ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Breaking: ಜವಾಹಿರಿ ಹತ್ಯೆ, ನ್ಯಾಯ ದೊರೆತಿದೆ ಎಂದ ಒಬಾಮ

|
Google Oneindia Kannada News

ವಾಷಿಂಗ್ಟನ್, ಆ.02: ಅಫ್ಘಾನಿಸ್ತಾನದಲ್ಲಿ ಅಮೆರಿಕ ನಡೆಸಿರುವ ಡ್ರೋನ್ ದಾಳಿಯಲ್ಲಿ ಅಲ್-ಖೈದಾ ಮುಖ್ಯಸ್ಥ ಐಮನ್ ಅಲ್-ಜವಾಹಿರಿ ಹತ್ಯೆ ಮಾಡಲಾಗಿದೆ. ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮ ಈ ದಾಳಿಯನ್ನು ಸ್ವಾಗತಿಸಿದ್ದಾರೆ.

ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್‌ನಲ್ಲಿ ಅಮೆರಿಕ ನಡೆಸಿದ ಡ್ರೋನ್ ದಾಳಿಯಲ್ಲಿ ಐಮನ್ ಅಲ್-ಜವಾಹಿರಿ ಕೊಲ್ಲಲ್ಪಟ್ಟರು. ಅಫ್ಘಾನಿಸ್ತಾನದಲ್ಲಿ ಯುದ್ಧ ಮಾಡದೇ ಭಯೋತ್ಪಾದನೆ ವಿರುದ್ಧ ಹೋರಾಡುವುದು ಸಾಧ್ಯ ಎಂಬುದಕ್ಕೆ ಈ ಹತ್ಯೆ ಸಾಕ್ಷಿಯಾಗಿದೆ ಎಂದು ಬರಾಕ್ ಒಬಾಮಾ ಹೇಳಿದ್ದಾರೆ.

"9/11 ರ ದಾಳಿಯ 20 ವರ್ಷಗಳ ನಂತರ, ಆ ಭಯೋತ್ಪಾದಕ ದಾಳಿಯ ಮಾಸ್ಟರ್‌ಮೈಂಡ್‌ಗಳಲ್ಲಿ ಒಬ್ಬ ಮತ್ತು ಅಲ್-ಖೈದಾ ನಾಯಕನಾಗಿ ಒಸಾಮಾ ಬಿನ್ ಲಾಡೆನ್‌ನ ಉತ್ತರಾಧಿಕಾರಿ - ಐಮನ್ ಅಲ್-ಜವಾಹಿರಿ ಅಂತ್ಯವಾಗಿದೆ. ಅಂತಿಮವಾಗಿ ನ್ಯಾಯ ದೊರಕಿದೆ." ಎಂದು ಒಬಾಮಾ ಹೇಳಿದರು.

Al Qaeda leader Ayman al-Zawahiri death Barack Obama welcomes

"ಅಧ್ಯಕ್ಷ ಬಿಡೆನ್ ಅವರ ನಾಯಕತ್ವಕ್ಕೆ, ಈ ಕ್ಷಣಕ್ಕಾಗಿ ದಶಕಗಳಿಂದ ಕೆಲಸ ಮಾಡುತ್ತಿರುವ ಗುಪ್ತಚರ ಸಮುದಾಯದ ಸದಸ್ಯರಿಗೆ ಮತ್ತು ಒಬ್ಬ ನಾಗರಿಕರಿಗೂ ಅಪಾಯವಾಗದಂತೆ ಅಲ್-ಜವಾಹಿರಿಯನ್ನು ಹತ್ಯೆ ಮಾಡಲು ಸಮರ್ಥರಾದ ಭಯೋತ್ಪಾದನಾ ನಿಗ್ರಹ ದಳದ ಸದಸ್ಯರಿಗೆ ಈ ಗೌರವ ಸಲ್ಲಬೇಕು" ಎಂದರು.

"ಆಫ್ಘಾನಿಸ್ತಾನದಲ್ಲಿ ಯುದ್ಧವಿಲ್ಲದೆಯೇ ಭಯೋತ್ಪಾದನೆಯನ್ನು ಬೇರುಸಹಿತ ಕಿತ್ತೊಗೆಯುವುದು ಸಾಧ್ಯ ಎಂಬುದಕ್ಕೆ ಈ ಸುದ್ದಿಯು ಪುರಾವೆಯಾಗಿದೆ. ಇದು 9/11 ಕುಟುಂಬಗಳಿಗೆ ಮತ್ತು ಅಲ್-ಖೈದಾದ ಕೈಯಲ್ಲಿ ನರಳುತ್ತಿರುವ ಎಲ್ಲರಿಗೂ ಸ್ವಲ್ಪ ಪ್ರಮಾಣದ ಶಾಂತಿಯನ್ನು ನೀಡುತ್ತದೆ ಎಂದು ನಾನು ಭಾವಿಸುತ್ತೇನೆ " ಎಂದು ಮಾಜಿ ಅಧ್ಯಕ್ಷ ಒಬಾಮ ಹೇಳಿದರು.

ಅಮೆರಿಕ ಅಧ್ಯಕ್ಷ ಜೋ ಬಿಡೆನ್ ಅಲ್-ಜವಾಹಿರಿಯ ಹತ್ಯೆಯನ್ನು ಸೋಮವಾರ ದೂರದರ್ಶನದ ಭಾಷಣದಲ್ಲಿ ಘೋಷಿಸಿದ್ದಾರೆ. 71 ವರ್ಷದ ಐಮನ್ ಅಲ್-ಜವಾಹಿರಿ ಜಾಗತಿಕ ಮಟ್ಟದಲ್ಲಿ ಅಲ್ ಖೈದಾ ಮುಖ್ಯಸ್ಥರಾಗಿ ಗುರುತಿಸಿಕೊಂಡಿದ್ದರು.

Al Qaeda leader Ayman al-Zawahiri death Barack Obama welcomes

ಒಸಾಮಾ ಬಿನ್ ಲಾಡೆನ್ ಅನ್ನು ಯುಎಸ್ ಕೊಂದ 11 ವರ್ಷಗಳ ನಂತರ ಗುಂಪಿನ ಹೊಣೆ ಹೊತ್ತುಕೊಂಡಿದ್ದ ಜವಾಹಿರಿ ಮೋಸ್ಟ್ ವಾಟೆಂಡ್ ಉಗ್ರರ ಪಟ್ಟಿಯಲ್ಲಿದ್ದ.

Recommended Video

Team India ಆಟಗಾರರು ಅರ್ಶದೀಪ್ ಜೆರ್ಸಿ ತೊಡಲು ಇದೇ ಕಾರಣ | *Cricket | OneIndia Kannada

ಲಾಡೆನ್‌ನ ನಂತರ ಗುಂಪಿನ ಮುಖ್ಯಸ್ಥರಾಗಿ ಜವಾಹಿರಿ ಗುರುತಿಸಿಕೊಂಡಿದ್ದನು. ಅಲ್ ಖೈದಾದ ಪ್ರಮುಖ ತಂತ್ರಜ್ಞರಲ್ಲಿ ಒಬ್ಬರಾಗಿದ್ದರು, ಜೊತೆಗೆ ಬಿನ್ ಲಾಡೆನ್ ಅವರ ವೈಯಕ್ತಿಕ ವೈದ್ಯರಾಗಿಯೂ ಸೇವೆ ಸಲ್ಲಿಸಿದ್ದರು.

English summary
Former America president Barack Obama welcomed Al Qaeda leader Ayman al-Zawahiri killing. he says finally been brought to justice.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X