ಮನೆಯೊಳಗೆ ಹಸಿರು ಲೋಕ ಸೃಷ್ಟಿಸಬೇಕೇ? ಈ 9 ಸುಲಭ ಸಲಹೆಗಳನ್ನು ಅನುಸರಿಸಿ

ಇತ್ತೀಚಿನ ದಿನಗಳಲ್ಲಿ ಮನೆ ಅಲಂಕಾರ ಮಾಡುವದಕ್ಕಾಗಿ ಅನೇಕರು ಸಸ್ಯಗಳಿಗೆ ವಿಶೇಷ ಸ್ಥಾನ ದೊರೆಯುತ್ತಿದೆ. ಸರಿಯಾದ ಯೋಜನೆ ಮತ್ತು ಸಣ್ಣ ಸಣ್ಣ ಕಾಳಜಿಯ ಮೂಲಕ ಯಾವುದೇ ಮನೆಯನ್ನೂ ಹಸಿರು ಹಾಗೂ ಶಾಂತವಾದ "ಮನೆಯೊಳಗೆ ಸುಂದರವಾದ ಉದ್ಯಾನವನ್ನು" ರೂಪಿಸಬಹುದು. ಇಲ್ಲಿವೆ ಅದಕ್ಕಾಗಿ ಸಹಾಯ ಮಾಡುವ ಸರಳ ಸಲಹೆಗಳು.

ಮನೆ ಒಳಾಂಗಣದಲ್ಲಿ ಚಿಕ್ಕದಾದ ಉದ್ಯಾನವನ್ನು ಮಾಡಲು ಬೆಳೆಸಬಹುದಾದ ಮತ್ತು ಸುಲಭವಾಗಿ, ಕಡಿಮೆ ಕಾಳಜಿ ಬೇಕಾಗುವ ಸಸ್ಯಗಳಿಂದ ಆರಂಭಿಸಿ. ಬೆಳಕಿನ ಪರಿಸ್ಥಿತಿಗೆ ತಕ್ಕ ಸಸ್ಯಗಳನ್ನು ಆಯ್ಕೆ ಮಾಡಿದರೆ ಅವು ಸುಲಭವಾಗಿ ಬೆಳೆಯುತ್ತವೆ.

Indoor Gardening Tips

ಸಸ್ಯಗಳನ್ನು ಕಿಟಕಿಗಳ ಬಳಿ ಇಡುವುದು ಉತ್ತಮ. ನೇರ ಸೂರ್ಯನ ಕಿರಣಗಳು ಬದಲು ಪರೋಕ್ಷ ಬೆಳಕು ಸಿಕ್ಕರೆ ಸಸ್ಯಗಳು ಆರೋಗ್ಯಕರವಾಗಿ ಬೆಳೆಯುತ್ತವೆ.

ಎತ್ತರದ ಸಸ್ಯಗಳು, ಹ್ಯಾಂಗಿಂಗ್ ಪ್ಲಾಂಟ್ಸ್ ಮತ್ತು ಸಣ್ಣ ಟೇಬಲ್ ಪ್ಲಾಂಟ್ಸ್ ಅನ್ನು ಸೇರಿಸಿ ಅಲಂಕಾರ ಮಾಡಿದರೆ ಕಾಡಿನ ವಾತಾವರಣ ಸೃಷ್ಟಿಯಾಗುತ್ತದೆ ಇದರಿಂದ ಮನೆಗೆ ಆಕರ್ಷಕವಾದ ಹಸಿರಿನಿಂದ ಕೂಡಿದ ವಾತಾವರಣ ಕಾಣುತ್ತದೆ. ವಿವಿಧ ರೀತಿಯ ಎತ್ತರ ಮತ್ತು ಗಾತ್ರದ ಸಸ್ಯಗಳನ್ನು ಒಟ್ಟಿಗೆ ಜೋಡಿಸಿದರೆ ಸ್ಥಳಕ್ಕೆ ಆಳ ಮತ್ತು ನೈಸರ್ಗಿಕವಾದ ಸೌಂದರ್ಯ ಸಿಗುತ್ತದೆ. ಲಿವಿಂಗ್ ರೂಮ್, ಬಾಲ್ಕನಿ ಅಥವಾ ಖಾಲಿ ಮೂಲೆಗಳನ್ನು ಈ ರೀತಿ ಅಲಂಕರಿಸುವುದರಿಂದ ಮನೆ ಹೆಚ್ಚು ಕಾಡಿನ ವಾತವರಣದಂತೆ ಕಾಣಿಸುತ್ತದೆ.

