'384 ಕೆಜಿ ಕುಂಬಳಕಾಯಿ ದೋಣಿ' ಮೂಲಕ 61 ಕಿಮೀ ಪ್ರಯಾಣ! ನಾವಿಕನಿಂದ ವಿಶ್ವ ದಾಖಲೆ
ವಾಷಿಂಗ್‌ಟನ್ ಆಗಸ್ಟ 31: ಏನನ್ನಾದರೂ ಮಾಡುವ ಉತ್ಸಾಹ ವ್ಯಕ್ತಿಗೆ ಅತ್ಯಂತ ವಿಶಿಷ್ಟವಾದ ಗುರುತನ್ನು ನೀಡುತ್ತದೆ. ಜಗತ್ತಿನಲ್ಲಿ ಪ್ರತಿಭೆಗೆ ಕೊರತೆಯಿಲ್ಲದಿದ್ದರೂ, ಅಪರೂಪವಾಗಿ ಕಂಡುಬರುವ ಕೆಲವು ಪ್ರತಿಭೆಗಳಿವೆ. ಅಂತಹ ಕೆಲವು ಪ್ರತಿಭೆಗಳೊಂದಿಗೆ ವ್ಯಕ್ತಿಯೊಬ್ಬರು ಇತಿಹಾಸವನ್ನು ಸೃಷ್ಟಿಸಿದ್ದಾರೆ. ವ್ಯಕ್ತಿಯೊಬ್ಬ ದೈತ್ಯ ಕುಂಬಳಕಾಯಿಯನ್ನು ಕೊರೆದು ಅದನ್ನು ದೋಣಿಯಾಗಿ ಬಳಸುವಲ್ಲಿ ಶೇ.100ರಷ್ಟು ಯಶಸ್ಸನ್ನು ಸಾಧಿಸಿದ್ದಾನೆ.
ಡುವಾನ್ ಹ್ಯಾನ್ಸೆನ್ ಅವರು ತಮ್ಮ ಹೆಸರಿನಲ್ಲಿ ಈ ವಿಶಿಷ್ಟ ದಾಖಲೆಯನ್ನು ದಾಖಲಿಸಿದ ಯುನೈಟೆಡ್ ಸ್ಟೇಟ್ಸ್‌ನ ವ್ಯಕ್ತಿ. ಇವರು ಬೃಹತ್ ಟೊಳ್ಳಾದ ಕುಂಬಳಕಾಯಿಯಲ್ಲಿ ಕುಳಿತು ದೋಣಿಯಲ್ಲಿ 61 ಕಿ.ಮೀ ಪ್ರಯಾಣಿಸಿದ್ದಾರೆ. ಇದು ವಿಶ್ವದಲ್ಲೇ ಹೊಸ ದಾಖಲೆಯಾಗಿದೆ. ಆಲ್ ಡೇವ್ ಸಿಟಿ ಟ್ವಿಟ್ಟರ್ ಖಾತೆಯ ಪೋಸ್ಟ್ ಪ್ರಕಾರ, ಕುಂಬಳಕಾಯಿ ದೋಣಿಯಲ್ಲಿ ನೆಬ್ರಸ್ಕಾದ ಡುವಾನ್ ಹ್ಯಾನ್ಸೆನ್ ನದಿಯಾದ್ಯಂತ 61 ಕಿಲೋಮೀಟರ್ ಪ್ರಯಾಣಿಸಿದ್ದಾರೆ.
ಈ ಕುಂಬಳಕಾಯಿ ಬೋಟ್ ಬಗ್ಗೆ ಜಗತ್ತಿನೆಲ್ಲಡೆ ಉತ್ಸಾಹ ಕೆರಳಿಸಿದ್ದಾರೆ. ಕುಂಬಳಕಾಯಿಯಿಂದ ಇವರಿಗೆ ಬೋಟ್ ಮಾಡುವ ಪರಿಕಲ್ಪನೆ ಹೇಗೆ ಬಂತು ಎನ್ನುವ ಬಗ್ಗೆ ವಿವರಣೆ ಕೂಡ ನೆಬ್ರಸ್ಕಾದ ಡುವಾನ್ ಹ್ಯಾನ್ಸೆನ್ ನೀಡಿದ್ದಾರೆ. ತಮ್ಮ ಕನಸನ್ನು ನನಸಾಗಿಸಿಕೊಂಡಿರುವುದಾಗಿ ನೆಬ್ರಸ್ಕಾದ ಡುವಾನ್ ಹ್ಯಾನ್ಸೆನ್ ಹೇಳಿಕೊಂಡಿದ್ದಾರೆ.

