ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮೆರಿಕದ ಡ್ರೋನ್ ದಾಳಿ; ಅಲ್-ಖೈದಾ ಮುಖ್ಯಸ್ಥ ಜವಾಹಿರಿ ಸಾವು

|
Google Oneindia Kannada News

ವಾಶಿಂಗ್ಟನ್, ಆಗಸ್ಟ್ 2: ಅಫ್ಘಾನಿಸ್ತಾನದಲ್ಲಿ ಅಮೆರಿಕ ನಡೆಸಿರುವ ಡ್ರೋನ್ ದಾಳಿಯಲ್ಲಿ ಅಲ್-ಖೈದಾ ಮುಖ್ಯಸ್ಥ ಐಮನ್ ಅಲ್-ಜವಾಹಿರಿ ಕೊಲೆಯಾಗಿದ್ದಾರೆ ಎಂದು ಸೋಮವಾರ ಜಾಗತಿಕ ಮಾಧ್ಯಮಗಳು ವರದಿ ಮಾಡಿವೆ.

ತಾಲಿಬಾನ್ ವಕ್ತಾರ ಜಬೀವುಲ್ಲಾ ಮುಜಾಹಿದ್ ಟ್ವಿಟ್ಟರ್‌ನಲ್ಲಿ ದಾಳಿ ನಡೆದಿರುವುದನ್ನು ದೃಢಪಡಿಸಿದ್ದಾರೆ. "ಜುಲೈ 31ರಂದು ಕಾಬೂಲ್ ನಗರದ ಶೇರ್ಪುರ್ ಪ್ರದೇಶದ ವಸತಿ ಗೃಹದ ಮೇಲೆ ವಾಯುದಾಳಿ ನಡೆಸಲಾಯಿತು," ಎಂದು ಹೇಳಿದ್ದಾರೆ.

9/11 ಕಹಿ ಸ್ಮರಣೆ: ಅಲ್‌ಖೈದಾ ಮುಖ್ಯಸ್ಥ ಜವಾಹಿರಿ ಮತ್ತೆ ಪ್ರತ್ಯಕ್ಷ9/11 ಕಹಿ ಸ್ಮರಣೆ: ಅಲ್‌ಖೈದಾ ಮುಖ್ಯಸ್ಥ ಜವಾಹಿರಿ ಮತ್ತೆ ಪ್ರತ್ಯಕ್ಷ

ಈ ಘಟನೆಯ ಸ್ವರೂಪವು ಮೊದಲಿಗೆ ಸ್ಪಷ್ಟವಾಗಿರಲಿಲ್ಲ, ಆದರೆ ಇಸ್ಲಾಮಿಕ್ ಎಮಿರೇಟ್‌ನ ಭದ್ರತೆ ಮತ್ತು ಗುಪ್ತಚರ ಸೇವೆಗಳು ಘಟನೆಯ ಬಗ್ಗೆ ತನಿಖೆ ನಡೆಸಿದ್ದು, ಆರಂಭಿಕ ತನಿಖೆಯಲ್ಲಿ ಯುಎಸ್ ಡ್ರೋನ್‌ನಿಂದ ದಾಳಿ ನಡೆಸಲಾಗಿದೆ ಎಂದು ತಿಳಿದು ಬಂದಿದೆ.

Al-Qaeda chief Ayman al-Zawahiri killed in United States drone strike

ದೋಹಾ ಒಪ್ಪಂದದ ಸ್ಪಷ್ಟ ಉಲ್ಲಂಘನೆ: ಅಫ್ಘಾನಿಸ್ತಾನದ ಇಸ್ಲಾಮಿಕ್ ಎಮಿರೇಟ್ "ಯಾವುದೇ ನೆಪವನ್ನು ಇಟ್ಟುಕೊಂಡು ಈ ದಾಳಿ ನಡೆಸಿದ್ದರೂ, ಅದನ್ನು ಬಲವಾಗಿ ಖಂಡಿಸುತ್ತೇವೆ. ಇದು ಅಂತರರಾಷ್ಟ್ರೀಯ ನೀತಿಗಳು ಮತ್ತು ದೋಹಾ ಒಪ್ಪಂದದ ಸ್ಪಷ್ಟ ಉಲ್ಲಂಘನೆ ಎಂದು ಕರೆಯುತ್ತದೆ," ಎಂದು ಮುಜಾಹಿದ್ ಹೇಳಿದ್ದಾರೆ.

