕೆರಳುವಂತೆ ಮಾಡಿದೆ.

ನೇವಾಡದಲ್ಲಿ ಸುದ್ದಿಗೋಷ್ಠಿ ನಡೆಸುತ್ತಿರುವ ಸಂದರ್ಭದಲ್ಲೇ ಮಧ್ಯಪ್ರವೇಶಿಸಿದ ವ್ಯಕ್ತಿಯೊಬ್ಬ ಜೋ ಬಿಡೆನ್ ವಿರುದ್ಧ ಆರೋಪ ಮಾಡಿದರು. ಡೆಮಾಕ್ರಟಿಕ್ ಪಕ್ಷವು ಮತಗಳನ್ನು ಕದಿಯುವ ಪ್ರಯತ್ನ ಮಾಡುತ್ತಿದೆ ಎಂದು ರಂಪಾಟ ಮಾಡಿದ್ದಾನೆ.

ಮತಎಣಿಕೆ ಕಾರ್ಯವನ್ನು ಮುಗಿಸಿದ ಚುನಾವಣಾ ಅಧಿಕಾರಿಗಳು ಆಗಷ್ಟೇ ಸುದ್ದಿಗೋಷ್ಠಿ ನಡೆಸುವುದಕ್ಕೆ ಮುಂದಾದರು. ಈ ವೇಳೆ "BBQ, Beer, Freedom" ಎಂದು ಬರೆದುಕೊಂಡಿದ್ದ ಬಿಳಿ ಟೀ-ಶರ್ಟ್ ಧರಿಸಿದ ವ್ಯಕ್ತಿಯೊಬ್ಬರು ಮಧ್ಯಪ್ರವೇಶಿಸಿದರು. ಬಿಡೆನ್ ಅವರ ಅಪರಾಧಿ ಕುಟುಂಬವು ಚುನಾವಣೆಯಲ್ಲಿ ಮತಗಳನ್ನು ಕದಿಯುವುದಕ್ಕೆ ಪ್ರಯತ್ನಿಸುತ್ತಿದೆ. ಮಾಧ್ಯಮಗಳು ಅದನ್ನೇ ಹೆಚ್ಚಾಗಿ ತೋರಿಸುತ್ತಿವೆ ಎಂದು ಕೂಗಾಡಿದನು.

Biden Is Trying To Steal The Election: A Man Interrupts At Press Conference In Nevada

ಪ್ರಪಂಚದಿಂದ ಸ್ವಾತಂತ್ರ್ಯ ನೀಡಿ ಎಂದು ಘೋಷಣೆ:

ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಜೋ ಬಿಡೆನ್ ಮತಗಳನ್ನು ಕದಿಯುತ್ತಿದ್ದಾರೆ ಎಂದು ಕೂಗುವ ಮೊದಲು ಪ್ರಪಂಚದಿಂದ ತಮಗೆ ಸ್ವಾತಂತ್ರ್ಯ ನೀಡಿ ಎಂದು ಇದೇ ವ್ಯಕ್ತಿಯು ಘೋಷಣೆ ಕೂಗಿದ್ದನು. ನಾವು ಪ್ರಪಂಚದಿಂದ ಸ್ವಾತಂತ್ರ್ಯವನ್ನು ಪಡೆದುಕೊಳ್ಳುವುದಕ್ಕೆ ಬಯಸುತ್ತಿದ್ದೇವೆ. ಬಿಡೆನ್ ಅವರೇ ನಮ್ಮ ಸ್ವಾತಂತ್ರ್ಯವನ್ನು ನೀಡಿ" ಎಂದು ವ್ಯಕ್ತಿಯು ಕೂಗಿದ್ದನು ಎಂದು ತಿಳಿದು ಬಂದಿದೆ.

ನೇವಾಡ ಕಣದಲ್ಲಿ ಡೆಮಾಕ್ರೆಟಿಕ್ ಪಕ್ಷದ ಅಭ್ಯರ್ಥಿ ಜೋ ಬಿಡೆನ್ ಮುನ್ನಡೆ ಕಾಯ್ದುಕೊಂಡಿರುವುದು ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ನಡುವೆ ತೀವ್ರ ಪೈಪೋಟಿ ನಡೆಯುತ್ತಿದೆ. ಆರು ಎಲೆಕ್ಟೋರಲ್ ಮತಗಳನ್ನು ಹೊಂದಿರುವ ಕ್ಷೇತ್ರದಲ್ಲಿ ಬಿಡೆನ್ 49.3ರಷ್ಟು ಮತ ಪಡೆದುಕೊಂಡಿದ್ದರೆ, ಡೊನೊಲ್ಡ್ ಟ್ರಂಪ್ 48.7ರಷ್ಟು ಮತ ಗಳಿಸಿದ್ದಾರೆ. 2004ರಲ್ಲಿ ಜಾರ್ಜ್ ಡಬ್ಲ್ಯು ಬುಷ್ ಈ ಕ್ಷೇತ್ರದಲ್ಲಿ ಗೆಲುವುದು ದಾಖಲಿಸಿದ ಕೊನೆಯ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಎನಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+