11 ಗಂಟೆ 30 ನಿಮಿಷ ಪ್ರಯಾಣ
ಡುವಾನ್ ಹ್ಯಾನ್ಸೆನ್ ಅವರು ಆಗಸ್ಟ್ 27 ರಂದು ಬೆಳಿಗ್ಗೆ 7:30 ರಿಂದ ಸಂಜೆ 6:30 ರ ನಡುವೆ ಮಿಸೌರಿ ನದಿಯಲ್ಲಿ 61 ಕಿಮೀ ಪ್ರಯಾಣವನ್ನು ಪೂರ್ಣಗೊಳಿಸಿದರು. ಅವನ ಕುಂಬಳಕಾಯಿಯ ಮಡಕೆಯ ಹಿಂಭಾಗದಲ್ಲಿ SS ಬರ್ಟಾ ಎಂಬ ಹೆಸರನ್ನು ಬರೆಯಲಾಗಿದೆ. ಅವರು ಚುಕ್ಕಾಣಿಯನ್ನು ಹೊಂದಿದ್ದರು, ಅದರ ಸಹಾಯದಿಂದ ಅವರು ಕುಂಬಳಕಾಯಿ ದೋಣಿಯನ್ನು ಓಡಿಸಿದ್ದಾರೆ.

ವಿಶ್ವದಾಖಲೆ ಬರೆದ ನಾವಿಕ ಹ್ಯಾನ್ಸೆನ್
ಡುವಾನ್ ಹ್ಯಾನ್ಸೆನ್ ಅವರ ವಿಶ್ವ ದಾಖಲೆಯ ಬಗ್ಗೆ ನೀಡಿದ ಮಾಹಿತಿಯ ಪ್ರಕಾರ, ಆಗಸ್ಟ್ 27 ಹೆನ್ಸನ್ ಅವರ 60 ನೇ ಹುಟ್ಟುಹಬ್ಬವಾಗಿತ್ತು. ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿ, 'ದೀರ್ಘಕಾಲ ನೆಬ್ರಸ್ಕಾ ನಿವಾಸಿಯಾದ ಹೆನ್ಸನ್, ದೊಡ್ಡ ಕುಂಬಳಕಾಯಿ, ಸೋರೆಕಾಯಿ ಮತ್ತು ಇತರ ತರಕಾರಿಗಳನ್ನು ಬೆಳೆಯುವ ಉತ್ಸಾಹವನ್ನು ಹೊಂದಿದ್ದಾರೆ. ಕಳೆದ ಕೆಲ ದಿನಗಳಿಂದ ಈ ಕ್ಷೇತ್ರದಲ್ಲಿ ದಾಖಲೆ ಮಾಡುವ ಕೆಲಸ ಮಾಡುತ್ತಿದ್ದರು. ಇದನ್ನು ಯಶಸ್ವಿಗೊಳಿಸುವ ಮೂಲಕ ಹೆನ್ಸನ್ ಅವರ 60ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ.

ಹ್ಯಾನ್ಸೆನ್ ಗೆ ಶ್ಲಾಘನೆ
ಸಾಮಾಜಿಕ ಮಾಧ್ಯಮದಲ್ಲಿನ ಫೋಟೋಗಳು ಹ್ಯಾನ್ಸೆನ್ ದೈತ್ಯ ಕುಂಬಳಕಾಯಿಯೊಳಗೆ ಕುಳಿತಿರುವುದನ್ನು ತೋರಿಸಿದೆ. ಈ ಕುಂಬಳಕಾಯಿ 846 ಪೌಂಡ್ (384 ಕೆಜಿ) ತೂಕವಿದೆ. ಅವನು ಅದರ ನಡುವೆ ಇರುವ ವಸ್ತುಗಳನ್ನು ಹೊರತೆಗೆದು ಅದನ್ನು ದೋಣಿಯಾಗಿ ಮಾರ್ಪಡಿಸಿದ್ದಾರೆ. ಈ ಕಲೆಯನ್ನು ನೋಡಿ ಜನ ಮೆಚ್ಚಿಕೊಂಡಿದ್ದಾರೆ. ಎಲ್ಲೆಡೆಯಿಂದ ಹ್ಯಾನ್ಸೆನ್ ಗೆ ಶ್ಲಾಘನೆ ವ್ಯಕ್ತವಾಗುತ್ತಿದೆ.