ಅಫ್ಘಾನಿಸ್ತಾನದಲ್ಲಿ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆ: ಆದರೆ, ಐಮನ್ ಅಲ್-ಜವಾಹಿರಿ ಸಾವನ್ನು ಅಮೆರಿಕ ಸರ್ಕಾರ ಇನ್ನೂ ದೃಢಪಡಿಸಿಲ್ಲ. ಅಫ್ಘಾನಿಸ್ತಾನದಲ್ಲಿ ಅಲ್-ಖೈದಾ ವಿರುದ್ಧ "ಯಶಸ್ವಿ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆ" ಕುರಿತು ಅಧ್ಯಕ್ಷ ಜೋ ಬೈಡೆನ್, ರಾತ್ರಿ 7:30 ಕ್ಕೆ (ಸ್ಥಳೀಯ ಸಮಯ) ಮಾತನಾಡಲಿದ್ದಾರೆ ಎಂದು ಶ್ವೇತಭವನ ಸೋಮವಾರ ತಿಳಿಸಿತ್ತು.

"ಅಫ್ಘಾನಿಸ್ತಾನದಲ್ಲಿ ಅಲ್ ಖೈದಾ ವಿರುದ್ಧ ಯುನೈಟೆಡ್ ಸ್ಟೇಟ್ಸ್ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಯನ್ನು ನಡೆಸಿತು. ಈ ಕಾರ್ಯಾಚರಣೆ ಯಶಸ್ವಿಯಾಗಿದ್ದು, ಯಾವುದೇ ನಾಗರಿಕರ ಪ್ರಾಣಹಾನಿ ಆಗಿಲ್ಲ ಎಂದು ಆಡಳಿತದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಅಲ್ ಖೈದಾ ಮುಖ್ಯಸ್ಥರಾಗಿ ಗುರುತಿಸಿಕೊಂಡಿದ್ದ ಜವಾಹಿರಿ: 71 ವರ್ಷದ ಐಮನ್ ಅಲ್-ಜವಾಹಿರಿ ಜಾಗತಿಕ ಮಟ್ಟದಲ್ಲಿ ಅಲ್ ಖೈದಾ ಮುಖ್ಯಸ್ಥರಾಗಿ ಗುರುತಿಸಿಕೊಂಡಿದ್ದನು. ಒಸಾಮಾ ಬಿನ್ ಲಾಡೆನ್ ಅನ್ನು ಯುಎಸ್ ಕೊಂದ 11 ವರ್ಷಗಳ ನಂತರ ಗುಂಪಿನ ಹೊಣೆ ಹೊತ್ತುಕೊಂಡಿದ್ದನು. ಇದಕ್ಕೂ ಮೊದಲು ಪಾಕಿಸ್ತಾನದ ಜಲಾಲಾಬಾದ್‌ನಲ್ಲಿ US ಸೀಲ್ ಪಡೆಗಳು ಒಸಾಮಾ ಬಿನ್ ಲಾಡೆನ್ ಮೇಲೆ ದಾಳಿ ನಡೆಸಿ ಕೊಂದಿದ್ದವು. ಲಾಡೆನ್‌ನ ನಂತರ ಗುಂಪಿನ ಮುಖ್ಯಸ್ಥರಾಗಿ ಜವಾಹಿರಿ ಗುರುತಿಸಿಕೊಂಡಿದ್ದನು.

ಆಫ್ರಿಕಾ ಮತ್ತು ಅಮೆರಿಕಾದ ಮೇಲೆ ಬಾಂಬ್ ದಾಳಿ: ಕಳೆದ ಆಗಸ್ಟ್ 7, 1998 ರಂದು ಟಾಂಜಾನಿಯಾದ ದಾರ್ ಎಸ್ ಸಲಾಮ್ ಮತ್ತು ಕೀನ್ಯಾದ ನೈರೋಬಿಯಲ್ಲಿನ ಯುನೈಟೆಡ್ ಸ್ಟೇಟ್ಸ್ ರಾಯಭಾರ ಕಚೇರಿಗಳ ಮೇಲೆ ಬಾಂಬ್ ದಾಳಿ ನಡೆಸಿದ ಆರೋಪ ಈ ಜವಾಹಿರಿ ಮೇಲಿದೆ.

ಆಫ್ರಿಕಾದ ನೈರೋಬಿ, ಕೀನ್ಯಾ ಮತ್ತು ಡಾರ್ ಎಸ್ ಸಲಾಮ್, ಟಾಂಜಾನಿಯಾದಲ್ಲಿನ ಅಮೇರಿಕನ್ ರಾಯಭಾರ ಕಚೇರಿಗಳ ಮೇಲೆ ಏಕಕಾಲದಲ್ಲಿ ಬಾಂಬ್ ದಾಳಿ ನಡೆಸಲಾಗಿದ್ದು, ಅಂದು 12 ಅಮೆರಿಕನ್ನರು ಸೇರಿದಂತೆ 224 ಜನರು ಸ್ಫೋಟಗಳಲ್ಲಿ ಮೃತಪಟ್ಟಿದ್ದು, 4,500ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು.

