• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪತ್ನಿ ವಿರುದ್ಧ ಕೋರ್ಟ್ ಕೇಸ್ ಗೆದ್ದ ಹಾಲಿವುಡ್ ಸ್ಟಾರ್ ಜಾನಿ ಡೆಪ್

|
Google Oneindia Kannada News

ವಾಷಿಂಗ್ಟನ್, ಜೂನ್ 2: ಕೌಟುಂಬಿಕ ಹಿಂಸೆ ಆರೋಪ ಪ್ರಕರಣದಲ್ಲಿ ಹಾಲಿವುಡ್ ನಟ ಜಾನಿ ಡೆಪ್ (Johnny Depp) ತನ್ನ ಮಾಜಿ ಪತ್ನಿ ವಿರುದ್ಧ ಸಲ್ಲಿಸಿದ್ದ ಮಾನನಷ್ಟ ಮೊಕದ್ದಮೆಯಲ್ಲಿ ಗೆಲುವು ಸಾಧಿಸಿದ್ದು, 15 ಮಿಲಿಯನ್ ಯುಎಸ್ ಡಾಲರ್ (ಸುಮಾರು 116 ಕೋಟಿ ರುಪಾಯಿ) ಮೊತ್ತದಷ್ಟು ಹಣವನ್ನು ಪರಿಹಾರವಾಗಿ ಗಿಟ್ಟಿಸಿದ್ದಾರೆ. ಕುತೂಹಲವೆಂದರೆ ಜಾನಿ ಡೆಪ್ ಮತ್ತು ಅವರ ಮಾಜಿ ಪತ್ನಿ ಆಂಬರ್ ಹರ್ಡ್ (Amber Heard) ಇಬ್ಬರೂ ಪರಸ್ಪರರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ದು ಇಬ್ಬರಿಗೂ ಗೆಲುವು ಸಿಕ್ಕಿದೆ. ಅದರೆ, ಜಾನಿ ಡೆಪ್‌ಗೆ ದೊಡ್ಡ ಮೊತ್ತದ ಪರಿಹಾರ ಸಿಕ್ಕರೆ, ಆಂಬರ್ ಹರ್ಡ್‌ಗೆ 2 ಮಿಲಿಯನ್ ಯುಎಸ್ ಡಾಲರ್ (ಸುಮಾರು 15 ಕೋಟಿ ರೂ) ಪರಿಹಾರ ಸಿಕ್ಕಿದೆ.

ವ್ಲಾದಿಮಿರ್ ಪುಟಿನ್ ಕಣ್ಣು ಮಂಜು, ಅವರು ಬದುಕೋದು ಮೂರೇ ವರ್ಷವಾ?ವ್ಲಾದಿಮಿರ್ ಪುಟಿನ್ ಕಣ್ಣು ಮಂಜು, ಅವರು ಬದುಕೋದು ಮೂರೇ ವರ್ಷವಾ?

ಅಮೆರಿಕದ ವರ್ಜೀನಿಯಾ ರಾಜ್ಯದ ಫೇರ್‌ಫ್ಯಾಕ್ಸ್ ನಗರದ ಕೋರ್ಟ್‌ವೊಂದು ಈ ಮಹತ್ವದ ತೀರ್ಪು ನೀಡಿದೆ. ಪೈರೇಟ್ಸ್ ಆಫ್ ಕೆರಿಬಿಯನ್ ಮೊದಲಾದ ಸಿನಿಮಾಗಳಲ್ಲಿ ನಟಿಸಿರುವ 58 ವರ್ಷದ ಜಾನಿ ಡೆಪ್ ಈ ತೀರ್ಪನ್ನು ಸ್ವಾಗತಿಸಿದ್ದು, "ನ್ಯಾಯಾಧೀಶರ ತಂಡ ನನಗೆ ಮರುಹುಟ್ಟು ಕೊಟ್ಟಿದೆ" ಎಂದು ಬಣ್ಣಿಸಿದ್ದಾರೆ. ಅಮೆರಿಕನ್ ಕೋರ್ಟ್ ನೀಡಿದ ಈ ತೀರ್ಪನ್ನು ಜಾನಿ ಡೆಪ್ ಬ್ರಿಟನ್ ದೇಶದಿಂದಲೇ ವಿಡಿಯೋ ಕಾನ್ಫೆರೆನ್ಸ್ ಮೂಲಕ ವೀಕ್ಷಿಸಿದರು. ಜಾನಿ ಡೆಪ್‌ರ ಅಪಾರ ಸಂಖ್ಯೆಯ ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ವಿವಿಧ ಮೀಮ್‌ಗಳ ಮೂಲಕ ಸಂಭ್ರಮಾಚರಣೆ ಮಾಡಿದ್ದಾರೆ.