2018ರಲ್ಲಿಯೂ ದಾಖಲೆ
'ದಿ ಗಾರ್ಡಿಯನ್' ಪ್ರಕಾರ, ಹೆನ್ಸನ್ ಈ ಹಿಂದೆ 2018 ರಲ್ಲಿ ಇಂತಹ ದಾಖಲೆಯನ್ನು ಮಾಡಿದ್ದರು. ಅವರು 'ಪಂಪ್ಕಿನ್ ಬೋಟ್ ಮೂಲಕ ಸುದೀರ್ಘ ಪ್ರಯಾಣ' ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಉತ್ತರ ಡಕೋಟಾದ ಗ್ರ್ಯಾಂಡ್ ಫೋರ್ಕ್ಸ್‌ನಲ್ಲಿ ಸ್ಪರ್ಧೆ ನಡೆಯಿತು. ಅವರು ಕುಂಬಳಕಾಯಿಯಲ್ಲಿ ಕುಳಿತು 41.038 km (25.5 mi) ಪ್ರಯಾಣಿಸಿ ಹೆಸರುವಾಸಿಯಾಗಿದ್ದರು.
-
ಬೆಂಗಳೂರು ನಾಯಂಡಳ್ಳಿಯಲ್ಲಿ ಮನೆಯ ಮೊದಲ ಮಹಡಿಯಿಂದ ಬಿದ್ದ ಒಂದೂವರೆ ವರ್ಷದ ಕಂದಮ್ಮ -
SSLC Hindi: ಅಂಕ ಬದಲು ಗ್ರೇಡಿಂಗ್ ವಿರೋಧಿಸಿ ಅರ್ಜಿ ಸಲ್ಲಿಸಿದ ಅರ್ಜಿದಾರರಿಗೆ 1 ಲಕ್ಷ ರೂ. ದಂಡ: ಕರವೇ ಹೇಳಿದ್ದೇನು -
Bengaluru: ಬೆಂಗಳೂರು ನಗರದಲ್ಲಿ ಸ್ವಿಗ್ಗಿ, ಜೊಮ್ಯಾಟೋ ಡೆಲಿವರಿ ಬಾಯ್ಸ್ಗೆ ಸಂಕಷ್ಟ, ಅಮಾನವೀಯ ಲಿಫ್ಟ್ ಸಂಸ್ಕೃತಿ -
ಚಿಕ್ಕಮಗಳೂರಲ್ಲಿ ನಾಪತ್ತೆಯಾಗಿದ್ದ ಕೇರಳದ ಬಾಲಕಿ ಶ್ರಿನಂದಾ ಸಾವು: 2 ಸಾವಿರ ಅಡಿ ಪ್ರಪಾತದಲ್ಲಿ ಶವ ಪತ್ತೆ -
Copra: ತಿಪಟೂರು ಎಪಿಎಂಸಿ ಮಾರುಕಟ್ಟೆಯಲ್ಲಿ ಮತ್ತೆ ದಾಖಲೆ ಬೆಲೆಗೆ ಮಾರಾಟವಾದ ಕೊಬ್ಬರಿ: ನಿರ್ಮಾಣವಾಯ್ತು ಹೊಸ ಇತಿಹಾಸ -
Mona Lisa: ಮಹಾಕುಂಭ ಮೇಳದ ಫೇಮಸ್ ಮೊನಾಲಿಸಾ ಪತಿಗೆ ಕಾನೂನು ಸಂಕಷ್ಟ: ಫರ್ಮಾನ್ ಖಾನ್ ಮೇಲೆ ಪೋಕ್ಸೋ ಪ್ರಕರಣ -
2nd PUC: ಬೆಂಗಳೂರು - ಪಿಯುಸಿಯಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ 260 ವಿದ್ಯಾರ್ಥಿಗಳಿಗೆ 35,000 ರೂ. -
RBI New Rule: ಇನ್ಮುಂದೆ ಆನ್ಲೈನ್ ವಹಿವಾಟಿನಲ್ಲಿ ದೊಡ್ಡ ಬದಲಾವಣೆ: 10,000 ರೂ. ಹಣ ವರ್ಗಾವಣೆಗೂ ಹೊಸ ನಿಯಮ -
Gold Rate April 10: ಚಿನ್ನ - ಬೆಳ್ಳಿ ಬೆಲೆಯಲ್ಲಿ ಅಚ್ಚರಿಯ ಬೆಳವಣಿಗೆ, ಎಷ್ಟಾಗಿದೆ ಇಂದಿನ ಬಂಗಾರದ ಬೆಲೆ -
ದ್ವಿತೀಯ PUC ರಿಪೀಟರ್ಸ್ ಗಮನಕ್ಕೆ: ತಾಂತ್ರಿಕ ದೋಷ ಸರಿಪಡಿಸಿ ಪರಿಷ್ಕೃತ ಫಲಿತಾಂಶ ಪ್ರಕಟಿಸಿದ ಮಂಡಳಿ -
ಸಾಮಾಜಿಕ ಜಾಲತಾಣದ ಕರೆಗೆ ಓಗೊಟ್ಟ ಹೆಚ್.ಡಿ.ಕುಮಾರಸ್ವಾಮಿ: ನಂಜನಗೂಡಿನ ಹುಲ್ಲಳ್ಳಿಯ ನೊಂದ ಕುಟುಂಬಕ್ಕೆ ಅಭಯ -
ಡಿವಿಜಿ ಒಡನಾಡಿ,ರಾಷ್ಟ್ರೋತ್ಥಾನದ ಮಾಜಿ ಅಧ್ಯಕ್ಷ ಎಸ್ಆರ್ ರಾಮಸ್ವಾಮಿ ನಿಧನ












Click it and Unblock the Notifications