ಜವಾಹಿರಿ ಸಂಚಿನ ಮುಖ ತೆರೆದಿಟ್ಟಿದ್ದ ದಾಳಿ: ಕಳೆದ 2001ರ ಸೆಪ್ಟೆಂಬರ್ 11ರಂದು ವಿಶ್ವ ವ್ಯಾಪಾರ ಕೇಂದ್ರ ಮತ್ತು ಪೆಂಟಗನ್ ಅವಳಿ ಗೋಪುರಗಳ ಮೇಲಿನ ದಾಳಿಯಲ್ಲಿ ಸುಮಾರು 3,000 ಜನರು ಸಾವನ್ನಪ್ಪಿದಾಗ ಜವಾಹಿರಿಯ ಭಯೋತ್ಪಾದನೆಯ ಸಂಚಿನ ಅಸಲಿ ಮುಖ ಬಯಲಾಗಿತ್ತು. ಆದರೆ 2001ರ ಕೊನೆಯಲ್ಲಿ ಜವಾಹಿರಿ ಮತ್ತು ಬಿನ್ ಲಾಡೆನ್ ಇಬ್ಬರೂ ಅಫ್ಘಾನಿಸ್ತಾನದಲ್ಲಿ US ಪಡೆಗಳು ನಡೆಸಿದ ದಾಳಿಯಿಂದ ತಪ್ಪಿಸಿಕೊಂಡಿದ್ದರು. ತದನಂತರ 2003ರ ಮೇ ತಿಂಗಳಿನಲ್ಲಿ ಸೌದಿ ಅರೇಬಿಯಾದ ರಿಯಾದ್‌ನಲ್ಲಿ ಏಕಕಾಲದಲ್ಲಿ ನಡೆದ ಆತ್ಮಹತ್ಯಾ ಬಾಂಬ್ ದಾಳಿಯಲ್ಲಿ 9 ಅಮೆರಿಕನ್ನರು ಸೇರಿದಂತೆ 23 ಜನರು ಸಾವನ್ನಪ್ಪಿದರು.

ಜವಾಹಿರಿ ಮೂಲ ಬಹಳ ನಿಗೂಢ: ಅಲ್ ಖೈದಾ ಮುಖ್ಯಸ್ಥ ಐಮನ್ ಅಲ್-ಜವಾಹಿರಿ ಎಲ್ಲಿದ್ದಾನೆ ಎಂಬುದು ಬಹಳ ಹಿಂದಿನಿಂದಲೂ ನಿಗೂಢವಾಗಿತ್ತು. ಅಲ್-ಜವಾಹಿರಿ ಅನಾರೋಗ್ಯದಿಂದ ಸಾವನ್ನಪ್ಪಿದ್ದಾರೆ ಎಂದು 2020ರ ಕೊನೆಯಲ್ಲಿ ವದಂತಿಗಳು ಹರಡಿದ್ದವು. ಯುಎನ್ ವಿಶ್ಲೇಷಣಾತ್ಮಕ ಬೆಂಬಲ ಮತ್ತು ನಿರ್ಬಂಧಗಳ ಮಾನಿಟರಿಂಗ್ ತಂಡದ ಇತ್ತೀಚಿನ ವರದಿಯು ಜವಾಹಿರಿ ಅಫ್ಘಾನಿಸ್ತಾನದಲ್ಲಿ ವಾಸವಾಗಿದ್ದಾನೆ ಮತ್ತು ಮುಕ್ತವಾಗಿ ಸಂವಹನ ನಡೆಸುತ್ತಿದ್ದಾನೆ ಎಂದು ದೃಢಪಡಿಸಿತ್ತು.

ಅಲ್-ಜವಾಹಿರಿ ಜೀವಂತವಾಗಿದ್ದಾನೆ ಎಂಬುದಕ್ಕೆ ಗುಂಪು ನೀಡಿದ ವೀಡಿಯೊ ಸಂದೇಶಗಳೇ ಪುರಾವೆಯಾಗಿದೆ ಎಂದು ಅದು ಹೇಳಿತ್ತು. ಅಲ್ ಖೈದಾ ಮತ್ತು ಇಸ್ಲಾಮಿಕ್ ಸ್ಟೇಟ್ ಸೇರಿದಂತೆ ಭಯೋತ್ಪಾದಕ ಗುಂಪುಗಳ ಹೆಚ್ಚುತ್ತಿರುವ ಬಲದ ವಿರುದ್ಧವೂ ವರದಿಯು ಜಗತ್ತಿಗೆ ದೊಡ್ಡ ಅಪಾಯವನ್ನು ಉಂಟು ಮಾಡುತ್ತದೆ ಎಂದು ಎಚ್ಚರಿಸಿತ್ತು.

Recommended Video

ಪುನೀತ್ ರಾಜಕುಮಾರ್ ಅಭಿಮಾನಿಗಳ ಆಕ್ರೋಶಕ್ಕೆ ಮಣಿದ ಚಕ್ರವರ್ತಿ ಸೂಲಿಬೆಲೆ ಕ್ಷಮೆಯಾಚನೆ | OneIndia Kannada

English summary
Al-Qaeda chief Ayman al-Zawahiri killed in United States drone strike: Report.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X