ರಷ್ಯಾದ ಮೇಲೆ ಹಲವು ಆರ್ಥಿಕ ನಿರ್ಬಂಧಗಳನ್ನು ವಿಧಿಸಿದ ಅಮೆರಿಕ
ವಾಷಿಂಗ್ಟನ್, ಫೆಬ್ರವರಿ 23: ರಷ್ಯಾದ ಮೇಲೆ ಅಮೆರಿಕವು ಹಲವು ಆರ್ಥಿಕ ನಿರ್ಬಂಧಗಳನ್ನು ಹೇರಿದೆ.
ಉಕ್ರೇನ್ ಪೂರ್ವಭಾಗದಲ್ಲಿ ಬಂಡುಕೋರರ ಪ್ರಾಬಲ್ಯವಿರುವ ಪ್ರದೇಶಗಳಲ್ಲಿ ತನ್ನ ಸೇನೆಯನ್ನು ನಿಯೋಜಿಸಲು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಆದೇಶಿಸಿದ ಬೆನ್ನಲ್ಲೇ ಅಮೆರಿಕ, ರಷ್ಯಾದ ಮೇಲೆ ಆರ್ಥಿಕ ನಿರ್ಬಂಧಗಳನ್ನು ವಿಧಿಸಿದೆ.
ಇದಲ್ಲದೇ ರಷ್ಯಾ ಉಕ್ರೇನ್ ಮೇಲೆ ಯುದ್ಧ ಮುಂದುವರಿಸಿದ್ದೇ ಆದಲ್ಲಿ ಇನ್ನೂ ಹೆಚ್ಚಿನ ನಿರ್ಬಂಧಗಳನ್ನು ವಿಧಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
Recommended Video
ಮೊದಲ ಭಾಗವಾಗಿ ಹಲವಾರು ನಿರ್ಬಂಧಗಳನ್ನು ವಿಧಿಸಿದ ಬಗ್ಗೆ ಮಾಹಿತಿ ನೀಡಿದ ಜೋ ಬೈಡನ್, ರಷ್ಯಾವು ತನ್ನ ಸೇನೆಯನ್ನು ಉಕ್ರೇನ್ ಪ್ರದೇಶಗಳಿಗೆ ಕಳುಹಿಸಿಕೊಟ್ಟು, ಆ ದೇಶದ ಪ್ರದೇಶವನ್ನು ಆಕ್ರಮಣ ಮಾಡಿಕೊಂಡಿದೆ. ಇದು ಯುದ್ಧಕ್ಕೆ ಸರಿಸಮಾನವಾದುದು ಎಂದು ಆರೋಪಿಸಿದ್ದಾರೆ.

ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ಈ ಕ್ರಮ ರಷ್ಯಾದ ಅಂತಾರಾಷ್ಟ್ರೀಯ ಬದ್ಧತೆಯ ಪ್ರಚ್ಛನ್ನ ಉಲ್ಲಂಘನೆ ಎಂದು ಬಿಡೆನ್ ಆಡಳಿತ ವ್ಯಾಖ್ಯಾನಿಸಿದೆ. ಈ ಆರ್ಥಿಕ ದಿಗ್ಬಂಧನ ಪುಟಿನ ಅವರು ಗುರುತಿಸಿರುವ ಉಕ್ರೇನ್‍ನ ಎರಡು ಪ್ರತ್ಯೇಕತಾವಾದಿ ಪ್ರದೇಶಗಳಲ್ಲಿ ಹೊಸ ಹೂಡಿಕೆ, ವ್ಯಾಪಾರ ವಹಿವಾಟು ಮತ್ತು ಹಣಕಾಸು ನೆರವನ್ನು ನಿಷೇಧಿಸುತ್ತದೆ.
ಉಕ್ರೇನ್ ಮೇಲೆ ರಷ್ಯಾದ ಸಂಭವನೀಯ ದಾಳಿಯ ಬೆದರಿಕೆ ನಡುವೆ ಪೂರ್ವ ಉಕ್ರೇನ್‍ನಲ್ಲಿ ರಷ್ಯಾ ಗುರುತಿಸಿರುವ ಎರಡು ಪ್ರದೇಶಗಳ ಮೇಲೆ ದಿಗ್ಬಂಧನ ವಿಧಿಸಲಾಗುತ್ತಿದೆ ಎಂದು ಐರೋಪ್ಯ ಒಕ್ಕೂಟದ ಉನ್ನತ ಅಧಿಕಾರಿಗಳು ತಿಳಿಸಿದ್ದಾರೆ.
ಈ ಪ್ರದೇಶಗಳನ್ನು ಗುರುತಿಸಿರುವುದು ಅಂತಾರಾಷ್ಟ್ರೀಯ ಕಾನೂನಿನ ಸ್ಪಷ್ಟ ಉಲ್ಲಂಘನೆ ಎಂದು ಐರೋಪ್ಯ ಆಯೋಗದ ಅಧ್ಯಕ್ಷೆ ಉರ್ಸುಲಾ ವಾನ್ ಡೆರ್‍ಲೀನ್ ಮತ್ತು ಮಂಡಳಿ ಅಧ್ಯಕ್ಷ ಚಾಲ್ರ್ಸ್ ಮೈಕೇಲ್ ಜಂಟಿ ಹೇಳಿಕೆ ನೀಡಿದ್ದಾರೆ.
