ಸುಪ್ರೀಂಕೋರ್ಟ್ ವಿರುದ್ಧ ಹರಿಹಾಯ್ದ ಡೊನಾಲ್ಡ್ ಟ್ರಂಪ್

ವಾಷಿಂಗ್ಟನ್, ಡಿಸೆಂಬರ್ 12: ನವೆಂಬರ್ 3ರಂದು ನಡೆದ ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಫಲಿತಾಂಶವು ತಮ್ಮ ಪರವಾಗಿ ಬಾರದಿದ್ದರಿಂದ ಕೋಪಗೊಂಡಿರುವ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಚುನಾವಣೆಯಲ್ಲಿ ವಂಚನೆ ನಡೆದಿದೆ ಎಂದು ಆರೋಪಿಸಿ, ಜೋ ಬೈಡನ್ ಗೆಲುವು ಸಾಧಿಸಿದ ಕೆಲವು ಕಡೆಗಳಲ್ಲಿನ ಫಲಿತಾಂಶವನ್ನು ಬದಲಿಸುವಂತೆ ಕೋರಿ ಸುಮಾರು 18 ರಾಜ್ಯಗಳಲ್ಲಿ ಕಾನೂನು ಹೋರಾಟ ನಡೆಸಿದ್ದರು. ಆದರೆ ಈ ಎಲ್ಲ ಮೊಕದ್ದಮೆಗಳನ್ನೂ ಸುಪ್ರೀಂಕೋರ್ಟ್ ವಜಾಗೊಳಿಸಿದೆ.

ಹೀಗಿದ್ದರೂ ತಮ್ಮ ಆರೋಪವನ್ನು ಕೈಬಿಡದಿರಲು ನಿರ್ಧರಿಸಿರುವ ಟ್ರಂಪ್, ಹೋರಾಟ ಮುಂದುವರಿಸುವ ಸೂಚನೆ ನೀಡಿದ್ದಾರೆ. 'ಸುಪ್ರೀಂಕೋರ್ಟ್ ನಿಜಕ್ಕೂ ನಮ್ಮನ್ನು ಕೆಳಕ್ಕೆ ನೂಕಿದೆ. ವಿವೇಕವಿಲ್ಲ, ಧೈರ್ಯವೂ ಇಲ್ಲ' ಎಂದು ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

ಸುಪ್ರೀಂಕೋರ್ಟ್ ತೀರ್ಪಿಗೆ ಟ್ವಿಟ್ಟರ್‌ನಲ್ಲಿ ಪ್ರತಿಕ್ರಿಯೆ ನೀಡಿರುವ ಟ್ರಂಪ್, 'ಹಾಗಾದರೆ ನೀವು ಅಮೆರಿಕದ ಅಧ್ಯಕ್ಷ. ನೀವು ಈಗಷ್ಟೇ ಚುನಾವಣೆಯಲ್ಲಿ ಭಾಗವಹಿಸಿದ್ದೀರಿ, ಇತಿಹಾಸದಲ್ಲಿ ಯಾವುದೇ ಅಧ್ಯಕ್ಷ ಪಡೆಯದಷ್ಟು ಮತಗಳನ್ನು ಗಳಿಸಿದ್ದೀರಿ ಮತ್ತು ಉದ್ದೇಶಪೂರ್ವಕವಾಗಿ ಸೋತಿದ್ದೀರಿ' ಎಂದು ಹೇಳಿದ್ದಾರೆ.

 America Supreme Court Throws Out Donald Trump Suit, President Suggests Fight Will Continue

'ಸುಪ್ರೀಂಕೋರ್ಟ್ ಮುಂದೆ ನಿಮಗೆ ನಿಲ್ಲಲು ಸಾಧ್ಯವಿಲ್ಲ. ಹಾಗಾಗಿ ಎಚ್ಚರಿಕೆಯ ಅಧ್ಯಯನ ಮತ್ತು ಪರಿಗಣನೆ ಬಳಿಕ ಮಧ್ಯಸ್ಥಿಕೆ ವಹಿಸಬಹುದು. ನಿಮ್ಮನ್ನು ಹಾಳುಮಾಡಿದ್ದೇವೆ ಎಂದು ಯೋಚಿಸುತ್ತಾರೆ, ಕೆಲವೊಮ್ಮೆ ಅದು ಅವರಿಗೂ ಗಾಸಿ ಉಂಟುಮಾಡುತ್ತದೆ. ಸಮಾನಮನಸ್ಕರಾದ ಅನೇಕರು ಮೊಕದ್ದಮೆಯನ್ನು ಸೇರಿಕೊಂಡಿದ್ದರು. ಆದರೆ ಕ್ಷಣಮಾತ್ರದಲ್ಲಿಅವುಗಳನ್ನು ಹೊರಗೆ ಎಸೆಯಲಾಯಿತು. ನಾವು ಗಮನಕ್ಕೆ ತಂದ ಅನೇಕ ಸಂಗತಿಗಳನ್ನು ಅವರು ನೋಡಲೂ ಹೋಗಲಿಲ್ಲ. ಹೋರಾಟ ಮುಂದುವರಿಯಲಿದೆ' ಎಂದು ಸುಪ್ರೀಂಕೋರ್ಟ್ ವಿರುದ್ಧ ಹರಿಹಾಯ್ದಿದ್ದಾರೆ.

ಸುಪ್ರೀಂಕೋರ್ಟ್ ಆದೇಶದ ವಿರುದ್ಧ ಡೊನಾಲ್ಡ್ ಟ್ರಂಪ್ ಟ್ವಿಟ್ಟರ್‌ನಲ್ಲಿ ಅಸಮಾಧಾನ ವ್ಯಕ್ತಪಡಿಸಿದ ಕೆಲವೇ ಸಮಯದಲ್ಲಿ ಟ್ವಿಟ್ಟರ್ ಸಂಸ್ಥೆಯು ಅವರ ಟ್ವೀಟ್‌ಗೆ 'ಚುನಾವಣೆಯಲ್ಲಿ ವಂಚನೆ ನಡೆದಿದೆ ಎಂಬ ಆರೋಪವು ವಿವಾದಾತ್ಮಕವಾಗಿದೆ' ಎಂಬ ಸಂದೇಶವನ್ನು ಅಡಕಮಾಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+