ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮೆರಿಕ ಅಧ್ಯಕ್ಷೀಯ ಚುನಾವಣೆಯಿಂದ ಹಿಂದೆ ಸರಿದ ಬೆರ್ನಿ ಸ್ಯಾಂಡರ್ಸ್

|
Google Oneindia Kannada News

ವಾಷಿಂಗ್ಟನ್, ಏಪ್ರಿಲ್ 10: ಅಮೆರಿಕ ಅಧ್ಯಕ್ಷೀಯ ಚುನಾವಣೆಯಿಂದ ಡೆಮಾಕ್ರೆಟಿಕ್ ಪಕ್ಷದ ಸೆನೆಟರ್ ಬೆರ್ನಿ ಸ್ಯಾಂಡರ್ಸ್ ಹಿಂದೆ ಸರಿದಿದ್ದಾರೆ.

ಬೆರ್ನಿ ಸ್ಯಾಂಡರ್ಸ್ ನ ನಡೆಯಿಂದ ಡೆಮಾಕ್ರೆಟಿಕ್ ಪಕ್ಷದ ಮತ್ತೋರ್ವ ಆಕಾಂಕ್ಷಿ, ಅಮೆರಿಕಾದ ಮಾಜಿ ಉಪಾಧ್ಯಕ್ಷ ಜೋಯ್ ಬಿಡೆನ್ ಡೆಮಾಕ್ರೆಟಿಕ್ ಪಕ್ಷದ ಸಂಭಾವ್ಯ ಅಭ್ಯರ್ಥಿಯಾಗುವುದು ಬಹುತೇಕ ಖಾತ್ರಿಯಾಗಿದೆ.

ಕೊರೊನಾ ಬಾಂಬ್: ಚೀನಾದ ಮೇಲೆ ಟ್ರಂಪ್‌ಗೆ ಮತ್ತಷ್ಟು ಅನುಮಾನಕೊರೊನಾ ಬಾಂಬ್: ಚೀನಾದ ಮೇಲೆ ಟ್ರಂಪ್‌ಗೆ ಮತ್ತಷ್ಟು ಅನುಮಾನ

ಇಂದು ನಾನು ನನ್ನ ಪ್ರಚಾರವನ್ನು ನಿಲ್ಲಿಸುತ್ತೇನೆ, ಪ್ರಚಾರ ಕೊನೆಗೊಳ್ಳುವಾಗ ನ್ಯಾಯಕ್ಕಾಗಿ ಹೋರಾಟ ಮುಂದುವರೆಯಲಿದೆ ಎಂದು 78 ವರ್ಷದ ಬೆರ್ನಿ ಸ್ಯಾಂಡರ್ಸ್ ಹೇಳಿದ್ದಾರೆ.

Bernie Sanders Dropping Out Of The Election Race

ಬಿಡೆನ್ ವಿರುದ್ಧದ ಪ್ರಾಥಮಿಕ ಚುನಾವಣೆಗಳಲ್ಲಿ ಬೆರ್ನಿ ಸ್ಯಾಂಡರ್ಸ್ ಗೆ ಉತ್ತಮ ಲಕ್ಷಣಗಳು ಕಾಣದ ಕಾರಣ ಅವರು ಅಧ್ಯಕ್ಷೀಯ ಚುನಾವಣೆಯಿಂದ ಹಿಂದೆಸರಿಯುವುದು ನಿರೀಕ್ಷಿತವಾಗಿತ್ತು.

ಇದೇ ವೇಳೆ ಬಿಡೆನ್ ಟ್ವಿಟರ್ ನಲ್ಲಿ ಪ್ರತಿಕ್ರಿಯೆ ನೀಡಿದ್ದು, ನಾವು ಒಗ್ಗಟ್ಟಿನಿಂದ ಟ್ರಂಪ್ ನ್ನು ಮಣಿಸುತ್ತೇವೆ ಎಂದು ಹೇಳಿದ್ದಾರೆ.

ನವೆಂಬರ್ ನಲ್ಲಿ ಅಮೆರಿಕ ಅಧ್ಯಕ್ಷೀಯ ಚುನಾವಣೆಯ ನಡೆಯಲಿದ್ದು, ರಿಪಬ್ಲಿಕನ್ ಪಕ್ಷದ, ಹಾಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುದ್ಧ ಡೆಮಾಕ್ರೆಟಿಕ್ ಪಕ್ಷದ ಜೋಯ್ ಬಿಡೆನ್ ಸ್ಪರ್ಧಿಸುವುದು ಬಹುತೇಕ ಖಚಿತವಾಗಿದೆ.

English summary
After electrifying the moribund campaign for the US presidential elections, scheduled for November, with a series of radical ideas that promised to fundamentally alter the American way of thinking, Bernie Sanders on Wednesday announced his withdrawal from the race.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X