ವಿಜಯಪುರದಲ್ಲಿ ವೈದ್ಯನ ಎಡವಟ್ಟಿನಿಂದ ಯುವಕನ ಜೀವಕ್ಕೆ ಕುತ್ತು

By: ನಮ್ಮ ಪ್ರತಿನಿಧಿ
Subscribe to Oneindia Kannada

ವಿಜಯಪುರ, ಅಕ್ಟೋಬರ್ 26: ವೈದ್ಯನ ಎಡವಟ್ಟಿನಿಂದ ಯುವಕನ ಜೀವಕ್ಕೆ ಕುತ್ತು ಬಂದಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.

ವಿಜಯಪುರದ ಹಿಟ್ಟಿನಹಳ್ಳಿ ಗ್ರಾಮದ ಸತೀಶ ಎಂಬ ಯುವಕ ಜ್ವರ ಬಂದ ಕಾರಣ ಗ್ರಾಮದ ಸುನೀಲ ಕುಸಗಲ್ ಎಂಬ ವೈದ್ಯರ ಹತ್ತಿರ ಚಿಕಿತ್ಸೆ ಪಡೆದಿದ್ದರು.

Vijayapura: Young man's life in danger after treatment by a Doctor

ಆದರೆ ವೈದ್ಯ ಸುನೀಲ ನೀಡಿದ ಚುಚ್ಚು ಮದ್ದು ರಿಯಾಕ್ಷನ್ ಆಗಿ ಸತೀಶ ಅವರ ಹಿಂಭಾಗ ಶೇಕಡ 90 ರಷ್ಟು ಭಾಗ ಹುಳ ಹತ್ತಿದೆ. ಅಲ್ಲದೆ ಈ ಚುಚ್ಚು ಮದ್ದಿನಿಂದ ಕಿಡ್ನಿ ವೈಫಲ್ಯವೂ ಸಂಭವಿಸಿದೆ ಎಂದು ಹಿರಿಯ ವೈದ್ಯರು ಹೇಳಿದ್ದಾರೆ.

ಇನ್ನು ಸತೀಶ ಬಹಳ ದಿನ ಬದುಕುವುದು ಸಂಶಯ ಎಂದು ಖಾಸಗಿ ವೈದ್ಯರು ಹೇಳಿದ್ದಾರೆ. ವೈದ್ಯ ಸುನೀಲ ಕುಸಗಲ್ ಸದ್ಯಕ್ಕೆ ಆಸ್ಪತ್ರೆ ಮುಚ್ಚಿ ಪರಾರಿಯಾಗಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Vijayapura: Young man's life is in danger after negligence treatment by a doctor.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