ಪುದೀನಾ ಗಿಡ ಬೇಗ ಬೆಳೆಯಬೇಕಾ, ಈ ಸರಳ ಟಿಪ್ಸ್ ಫಾಲೋ ಮಾಡಿ
ಪುದೀನಾ ಗಿಡ ಬೇಗ ಬೆಳೆಯಬೇಕಾ, ಈ ಸರಳ ಟಿಪ್ಸ್ ಫಾಲೋ ಮಾಡಿ

ಅತಿಯಾದ ನೀರಿನ ಬಳಕೆ ಸಸ್ಯಗಳ ಬೇರುಗಳಿಗೆ ಹಾನಿ ಮಾಡಬಹುದು. ನೀರು ಹಾಕುವ ಮೊದಲು ಮಣ್ಣಿನ ತೇವಾಂಶವನ್ನು ಪರಿಶೀಲಿಸುವುದು ಉತ್ತಮ. ಮಣ್ಣು ಇನ್ನೂ ಹೆಚ್ಚು ಒದ್ದೆಯಾಗಿದ್ದರೆ ನೀರು ಹಾಕುವುದನ್ನು ನಿಲ್ಲಿಸಬೇಕು. ಸರಿಯಾದ ಪ್ರಮಾಣದಲ್ಲಿ ನೀರು ಹಾಕುವುದರಿಂದ ಸಸ್ಯಗಳ ಬೆಳವಣಿಗೆ ಉತ್ತಮವಾಗಿದ್ದು, ಬೇರು ಕೊಳೆಯುವ ಸಮಸ್ಯೆಯನ್ನು ತಡೆಯಬಹುದು.

ಒಳಾಂಗಣ ಸಸ್ಯಗಳಿಗೆ ತೇವಾಂಶ (humidity) ಅಗತ್ಯ. ಸಮಯಕ್ಕೆ ತಕ್ಕಂತೆ ನೀರು ಸಿಂಪಡಿಸುವುದು ಅಥವಾ ನೀರಿನ ಪಾತ್ರೆ ಇಡುವುದು ಸಹಾಯಕ. ಅಲಂಕಾರಿಕ ಕುಂಡಗಳನ್ನು ಬಳಸುವುದರಿಂದ ಮನೆಯ ಒಳಾಂಗಣಕ್ಕೆ ಆಕರ್ಷಕ ಲುಕ್ ಸಿಗುತ್ತದೆ. ಮನೆಯ ಇಂಟೀರಿಯರ್‌ಗೆ ಹೊಂದುವಂತೆ ಪಾಟ್‌ಗಳನ್ನು ಆಯ್ಕೆ ಮಾಡಬಹುದು.

ಮನೆ ಅಲಂಕರಿಸುವುದಷ್ಟೇ ಅಲ್ಲ: ಈ ಗಿಡಗಳು ಮನೆಗೆ ಹಣ ಮತ್ತು ಪಾಸಿಟಿವಿಟಿ ತರುತ್ತವೆ
ಮನೆ ಅಲಂಕರಿಸುವುದಷ್ಟೇ ಅಲ್ಲ: ಈ ಗಿಡಗಳು ಮನೆಗೆ ಹಣ ಮತ್ತು ಪಾಸಿಟಿವಿಟಿ ತರುತ್ತವೆ