ಉಕ್ರೇನ್ ಪ್ರದೇಶಗಳಲ್ಲಿ ರಷ್ಯಾ ಸೇನೆ ತನ್ನ ವ್ಯಾಪ್ತಿಯನ್ನು ವಿಸ್ತರಿಸಲು ಮುಂದಾಗಿದೆ. ಇದು ರಷ್ಯಾ ಅಂತಾರಾಷ್ಟ್ರೀಯ ಬದ್ಧತೆಗಳನ್ನು ಮೀರಿದ್ದರಿಂದ ಆ ದೇಶದ ಮೇಲೆ ಕೆಲ ನಿರ್ಬಂಧಗಳನ್ನು ಹೇರಲಾಗುವುದು ಎಂದು ಅವರು ತಿಳಿಸಿದ್ದಾರೆ.
ಕಳೆದೊಂದು ತಿಂಗಳಿನಿಂದಲೂ ರಷ್ಯಾದ ಆಕ್ರಮಣಕಾರಿ ನೀತಿ ಕುರಿತಾಗಿ ಎಚ್ಚರಿಸುತ್ತಾ ಬಂದಿರುವ ಅಮೆರಿಕ ಇಂದು ಯುಕ್ರೇನ್ ಅನ್ನು ಮತ್ತೆ ಎಚ್ಚರಿಸಿದೆ.
ರಷ್ಯಾ ಯಾವುದೇ ಕ್ಷಣದಲ್ಲಿ ಬೇಕಾದರೂ ದಾಳಿ ನಡೆಸಬಹುದು ಎಂದು ಶ್ವೇತಭವನ ಉಕ್ರೇನ್ ಸರ್ಕಾರವನ್ನು ಎಚ್ಚರಿಸಿದೆ. ಶ್ವೇತಭವನ ಎಚ್ಚರಿಕೆ ಕುರಿತಾಗಿ ಪ್ರತಿಕ್ರಿಯಿಸಿರುವ ಉಕ್ರೇನ್ ಅಮೆರಿಕ ಸರ್ಕಾರದ ಎಚ್ಚರಿಕೆಯನ್ನು ಕಡೆಗಣಿಸಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಇಷ್ಟು ಬೇಗ ಧೈರ್ಯ ಕಳೆದುಕೊಳ್ಳಬೇಕಿಲ್ಲ ಎಂದು ಉಕ್ರೇನ್ ಅಧ್ಯಕ್ಷ ಹೇಳಿದ್ದಾರೆ.
ರಷ್ಯಾ ಮೇಲೆ ಏನೆಲ್ಲಾ ನಿರ್ಬಂಧಗಳು?
*ರಷ್ಯಾದಿಂದ ಬರುವ ಎಲ್ಲ ಗಣ್ಯರು, ಅವರ ಕುಟುಂಬಸ್ಥರಿಗೆ ಅಮೆರಿಕ ಪ್ರವೇಶ ನಿಷಿದ್ಧ
*ತಕ್ಷಣದಿಂದಲೇ ಜಾರಿಯಾಗುವಂತೆ ರಷ್ಯಾದ ಗಣ್ಯರು ಅಮೆರಿಕ ಪ್ರವೇಶ ನಿರ್ಬಂಧಿಸಿ ಆದೇಶ
*ರಷ್ಯಾದ ಜೊತೆ ಮಾಡಿಕೊಂಡಿದ್ದ ನಾರ್ಡ್ ಸ್ಟ್ರೀಮ್-2 ಒಪ್ಪಂದಕ್ಕೆ ತಡೆ
*ಜರ್ಮನಿ ಜೊತೆಗೆ ಈ ಒಪ್ಪಂದ ಮುಂದುವರಿಸಲು ಅಮೆರಿಕ ಇಂಗಿತ
* ರಷ್ಯಾದ ಎರಡು ಬ್ಯಾಂಕ್ಗಳಾದ ವೆಬ್ ಮತ್ತು ಮಿಲಿಟರಿ ಬ್ಯಾಂಕ್ ಮೇಲೆ ಅಮೆರಿಕದಲ್ಲಿ ಕಾರ್ಯನಿರ್ವಹಣೆಗೆ ತಡೆ
*ಇನ್ನು ಮುಂದೆ ರಷ್ಯಾ, ಅಮೆರಿಕದಲ್ಲಿ ಹಣಕಾಸು ಹೂಡಿಕೆ ಮಾಡುವಂತಿಲ್ಲ
*ಅಮೆರಿಕ ಮತ್ತು ಯುರೋಪಿಯನ್ ಮಾರುಕಟ್ಟೆಗಳಲ್ಲಿ ರಷ್ಯಾ ವಹಿವಾಟಿಗೆ ತಡೆ












Click it and Unblock the Notifications