ಸಿದ್ದರಾಮಯ್ಯಗೆ ಅಧಿಕಾರ ಕೈ ತಪ್ಪಿದ ಕಾರಣ ಬಹಿರಂಗ!
Recommended Video

ವಿಜಯಪುರ, ಸೆಪ್ಟೆಂಬರ್ 05 : 'ಸಿದ್ದರಾಮಯ್ಯ ಅವರು ಧರ್ಮಸ್ಥಳಕ್ಕೆ ಮಾಂಸ ತಿಂದು ಹೋಗಿದ್ದರು. ಆದ್ದರಿಂದ ಅವರಿಗೆ ಅಧಿಕಾರ ಸಿಕ್ಕಿಲ್ಲ. ರಾಹುಲ್ ಗಾಂಧಿ ಮಾನಸ ಸರೋವರಕ್ಕೆ ಹೋಗುತ್ತಾರೆ ಎಂದರೆ ಖಂಡಿತ ಅಧಿಕಾರಕ್ಕೆ ಬರಲ್ಲ' ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದರು.
ಬುಧವಾರ ವಿಜಯಪುರದಲ್ಲಿ ಮಾತನಾಡಿದ ವಿಜಯಪುರ ನಗರ ಕ್ಷೇತ್ರದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, 'ನನ್ನ ಪಕ್ಷದ ಸಿದ್ದಾಂತದಂತೆ ನಾನು ಕೆಲಸ ಮಾಡುತ್ತಿದ್ದೇನೆ. ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗುವ ಪ್ರಕ್ರಿಯೆ ಆರಂಭವಾಗಿದೆ' ಎಂದರು.
'ರಾಹುಲ್ ಗಾಂಧಿ ಅವರು ತೀರ್ಥಯಾತ್ರೆ ಮಾಡಿದರೆ ಸ್ವಚ್ಛ ಮನಸ್ಸಿನಿಂದ ಮಾಡಲಿ. ಆದರೆ, ಅವರು ಹಿಂದೂಗಳ ಓಟು ಒಡೆಯಬೇಕು ಎಂದು ನಾಟಕವಾಡುತ್ತಿದ್ದಾರೆ. ಖಂಡಿತ ಪಕ್ಷ ಅಧಿಕಾರಕ್ಕೆ ಬರುವುದಿಲ್ಲ ಎಂದು' ಭವಿಷ್ಯ ನುಡಿದರು.

'ಎಲ್ಲಾ ವಿರೋಧ ಪಕ್ಷಗಳು ಕಳೆದ 50 ವರ್ಷಗಳಿಂದ ದೇಶವನ್ನು ಲೂಟಿ ಹೊಡೆದಿವೆ. ನರೇಂದ್ರ ಮೋದಿ ಅವರು ಅಧಿಕಾರಕ್ಕೆ ಬಂದ ಮೇಲೆ ಭ್ರಷ್ಟಾಚಾರ ನಿಂತಿದೆ. ಆದ್ದರಿಂದ ಈಗ ವಿರೋಧ ಪಕ್ಷದವರೆಲ್ಲಾ ಒಂದಾಗಿದ್ದಾರೆ' ಎಂದು ಯತ್ನಾಳ್ ಆರೋಪಿಸಿದರು.
ಬುದ್ದಿಜೀವಿಗಳು ಎಲ್ಲಿದ್ದರು? : ಗೌರಿ ಲಂಕೇಶ್ ಹತ್ಯೆ ಬಗ್ಗೆ ಮಾತನಾಡಿದ ಶಾಸಕರು, 'ಹಿಂದೂ ಕಾರ್ಯಕರ್ತರು ಕೊಲೆಯಾದಾಗ ಬುದ್ದಿಜೀವಿಗಳು ಯಾವ ದಿನವನ್ನು ಆಚರಣೆ ಮಾಡಿದರು?. ಹಿಂದೂ ಸಂಘಟನೆಗಳ ಕಾರ್ಯಕರ್ತರು ಹತ್ಯೆಯಾದಾಗ ಬುದ್ದಿಜೀವಿಗಳು ಎಲ್ಲಿದ್ರು?' ಎಂದು ಪ್ರಶ್ನೆ ಮಾಡಿದರು.











Click it and Unblock the Notifications