ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಈ ಹಂತಕ 35 ವರ್ಷದಲ್ಲಿ ಕೊಂದಿದ್ದು ಬರೋಬ್ಬರಿ 93 ಮಹಿಳೆಯರನ್ನು!

|
Google Oneindia Kannada News

ವಾಷಿಂಗ್ಟನ್, ಅಕ್ಟೋಬರ್ 8: ಸುಮಾರು ಏಳು ವರ್ಷದಿಂದ ಜೈಲಿನಲ್ಲಿರುವ ಆರೋಪಿಯೊಬ್ಬ ತಾನು ಎಸಗಿರುವ ಭೀಕರ ಕೃತ್ಯಗಳ ಬಗ್ಗೆ ಮಾಹಿತಿ ಹೊರಹಾಕಿದ್ದಾನೆ. ಆತ ಬಾಯ್ಬಿಟ್ಟ ಕಥೆಗಳನ್ನು ಕೇಳಿ ಸ್ವತಃ ಪೊಲೀಸರೇ ನಡುಗಿದ್ದಾರೆ. ಅಮೆರಿಕದ ಇತಿಹಾಸದಲ್ಲಿಯೇ ಈಗ ಅತಿ ದೊಡ್ಡ ಸರಣಿ ಕೊಲೆಗಾರ ಎಂಬ ಕುಖ್ಯಾತಿಯನ್ನು ಪಡೆದುಕೊಂಡಿದ್ದಾನೆ.

2012ರಿಂದ ಸೆರೆವಾಸ ಅನುಭವಿಸುತ್ತಿರುವ ಸಾಮ್ಯುಯೆಲ್ ಲಿಟ್ಟಲ್ ಎಂಬಾತ 1970-2005ರ ಅವಧಿಯಲ್ಲಿ ಅಮೆರಿಕದೆಲ್ಲೆಡೆ 93 ಮಹಿಳೆಯರನ್ನು ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ಆತ ನೀಡಿರುವ ಎಲ್ಲ ಮಾಹಿತಿಗಳೂ ನಂಬಲರ್ಹವಾಗಿವೆ. ದಾಖಲೆಗಳನ್ನು ಪರಿಶೀಲಿಸಿರುವಾಗ 93ರಲ್ಲಿ ಸುಮಾರು 50 ಕೊಲೆಗಳ ಮಾಹಿತಿ ಹೋಲಿಕೆಯಾಗಿವೆ. ಇನ್ನು ಕೆಲವು ಕೊಲೆಗಳು ನಡೆದಿರುವುದೇ ತಿಳಿದಿರಲಿಲ್ಲ ಎಂದು ಎಫ್‌ಬಿಐ ತಿಳಿಸಿದೆ.

8 ವರ್ಷದ ಹಿಂದಿನ ಭಯಾನಕ ಮರ್ಡರ್ ಮಿಸ್ಟ್ರಿ, ಪತ್ನಿಯೇ ಕೊಲೆಗಾರ್ತಿ!8 ವರ್ಷದ ಹಿಂದಿನ ಭಯಾನಕ ಮರ್ಡರ್ ಮಿಸ್ಟ್ರಿ, ಪತ್ನಿಯೇ ಕೊಲೆಗಾರ್ತಿ!

79 ವರ್ಷದ ಸಾಮ್ಯುಯೆಲ್, ಮೂರು ಕೊಲೆಗಳ ಪ್ರಕರಣದಲ್ಲಿ 2014ರಿಂದ ಕ್ಯಾಲಿಫೋರ್ನಿಯಾದ ಜೈಲಿನಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದಾನೆ. ಆತನ ಬಲಿಪಶುಗಳಲ್ಲಿ ಹೆಚ್ಚಿನವರು ಸಮಾಜದ ಸಾಮಾನ್ಯ ವರ್ಗದವರಾಗಿದ್ದಾರೆ. ಇವುಗಳಲ್ಲಿ ಅನೇಕ ಹತ್ಯೆಗಳು ಓವರ್‌ಡೋಸ್ ಅಥವಾ ಆಕಸ್ಮಿಕ ಸಾವಿನಂತೆ ಬಿಂಬಿತವಾಗುವೆ. ಕೆಲವು ಪ್ರಕರಣಗಳಲ್ಲಿ ದೇಹಗಳೂ ಪತ್ತೆಯಾಗಿಲ್ಲ.