ಒಳಾಂಗಣ ಸಸ್ಯಗಳಿಗೆ ತೇವಾಂಶ ತುಂಬಾ ಅಗತ್ಯವಾಗಿರುತ್ತದೆ. ಸಮಯಕ್ಕೆ ತಕ್ಕಂತೆ ನೀರು ಸಿಂಪಡಿಸುವುದು ಅಥವಾ ಸಸ್ಯಗಳ ಬಳಿ ನೀರಿನ ಪಾತ್ರೆ ಇಡುವುದು ಸಹಾಯಕಾರಿಯಾಗಿರುತ್ತದೆ. ಅಲಂಕಾರಿಕ ಕುಂಡಗಳನ್ನು ಬಳಸುವುದರಿಂದ ಮನೆಯ ಒಳಾಂಗಣಕ್ಕೆ ಆಕರ್ಷಕ ಲುಕ್ ಸಿಗುತ್ತದೆ. ಮನೆಯ ಇಂಟೀರಿಯರ್‌ಗೆ ಹೊಂದುವಂತೆ ಪಾಟ್‌ಗಳನ್ನು ಆಯ್ಕೆ ಮಾಡಬಹುದು. ಇದರಿಂದ ಸಸ್ಯಗಳು ಕೇವಲ ಅಲಂಕಾರಿಕ ವಸ್ತುಗಳಷ್ಟೇ ಅಲ್ಲದೆ ಮನೆಯ ಸೌಂದರ್ಯವನ್ನು ಹೆಚ್ಚಿಸುವ ಪ್ರಮುಖ ಅಂಶಗಳಾಗುತ್ತವೆ. ಸರಿಯಾದ ಕುಂಡಗಳ ಆಯ್ಕೆ ಮನೆಯ ಪ್ರತಿಯೊಂದು ಮೂಲೆಯನ್ನೂ ಹೆಚ್ಚು ಆಕರ್ಷಕ ಮತ್ತು ಜೀವಂತವಾಗಿ ಕಾಣುವಂತೆ ಮಾಡುತ್ತದೆ.

ಸಸ್ಯಗಳನ್ನು ಕೆಲವು ದಿನಗಳಿಗೊಮ್ಮೆ ತಿರುಗಿಸಿ ಇಡುವುದು ಒಳ್ಳೆಯದು. ಇದರಿಂದ ಎಲ್ಲಾ ಭಾಗಕ್ಕೂ ಸಮಾನ ಬೆಳಕು ಸಿಗುತ್ತದೆ ಮತ್ತು ಬೆಳವಣಿಗೆ ಸಮತೋಲನವಾಗಿರುತ್ತದೆ. ಎಲೆಗಳ ಮೇಲೆ ಧೂಳು ಕೊಡದಂತೆ ಸ್ವಚ್ಛಗೊಳಿಸುವುದು ಅಗತ್ಯ. ಇದು ಸಸ್ಯಗಳಿಗೆ ಬೆಳಕು ಸರಿಯಾಗಿ ತಲುಪಲು ಸಹಾಯ ಮಾಡುತ್ತದೆ.

ಶೆಲ್ಫ್‌ಗಳು, ಸ್ಟ್ಯಾಂಡ್‌ಗಳು ಮತ್ತು ಮನೆಯ ಖಾಲಿ ಮೂಲೆಗಳನ್ನು ಬಳಸಿಕೊಂಡು ಸಣ್ಣ ಗ್ರೀನ್ ಕಾರ್ನರ್‌ಗಳನ್ನು ನಿರ್ಮಿಸಬಹುದು. ಇದು ಮನೆಗೆ ಶಾಂತ ಮತ್ತು ತಾಜಾ ವಾತಾವರಣ ನೀಡುತ್ತದೆ.

ಶೆಲ್ಫ್‌ಗಳು, ಸ್ಟ್ಯಾಂಡ್‌ಗಳು ಮತ್ತು ಮನೆಯ ಖಾಲಿ ಮೂಲೆಗಳನ್ನು ಬಳಸಿಕೊಂಡು ಸಣ್ಣ ಗ್ರೀನ್ ಕಾರ್ನರ್‌ಗಳನ್ನು ನಿರ್ಮಿಸಬಹುದು. ಇದು ಮನೆಗೆ ಶಾಂತಿ ಮತ್ತು ತಾಜಾ ವಾತಾವರಣ ನೀಡುತ್ತದೆ. ವಿವಿಧ ರೀತಿಯ ಸಸ್ಯಗಳನ್ನು ಒಂದೇ ಸ್ಥಳದಲ್ಲಿ ಜೋಡಿಸುವುದರಿಂದ ಆ ಭಾಗ ಹೆಚ್ಚು ಆಕರ್ಷಕವಾಗಿ ಕಾಣಿಸುತ್ತದೆ. ಇಂತಹ ಹಸಿರು ಮೂಲೆಗಳು ಮನೆಯ ಅಂದವನ್ನು ಹೆಚ್ಚಿಸುವುದರ ಜೊತೆಗೆ ಮನಸ್ಸಿಗೆ ನೆಮ್ಮದಿ ಮತ್ತು ಸಕಾರಾತ್ಮಕ ಶಕ್ತಿಯನ್ನು ಹೆಚ್ಚಿಸಲು ಸಹಾಯಮಾಡುತ್ತವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+