ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾವೈರಸ್ ಲಸಿಕೆ ಪಡೆದು 25 ನಿಮಿಷಗಳಲ್ಲೇ ವ್ಯಕ್ತಿ ಸಾವು!?

|
Google Oneindia Kannada News

ನ್ಯೂಯಾರ್ಕ್, ಫೆಬ್ರವರಿ.09: ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಹರಡುವಿಕೆ ನಡುವೆ ಲಸಿಕೆಗಳ ಸುರಕ್ಷತೆ ಬಗ್ಗೆ ಪ್ರಶ್ನೆಗಳು ಹುಟ್ಟಿಕೊಳ್ಳುತ್ತಿವೆ. ಲಸಿಕೆ ತೆಗೆದುಕೊಂಡ 25 ನಿಮಿಷಗಳಲ್ಲೇ 70 ವರ್ಷದ ವೃದ್ಧನೊಬ್ಬ ಕುಸಿದು ಬಿದ್ದು ಮೃತಪಟ್ಟಿರುವ ಘಟನೆ ನ್ಯೂಯಾರ್ಕ್ ನಲ್ಲಿ ನಡೆದಿದೆ.

ಮ್ಯಾನ್ ಹ್ಯಾಟನ್ ಜಾಕೋಬ್ ಜಾವಿತ್ಸ್ ಕನ್ವೆಂಷನ್ ಸೆಂಟರ್ ನಲ್ಲಿ 70 ವರ್ಷದ ವೃದ್ಧರೊಬ್ಬರಿಗೆ ಕೊರೊನಾವೈರಸ್ ಲಸಿಕೆ ನೀಡಲಾಗಿತ್ತು. ಅದಾಗಿ 25 ನಿಮಿಷಗಳಲ್ಲೇ ವ್ಯಕ್ತಿಯು ಕುಳಿದು ಬೀಳುತ್ತಾರೆ. ತಕ್ಷಣ ಸ್ಥಳೀಯ ಆಸ್ಪತ್ರೆಗೆ ಅವರನ್ನು ದಾಖಲಿಸಲಾಯಿತಾದರೂ ವ್ಯಕ್ತಿ ಮೃತಪಟ್ಟಿದ್ದಾರೆ ಎಂದು ಡೈಲಿ ಮೇಲ್ ವರದಿ ಮಾಡಿದೆ.

ಕೊರೊನಾವೈರಸ್ ಲಸಿಕೆ ವಿತರಿಸುವಲ್ಲಿ ಭಾರತಕ್ಕೆ ಅಗ್ರಸ್ಥಾನ ಕೊರೊನಾವೈರಸ್ ಲಸಿಕೆ ವಿತರಿಸುವಲ್ಲಿ ಭಾರತಕ್ಕೆ ಅಗ್ರಸ್ಥಾನ

ಕೊರೊನಾ ಲಸಿಕೆ ಪಡೆದ ನಂತರದಲ್ಲಿ ಕುಸಿದು ಬಿದ್ದ ವ್ಯಕ್ತಿಯನ್ನು ತಕ್ಷಣಕ್ಕೆ ಆಸ್ಪತ್ರೆಗೆ ದಾಖಲಿಸಲಾಯಿತು. ಅದಾಗಿ ಕೆಲವೇ ನಿಮಿಷಗಳಲ್ಲಿ ವ್ಯಕ್ತಿ ಪ್ರಾಣ ಬಿಟ್ಟಿದ್ದಾರೆ ಎಂದು ನ್ಯೂಯಾರ್ಕ್ ರಾಜ್ಯ ಆರೋಗ್ಯ ಆಯುಕ್ತರಾದ ಹೌವಾರ್ಡ್ ಜುಕ್ಕರ್ ತಿಳಿಸಿದ್ದಾರೆ.

70-Year-Old Man Collapses, Dies Just 25 Mins After Taking Coronavirus Vaccine

ಕೊರೊನಾ ಲಸಿಕೆಯಿಂದ ವ್ಯಕ್ತಿ ಸಾವನ್ನಪ್ಪಿಲ್ಲ:

ಕೊರೊನಾವೈರಸ್ ಲಸಿಕೆ ನೀಡಿದ ನಂತರದಲ್ಲಿ ವ್ಯಕ್ತಿಯ ಆರೋಗ್ಯದ ಮೇಲೆ 15 ನಿಮಿಷಗಳ ಕಾಲ ನಿಗಾ ವಹಿಸಲಾಗಿತ್ತು. ಈ ಅವಧಿಯಲ್ಲಿ ಕೊವಿಡ್-19 ಲಸಿಕೆಯಿಂದ ಯಾವುದೇ ವ್ಯತಿರಿಕ್ತ ಪರಿಣಾಮಗಳು ಆತನಲ್ಲಿ ಕಂಡು ಬರಲಿಲ್ಲ. ಲಸಿಕೆ ಕಾರಣಕ್ಕೆ ಅವರ ಆರೋಗ್ಯದಲ್ಲಿ ಯಾವುದೇ ಏರುಪೇರು ಕಂಡು ಬಂದಿರಲಿಲ್ಲ. ಹಾಗಾಗಿ ಕೊರೊನಾವೈರಸ್ ಲಸಿಕೆಯು ವ್ಯಕ್ತಿಯ ಸಾವಿಗೆ ಕಾರಣ ಎಂದು ಹೇಳುವುದಕ್ಕೆ ಬರುವುದಿಲ್ಲ. ನಿಜವಾಗಿ ವ್ಯಕ್ತಿ ಸಾವಿಗೆ ಕಾರಣವೇನು ಎನ್ನುವುದರ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ನ್ಯೂಯಾರ್ಕ್ ರಾಜ್ಯ ಆರೋಗ್ಯ ಆಯುಕ್ತರಾದ ಹೌವಾರ್ಡ್ ಜುಕ್ಕರ್ ಹೇಳಿದ್ದಾರೆ.

English summary
70-Year-Old Man Collapses, Dies Just 25 Mins After Taking Coronavirus Vaccine.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X