ವರ್ಣಚಿತ್ರ ಬರೆದಿರುವ ಸಾಮ್ಯುಯೆಲ್

ವರ್ಣಚಿತ್ರ ಬರೆದಿರುವ ಸಾಮ್ಯುಯೆಲ್

ತಾನು ಕೊಲೆ ಮಾಡಿದವರಲ್ಲಿ 30 ಮಹಿಳೆಯರ ವರ್ಣಚಿತ್ರಗಳನ್ನು ಸ್ವತಃ ಸಾಮ್ಯುಯೆಲ್ ಜೈಲಿನಲ್ಲಿ ಕುಳಿತು ಬಿಡಿಸಿದ್ದಾನೆ. ಈ ಚಿತ್ರಗಳನ್ನು ಗಮನಿಸಿದಾಗ ಆತನಿಂದ ಕೊಲೆಯಾದವರು ಬಹುತೇಕರು ಕಪ್ಪು ವರ್ಣೀಯರೇ ಆಗಿದ್ದಾರೆ. ಸಾಮಾನ್ಯವಾಗಿ ಒಂಟಿಯಾಗಿ ಬದುಕುತ್ತಿದ್ದವರನ್ನು ಪರಿಚಯ ಮಾಡಿಕೊಂಡು ಅವರನ್ನು ಕೊಲ್ಲುತ್ತಿದ್ದ ಆತನಿಗೆ, ತಾನು ಸಿಕ್ಕಿಬೀಳುವುದೇ ಇಲ್ಲ ಎಂಬ ಭಾವನೆಯಿತ್ತು.

ಸುಳಿವು ಸಿಗದಂತೆ ಹತ್ಯೆ

ಸುಳಿವು ಸಿಗದಂತೆ ಹತ್ಯೆ

ಓಹಿಯೋದ ಮಾಜಿ ಬಾಕ್ಸರ್ ಆಗಿರುವ ಸಾಮ್ಯುಯೆಲ್ ಮಾನಸಿಕ ಅಸ್ಥಿರತೆ ಹೊಂದಿದ್ದ. ಎಲ್ಲೆಡೆ ಓಡಾಡುತ್ತಿದ್ದ ಆತ ಕೊಲೆ ಮಾಡುವುದರಲ್ಲಿ ಆನಂದ ಪಡುತ್ತಿದ್ದ. ಸುಳಿವುಗಳನ್ನು ಬಿಟ್ಟುಕೊಡದಂತೆ ಸಾಯಿಸುವ ಚಾಣಾಕ್ಷತೆಯನ್ನು ಕೂಡ ಬೆಳೆಸಿಕೊಂಡಿದ್ದ. ಹಲವು ದಶಕಗಳ ಹಿಂದೆ ಆತ ಮಾಡಿದ್ದಾಗಿ ಒಪ್ಪಿಕೊಂಡಿರುವ ಕೊಲೆಗಳ ಜಾಡು ಹಿಡಿಯಲು ಪೊಲೀಸರು ಪ್ರಯತ್ನಿಸಿದ್ದಾರೆ. ಓಹಿಯೋದಲ್ಲಿ ನಾಲ್ಕು, ಕ್ಯಾಲಿಫೋರ್ನಿಯಾದಲ್ಲಿ ಮೂರು ಮಹಿಳೆಯರನ್ನು ಕೊಂದಿದ್ದಾಗಿ ಆತ 2013ರಲ್ಲಿ ಒಪ್ಪಿಕೊಂಡಿದ್ದ. ಬಳಿಕ ಒಂದೊಂದೇ ಕೊಲೆಗಳ ಮಾಹಿತಿ ಹೊರಹಾಕಿದ್ದಾನೆ.