ಮಹಿಳೆಯರಿಗೆ ಹಿನ್ನಡೆ, ಹರ್ಡ್ ಅಳಲು

ಮಹಿಳೆಯರಿಗೆ ಹಿನ್ನಡೆ, ಹರ್ಡ್ ಅಳಲು

ಜಾನಿ ಡೆಪ್‌ರ ಮಾಜಿ ಪತ್ನಿ ಆಂಬರ್ ಹರ್ಡ್ ಕೂಡ ಬಾಲಿವುಡ್ ನಟಿಯೇ ಆಗಿದ್ದಾರೆ. ಹಾಗಾಗಿ ಈ ಪ್ರಕರಣದ ಮೇಲೆ ಭಾರೀ ಕುತೂಹಲದ ಕಣ್ಣಿತ್ತು. ಏಳು ನ್ಯಾಯಾಧೀಶರ ತಂಡ ಬುಧವಾರ ನೀಡಿದ ತೀರ್ಪಿನ ಬಗ್ಗೆ ಆಂಬರ್ ಹರ್ಡ್ ನಿರಾಸೆ ವ್ಯಕ್ತಪಡಿಸಿದ್ದು, ಇದು ಮಹಿಳೆಯರಿಗೆ ಹಿನ್ನಡೆ ಎಂದು ಬಣ್ಣಿಸಿದ್ದಾರೆ.

"ಇವತ್ತು ವರ್ಣಿಸಲು ಸಾಧ್ಯವಿಲ್ಲದಷ್ಟು ನಿರಾಸೆ ಆಗಿದೆ. ಇಷ್ಟೊಂದು ಸಾಕ್ಷ್ಯಾಧಾರಗಳು ಇದ್ದರೂ ನನ್ನ ಮಾಜಿ ಪತಿಯ ಪ್ರಭಾವ, ಅಧಿಕಾರದ ಮುಂದೆ ಏನೂ ಮಾಡಲಾಗಲಿಲ್ಲವಲ್ಲ ಎಂದು ನೋವಾಗುತ್ತಿದೆ" ಎಂದು ಆಂಬರ್ ಹರ್ಡ್ ಹೇಳಿಕೆಯೊಂದರಲ್ಲಿ ತಿಳಿಸಿದ್ಧಾರೆ.

"ಈ ತೀರ್ಪು ಬೇರೆ ಮಹಿಳೆಯರಿಗೆ ಎಂಥ ಸಂದೇಶ ನೀಡುತ್ತದೆ ಎಂಬುದು ನೆನೆದು ಇನ್ನೂ ನಿರಾಶೆಯಾಗಿದೆ. ಇದು ಹಿನ್ನಡೆಯೇ. ಮಹಿಳೆ ವಿರುದ್ಧದ ದೌರ್ಜನ್ಯವನ್ನು ಗಂಭೀರವಾಗಿ ಪರಿಗಣಿಸಬೇಕೋ ಬೇಡವೋ ಎಂಬ ಸಂದಿಗ್ಧತೆ ಗಟ್ಟಿಯಾಗಿಸಿದೆ" ಎಂದು ೩೬ ವರ್ಷದ ನಟಿ ಹೇಳಿದ್ದಾರೆ.

ರಕ್ತಪಾತ ಆಗುತ್ತೆ ಅಂತ ಸುಮ್ಮನಾದೆ: ಇಮ್ರಾನ್ ಖಾನ್ರಕ್ತಪಾತ ಆಗುತ್ತೆ ಅಂತ ಸುಮ್ಮನಾದೆ: ಇಮ್ರಾನ್ ಖಾನ್

ಪ್ರಭಾವಿ ವ್ಯಕ್ತಿಗಳ ಕೇಸ್

ಪ್ರಭಾವಿ ವ್ಯಕ್ತಿಗಳ ಕೇಸ್

ಆಂಬರ್ ಹರ್ಡ್ 2004ರಲ್ಲಿ ಹಾಲಿವುಡ್‌ಗೆ ಪದಾರ್ಪಣೆ ಮಾಡಿ ಇಲ್ಲಿಯವರೆಗೆ 36 ಸಿನಿಮಾಗಳಲ್ಲಿ ನಟಿಸಿದ್ದಾರೆ. ನೆವರ್ ಬ್ಯಾಕ್ ಡೌನ್, ಝಾಂಬೀಲ್ಯಾಂಡ್, ಆಕ್ವಾಮ್ಯಾನ್ ಮೊದಲಾದ ಇವರು ನಟಿಸಿದ ಸಿನಿಮಾಗಳು ಹಿಟ್ ಎನಿಸಿವೆ. 2011ರಲ್ಲಿ ಜಾನಿ ಡೆಪ್ ಜೊತೆ 'ದಿ ರಮ್ ಡೈರಿ' ಸಿನಿಮಾದಲ್ಲೂ ಇವರು ನಟಿಸಿದ್ದಾರೆ.