ಹೃದಯಾಘಾತ ಸರಣಿ ಸಾವು, ಕೇರಳದ ನಿಗೂಢ ಹತ್ಯೆ ರಹಸ್ಯ ಬಯಲುಹೃದಯಾಘಾತ ಸರಣಿ ಸಾವು, ಕೇರಳದ ನಿಗೂಢ ಹತ್ಯೆ ರಹಸ್ಯ ಬಯಲು

ಎಲ್ಲ ಪ್ರಕರಣಗಳಿಗೂ ಅಂತ್ಯ

ಎಲ್ಲ ಪ್ರಕರಣಗಳಿಗೂ ಅಂತ್ಯ

ಸಾಮ್ಯುಯೆಲ್ ಜೈಲಿನಲ್ಲಿಯೇ ಇದ್ದರೂ ಆತ ಎಸಗಿದ ಕೃತ್ಯಗಳಿಗೆ ಬಲಿಯಾದ ಪ್ರತಿಯೊಬ್ಬರಿಗೂ ನ್ಯಾಯ ಸಿಗಬೇಕು ಎನ್ನುವುದು ನಮ್ಮ ಉದ್ದೇಶ. ಈ ಮೂಲಕ ಬಹುತೇಕ ಎಲ್ಲ ಪ್ರಕರಣಗಳಿಗೂ ತಾರ್ಕಿಕ ಅಂತ್ಯ ನೀಡಬಹುದು ಎಂದು ಪೊಲೀಸರು ಹೇಳಿದ್ದಾರೆ. ಸಾಮ್ಯುಯೆಲ್ ಮೊದಲ ಬಾರಿಗೆ ಬಂಧಿತನಾಗಿದ್ದು 2012ರಲ್ಲಿ. ಕೆಂಟುಕಿಯ ಅನಾಥ ಗೃಹವೊಂದರಲ್ಲಿದ್ದ ಆತನನ್ನು ಮಾದಕದ್ರವ್ಯದ ಪ್ರಕರಣದಲ್ಲಿ ಕ್ಯಾಲಿಫೋರ್ನಿಯಾಕ್ಕೆ ಗಡಿಪಾರು ಮಾಡಲಾಗಿತ್ತು.

ಇಂಗ್ಲೆಂಡ್‌ನ ಹರೋಲ್ಡ್ ಶಿಪ್‌ಮ್ಯಾನ್‌

ಇಂಗ್ಲೆಂಡ್‌ನ ಹರೋಲ್ಡ್ ಶಿಪ್‌ಮ್ಯಾನ್‌

ಇದು ಅಮೆರಿಕದ ಅತಿ ಭಯಾನಕ ಸರಣಿ ಹತ್ಯೆ ಎಂದು ಪೊಲೀಸರು ಹೇಳಿದ್ದಾರೆ. 1974-1978ರ ಅವಧಿಯಲ್ಲಿ ಟೆಡ್ ಬಂಡಿ ಎಂಬಾತ 30 ಮಂದಿಯನ್ನು ಹತ್ಯೆ ಮಾಡಿದ್ದ. 1970ರ ದಶಕದಲ್ಲಿ ಜಾನ್ ವೇಯ್ನ್ ಗಸಿ ಎಂಬಾತ 33 ಗಂಡುಮಕ್ಕಳು ಮತ್ತು ಯುವಕರನ್ನು ಹತ್ಯೆ ಮಾಡಿದ್ದ. ಅತ್ಯಂತ ಭಯಾನಕ ಜಾಗತಿಕ ಸರಣಿ ಹಂತಕ ಎಂದು ಇಂಗ್ಲೆಂಡ್‌ನ ಹರೋಲ್ಡ್ ಶಿಪ್‌ಮ್ಯಾನ್‌ನನ್ನು ಗುರುತಿಸಲಾಗಿದೆ. 15 ಜನರ ಕೊಲೆ ಪ್ರಕರಣದಲ್ಲಿ ಆತನಿಗೆ 2000ನೇ ಇಸವಿಯಲ್ಲಿ ಗಲ್ಲುಶಿಕ್ಷೆ ವಿಧಿಸಲಾಗಿತ್ತು. ಆತ ಕೊಂದಿದ್ದ ಜನರ ಸಂಖ್ಯೆ ಸುಮಾರು 250.

ಇಸ್ರೋ ವಿಜ್ಞಾನಿಯನ್ನು ಕೊಂದಿದ್ದೇಕೆ? ಸತ್ಯ ಬಾಯ್ಬಿಟ್ಟ ಸಲಿಂಗಕಾಮಿಇಸ್ರೋ ವಿಜ್ಞಾನಿಯನ್ನು ಕೊಂದಿದ್ದೇಕೆ? ಸತ್ಯ ಬಾಯ್ಬಿಟ್ಟ ಸಲಿಂಗಕಾಮಿ

English summary
The most prolific serial killer in US Samuel Little confessed the killing of 93 women across the country in 35 years.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X