'ಪೈರೇಟ್ಸ್ ಆಫ್ ಕೆರಿಬಿಯನ್' ಸರಣಿಯ ಸಿನಿಮಾಗಳಲ್ಲಿ ಕ್ಯಾಪ್ಟನ್ ಜ್ಯಾಕ್ ಸ್ಪಾರೋ ಪಾತ್ರದ ಮೂಲಕ ಬಾಲಿವುಡ್‌ನ ದೊಡ್ಡ ಸೆಲಬ್ರಿಟಿ ಎನಿಸಿರುವ 58 ವರ್ಷದ ಜಾನಿ ಡೆಪ್ ಮತ್ತು 36 ವರ್ಷದ ಆಂಬರ್ ಹರ್ಡ್ ಪರಸ್ಪರ ಪ್ರೀತಿಸಿ 2015ರಲ್ಲಿ ಮದುವೆಯಾಗಿದ್ದರು.

ದಾಂಪತ್ಯದಲ್ಲಿ ಬಿರುಕು, ವಿಚ್ಛೇದನ

ದಾಂಪತ್ಯದಲ್ಲಿ ಬಿರುಕು, ವಿಚ್ಛೇದನ

ಜಾನಿ ಡೆಪ್ ಮತ್ತು ಆಂಬರ್ ಹರ್ಡ್ ದಾಂಪತ್ಯ ಉಳಿದಿದ್ದು ಕೇವಲ 2 ವರ್ಷ ಮಾತ್ರ. ಮದುವೆಯಾಗಿ ಒಂದೇ ವರ್ಷದಲ್ಲಿ ಆಂಬರ್ ಹರ್ಡ್ ಕೌಟುಂಬಿಕ ಹಿಂಸೆಯ ಆರೋಪ ಮಾಡಿದ್ದರು. ತನಗೆ ಏನೂ ಹಾನಿ ಮಾಡಬಾರದೆಂದು ಜಾನಿ ಡೆಪ್ ವಿರುದ್ಧ 2016ರಲ್ಲಿ ಕೋರ್ಟ್‌ನಿಂದ ಆಂಬರ್ ಹರ್ಡ್ ನಿರ್ಬಂಧಕ ಆಜ್ಞೆ ತಂದಿದ್ದರು. ಇವರಿಬ್ಬರು 2017ರಲ್ಲಿ ಡಿವೋರ್ಸ್ ಪಡೆದರು.

ಮಾನನಷ್ಟ ಮೊಕದ್ದಮೆ ಯಾಕೆ?

ಮಾನನಷ್ಟ ಮೊಕದ್ದಮೆ ಯಾಕೆ?

2018ರಲ್ಲಿ ಆಂಬರ್ ಹರ್ಡ್ 'ದಿ ವಾಷಿಂಗ್ಟನ್ ಪೋಸ್ಟ್' ಪತ್ರಿಕೆಯಲ್ಲಿ ಕೌಟುಂಬಿಕ ಹಿಂಸೆ ವಿಚಾರದ ಬಗ್ಗೆ ಲೇಖನ ಬರೆದಿದ್ದರು. ಅದರಲ್ಲಿ ತಾನು ಕೌಟುಂಬಿಕ ದೌರ್ಜನ್ಯಕ್ಕೊಳಗಾದವರನ್ನು ಪ್ರತಿನಿಧಿಸುವ ವ್ಯಕ್ತಿ ಎಂಬಂತೆ ಬಿಂಬಿಸಿದ್ದರು. ಆದರೆ, ಜಾನಿ ಡೆಪ್ ಹೆಸರನ್ನು ಅವರು ಆ ಲೇಖನದಲ್ಲಿ ಎಲ್ಲಿಯೂ ಪ್ರಸ್ತಾಪಿಸಿರಲಿಲ್ಲ. ಆದರೆ, ಅದು ಜಾನಿ ಡೆಪ್ ವಿರುದ್ಧ ಆಂಬರ್ ಹರ್ಡ್ ಮಾಡಿದ ಆರೋಪ ಎಂದು ಯಾರಿಗಾದರೂ ಅರ್ಥವಾಗುವಂತಿತ್ತು.

ಈ ಲೇಖನದಿಂದ ರೊಚ್ಚಿಗೆದ್ದ ಜಾನಿ ಡೆಪ್ ತನ್ನ ಮಾಜಿ ಪತ್ನಿ ವಿರುದ್ಧ 50 ಮಿಲಿಯನ್ ಯುಎಸ್ ಡಾಲರ್ (ಸುಮಾರು 388 ಕೋಟಿ ರೂ) ಮಾನನಷ್ಟ ಮೊಕದ್ದಮೆ ಹಾಕಿದರು. ಇದಕ್ಕೆ ಬದಲಾಗಿ ಆಂಬರ್ ಹರ್ಡ್ ಕೂಡ 100 ಮಿಲಿಯನ್ ಡಾಲರ್ (ಸುಮಾರು 775 ಕೋಟಿ ರೂ) ಮಾನನಷ್ಟ ಕೇಸ್ ಹೂಡಿದರು. ತಾನು ಮಾಡಿದ ಆರೋಪ ಸುಳ್ಳು ಎಂದು ಜಾನಿ ಡೆಪ್ ವಕೀಲರು ಹೇಳಿದ್ದರಿಂದ ತನ್ನ ವೈಯಕ್ತಿಕ ವರ್ಚಸ್ಸಿಗೆ ಧಕ್ಕೆಯಾಗಿದೆ ಎಂದು ಹೇಳಿ ಆಕೆ ಈ ಮಾನನಷ್ಟಕ್ಕೆ ಪರಿಹಾರ ಕೋರಿ ಕೋರ್ಟ್ ಮೆಟ್ಟಿಲೇರಿದ್ದರು.

ಕೋರ್ಟ್ ಕಲಾಪ ಲೈವ್:

ಕೋರ್ಟ್ ಕಲಾಪ ಲೈವ್:

ಜಾನಿ ಡೆಪ್ ಮತ್ತು ಆಂಬರ್ ಹರ್ಡ್ ಅವರ ಮಾನನಷ್ಟ ಮೊಕದ್ದಮೆ ಪ್ರಕರಣಗಳ ವಿಚಾರಣೆ ಫೇರ್‌ಫ್ಯಾಕ್ಸ್ ಕೋರ್ಟ್‌ನಲ್ಲಿ ಆರು ವಾರ ಕಾಲ ನಡೆಯಿತು. ಇಬ್ಬರೂ ಸೆಲಬ್ರಿಟಿಗಳೇ ಆದ್ದರಿಂದ ಸಾಕಷ್ಟು ಮಂದಿಗೆ ಇದು ಕುತೂಹಲ ಮೂಡಿಸಿತ್ತು. ಈ ಕಲಾಪದ ವಿಡಿಯೋ ರೆಕಾರ್ಡಿಂಗ್ ಕೂಡ ಮಾಡಲಾಗುತ್ತಿತ್ತು.

ಜಾನಿ ಡೆಪ್ ಜೊತೆ ಸಂಸಾರ ಮಾಡುವಾಗ ದೈಹಿಕವಾಗಿ ಆಗಿದ್ದ ಗಾಯಗಳನ್ನು ಆಂಬರ್ ಹರ್ಡ್ ತೋರಿಸುತ್ತಿದ್ದ ದೃಶ್ಯಗಳೆಲ್ಲಾ ಕೋರ್ಟ್ ಕಲಾಪದ ವಿಡಿಯೋ ರೆಕಾರ್ಡಿಂಗ್ ಮೂಲಕ ಸಾರ್ವತ್ರಿಕಗೊಂಡವು.

ತಮ್ಮ ದಾಂಪತ್ಯದಲ್ಲಿ ಬಹಳ ಹಿಂಸಾ ವರ್ತನೆಯಲ್ಲಿ ತೊಡಗುತ್ತಿದ್ದ ಆಂಬರ್ ಹರ್ಡ್ ತನ್ನ ವಿರುದ್ಧವೇ ಕೌಟುಂಬಿಕ ದೌರ್ಜನ್ಯದ ಆರೋಪ ಮಾಡುತ್ತಿರುವುದು ಬಹಳ ಕ್ರೂರ ಎನಿಸುತ್ತದೆ ಎಂದು ಜಾನಿ ಡೆಪ್ ಕೋರ್ಟ್ ಮುಂದೆ ಹೇಳಿದ್ದರು.

ಅಂತಿಮವಾಗಿ ಅಮೆರಿಕನ್ ಕೋರ್ಟ್ ಇಬ್ಬರಿಗೂ ಮಾನನಷ್ಟ ಆಗಿದೆ ಎಂಬ ಅಭಿಪ್ರಾಯಕ್ಕೆ ಬಂದಿತಾದರೂ, ಜಾನಿ ಡೆಪ್‌ಗೆ ಹೆಚ್ಚು ಪರಿಹಾರ ಕೊಡಿಸಿದೆ. ಆಂಬರ್ ಹರ್ಡ್‌ಗೆ ಕಡಿಮೆ ಪರಿಹಾರ ಕೊಡಿಸಿದೆ.

English summary
Hollywood Star Johnny Depp has won defamation case against his ex wife and another celebrity Amber Heard and has awarded with 15 Million US Dollar as compensation.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X